ಬೆಳ್ಳಂಬೆಳಗ್ಗೆ ಕುಡಿಯುವ ಈ ಡ್ರಿಂಕ್ಸ್ ಹೊಟ್ಟೆಯ ಕೊಬ್ಬು ಕರಗಿಸುತ್ತವೆ ನೋಡಿ

ಬೆಳ್ಳಂಬೆಳಗ್ಗೆ ಕುಡಿಯುವ ಈ ಡ್ರಿಂಕ್ಸ್ ಹೊಟ್ಟೆಯ ಕೊಬ್ಬು ಕರಗಿಸುತ್ತವೆ ನೋಡಿ

ನಾವು ತಿನ್ನುವ ಅನೇಕ ಜಿಡ್ಡುಯುಕ್ತ ಆಹಾರಗಳು ನಮಗೇ ಗೊತ್ತಿಲ್ಲದೆ ನಮ್ಮ ಸೊಂಟದ ಸುತ್ತ ಬೊಜ್ಜು ಬರುವಂತೆ ಮಾಡುತ್ತವೆ. ಆದರೆ ಈ ಡ್ರಿಂಕ್ಸ್ ಅದನ್ನು ಅಷ್ಟೇ ಬೇಗನೆ ಕರಗಿಸುತ್ತವೆ.



ಪ್ರತಿ ದಿನ ನಾವು ಅನೇಕ ಆಹಾರಗಳನ್ನು ಇಷ್ಟಪಟ್ಟು ತಿನ್ನುತ್ತೇವೆ. ಅದರಲ್ಲಿ ಯಾವುದು ಆರೋಗ್ಯಕರ ಮತ್ತೆ ಯಾವ ಆಹಾರ ತಿಂದರೆ ನಮ್ಮ ದೇಹಕ್ಕೆ ಆಗಿ ಬರುವುದಿಲ್ಲ ಎಂಬುದನ್ನು ನಾವು ಆಲೋಚಿಸುವುದಿಲ್ಲ. ಇದರಿಂದ ನಮ್ಮ ದೇಹದಲ್ಲಿ ವಿಶೇಷವಾಗಿ ಆರೋಗ್ಯದಲ್ಲಿ ಅಸಮತೋಲನ ಉಂಟಾಗುತ್ತದೆ.

ಈ ಸಂದರ್ಭದಲ್ಲಿ ಇಲ್ಲಸಲ್ಲದ ಕಾಯಿಲೆಗಳು ನಮ್ಮನ್ನು ಕಾಡುತ್ತವೆ. ಅದರಲ್ಲಿ ಬೊಜ್ಜು ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಈ ಸಮಸ್ಯೆ ಇದೆ. ದೇಹದ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಲು ಹಲವು ಜನರು ಹಲವು ರೀತಿಯಲ್ಲಿ ಪ್ರಯತ್ನಪಡುತ್ತಾರೆ. ಪ್ರಸ್ತುತ ಈ ಲೇಖನದಲ್ಲಿ ಬೆಳಗಿನ ಸಮಯದಲ್ಲಿ ಖಾಲಿ ಹೊಟ್ಟೆಯಲ್ಲಿ ಕೆಲವೊಂದು ಆರೋಗ್ಯಕರ ಡ್ರಿಂಕ್ಸ್ ಸೇವನೆ ಮಾಡುವುದರಿಂದ ಬೊಜ್ಜಿಗೆ ಹೇಗೆ ಕಡಿವಾಣ ಹಾಕಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಗ್ರೀನ್ ಟೀ



ಮೆಟಬಾಲಿಸಂ ವೃದ್ಧಿಸುವ ಗ್ರೀನ್ ಟೀ ತನ್ನಲ್ಲಿ ಕೊಬ್ಬು ಕರಗಿಸುವ ಗುಣವನ್ನು ಸಹ ಹೊಂದಿದೆ. ಇದು ನಮ್ಮ ದೇಹದ ಕ್ಯಾಲೋರಿಗಳನ್ನು ಕರಗಿಸಿ ತಕ್ಷಣವೇ ಶಕ್ತಿ ಮತ್ತು ಚೈತನ್ಯ ನೀಡುತ್ತದೆ.

ಹೀಗಾಗಿ ಉಗುರು ಬೆಚ್ಚಗಿನ ನೀರಿನಲ್ಲಿ 3 ರಿಂದ 5 ನಿಮಿಷಗಳ ಕಾಲ ಗ್ರೀನ್ ಟೀ ಬ್ಯಾಗ್ ಸ್ಟೀಪ್ ಮಾಡಿ. ಬೇಕೆಂದರೆ ಇದಕ್ಕೆ ಸ್ವಲ್ಪ ನಿಂಬೆಹುಳಿ ಅಥವಾ ಒಂದು ಟೇಬಲ್ ಚಮಚ ಜೇನುತುಪ್ಪವನ್ನು ಕೂಡ ರುಚಿಗಾಗಿ ಸೇರಿಸಿಕೊಳ್ಳಬಹುದು.

