LIC Recruitment: 200 ಹುದ್ದೆಗಳಿಗೆ ಅರ್ಜಿ ಕರೆದ ಎಲ್‌ಐಸಿ, ವೇತನ ವಿವರ ಇಲ್ಲಿದೆ

LIC Recruitment: 200 ಹುದ್ದೆಗಳಿಗೆ ಅರ್ಜಿ ಕರೆದ ಎಲ್‌ಐಸಿ, ವೇತನ ವಿವರ ಇಲ್ಲಿದೆ

ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇಲ್ಲೊಂದು ಗುಡ್‌ ನ್ಯೂಸ್‌.. ಎಲ್‌ಐಸಿ ತನ್ನ ವೆಬ್‌ ಸೈಟ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಆದೇಶವನ್ನು ಹೊರಡಿಸಿದೆ. ಹಾಗಿದ್ದರೆ, ಎಲ್‌ಐಸಿ ಯಾವೆಲ್ಲಾ ಹುದ್ದೆಗಳಿಗೆ ಅರ್ಜಿ ಆಹ್ವಾನ್‌ ಮಾಡಿದೆ ಎಂಬುದರ ಬಗ್ಗೆ ವರದಿ ಇಲ್ಲಿದೆ.



LIC HFL (LIC ಹೌಸಿಂಗ್ ಫೈನಾನ್ಸ್ ಲಿಮಿಟೆಡ್) ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ, 25 ಜುಲೈ 2024 ರಂದು LIC ಯ ಅಧಿಕೃತ ವೆಬ್‌ಸೈಟ್‌ನಲ್ಲಿ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 25 ಜುಲೈ 2024 ರಿಂದ, 14 ಆಗಸ್ಟ್ 2024 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಸಬ್ಬಂದಿಸಿದ ಎಲ್ಲ ಮಾಹಿತಿಯನ್ನು ಪಿಡಿಎಫ್‌ನಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಎಲ್ಲಾ ಪ್ರಮುಖ ಮಾಹಿತಿಯನ್ನು ನೀಡಲಾಗಿದೆ.

ಯಾವಾ ರಾಜ್ಯದಲ್ಲಿ ಎಷ್ಟು ಖಾಲಿ ಹುದ್ದೆಗಳಿವೆ?

ಆಂಧ್ರಪ್ರದೇಶದಲ್ಲಿ 12, ಆಸ್ಸಾಂ 5, ಚತ್ತೀಸಗಢ್‌ 6, ಗುಜರಾತ್‌ 5, ಹಿಮಾಚಲ ಪ್ರದೇಶ 3, ಜಮ್ಮು ಹಾಗೂ ಕಾಶ್ಮಿರ್‌ 1, ಕರ್ನಾಟಕ, 38, ಮಧ್ಯ ಪ್ರದೇಶ 12, ಮಹಾರಾಷ್ಟ್ರ 53, ಪುದುಚರಿ 1, ಸಿಕ್ಕಿಂ 1, ತಮಿಳುನಾಡು 10, ತೆಲಂಗಾಣ 31, ಉತ್ತರ ಪ್ರದೇಶ 17, ಪಶ್ಚಿಮ ಬಂಗಾಲ್ 5 ಖಾಲಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಒಟ್ಟು 200 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಜಿ ಶುಲ್ಕ ಎಷ್ಟು?

ಎಲ್‌ಐಸಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಜೂನಿಯರ್‌ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಯನ್ನು ಹಾಕಲು ಬಯಸುವ ಅಭ್ಯರ್ಥಿಗಳು 800 ತುಂಬಬೇಕಾಗುತ್ತದೆ. ಎಲ್ಲ ವರ್ಗದವರಿಗೂ ಇದೇ ಮೊತ್ತ ಅನ್ವಯವಾಗಲಿದೆ. ಈ ಹಣವನ್ನು ಆನ್‌ಲೈನ್‌ ಅರ್ಜಿ ತುಂಬುವಾಗ ತುಂಬ ಬಹುದು. ಅಲ್ಲದೆ ಇದರೊಂದಿಗೆ 18% ಜಿಸಿಟಿ ಕಟ್ಟಬೇಕಾಗುತ್ತದೆ.

ವಿದ್ಯಾರ್ಹತೆ ಏನು?, ವೇತನ ಎಷ್ಟು?

ಅರ್ಥಿಯು ಕನಿಷ್ಠ 60% ಅಂಕಗಳೊಂದಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು ಅಲ್ಲದೆ ಕಂಪ್ಯೂಟರ್ ಪ್ರಾವೀಣ್ಯತೆ ಕಡ್ಡಾಯ. ಅಲ್ಲದೆ ಅರ್ಜಿ ಸಲ್ಲಿಸಲು ಇಶ್ಚಿಸುವ ಅಭ್ಯರ್ಥಿಯ ವಯಸ್ಸು 01 ಜುಲೈ 2024 ರಂತೆ 21 ವರ್ಷದಿಂದ 28 ವರ್ಷಗಳ ನಡುವೆ ಇರಬೇಕು.

ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ. ಕನಿಷ್ಠ ಮಾಸಿಕ ವೇತನ 11000 ರೂ.ನಿಂದ 21700 ರೂ.ವರೆಗೆ ನೀಡಬಹುದು. ಸಂಬಳಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ನೀವು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

  • LIC HFL ಅಧಿಕೃತ ವೆಬ್‌ಸೈಟ್ lichousing.com ಗೆ ಭೇಟಿ ನೀಡಿ
  • ನಂತರ ಮೇಲ್ಭಾಗದ ಮೆನು ಬಾರ್‌ನಲ್ಲಿರುವ "ಕೆರಿಯರ್ಸ್" ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
  • ಅಲ್ಲಿ LIC HFL ಜೂನಿಯರ್ ಅಸಿಸ್ಟೆಂಟ್ ನೇಮಕಾತಿ 2024 ಅನ್ನು ಆಯ್ಕೆ ಮಾಡಿ.
  • LIC HFL ಜೂನಿಯರ್ ಅಸಿಸ್ಟೆಂಟ್ ಅಧಿಸೂಚನೆ PDF ಅನ್ನು ಓದಿ ಮತ್ತು ನಿಮ್ಮ ಅರ್ಹತೆಯನ್ನು ಪರಿಶೀಲಿಸಿ.
  • ಅದರ ನಂತರ ಅಲ್ಲಿ ಆನ್‌ಲೈನ್‌ನಲ್ಲಿ ಅನ್ವಯಿಸು ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
  • ನಂತರ ಲಾಗಿನ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.
  • LIC HFL ಜೂನಿಯರ್ ಅಸಿಸ್ಟೆಂಟ್ ಅರ್ಜಿ ನಮೂನೆಯನ್ನು ಸಲ್ಲಿಸಿ
  • ಈ ಪೋಸ್ಟ್‌ನಿಂದ ನೇರವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು:

  • ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ: 25 ಜುಲೈ 2024 (ಮಧ್ಯಾಹ್ನ 3ರ ನಂತರ)
  • ಆನ್‌ಲೈನ್ ಅಪ್ಲಿಕೇಶನ್‌ಗೆ ಕೊನೆಯ ದಿನಾಂಕ: 14 ಆಗಸ್ಟ್ 2024
  • LIC HFL ಪರೀಕ್ಷೆಯ ದಿನಾಂಕ - ಸೆಪ್ಟೆಂಬರ್ 2024


Post a Comment

Previous Post Next Post
CLOSE ADS
CLOSE ADS
×