ಭಾರತೀಯ ಸ್ಟೇಟ್‌ ಬ್ಯಾಂಕ್‌ನಿಂದ ಭರ್ಜರಿ ಜಾಬ್‌ ಆಫರ್: 1040 ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ಸ್ಟೇಟ್‌ ಬ್ಯಾಂಕ್‌ನಿಂದ ಭರ್ಜರಿ ಜಾಬ್‌ ಆಫರ್: 1040 ಹುದ್ದೆಗೆ ಅರ್ಜಿ ಆಹ್ವಾನ

State Bank of India Jobs 2024: ವಿವಿಧ ತಾಂತ್ರಿಕ, ತಾಂತ್ರಿಕೇತರ ಪದವಿ, ಪಿಜಿ ಕೋರ್ಸ್‌ ಓದಿ, ಯಾವುದಾದರೂ ಜಾಬ್‌ ಸರ್ಚ್‌ ಮಾಡುತ್ತಿದ್ದೀರಾ, ಹಾಗಿದ್ರೆ ಇಲ್ಲಿದೆ ನೋಡಿ ಜಾಬ್ ಆಫರ್. ಎಸ್‌ಬಿಐ 1040 ಎಸ್‌ಸಿಒ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಬೇಗ ಬೇಗ ಅರ್ಜಿ ಸಲ್ಲಿಸಿ.




ಸಿಎ, ಸಿಎಫ್‌ಎ, ಎಂಬಿಎ, ಪಿಜಿಡಿಎಂ / ಪಿಜಿಡಿಬಿಎಂ, ಪದವಿ (ಕಾಮರ್ಸ್‌ / ಹಣಕಾಸು / ಅರ್ಥಶಾಸ್ತ್ರ / ನಿರ್ವಹಣೆ / ಗಣಿತ / ಸಂಖ್ಯಾಶಾಸ್ತ್ರ) , ಬಿಇ, ಬಿ.ಟೆಕ್‌, ಎಂಇ, ಎಂ.ಟೆಕ್‌ ಹೀಗೆ ಹಲವು ವಿದ್ಯಾರ್ಹತೆ ಪಡೆದಿದ್ದು ಇನ್ನು ನಿರುದ್ಯೋಗಿಗಳಾಗಿದ್ದರೆ ಚಿಂತೆ ಬಿಡಿ. ಈಗಲೇ ಎಸ್‌ಬಿಐ ಬ್ಯಾಂಕ್‌ ನ 1000 ಕ್ಕೂ ಅಧಿಕ ಸ್ಪೆಷಲಿಸ್ಟ್‌ ಕೇಡರ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ. ರಿಲೇಷನ್‌ಶಿಪ್‌ ಮ್ಯಾನೇಜರ್ ಹುದ್ದೆಗಳು 273, ವಿವಿ ವೆಲ್ತ್‌ ಹುದ್ದೆಗಳು 643, ಇತರೆ ಸೇರಿದಂತೆ ಒಟ್ಟಾರೆ 1040 ಹುದ್ದೆಗಳಿವೆ. ಭಾರತೀಯ ಸ್ಟೇಟ್‌ ಬ್ಯಾಂಕ್‌ ವಿವಿಧ ಈ ಕೆಳಗಿನ ಸ್ಪೆಷಲಿಸ್ಟ್‌ ಕೇಡರ್‌ ಆಫೀಸರ್ (ಎಸ್‌ಒ) ಹುದ್ದೆಗಳಲ್ಲಿ ಆಸಕ್ತಿ ಇರುವವರು ನಿಗದಿತ ದಿನಾಂಕದೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಎಸ್‌ಬಿಐ ಬ್ಯಾಂಕ್‌ನ ಸ್ಪೆಷಲಿಸ್ಟ್‌ ಕೇಡರ್‌ ಆಫೀಸರ್ ಹುದ್ದೆಗಳ ವಿವರ

