9995 ಐಬಿಪಿಎಸ್‌ ಆರ್‌ಆರ್‌ಬಿ ಬ್ಯಾಂಕ್‌ ಹುದ್ದೆ ನೇಮಕ: ಅರ್ಜಿ ದಿನಾಂಕ ವಿಸ್ತರಣೆ ಇಂದು ಕೊನೆಯ ದಿನ

ದೇಶದ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ವಿವಿಧ ಹುದ್ದೆಗಳ ಭರ್ತಿಗೆ ಸಂಬಂಧ, ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿದ್ದು ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ. ನೀವು ಬ್ಯಾಂಕ್‌ ಉದ್ಯೋಗ ಆಕಾಂಕ್ಷಿಗಳಾಗಿದ್ದಲ್ಲಿ ಮತ್ತೆ ಕೊನೆಕ್ಷಣದವರೆಗೆ ಕಾಯದೇ ಬೇಗ ಬೇಗ ಅರ್ಜಿ ಸಲ್ಲಿಸಿ.



ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ರೀಜನಲ್ ರೂರಲ್‌ ಬ್ಯಾಂಕ್‌ (ಆರ್‌ಆರ್‌ಬಿ)ನ 9995 ಹುದ್ದೆಗಳ ನೇಮಕಾತಿಗೆ ಸಂಬಂಧ, ಇದೀಗ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿ, ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಿಗೆ ಇನ್ನು ಅರ್ಜಿ ಸಲ್ಲಿಸದವರು ಬೇಗ ಬೇಗ ಈಗ ಅರ್ಜಿ ಸಲ್ಲಿಸಿ. ಮತ್ತೆ ಕೊನೆಕ್ಷಣದವರೆಗೆ ಕಾಯದಿರಿ.

ಐಬಿಪಿಎಸ್‌ ಆರ್‌ಆರ್‌ಬಿ ಬ್ಯಾಂಕ್‌ಗಳ ಆಫೀಸ್ ಅಸಿಸ್ಟಂಟ್‌ (ಮಲ್ಟಿಪರ್ಪೋಸ್), ಆಫೀಸರ್ ಸ್ಕೇಲ್‌ I, II, III ಹುದ್ದೆಗಳಿಗೆ ಈ ಹಿಂದೆ ಅರ್ಜಿ ಸಲ್ಲಿಸಲು ಜೂನ್‌ 27 ರವರೆಗೆ ಮಾತ್ರ ಅವಕಾಶ ನೀಡಿತ್ತು. ಇದೀಗ ಅರ್ಜಿಗೆ ದಿನಾಂಕ ವಿಸ್ತರಣೆ ಮಾಡಿದ್ದು, ಜೂನ್ 30 ರವರೆಗೆ ಅಪ್ಲಿಕೇಶನ್‌ ಸಲ್ಲಿಸಲು ಅವಕಾಶ ನೀಡಿದೆ.

ಐಬಿಪಿಎಸ್‌ ಆರ್‌ಆರ್‌ಬಿ ಹುದ್ದೆಗಳ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 

30-06-2024

ಐಬಿಪಿಎಸ್‌ ಆರ್‌ಆರ್‌ಬಿ ಹುದ್ದೆಗಳ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಈ ಹಿಂದೆ ನಿಗದಿಪಡಿಸಿದ್ದ ಕೊನೆ ದಿನಾಂಕ : 

27-06-2024

ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಆಯೋಗವು ಯಾವೆಲ್ಲ ಹುದ್ದೆಗಳನ್ನು, ಎಷ್ಟೆಷ್ಟು ಹುದ್ದೆಗಳನ್ನು ಭರ್ತಿ ಮಾಡುತ್ತಿದೆ ಎಂಬುದರ ಲಿಸ್ಟ್‌ ಈ ಕೆಳಗಿನಂತಿದೆ.

