ಎಚ್ಚರ! ಹೆಚ್ಚುತ್ತಿವೆ ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್‌: ಡೌನ್‌ಲೋಡ್‌ ಮಾಡಿದ್ರೆ ನಿಮ್ಮ ಹಣ ಮಾಯ ಖಚಿತ

Tips to Protect Your Bank Account from Hackers: ಇಂದು ಸೈಬರ್‌ ಕಳ್ಳತನದ ಸಂಖ್ಯೆ ಹೆಚ್ಚುತ್ತಿದೆ. ಆನ್‌ಲೈನ್‌ ಮೂಲಕವೇ ನಿಮ್ಮ ಬ್ಯಾಂಕ್‌ ಖಾತೆಗೆ ಖನ್ನ ಹಾಕುವ ಮೂಲಕ ಬ್ಯಾಂಕ್‌ನಲ್ಲಿನ ನಿಮ್ಮ ಹಣವನ್ನು ದೋಚುವ ಕಾರ್ಯ ನಡೆಯುತ್ತಿದೆ. ಇದಕ್ಕೆ ಸಾಕ್ಷಿ ಕಳೆದ 3 ವರ್ಷಗಳ ಅವಧಿಯಲ್ಲಿಯೇ ಸುಮಾರು 10,300 ಕೋಟಿ ರೂ ಅನ್ನು ಸೈಬರ್ ಖದೀಮರು ಬ್ಯಾಂಕ್‌ ಖಾತೆಗೆ ಖನ್ನ ಹಾಕಿ ವಂಚನೆ ಮಾಡಿರುವುದು. ಹಾಗಿದ್ರೆ ನೀವು ನಿಮ್ಮ ಬ್ಯಾಂಕ್‌ ಖಾತೆ ಹಣವನ್ನು ಸುರಕ್ಷಿತಗೊಳಿಸುವುದು ಹೇಗೆ? ಇಲ್ಲಿ ತಿಳಿಯಿರಿ.



