ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಶಾಲೆಗಳಲ್ಲಿ 6ನೇ ಕ್ಲಾಸ್‌ಗೆ ಅಡ್ಮಿಷನ್ ಪಡೆಯಲು ಕೊನೆ ಅವಕಾಶವನ್ನು ಮತ್ತೆ ನೀಡಿದೆ. ಜುಲೈ 31 ರವರೆಗೆ ಪ್ರವೇಶ ಪಡೆಯಲು ಅವಕಾಶ ನೀಡಲಾಗಿದೆ. ಈ ಕುರಿತು ಮಾಹಿತಿ ಕೆಳಗಿನಂತಿದೆ ನೋಡಿ.
- 2024-25ನೇ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯುವ ಸಂಬಂಧ, ವಿಶೇಷ ವರ್ಗದ ಮಕ್ಕಳಿಗೆ ಈ ಶಾಲೆಗಳ ಇಂಗ್ಲಿಷ್ ಮಾಧ್ಯಮದಲ್ಲಿ ದಾಖಲಾತಿಗೆ ಮತ್ತೆ ಕಾಲಾವಕಾಶ ನೀಡಲಾಗಿದೆ. ಈ ಕುರಿತಂತೆ ಸಮಾಜ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದೆ.
- ವಿಶೇಷ ವರ್ಗದ ಮಕ್ಕಳಿಗೆ ಕ್ರೈಸ್ ವಸತಿ ಶಾಲೆಗಳಲ್ಲಿ (ಇಂಗ್ಲಿಷ್ ಮಾಧ್ಯಮ) ದಾಖಲಾತಿಗೆ ಇನ್ನೂ ಕಾಲಾವಕಾಶ ಇದೆ ಎಂದಿರುವ ಇಲಾಖೆಯು ಕೆಳಗಿನಂತೆ ಕೊನೆ ದಿನಾಂಕ ನಿಗದಿಪಡಿಸಿದೆ.
- ಈ ಕೊನೆ ದಿನಾಂಕದ ನಂತರ ವಿಶೇಷ ವರ್ಗದ ವಿನಂತಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಅರ್ಜಿ ಸಲ್ಲಿಸುವುದು ಹೇಗೆ?
ವಿಶೇಷ ವರ್ಗಗಳಿಗೆ ಸೇರಿದ ಮಕ್ಕಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಲಿಂಕ್ https://cetonline.karnataka.gov.in/kreis24d/ ಮೂಲಕ ತಮ್ಮ ಹೆಸರು ರಿಜಿಸ್ಟ್ರೇಷನ್ ಪಡೆಯಬಹುದು. ಅಥವಾ ಹತ್ತಿರದ ಕೆಆರ್‌ಇಐಎಸ್ ವಸತಿ ಶಾಲೆಗಳಿಗೆ ಭೇಟಿ ನೀಡಿ ಪ್ರಾಂಶುಪಾಲರನ್ನು ಕಾಣಬಹುದು. ಶಾಲೆಯ ಹೆಸರುಗಳು ಮತ್ತು ಅದರ ವಿಳಾಸವು www.kreis.kar.nic.in ನಲ್ಲಿ ನೀಡಲಾಗಿದೆ.
ವಿಶೇಷ ಪ್ರವರ್ಗಗಳಿಗೆ ಪ್ರವೇಶಾತಿಯಲ್ಲಿ ಶೇಕಡ.50 ರಷ್ಟು ಮೀಸಲು ಕೆಳಗಿನಂತೆ ನಿಗದಿಯಾಗಿದೆ.
- ಸಫಾಯಿ ಕರ್ಮಚಾರಿ / ಗುರುತಿಸಿರುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್ / ಚಿಂದಿ ಆಯುವವರು / ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಮೀಸಲು ಸೀಟುಗಳು ಶೇಕಡ.10.