ಐಬಿಪಿಎಸ್‌ ಆರ್‌ಆರ್‌ಬಿ ಬ್ಯಾಂಕ್‌ ಹುದ್ದೆಗಳ ವಿವರ (ಹುದ್ದೆ ಹೆಸರು / ಹುದ್ದೆಗಳ ಸಂಖ್ಯೆ)

  • ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪೋಸ್‌) : 5585
  • ಆಫೀಸರ್ ಸ್ಕೇಲ್ I : 3499
  • ಆಫೀಸರ್ ಸ್ಕೇಲ್ II (ಅಗ್ರಿಕಲ್ಚರ್ ಆಫೀಸರ್ ) : 70
  • ಆಫೀಸರ್ ಸ್ಕೇಲ್ II (ಮಾರ್ಕೆಟಿಂಗ್ ಆಫೀಸರ್) : 11
  • ಆಫೀಸರ್ ಸ್ಕೇಲ್ II (ಟ್ರೆಸರಿ ಮ್ಯಾನೇಜರ್ ) : 21
  • ಆಫೀಸರ್ ಸ್ಕೇಲ್ II (ಕಾನೂನು) : 30
  • ಆಫೀಸರ್ ಸ್ಕೇಲ್ II (ಸಿಎ ) : 60
  • ಆಫೀಸರ್ ಸ್ಕೇಲ್ II (ಐಟಿ) : 94
  • ಆಫೀಸರ್ ಸ್ಕೇಲ್ II (ಜೆನೆರಲ್ ಬ್ಯಾಂಕಿಂಗ್ ಆಫೀಸರ್ ) : 496
  • ಆಫೀಸರ್ ಸ್ಕೇಲ್ III : 129

ಒಟ್ಟು ಹುದ್ದೆಗಳು : 9995

ಅರ್ಜಿ ಸಲ್ಲಿಸುವ ವಿಧಾನಐಬಿಪಿಸ್‌ ವೆಬ್‌ಸೈಟ್‌ www.ibps.in ಗೆ ಭೇಟಿ ನೀಡಿ.

  • 'CRP FOR RRBs' ಗೆ ಸಂಬಂಧಿತ ಲಿಂಕ್ ಕ್ಲಿಕ್ ಮಾಡಿ.
  • ಮತ್ತೊಂದು ವೆಬ್‌ಪುಟ ತೆರೆಯುತ್ತದೆ.
  • ಈ ವೆಬ್‌ಪೇಜ್‌ನಲ್ಲಿ 'Click Here To Apply Online For CRP -RRBs Officers (Scale-I, II, III) / Office Assistants (Multipurpost)' ಗೆ ಸಂಬಂಧಿತ ಪ್ರತ್ಯೇಕ ಲಿಂಕ್‌ಗಳನ್ನು ಕ್ಲಿಕ್ ಮಾಡಿ.
  • ವಿದ್ಯಾರ್ಹತೆ, ಕಾರ್ಯಾನುಭವಗಳಿಗೆ ಅನುಗುಣವಾಗಿ, ನಿಮಗೆ ಸೂಕ್ತ ಹುದ್ದೆ ಆಯ್ಕೆ ಮಾಡಿ ಅರ್ಜಿ ಸಲ್ಲಿಸಿ.
  • ಮೊದಲು ಪ್ರಾಥಮಿಕ ವಿವರಗಳನ್ನು ನೀಡಿ ರಿಜಿಸ್ಟ್ರೇಷನ್‌ ಪಡೆಯಬೇಕು.
  • ನಂತರ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಅರ್ಜಿ ಶುಲ್ಕ ವಿವರ

  • ಆಫೀಸರ್ (ಸ್ಕೇಲ್‌ I, II, III) ಹಾಗೂ ಆಫೀಸ್ ಅಸಿಸ್ಟಂಟ್ (ಮಲ್ಟಿಪರ್ಪೋಸ್) ಹುದ್ದೆಗಳಿಗೆ ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ರೂ.175.
  • ಇತರೆ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ Rs.850.

Previous Post Next Post