  • ತಂತ್ರಜ್ಞಾನ ಕ್ಷೇತ್ರದಲ್ಲಿಯ ಹೊಸ ಹೊಸ ಆವಿಷ್ಕಾರಗಳೊಂದಿಗೆ, ಸೈಬರ್ ವಂಚನೆಯೂ ಸಹ ಅಷ್ಟೆ ಮಿತಿ ಮೀರುತ್ತಿದೆ. ಒಂದು ವಿಧಾನದ ಕಳ್ಳತನಕ್ಕೆ ಬ್ರೇಕ್‌ ಹಾಕುವಷ್ಟರಲ್ಲಿ ಮತ್ತೊಂದು ವಿಧಾನವನ್ನು ಈ ಸೈಬರ್‌ ವಂಚಕರು ಕಂಡುಕೊಳ್ಳುತ್ತಿದ್ದಾರೆ. ಇದು ಈಗ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಾಗಿದ್ದು, ಸಾರ್ವಜನಿಕರ ಹಣಕ್ಕೆ ಕನ್ನ ಹಾಕುವ ಹಲವು ಮಾರ್ಗಗಳನ್ನು ಸೈಬರ್‌ ವಂಚಕರು ಕಂಡುಕೊಂಡಿದ್ದಾರೆ. ಆತಂಕಕಾರಿ ವಿಷಯವೆಂದರೆ ಕಳೆದ ಮೂರು ವರ್ಷಗಳ ಅವಧಿಯಲ್ಲಿಯೇ ಸುಮಾರು 10,300 ಕೋಟಿ ರೂ ಅನ್ನು ಸೈಬರ್ ಖದೀಮರು ಬ್ಯಾಂಕ್‌ ಖಾತೆಗೆ ಖನ್ನ ಹಾಕಿ ದೋಚಿದ್ದಾರೆ ಎಂದು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ ವರದಿ ನೀಡಿದೆ.
  • ಜನರ ಬ್ಯಾಂಕ್‌ ಹಣ ಕದಿಯುವಲ್ಲಿ ಸೈಬರ್ ವಂಚಕರು ಈಗ ಹೆಚ್ಚಾಗಿ ಬಳಸುತ್ತಿರುವ ವಿಧಾನದಲ್ಲಿ - ಕೆವೈಸಿ ಅಪ್‌ಡೇಟ್‌ ಮಾಡುವುದಾಗಿ ಹೇಳಿ ನಕಲಿ ಬ್ಯಾಂಕಿಂಗ್ ಅಪ್ಲಿಕೇಶನ್‌ ಲಿಂಕ್‌ ಅನ್ನು ಮೆಸೇಜ್‌ ಕಳುಹಿಸಿ ಅದನ್ನು ಡೌನ್‌ಲೋಡ್ ಮಾಡಿಸಿ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕುವುದು ಈಗ ಹೆಚ್ಚಾಗಿದೆ.
  • ಕೆನರಾ ಬ್ಯಾಂಕ್, ಐಸಿಐಸಿಐ ಸೇರಿ ದೇಶದ ಪ್ರತಿಷ್ಠಿತ ಬ್ಯಾಂಕ್‌ಗಳ ಹೆಸರಲ್ಲಿ ನಕಲಿ ಅಪ್ಲಿಕೇಶನ್‌ ಡೆವಲಪ್‌ ಮಾಡಿ, ಅದನ್ನು ಡೌನ್‌ಲೋಡ್ ಮಾಡಿಸಿ ಬ್ಯಾಂಕ್‌ ಖಾತೆಗೆ ಕನ್ನ ಹಾಕುವ ಹುನ್ನಾರ ಹೆಚ್ಚಾಗಿದೆ. ಆದ್ದರಿಂದ ಅನಾಮಧೇಯ ಹಾಗೂ ಅನುಮಾನಾಸ್ಪದ ಬ್ಯಾಂಕಿಂಗ್ ಅಪ್ಲಿಕೇಶನ್‌ಗಳನ್ನು ಯಾವುದೇ ಕಾರಣಕ್ಕೂ ಡೌನ್‌ಲೋಡ್‌, ಇನ್‌ಸ್ಟಾಲ್‌ ಮಾಡಿಕೊಳ್ಳಬಾರದು ಎಂದು ಬ್ಯಾಂಕ್‌ಗಳು ಹಾಗೂ ಸೈಬರ್ ಪೊಲೀಸರು ಸೂಚನೆ ನೀಡಿದ್ದಾರೆ.

ಬ್ಯಾಂಕ್‌ ಖಾತೆಗೆ ಕನ್ನ ಹಾಕಲು ಹೇಗೆಲ್ಲಾ ವಂಚನೆ ನಡೆಯುತ್ತದೆ?

  • ಪ್ರಮುಖ ಪ್ರಧಾನ ಬ್ಯಾಂಕ್‌ಗಳ ಲೋಗೋ ಬಳಸಿ ಬ್ಯಾಂಕಿಂಗ್ ಅಪ್ಲಿಕೇಶನ್ ಸೃಷ್ಟಿಸಲಾಗುತ್ತದೆ.
  • ಕಸ್ಟಮರ್ ಸರ್ವೀಸ್‌ ಪಾಯಿಂಟ್ ಎಂಬ ನಕಲಿ ಅಪ್ಲಿಕೇಶನ್‌ ಪ್ಯಾಕೇಜ್‌ಗಳನ್ನು ಸೃಷ್ಟಿಸಿಕೊಂಡು, ಅದನ್ನ ಡೌನ್‌ಲೋಡ್‌ ಮಾಡಿಸುವ ಪ್ರಯತ್ನ ಮಾಡುತ್ತಾರೆ.
  • ವಾಟ್ಸಾಪ್, ಟೆಲಿಗ್ರಾಂ, ಸಾಮಾಜಿಕ ಜಾಲತಾಣಗಳ ಬಳಕೆ ಮೂಲಕ ವಂಚನೆ ಸಾಧ್ಯ. ಅವುಗಳ ಮುಖಾಂತರ ನಕಲಿ ಎಪಿಕೆ ಫೈಲ್‌ ಅನ್ನು ಕಳುಹಿಸುತ್ತಾರೆ.
  • ನಿಮ್ಮ ಮೊಬೈಲ್ ನಲ್ಲಿ ಮೊದಲು ಆ ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿಸುತ್ತಾರೆ. ಆಧಾರ್‌ ಕೆವೈಸಿ, ಪಾನ್‌ಕಾರ್ಡ್‌ ವಿವರ, ನಂಬರ್ ಅಪ್‌ಡೇಟ್‌ ಮಾಡಿಸುತ್ತಾರೆ. ನಂತರ ಮೊಬೈಲ್‌ನಲ್ಲಿ ಅಪ್ಲಿಕೇಶನ್‌ ಇನ್‌ಸ್ಟಾಲ್‌ ಆಗುತ್ತಿದ್ದಂತೆ ಖಾತೆ ವಿವರ ಪಡೆಯುತ್ತಾರೆ. ಆಮೇಲೆ ನೇರವಾಗಿ ಬ್ಯಾಂಕ್‌ ಖಾತೆಯಲ್ಲಿನ ನಿಮ್ಮ ಹಣವನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಾರೆ.

