ಕೇವಲ 7,999 ರೂ..! ಸದ್ದಿಲ್ಲದೇ ಹೊಸ Vivo ಫೋನ್ ಲಾಂಚ್: ಮಸ್ತ್ ಫೀಚರ್‌

ಕೇವಲ 7,999 ರೂ..! ಸದ್ದಿಲ್ಲದೇ ಹೊಸ Vivo ಫೋನ್ ಲಾಂಚ್: ಮಸ್ತ್ ಫೀಚರ್‌

ವಿವೋ (Vivo) ತನ್ನ ಹೊಸ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. Vivo Y18 ಮತ್ತು Y18e ಸ್ಮಾರ್ಟ್‌ಫೋನ್‌ಗಳನ್ನು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಮಧ್ಯೆಯೇ, ಸೈಲೆಂಟ್‌ ಆಗಿಯೇ Vivo 'Y' ಸರಣಿಯ ಮತ್ತೊಂದು ಅಗ್ಗದ ಮೊಬೈಲ್ Vivo Y18i ಅನ್ನು ಲಾಂಚ್ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಆಫ್‌ಲೈನ್ ಸ್ಟೋರ್‌ಗಳಲ್ಲಿ ಕೇವಲ 7,999 ರೂ.ಗಳಲ್ಲಿ ಲಭ್ಯವಿದೆ. ಬನ್ನಿ, ಈ ಹೊಸ ಮೊಬೈಲ್‌ನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.



ಹೌದು, ನಾವು ಹೊಸ Vivo Y18i ಫೋನಿನ ಬಗ್ಗೆ ಮಾತನಾಡುತ್ತಿದ್ದೇವೆ. ವಿವೋ ಕಂಪನಿಯು ಅತ್ಯಂತ ಕಡಿಮೆ ಬೆಲೆಗೆ ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಕಡಿಮೆ ಬೆಲೆಯ ಹೊರತಾಗಿಯೂ, ಈ ಫೋನ್‌ನಲ್ಲಿ ನೀವು ಉತ್ತಮ ಗುಣಮಟ್ಟದ ಫೀಚರ್ಸ್‌ಗಳನ್ನು ಕಾಣಬಹುದು. ಇದು 6.56 ಇಂಚಿನ ಡಿಸ್ಪ್ಲೇ, Unisoc Tiger T612 ಪ್ರೊಸೆಸರ್, 4GB RAM + 64GB ಸ್ಟೋರೇಜ್, 13 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಹಾಗೂ 5,000mAh ಬ್ಯಾಟರಿ ಹೊಂದಿದೆ.

Vivo Y18i ಬೆಲೆ ಎಷ್ಟು?

ವಿವೋದ ಈ ಹೊಸ ಮೊಬೈಲ್ ಅನ್ನು ಭಾರತೀಯ ಆಫ್‌ಲೈನ್ ಮಾರುಕಟ್ಟೆಯಲ್ಲಿ ಸಿಂಗಲ್ ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಶೀಘ್ರದಲ್ಲೇ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿಯೂ ಮಾರಾಟಕ್ಕೆ ಲಭ್ಯವಿರಬಹುದು ಎಂದು ನಿರೀಕ್ಷಿಸಲಾಗಿದೆ. ಮಾಹಿತಿಯ ಪ್ರಕಾರ, Vivo Y18i ಸ್ಮಾರ್ಟ್‌ಫೋನ್ 4GB RAM + 64GB ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಕೇವಲ 7,999 ರೂ.ಗಳಿಗೆ ಬಿಡುಗಡೆಯಾಗಿದೆ.

ಹೊಸ Vivo Y18i ಫೋನಿನ ವಿಶೇಷತೆಗಳೇನು?