ಲೆಮನ್ ವಾಟರ್



ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನೆರವಾಗುವ ಲೆಮನ್ ವಾಟರ್, ನಮ್ಮ ಹೊಟ್ಟೆಯ ಕೊಬ್ಬನ್ನು ಕೂಡ ಕರಗಿಸುತ್ತದೆ. ಏಕೆಂದರೆ ಇದರಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿದೆ.

ಚರ್ಮದ ಆರೋಗ್ಯಕ್ಕೆ ಇದು ಅನುಕೂಲಕರವಾಗಿ ಕೆಲಸ ಮಾಡುವುದು ಮಾತ್ರವಲ್ಲದೆ, ನಮ್ಮ ದೇಹದಲ್ಲಿ ಕಂಡು ಬರುವಂತಹ ಆಮ್ಲೀಯತೆಯನ್ನು ಕಡಿಮೆ ಮಾಡಿ ನಾವು ಸೇವಿಸುವ ಆಹಾರ ಚೆನ್ನಾಗಿ ಜೀರ್ಣವಾಗುವಂತೆ ಮಾಡುತ್ತದೆ ಮತ್ತು ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದು ಹೊರಗೆ ಹಾಕುತ್ತದೆ.

ಮೆಟಬಾಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ. ಒಂದು ಲೋಟ ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಅದಕ್ಕೆ ಅರ್ಧ ನಿಂಬೆಹಣ್ಣಿನ ಹುಳಿ ಹಿಂಡಿದರೆ, ನಿಮ್ಮ ಪಾನೀಯ ರೆಡಿ.

ಆಪಲ್ ಸೈಡರ್ ವಿನೆಗರ್



ನಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಅದ್ಭುತವಾಗಿ ಕೆಲಸ ಮಾಡುವ ಮತ್ತೊಂದು ಡ್ರಿಂಕ್ ಎಂದರೆ ಅದು ಆಪಲ್ ಸೈಡರ್ ವಿನೆಗರ್. ಇದು ನಮ್ಮ ಬ್ಲಡ್ ಶುಗರ್ ಲೆವೆಲ್ ನಿಯಂತ್ರಣ ಮಾಡುತ್ತದೆ ಜೊತೆಗೆ ಹೊಟ್ಟೆ ಹಸಿವನ್ನು ಕಡಿಮೆ ಮಾಡಿ ಮೆಟಬಾಲಿಸಂ ವೃದ್ಧಿಸುತ್ತದೆ.

ಆಪಲ್ ಸೈಡರ್ ವಿನೆಗರ್ ನಲ್ಲಿ ಕಂಡುಬರುವ ಅಸಿಟಿಕ್ ಆಮ್ಲ ನಮ್ಮ ದೇಹದ ಕೊಬ್ಬನ್ನು ಕರಗಿಸುತ್ತದೆ ಮತ್ತು ಹೊಟ್ಟೆಯ ಭಾಗದಲ್ಲಿ ಶೇಖರಣೆಯಾಗಿರುವ ಬೊಜ್ಜಿನ ಪ್ರಮಾಣವನ್ನು ಇಲ್ಲವಾಗಿಸುತ್ತದೆ.

ಇನ್ನು ಇದನ್ನು ತಯಾರಿಸುವ ವಿಧಾನವನ್ನು ನೋಡುವು ಹೇಳಲಾಗುತ್ತದೆ. ದಾದರೆ, ಒಂದು ಅಥವಾ ಎರಡು ಟೇಬಲ್ ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಒಂದು ಲೋಟ ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಜೊತೆಗೆ ಒಂದು ಟೇಬಲ್ ಚಮಚ ಜೇನು ತುಪ್ಪವನ್ನು ಸೇರಿಸಿ ಆನಂತರ ಸೇವಿಸಿ. ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಇದರಿಂದ ಪ್ರಯೋಜನ ಹೆಚ್ಚು ಎಂದು

ಶುಂಠಿ ಚಹಾ



ನಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸುವಲ್ಲಿ ಶುಂಠಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಶುಂಠಿಯಲ್ಲಿ ನಮ್ಮ ದೇಹದ ಉಷ್ಣಾಂಶವನ್ನು ಹೆಚ್ಚಿಸುವ ಗುಣ ಕಂಡು ಬಂದಿದೆ.

ಇದು ನಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಮಾತ್ರವಲ್ಲದೆ, ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುತ್ತದೆ ಜೊತೆಗೆ ಮೆಟಬಾಲಿಸಂ ಪ್ರಕ್ರಿಯೆಯನ್ನು ಚುರುಕು ಗೊಳಿಸುತ್ತದೆ.

ನಮ್ಮ ದೇಹದ ಉರಿಯುತ ವನ್ನು ಕಡಿಮೆ ಮಾಡಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಹೊಟ್ಟೆ ಉಬ್ಬರವನ್ನು ನಿಯಂತ್ರಿಸುವಲ್ಲಿ ಇದರ ಪಾತ್ರ ತುಂಬಾ ದೊಡ್ಡದು ಎಂದು ಹೇಳಲಾಗುತ್ತದೆ.

