UGCET 2024: ಇಂಜಿನಿಯರಿಂಗ್, ವಿವಿಧ ವೃತ್ತಿಪರ, ವೈದ್ಯಕೀಯ ಕೋರ್ಸ್‌ಗಳಿಗೆ ಸೀಟು ಹಂಚಿಕೆ ಯಾವಾಗ?

UGCET 2024: ಇಂಜಿನಿಯರಿಂಗ್, ವಿವಿಧ ವೃತ್ತಿಪರ, ವೈದ್ಯಕೀಯ ಕೋರ್ಸ್‌ಗಳಿಗೆ ಸೀಟು ಹಂಚಿಕೆ ಯಾವಾಗ?

ಕರ್ನಾಟಕ ಎಕ್ಸಾಮಿನೇಷನ್‌ ಅಥಾರಿಟಿಯು ಕಾಮನ್‌ ಎಂಟ್ರ್ಯಾನ್ಸ್‌ ಟೆಸ್ಟ್‌ ಮೂಲಕ ವಿವಿಧ ಕೋರ್ಸ್‌ಗಳಿಗೆ ನೀಡುವ ಪ್ರವೇಶಾವಕಾಶದ ಕುರಿತು ಲೇಟೆಸ್ಟ್‌ ಅಪ್‌ಡೇಟ್ಸ್‌ ಇಲ್ಲಿದೆ. ಈ ಪರೀಕ್ಷೆ ಬರೆದವರು ಈ ಮಾಹಿತಿಗಳನ್ನು ತಿಳಿದುಕೊಳ್ಳಿ.



ಯುಜಿಸಿಇಟಿ 2024 ಫಲಿತಾಂಶ ಬಂದಾಯ್ತು. ಇನ್ನು ಬಾಕಿ ಉಳಿದಿರುವುದು ಈಗ ಸೀಟು ಹಂಚಿಕೆ ಸಂಬಂಧಿತ ಕೌನ್ಸಿಲಿಂಗ್‌, ಪ್ರವೇಶಾತಿ ಮಾತ್ರ. ಇದಕ್ಕೆ ಸಂಬಂಧಿತ ಲೇಟೆಸ್ಟ್‌ ಮಾಹಿತಿಯನ್ನು ಈಗ ಕೆಇಎ ಮಾಧ್ಯಮ ಮಿತ್ರರೊಂದಿಗೆ ಹಂಚಿಕೊಂಡಿದೆ.

ಮೆಡಿಕಲ್, ಡೆಂಟಲ್ ಮೆಡಿಕಲ್ ಮತ್ತು ಆಯುಷ್ ಕೋರ್ಸ್‌ಗಳಿಗೆ ಪ್ರವೇಶ ಬಯಸಿ ಕರ್ನಾಟಕ ಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡು, ಆನ್‌ಲೈನ್‌ ಅರ್ಜಿ ಸಲ್ಲಿಸಿರುವವರು ಈಗ ಯುಜಿ ನೀಟ್‌ನಲ್ಲಿ ಅರ್ಹತೆ ಪಡೆದಿದ್ದಲ್ಲಿ ರಿಜಿಸ್ಟ್ರೇಷನ್‌ ನಂಬರ್ ದಾಖಲಿಸಲು ಸದ್ಯದಲ್ಲೇ ಕೆಇಎ ವೆಬ್‌ಸೈಟ್‌ನಲ್ಲಿ ಅವಕಾಶ ನೀಡಲಾಗುವುದು, ಲಿಂಕ್‌ ಆಕ್ಟಿವೇಟ್‌ ಮಾಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ತಿಳಿಸಿದೆ. ರೋಲ್‌ ನಂಬರ್ ಆಧಾರದ ಮೇಲೆ ಅಭ್ಯರ್ಥಿಯ ಹೆಸರು, Rank, ಅಂಕ, ಅರ್ಹತೆಗಳ ಮಾಹಿತಿ ಪಡೆಯಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌.ಪ್ರಸನ್ನ ಹೇಳಿಕೆ ನೀಡಿದ್ದಾರೆ.

ಯುಜಿ ನೀಟ್‌ನಲ್ಲಿ ಅರ್ಹರಾದವರು ಯುಜಿ-ಸಿಇಟಿಗೆ ನೋಂದಣಿ ಮಾಡಿಕೊಳ್ಳದೇ ಇದ್ದಲ್ಲಿ, ಅಂತಹವರಿಗೆ ಆನ್‌ಲೈನ್‌ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಗೆ ಅವಕಾಶ ನೀಡಲಾಗುವುದು. ಅಭ್ಯರ್ಥಿಗಳು ದಾಖಲಿಸುವ ವಿವರಗಳನ್ನು ವೆಬ್‌-ಸರ್ವೀಸ್‌ ಮೂಲಕ ಆನ್‌ಲೈನ್‌ ಮೂಲಕವೇ ಪರಿಶೀಲಿಸಲಾಗುವುದು. ಹೀಗಾಗಿ ಭೌತಿಕ ಪರಿಶೀಲನೆ ಇರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಕೋರ್ಸ್‌ಗಳ ಪ್ರವೇಶಕ್ಕೆ ಪ್ರಾಧಿಕಾರದಲ್ಲಿ ನೋಂದಣಿ ಮಾಡಿ, ಅರ್ಜಿ ಸಲ್ಲಿಸಿ, ಆನ್‌ಲೈನ್‌ ಕೌನ್ಸಿಲಿಂಗ್‌ನಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. ನಮೂದಿಸುವ ಆಪ್ಶನ್‌ ಪರಿಗಣಿಸಿ, ಮೆರಿಟ್‌ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುವುದು, ಇಂಜಿನಿಯರಿಂಗ್ ಸೇರಿ ಹಲವು ವೃತ್ತಿಪರ ಕೋರ್ಸ್‌ಗಳಿಗೆ ಏಕಕಾಲದಲ್ಲಿ ಆಪ್ಶನ್‌ ದಾಖಲಿಸಲು ಅವಕಾಶ ನೀಡಲಾಗುವುದು ಮತ್ತು ಜತೆಯಲ್ಲೇ ಕೌನ್ಸಿಲಿಂಗ್ ನಡೆಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳು ಸೀಟ್‌ ಮ್ಯಾಟ್ರಿಕ್ಸ್‌ ಮತ್ತು ಶುಲ್ಕ ವಿವರಗಳನ್ನು ಕೆಇಎಗೆ ನೀಡಿದ ಬಳಿಕ ಸೀಟು ಹಂಚಿಕೆ ಟೈಮ್‌ ಟೇಬಲ್‌ ಬಿಡುಗಡೆ ಮಾಡಲಾಗುವುದು ಎಂದು ಕೆಇಎ ನಿರ್ದೇಶಕರು ಖಚಿತ ಪಡಿಸಿದ್ದಾರೆ.


Post a Comment

Previous Post Next Post
CLOSE ADS
CLOSE ADS
×