ಹುದ್ದೆ ಹೆಸರು and ಹುದ್ದೆಗಳ ಸಂಖ್ಯೆ

  • ಸೆಂಟ್ರಲ್ ರಿಸರ್ಚ್‌ ಟೀಮ್ (ಪ್ರಾಡಕ್ಟ್‌ ಲೀಡ್)-2
  • ಸೆಂಟ್ರಲ್ ರಿಸರ್ಚ್ ಟೀಮ್ (ಸಪೋರ್ಟ್‌)-2
  • ಪ್ರಾಜೆಕ್ಟ್‌ ಡೆವಲಪ್ಮೆಂಟ್ ಮ್ಯಾನೇಜರ್ (ಟೆಕ್ನಾಲಜಿ)-1
  • ಪ್ರಾಜೆಕ್ಟ್‌ ಡೆವಲಪ್ಮೆಂಟ್ ಮ್ಯಾನೇಜರ್ (ಬ್ಯುಸಿನೆಸ್)-2
  • ರಿಲೇಶನ್ಸಿಪ್ ಮ್ಯಾನೇಜರ್-273
  • ವಿಪಿ ವೆಲ್ತ್‌-643
  • ರಿಲೇಶನ್ಶಿಪ್ ಮ್ಯಾನೇಜರ್ (ಟೀಮ್ ಲೀಡ್)-32
  • ರೀಜನಲ್ ಹೆಡ್-6
  • ಇನ್‌ವೆಸ್ಟ್‌ಮೆಂಟ್ ಸ್ಪೆಷಲಿಸ್ಟ್‌-30
  • ಇನ್‌ವೆಸ್ಟ್‌ಮೆಂಟ್ ಆಫೀಸರ್-49

ವಿದ್ಯಾರ್ಹತೆ

ಮೇಲಿನ ಹುದ್ದೆಗಳಿಗೆ ಅನುಗುಣವಾಗಿ ಸಿಎ, ಸಿಎಫ್‌ಎ, ಎಂಬಿಎ, ಪಿಜಿಡಿಎಂ / ಪಿಜಿಡಿಬಿಎಂ, ಪದವಿ (ಕಾಮರ್ಸ್‌ / ಹಣಕಾಸು / ಅರ್ಥಶಾಸ್ತ್ರ / ನಿರ್ವಹಣೆ / ಗಣಿತ / ಸಂಖ್ಯಾಶಾಸ್ತ್ರ) , ಬಿಇ, ಬಿ.ಟೆಕ್‌, ಎಂಇ, ಎಂ.ಟೆಕ್‌, ಇತರೆ ಶಿಕ್ಷಣ ಪಡೆದಿರಬೇಕು. ಯಾವ ಹುದ್ದೆಗೆ ಏನು ವಿದ್ಯಾರ್ಹತೆ ಪಡೆದಿರಬೇಕು ಎಂಬುದನ್ನು ನಿಖರವಾಗಿ ತಿಳಿಯಲು ಸದರಿ ಹುದ್ದೆಗಳ ಕುರಿತ ನೋಟಿಫಿಕೇಶನ್‌ ಅನ್ನು ಓದಿರಿ.

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ.750.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ - ಶುಲ್ಕ ವಿನಾಯಿತಿ ನೀಡಲಾಗಿದೆ.
ಅಪ್ಲಿಕೇಶನ್ ಶುಲ್ಕವನ್ನು ಡೆಬಿಟ್ ಕಾರ್ಡ್‌ ಮತ್ತು ಕ್ರೆಡಿಟ್ ಕಾರ್ಡ್‌ ಅಥವಾ ಇಂಟರ್ನೆಟ್‌ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.

ವಯಸ್ಸಿನ ಅರ್ಹತೆಗಳು

ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ ವಯೋಮಿತಿ ಹಾಗೂ ಕಾರ್ಯಾನುಭವಗಳನ್ನು ಪ್ರತಿ ಹುದ್ದೆಗೆ ಬೇರೆ ಬೇರೆ ನಿಗದಿ ಮಾಡಲಾಗಿದೆ. ಈ ಕುರಿತು ಕಂಪ್ಲೀಟ್‌ ಡೀಟೇಲ್ಸ್‌ ಅನ್ನು ಅಧಿಸೂಚನೆಯಲ್ಲಿ ಓದಿಕೊಳ್ಳುವುದು.

ಎಸ್‌ಬಿಐ ಸ್ಪೆಷಲಿಸ್ಟ್‌ ಕೇಡರ್ ಆಫೀಸರ್ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ಓದಲು ಅಧಿಸೂಚನೆಗಾಗಿ ಭೇಟಿ ನೀಡಬೇಕಾದ ವೆಬ್‌ ವಿಳಾಸ : https://sbi.co.in/web/careers.

ಎಸ್‌ಬಿಐ ಎಸ್‌ಸಿಒ ಹುದ್ದೆಗಳಿಗೆ ಅಪ್ಲಿಕೇಶನ್‌ ಸಲ್ಲಿಸುವುದು ಹೇಗೆ?