ಬ್ಯಾಂಕ್‌ ಖಾತೆಯಲ್ಲಿ ಹಣ ಕಳವಾದರೆ ಏನು ಮಾಡಬೇಕು?

  • ಒಂದು ವೇಳೆ ಯಾರಾದರೂ ಈ ರೀತಿಯಲ್ಲಿ ಮೋಸ ಹೋದರೆ ಅಂದೇ ಸೈಬರ್ ಪೊರ್ಟಲ್ ಅಥವಾ ಸೈಬರ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಬೇಕು.
  • #67# ಗೆ ಡಯಲ್ ಮಾಡಿ ಮೊಬೈಲ್ ಸಂಖ್ಯೆ ಸುರಕ್ಷಿತಗೊಳಿಸಿ.
  • ಸೈಬರ್ ವಂಚನೆಗೆ ತುತ್ತಾದವರು ತಕ್ಷಣ ಕರೆ ಮಾಡಿ ದೂರು ಕೊಡಲು ನಂಬರ್ - 1930.

ಬ್ಯಾಂಕ್‌ ಖಾತೆಯುಳ್ಳವರು ಏನೆಲ್ಲಾ ಕ್ರಮ ವಹಿಸಬೇಕು?

  • ಅನುಮಾನಾಸ್ಪದ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಬಾರದು, ಇನ್‌ಸ್ಟಾಲ್‌ ಮಾಡುವುದು ಬೇಡ.
  • ಇನ್‌ಸ್ಟಾಲ್‌ ಆಗಿಬಿಟ್ಟಿದ್ದರೆ, ತಕ್ಷಣ ಇಂಟರ್‌ನೆಟ್‌ ಡಾಟಾ ಆಫ್‌ ಮಾಡಿ, ನಂತರ ಆ ಅಪ್ಲಿಕೇಶನ್‌ ಅನ್‌ಇನ್‌ಸ್ಟಾಲ್‌ ಮಾಡಿ. ಆ ಅಪ್ಲಿಕೇಶನ್‌ನ ಕ್ಯಾಚಿ ಕ್ಲಿಯರ್ ಮಾಡಿ.
  • ಮೊಬೈಲ್ ಸೆಟ್ಟಿಂಗ್‌ನಲ್ಲಿ ಅಪ್ಲಿಕೇಶನ್‌ ಮ್ಯಾನೇಜ್ಮೆಂಟ್ / ಆಪ್ಸ್‌, ಡೌನ್‌ಲೋಡ್‌ ಪರಿಶೀಲನೆ ಮಾಡಿ.
  • ಒಂದು ವೇಳೆ ಅಪರಿಚಿತ ಫೈಲ್‌ಗಳು ಇದ್ದರೆ ಅವುಗಳನ್ನು ಡಿಲೀಟ್‌ ಮಾಡಿ, ಮೊಬೈಲ್‌ ನಲ್ಲಿ ಕ್ಲೀನ್‌ ಟೂಲ್‌ ಇದ್ದರೆ ಬಳಸಿಕೊಳ್ಳಿ.
Previous Post Next Post