- ಬಾಲ ಕಾರ್ಮಿಕರು / ಜೀತ ವಿಮುಕ್ತ ಕಾರ್ಮಿಕರ ಮಕ್ಕಳು / ಗುರುತಿಸಿರುವ ಮಾಜಿ ದೇವದಾಸಿಯರ ಮಕ್ಕಳಿಗೆ ಮೀಸಲು ಸೀಟುಗಳು ಶೇಕಡ.10.
- 25% ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಮಕ್ಕಳು / ಹೆಚ್.ಐ.ವಿ.ಗೆ ತುತ್ತಾದ ಪೋಷಕರ ಮಕ್ಕಳು, ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ ಅಥವಾ ಅನಾಥ ಮಕ್ಕಳಿಗೆ ಮೀಸಲು ಸೀಟುಗಳು ಶೇಕಡ.10.
- ಗುರುತಿಸಿರುವ ಅಲೆಮಾರಿ / ಅರೆ ಅಲೆಮಾರಿ /ಸೂಕ್ಷ್ಮ-ಅತೀ ಸೂಕ್ಷ್ಮ ಸಮುದಾಯದ/ ಸೈನಿಕರು ಮತ್ತು ಮಾಜಿ ಸೈನಿಕರು / ಸರ್ಕಾರಿ ಯೋಜನೆಗಳಿಂದ ಸ್ಥಳಾಂತರಗೊಂಡ ಪೋಷಕರ ಮಕ್ಕಳಿಗೆ ಮೀಸಲು ಸೀಟುಗಳು ಶೇಕಡ.10.
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಆಶ್ರಮ ವಸತಿ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಮೀಸಲು ಸೀಟುಗಳು ಶೇಕಡ.10.
6ನೇ ತರಗತಿಗೆ ವಿಶೇಷ ವರ್ಗದ ಜಿಲ್ಲಾವಾರು ಖಾಲಿ ಇರುವ ಸ್ಥಾನಗಳ ಮಾಹಿತಿಯನ್ನು ಸಹ ಕೆಆರ್‌ಇಐಎಸ್ ಬಿಡುಗಡೆ ಮಾಡಿದ್ದು ಚೆಕ್ ಮಾಡಿಕೊಳ್ಳಬಹುದು.
ವಿದ್ಯಾರ್ಥಿಗಳು ಹಾಗೂ ಪೋಷಕರು ವೆಬ್ ಪುಟ https://kreis.karnataka.gov.in/ ಕ್ಕೆ ಭೇಟಿ ನೀಡಿ. ಓಪನ್ ಆದ ವೆಬ್‌ಪೇಜ್‌ನಲ್ಲಿ 'ಇತ್ತೀಚಿನ ಸುದ್ದಿಗಳು' ಎಂಬಲ್ಲಿ ಕ್ಲಿಕ್ ಮಾಡಿ. ನಂತರ ಪ್ರದರ್ಶಿತವಾಗುವ ವೆಬ್‌ಪೇಜ್‌ನಲ್ಲಿ '6ನೇ ತರಗತಿ ವಿಶೇಷ ವರ್ಗದ ಜಿಲ್ಲಾವಾರು ಖಾಲಿ ಇರುವ ಸ್ಥಾನಗಳ ಮಾಹಿತಿ' ಎಂಬಲ್ಲಿ ಕ್ಲಿಕ್ ಮಾಡಿ. ಹೊಸ ವೆಬ್ ಪುಟವೊಂದು ತೆರೆಯಲಿದೆ. ಇಲ್ಲಿ 'Special Category' ಎಂಬಲ್ಲಿ ಕ್ಲಿಕ್ ಮಾಡಿ, ನಿಮ್ಮ ಕೆಟಗರಿ ಕ್ಲಿಕ್ ಮಾಡಿ. ನಂತರ ಜಿಲ್ಲಾವಾರು ಲಭ್ಯ ಸೀಟುಗಳ ಮಾಹಿತಿ ಪ್ರದರ್ಶಿತವಾಗಲಿದೆ. ಚೆಕ್ ಮಾಡಿಕೊಳ್ಳಿ.