  • ತೆರೆದ ವೆಬ್ ಪೇಜ್‌ನಲ್ಲಿ 'Click For New Registration' ಎಂಬಲ್ಲಿ ಕ್ಲಿಕ್ ಮಾಡಿ.
  • ನಂತರ ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ. ಇಲ್ಲಿ ಅಭ್ಯರ್ಥಿಗಳು ತಮ್ಮ ಬೇಸಿಕ್ ಡೀಟೇಲ್ಸ್‌ ನೀಡಿ ರಿಜಿಸ್ಟ್ರೇಷನ್‌ ಪಡೆಯಿರಿ.
  • ನಂತರ ನಿಮ್ಮ ಆಸಕ್ತ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯೂಸರ್ ನೇಮ್‌, ಪಾಸ್‌ವರ್ಡ್‌ ಬಳಸಿ, ಲಾಗಿನ್‌ ಆಗಿ.
  • ನಂತರ ' Apply Online' ಎಂದಿರುವಲ್ಲಿ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬಹುದು.

Important Points

  • ಕೆಟಗರಿವಾರು ಮೀಸಲಾದ ಹುದ್ದೆಗಳ ವಿವರಗಳನ್ನು ತಿಳಿಯಲು ಕೆಳಗಿನ ಟೇಬಲ್‌ ಗಮನಿಸಿ.
  • ಭಾರತೀಯ ಸ್ಟೇಟ್‌ ಬ್ಯಾಂಕ್‌ ಅಧಿಕೃತ ವೆಬ್‌ಸೈಟ್‌ ವಿಳಾಸ - https://www.sbi.co.in/
  • ಈ ಹುದ್ದೆಗಳನ್ನು ಮುಂಬೈ ಎಸ್‌ಬಿಐ ಶಾಖೆಗಳು ಹಾಗೂ ಇತರೆ ಎಲ್ಲ ವೃತ್ತದ ಶಾಖೆಗಳಲ್ಲಿ ನೇಮಕ ಮಾಡಲಾಗುತ್ತದೆ. ಆನ್‌ಲೈನ್‌ ಹೊರತುಪಡಿಸಿ, ಇತರೆ ಯಾವುದೇ ಮಾದರಿಯಲ್ಲಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.

ಉದ್ಯೋಗ ವಿವರ

  • ಹುದ್ದೆಯ ಹೆಸರು:- ಎಸ್‌ಬಿಐ ಸ್ಪೆಷಲಿಸ್ಟ್‌ ಕೇಡರ್ ಆಫೀಸರ್ ನೇಮಕ.
  • ವಿವರ:- ಭಾರತೀಯ ಸ್ಟೇಟ್‌ ಬ್ಯಾಂಕ್‌ನಿಂದ ಅಧಿಸೂಚನೆ.
  • ಪ್ರಕಟಣೆ ದಿನಾಂಕ:- 2024-07-19
  • ಕೊನೆ ದಿನಾಂಕ:- 2024-08-08
  • ಉದ್ಯೋಗ ವಿಧ:- ಗುತ್ತಿಗೆ
  • ಉದ್ಯೋಗ ಕ್ಷೇತ್ರ:-ಬ್ಯಾಂಕ್ ಉದ್ಯೋಗ
  • ವೇತನ ವಿವರ:- INR 40000 to 80000 /Month

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

  • ವಿದ್ಯಾರ್ಹತೆ:- ಪದವಿ /ಸ್ನಾತಕೋತ್ತರ ಪದವಿ ಅನ್ನು ತಾಂತ್ರಿಕ ಹಾಗೂ ತಾಂತ್ರಿಕೇತರ ವಿಷಯಗಳಲ್ಲಿ ಪಾಸ್‌ ಮಾಡಿರಬೇಕು.
  • ಕಾರ್ಯಾನುಭವ:- 0-5 Years

ನೇಮಕಾತಿ ಸಂಸ್ಥೆ

  • ಸಂಸ್ಥೆಯ ಹೆಸರು:- ಭಾರತೀಯ ಸ್ಟೇಟ್‌ ಬ್ಯಾಂಕ್

ಉದ್ಯೋಗ ಸ್ಥಳ

  • ಸ್ಥಳ:- ಮುಂಬೈ ಹಾಗೂ ಇತರೆ ಸರ್ಕಲ್‌ಗಳು.
  • ಪ್ರದೇಶ:- ಮಹಾರಾಷ್ಟ್ರ
  • ಅಂಚೆ ಸಂಖ್ಯೆ:- 230532
  • ದೇಶ:- IND

Post a Comment

Previous Post Next Post

Top Post Ad

CLOSE ADS
CLOSE ADS
×