ಭಾರತೀಯ ವಾಯುಪಡೆಯಲ್ಲಿ ಉದ್ಯೋಗ: 304 ಹುದ್ದೆಗೆ 12th, ಡಿಗ್ರಿ ಪಾಸಾದವರು ಅರ್ಜಿ ಹಾಕಿ

ಭಾರತೀಯ ವಾಯುಪಡೆಯಲ್ಲಿ ಉದ್ಯೋಗ: 304 ಹುದ್ದೆಗೆ 12th, ಡಿಗ್ರಿ ಪಾಸಾದವರು ಅರ್ಜಿ ಹಾಕಿ

ಭಾರತೀಯ ವಾಯುಪಡೆಯು ತನ್ನ ಫ್ಲೈಯಿಂಗ್ ವಿಭಾಗ, ಗ್ರೌಂಡ್‌ ಡ್ಯೂಟಿ ವಿಭಾಗಕ್ಕೆ ಕಾಮನ್ ಅಡ್ಮಿಷನ್‌ ಟೆಸ್ಟ್‌ ಹಾಗೂ ಎನ್‌ಸಿಸಿ ವಿಶೇಷ ಎಂಟ್ರಿ ಮೂಲಕ ಅಗತ್ಯ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೊನೆ ಕ್ಷಣದವರೆಗೆ ಕಾಯದೇ ಬೇಗ ಬೇಗ ಅರ್ಜಿ ಸಲ್ಲಿಸಿ.



ಇಂಡಿಯನ್‌ ಏರ್‌ಫೋರ್ಸ್‌ 2025 ರ ಜುಲೈನಲ್ಲಿ ಆರಂಭವಾಗುವ ಕೊರ್ಸ್‌ಗಳಿಗೆ ನೇಮಕಾತಿ ಸಂಬಂಧ ಇದೀಗ ಅಧಿಸೂಚನೆ ಬಿಡುಗಡೆ ಮಾಡಿದೆ. ಒಟ್ಟು 304 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ದ್ವಿತೀಯ ಪಿಯುಸಿ ಹಾಗೂ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದವರಿಗೆ ಏರ್‌ ಫೋರ್ಸ್‌ ಕಾಮನ್ ಅಡ್ಮಿಷನ್ ಟೆಸ್ಟ್‌ (AFCAT) ನಡೆಸುವ ಮೂಲಕ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಂದುವರೆಯಲಿದೆ. ಫ್ಲೈಯಿಂಗ್ ಬ್ರ್ಯಾಂಚ್ ಮತ್ತು ಗ್ರೌಂಡ್ ಡ್ಯೂಟಿ (ಟೆಕ್ನಿಕಲ್ ಮತ್ತು ನಾನ್‌ ಟೆಕ್ನಿಕಲ್) ಬ್ರ್ಯಾಂಚ್‌ಗಳಲ್ಲಿ ಖಾಲಿ ಹುದ್ದೆಗಳಿಗೆ ಆಯ್ಕೆ ಆದವರನ್ನು ನಿಯೋಜಿಸಲಾಗುತ್ತದೆ.

ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಹಾಗೂ ಕೇಂದ್ರ ಸರ್ಕಾರಿ ಉದ್ಯೋಗದ ಸಂಬಳ ಪಡೆಯುವ ಆಸೆ ಇರುವವರು ಈ ಪರೀಕ್ಷೆ ತೆಗೆದುಕೊಂಡು, ನೇಮಕ ಪ್ರಕ್ರಿಯೆಯಲ್ಲಿ ಭಾಗವಹಿಸಿ.

ಪ್ರಮುಖ ದಿನಾಂಕಗಳು

  • ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 30-05-2024
  • ಆನ್‌ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ: 28-06-2024 ರ ರಾತ್ರಿ 11 ಗಂಟೆವರೆಗೆ.

ಹುದ್ದೆಗಳ ವಿವರ

  • ಫ್ಲೈಯಿಂಗ್: 29
  • ಗ್ರೌಂಡ್ ಡ್ಯೂಟಿ (ಟೆಕ್ನಿಕಲ್) : 156
  • ಗ್ರೌಂಡ್ ಡ್ಯೂಟಿ (ನಾನ್‌ ಟೆಕ್ನಿಕಲ್): 119
  • ಫ್ಲೈಯಿಂಗ್: ಎನ್‌ಸಿಸಿ ಸ್ಪೆಷಿಯಲ್ ಎಂಟ್ರಿ ಸ್ಕೀಮ್‌ ಅಡಿಯಲ್ಲಿ ಶೇಕಡ.10 ಸೀಟ್‌ಗಳು

ಭಾರತೀಯ ವಾಯುಪಡೆಯ ಹುದ್ದೆಗಳಿಗೆ AFCAT ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆಗಳು

  • ಫ್ಲೈಯಿಂಗ್ ಬ್ರ್ಯಾಂಚ್ ಹುದ್ದೆಗಳಿಗೆ : ಭೌತಶಾಸ್ತ್ರ, ಗಣಿತ ವಿಷಯಗಳೊಂದಿಗೆ 12ನೇ ಕ್ಲಾಸ್ ವ್ಯಾಸಂಗ ಮತ್ತು ನಾನ್‌ ಟೆಕ್ನಿಕಲ್ ಹುದ್ದೆಗಳಿಗೆ ಯಾವುದೇ ಡಿಗ್ರಿ ತೇರ್ಗಡೆ.
  • ಗ್ರೌಂಡ್ ಡ್ಯೂಟಿ (ಟೆಕ್ನಿಕಲ್) ಬ್ರ್ಯಾಂಚ್ ಹುದ್ದೆಗಳಿಗೆ: ಭೌತಶಾಸ್ತ್ರ, ಗಣಿತ ವಿಷಯಗಳೊಂದಿಗೆ 12ನೇ ಕ್ಲಾಸ್ ಓದಿ, ಯಾವುದೇ ಡಿಗ್ರಿ ತೇರ್ಗಡೆ ಹೊಂದಿರಬೇಕು.
  • ಗ್ರೌಂಡ್ ಡ್ಯೂಟಿ (ನಾನ್‌ ಟೆಕ್ನಿಕಲ್) ಬ್ರ್ಯಾಂಚ್ ಹುದ್ದೆಗಳಿಗೆ : ಯಾವುದೇ ಪದವಿ ಪಾಸ್ .

ವಯಸ್ಸಿನ ಅರ್ಹತೆ

ಏರ್‌ ಫೋರ್ಸ್‌ ಕಾಮನ್ ಅಡ್ಮಿಷನ್ ಟೆಸ್ಟ್‌ ಗೆ ಅರ್ಜಿ ಹಾಕಲು ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 26 ವರ್ಷ ವಯಸ್ಸು ಮೀರಿರಬಾರದು. ಹಾಗೆಯೇ ಫ್ಲೈಯಿಂಗ್ ಬ್ರ್ಯಾಂಚ್‌ಗೆ 24 ವರ್ಷ, ಗ್ರೌಂಡ್‌ ಡ್ಯೂಟಿ ಬ್ರ್ಯಾಂಚ್‌ಗೆ 26 ವರ್ಷ ಗರಿಷ್ಠ ವಯಸ್ಸು ದಾಟಿರಬಾರದು.

ಅರ್ಜಿ ಶುಲ್ಕ ಎಷ್ಟು?

  • AFCAT ಪ್ರವೇಶ ಶುಲ್ಕ ರೂ.550.
  • NCC ಸ್ಪೆಷಿಯಲ್ ಎಂಟ್ರಿ ಅಭ್ಯರ್ಥಿಗಳಿಗೆ ಶುಲ್ಕ ನಿಗದಿಯಾಗಿಲ್ಲ.
  • ಅಪ್ಲಿಕೇಶನ್‌ ಶುಲ್ಕವನ್ನು ಆನ್‌ಲೈನ್ ಮೂಲಕ ಕ್ರೆಡಿಟ್ ಕಾರ್ಡ್‌, ಡೆಬಿಟ್ ಕಾರ್ಡ್‌, ನೆಟ್‌ ಬ್ಯಾಂಕಿಂಗ್, ಇ-ಚಲನ್‌ ಮೂಲಕ ಪಾವತಿಸಬಹುದು.

AFCAT ಪರೀಕ್ಷೆಗೆ ಅರ್ಜಿ ಹಾಕುವ ವಿಧಾನ

- ವೆಬ್‌ಸೈಟ್‌ ವಿಳಾಸ https://afcat.cdac.in/afcatreg/candidate/login ಕ್ಕೆ ಭೇಟಿ ನೀಡಿ.

- ತೆರೆದ ವೆಬ್‌ಪುಟದಲ್ಲಿ AFCAT 02/2024 ಪರೀಕ್ಷೆಗೆ ಮೊದಲು ರಿಜಿಸ್ಟ್ರೇಷನ್‌ ಪಡೆಯಬೇಕು.

- ಆದ್ದರಿಂದ AFCAT 02/2024>> Not Yet Registered ? Register Here' ಎಂದಿರುವಲ್ಲಿ ಕ್ಲಿಕ್ ಮಾಡಿ.

- ನಂತರ ಮತ್ತೊಂದು ವೆಬ್‌ಪೇಜ್‌ ತೆರೆಯುತ್ತದೆ. ಅಗತ್ಯ ಮಾಹಿತಿಗಳನ್ನು ನೀಡಿ, ಅರ್ಜಿ ಸಲ್ಲಿಸಿ.

ವಾಯುಪಡೆ ಹುದ್ದೆಗಳಿಗೆ ವೇತನ ಎಷ್ಟು? 

ಭಾರತೀಯ ವಾಯುಪಡೆ ಹುದ್ದೆಗಳಿಗೆ AFCAT ಮೂಲಕ ಆಯ್ಕೆಯಾದವರಿಗೆ ವೇತನ ಶ್ರೇಣಿ Rs.56,100-177500 ವರೆಗೆ ಇರುತ್ತದೆ. ಅಲ್ಲದೇ ಪ್ರಮೋಷನ್‌ ಸಹ ಇರಲಿದೆ.

Post a Comment

Previous Post Next Post
CLOSE ADS
CLOSE ADS
×