ಶುಂಠಿ ಚಹಾ ತಯಾರು ಮಾಡುವ ಬಗೆ



5 ರಿಂದ 10 ನಿಮಿಷಗಳ ಕಾಲ ಶುಂಠಿ ಚೂರುಗಳನ್ನು ಕುದಿಯುವ ನೀರಿನಲ್ಲಿ ಹಾಕಿ.

ಇದನ್ನು ಸೋಸಿದ ನಂತರ ಇದಕ್ಕೆ ಸ್ವಲ್ಪ ಜೇನುತುಪ್ಪ ಅಥವಾ ನಿಂಬೆ ಹಣ್ಣಿನ ರಸ ಸೇರಿಸಿ.

ಸೌತೆಕಾಯಿ ಮತ್ತು ಪುದೀನ ಮಿಕ್ಸ್ ಡ್ರಿಂಕ್



ಸೌತೆಕಾಯಿ ಮತ್ತು ಪುದೀನ ಮಿಕ್ಸ್ ಡ್ರಿಂಕ್ ನಮ್ಮ ದೇಹಕ್ಕೆ ನೀರಿನಂಶವನ್ನು ಒದಗಿಸುವುದು ಮಾತ್ರವಲ್ಲದೆ ದೇಹವನ್ನು ಸ್ವಚ್ಛಪಡಿಸುತ್ತದೆ ಕೂಡ. ಇದರಲ್ಲಿ ನಾರಿನ ಪ್ರಮಾಣ ಹೆಚ್ಚಾಗಿರುತ್ತದೆ ಮತ್ತು ಕ್ಯಾಲೋರಿಗಳು ತುಂಬಾ ಕಡಿಮೆ ಇರುತ್ತವೆ.

ಸೌತೆಕಾಯಿ ನಮ್ಮ ಹೊಟ್ಟೆ ತುಂಬುವಂತೆ ಮಾಡುತ್ತದೆ. ಪುದಿನ ನಮ್ಮ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ಈ ಮಿಕ್ಸೆಡ್ ಡ್ರಿಂಕ್ ತಯಾರಿಸುವುದು ಹೇಗೆಂದರೆ, ಒಂದು ಬಾಟಲ್ ನೀರು ತೆಗೆದುಕೊಂಡು ಅದರಲ್ಲಿ ಸೌತೆಕಾಯಿಯ ಸಣ್ಣ ಸಣ್ಣ ಚೂರುಗಳನ್ನು ಹಾಕಿ ಜೊತೆಗೆ ತಾಜಾ ಪುದಿನ ಎಲೆಗಳನ್ನು ಸೇರಿಸಿ. ಆನಂತರ ಇದನ್ನು ರೆಫ್ರಿಜರೇಟರ್ ನಲ್ಲಿ ಇಟ್ಟು, ಇಡೀ ರಾತ್ರಿ ಹಾಗೆ ಬಿಟ್ಟು ಬೆಳಗ್ಗೆ ಇದನ್ನು ಕುಡಿಯುವುದು.

ಕೊನೆ ಮಾತು



ನಾವು ಸಮತೋಲನವಾದ ಪದ್ಧತಿ ಹೊಂದುವುದರಿಂದ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಆರೋಗ್ಯಕರವಾದ ಜೀವನ ಶೈಲಿಯನ್ನು ಕಂಡುಕೊಳ್ಳ ಬಹುದು ಮತ್ತು ನಮ್ಮ ಹೃದಯ ರಕ್ತ ನಾಳದ ಕಾಯಿಲೆ ಗಳನ್ನು ದೂರ ಮಾಡಿಕೊಳ್ಳಬಹುದು.

ನಮ್ಮ ದೇಹದ ಮೆಟಬಾಲಿಸಂ ಪ್ರಕ್ರಿಯೆಯನ್ನು ಹೆಚ್ಚಿಸಲು ಇವು ನೆರವಾಗುತ್ತದೆ. ಸಾಧ್ಯವಾದಷ್ಟು ಸಂಸ್ಕರಿಸಿದ ಆಹಾರಗಳನ್ನು ಸೇವನೆ ಮಾಡದೆ ಪ್ರೋಟಿನ್ ಮತ್ತು ನಾರಿನ ಪ್ರಮಾಣ ಹೆಚ್ಚಾಗಿರುವ ಆಹಾರಗಳನ್ನು ಸೇವಿಸಿ.

ಇದು ನಮ್ಮ ಮಾನಸಿಕ ಒತ್ತಡವನ್ನು ನಿರ್ವಹಣೆ ಮಾಡಲು ಕೂಡ ಸಹಾಯವಾಗುತ್ತದೆ ಜೊತೆಗೆ ಸೊಂಟದ ಭಾಗದ ಕೊಬ್ಬನ್ನು ಕೂಡ ಕರಗಿಸುತ್ತದೆ.


Post a Comment

Previous Post Next Post
CLOSE ADS
CLOSE ADS
×