ಡಿಸ್‌ಪ್ಲೇ: Vivo Y18i ಸ್ಮಾರ್ಟ್‌ಫೋನ್ 1612 × 720 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ದೊಡ್ಡ 6.56 ಇಂಚಿನ HD ಡಿಸ್ಪ್ಲೇಯನ್ನು ಹೊಂದಿದೆ. ಇದನ್ನು ಎಲ್ಸಿಡಿ ಪ್ಯಾನಲ್‌ನಲ್ಲಿ ತಯಾರಿಸಲಾಗುತ್ತದೆ. ಇದರಲ್ಲಿ 90Hz ರಿಫ್ರೆಶ್ ರೇಟ್ ಮತ್ತು 528nits ಬ್ರೈಟ್‌ನೆಸ್ ಸಪೋರ್ಟ್ ಇದೆ.

ಪ್ರೊಸೆಸರ್: 

Vivo Y18i ಫೋನ್ Android OS ಮತ್ತು Funtouch OS 14.0 ನೊಂದಿಗೆ ಕಾರ್ಯನಿರ್ವಹಿಸುತ್ತದೆ. Unisoc Tiger T612 ಚಿಪ್‌ಸೆಟ್ ಅನ್ನು ಈ ಫೋನ್‌ನಲ್ಲಿ ಒದಗಿಸಲಾಗಿದೆ.

ಸ್ಟೋರೇಜ್: 

ಈ ಹೊಸ ಮತ್ತು ಅಗ್ಗದ Vivo ಫೋನ್ 4 GB RAM, 4 GB ಎಕ್ಸ್ಟೆಂಡೆಡ್ RAM ತಂತ್ರಜ್ಞಾನವನ್ನು ಹೊಂದಿದೆ. ಇದರ ಸಹಾಯದಿಂದ ನೀವು 8 GB RAMನ ಶಕ್ತಿಯನ್ನು ಬಳಸಿಕೊಳ್ಳಬಹುದು. ಆದರೆ, ಇಂಟರ್ನಲ್ ಸ್ಟೋರೇಜ್‌ಗಾಗಿ 64 GB ಮೆಮೊರಿ ಇದೆ. ಅಷ್ಟೇ ಅಲ್ಲ, ಇದು 1TB ವರೆಗಿನ ಮೈಕ್ರೊ SD ಕಾರ್ಡ್‌ಗೆ ಬೆಂಬಲವನ್ನು ಸಹ ಹೊಂದಿದೆ.

ಕ್ಯಾಮೆರಾ: 

Vivo Y18i ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಜೊತೆಗೆ, 0.08 ಮೆಗಾಪಿಕ್ಸೆಲ್ ಸೆಕೆಂಡರಿ ಲೆನ್ಸ್ ಅನ್ನು ಹೊಂದಿದೆ. ಇದರಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 5 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ: 

Vivo Y18i ಫೋನಿನ ಬ್ಯಾಟರಿ ಬ್ಯಾಕಪ್‌ ಬಗ್ಗೆ ಹೇಳುವುದಾದರೆ, ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಚಾರ್ಜಿಂಗ್‌ಗಾಗಿ 15W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆಯುತ್ತದೆ.


ಇತರೆ ವೈಶಿಷ್ಟ್ಯಗಳು: Vivo Y18i ನೀರು ಮತ್ತು ಧೂಳಿನ ನಿರೋಧಕ IP54 ರೇಟಿಂಗ್‌ನೊಂದಿಗೆ ಬರುತ್ತದೆ. ಇದರಲ್ಲಿ ವೈಫೈ, ಬ್ಲೂಟೂತ್, 4ಜಿ ನೆಟ್‌ವರ್ಕ್, GPS ಮತ್ತು USB ಟೈಪ್-C ಪೋರ್ಟ್ ಸೌಲಭ್ಯವಿದೆ. Vivo Y18i ಫೋನ್ ಡ್ಯುಯಲ್ ಸಿಮ್ ಅನ್ನು ಬೆಂಬಲಿಸುತ್ತದೆ ಮತ್ತು ನೀವು ಇದರಲ್ಲಿ 5G ಬೆಂಬಲವನ್ನು ಸಹ ಪಡೆಯಬಹುದು.


Post a Comment

Previous Post Next Post
CLOSE ADS
CLOSE ADS
×