Post Office: ಪೋಸ್ಟ್ ಆಫೀಸಿನ ಯೋಜನೆಯಲ್ಲಿ 500 ರೂಪಾಯಿ ಹೂಡಿಕೆ ಮಾಡಿದರೆ 4ಲಕ್ಷ ರಿಟರ್ನ್ಸ್ ಗ್ಯಾರೆಂಟಿ!

Post Office: ಪೋಸ್ಟ್ ಆಫೀಸಿನ ಯೋಜನೆಯಲ್ಲಿ 500 ರೂಪಾಯಿ ಹೂಡಿಕೆ ಮಾಡಿದರೆ 4ಲಕ್ಷ ರಿಟರ್ನ್ಸ್ ಗ್ಯಾರೆಂಟಿ!

ಎಲ್ಲರಿಗೂ ಹಣ ಹೆಚ್ಚು ಒಟ್ಟು ಮಾಡಬೇಕು ಎಂಬ ಬಯಕೆ ಇದ್ದೇ ಇರಲಿದೆ. ಹಣ ಉಳಿತಾಯ ಆಗಿ ನಿಮಗೆ ದೀರ್ಘಾವಧಿಯಲ್ಲಿ ಅದು ಲಾಭವಾಗಿ ಸಿಗಬೇಕು ಎಂದು ನೀವು ಬಯಸುವುದಾದರೆ ಮೊದಲು ಉತ್ತಮ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡುವುದನ್ನು ನೀವು ಕಲಿಯಬೇಕು. ಅದಕ್ಕಾಗಿ ಅಧಿಕ ಲಾಭ ಸಿಗುತ್ತದೆ ಎಂಬುದನ್ನು ನೀವು ಬಯಸಿದರೆ ಸುರಕ್ಷತಾ ದೃಷ್ಟಿಯಿಂದ ಅಂಚೆ ಇಲಾಖೆಯಲ್ಲಿ ನೀವು ಹೂಡಿಕೆ ಮಾಡಬೇಕು. ಇದು ನಿಮಗೆ ಅಧಿಕ ಲಾಭವನ್ನು ನಿಮಗೆ ನೀಡಲಿದೆ ಎಂದು ಹೇಳಬಹುದು.



ಅನೇಕ ಹೂಡಿಕೆ

ಅಂಚೆ ಕಚೇರಿಯಲ್ಲಿ (Post Office) ಅನೇಕ ತರನಾದ ಉಳಿತಾಯ ಯೋಜನೆಯನ್ನು ಬೆಂಬಲಿಸುವ ಹೂಡಿಕೆ ನಾವು ಕಾಣಬಹುದು. RD, FD ಮಾತ್ರವಲ್ಲದೆ ಇನ್ನೂ ಅನೇಕ ಯೋಜನೆ ಅಂಚೆ ಇಲಾಖೆಯಲ್ಲಿ ಇದೆ. ನೀವು ಉಳಿತಾಯ ಠೇವಣಿ ಮಾಡಲು ಬಯಸಿದರೆ ಆಗ ನೀವು 500 ರೂಪಾಯಿಗಿಂತ ಕಡಿಮೆ ಹೂಡಿಕೆ ಮಾಡಬೇಕು. ಸಣ್ಣ ಮೊತ್ತದಿಂದ ನಿಮ್ಮ ಹೂಡಿಕೆ ಪ್ರಾರಂಭ ಮಾಡಿದರೂ ಕಾಲ ಕ್ರಮೇಣ ನಿಮ್ಮ ಬಳಿ ಎಷ್ಟು ಹಣ ಸೇವ್ ಆಗುತ್ತದೆ ಅಷ್ಟನ್ನು ವಿನಿಯೋಗ ಮಾಡಬಹುದು. 500 ರೂಪಾಯಿಗಿಂತ ಕಡಿಮೆ ಹೂಡಿಕೆ ಮಾಡುವವರಿಗೂ ಅಂಚೆ ಇಲಾಖೆ ಬೆಂಬಲಿಸುತ್ತಿದ್ದು ನೀವು ಸಣ್ಣ ಮೊತ್ತ ಹೂಡಿಕೆ ಮಾಡಲು ಬಯಸಿದರೆ ಈ ಮಾಹಿತಿ ಬಹಳ ಅನುಕೂಲ ಆಗಲಿದೆ.

ಸುಕನ್ಯಾ ಸಮೃದ್ಧಿ ಯೋಜನೆ

ಸುಕನ್ಯಾ ಸಮೃದ್ಧಿ ಯೋಜನೆಯನ್ನು SSY ಎಂದು ಕೂಡ ಕರೆಯುತ್ತಾರೆ. ಮಗಳ ಹೆಸರಲ್ಲುವೀ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಬಹುದಾಗಿದ್ದು 250 ರೂಪಾಯಿ ಕನಿಷ್ಠ ಹೂಡಿಕೆ ಮಾಡಬಹುದು. ಕನಿಷ್ಠ 250ರಿಂದ ಗರಿಷ್ಟ 1.5ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಈ ಯೋಜನೆ ಅಡಿಯಲ್ಲು 8.2% ಬಡ್ಡಿದರ ನಿಮಗೆ ಸಿಗಲಿದೆ. ಆಗ ನೀವು 15 ವರ್ಷ ಹೂಡಿಕೆ ನಂತರ 90,000 ಮೊತ್ತ ಸಿಗಲಿದೆ ಅದಕ್ಕೆ ಬಡ್ಡಿ ಮೊತ್ತ ಎಲ್ಲ ಸೇರಿ ಹೆಣ್ಣು ಮಗುವಿಗೆ 21ವರ್ಷವಾದ ಬಳಿಕ 2,77,103 ರೂಪಾಯಿ ಆಗಲಿದೆ.

ಮಾಸಿಕ ಠೇವಣಿ ಯೋಜನೆ

ಪ್ರತೀ ತಿಂಗಳು ಠೇವಣಿ ಮಾಡುವ RDಯೋಜನೆಯನ್ನು ಮಾಡಬಹುದು. ಇದರಲ್ಲಿ 100 ನಿಂದ ಹೂಡಿಕೆಯನ್ನು ನೀವು ಮಾಡಬಹುದು. 5. ವರ್ಷದ ನಿರಂತರ ಹೂಡಿಕೆ ಬಳಿಕ 6.7% ನಂತೆ ನಿಮಗೆ ಬಡ್ಡಿದರ ಕೂಡ ಸಿಗಲಿದೆ. ನೀವು ಈ ಯೋಜನೆ ಅಡಿಯಲ್ಲಿ 500 ರೂಪಾಯಿ ಹೂಡಿಕೆ ಮಾಡಿದರೆ 30,000 ಠೇವಣಿ ಆಗಲಿದೆ. 5ವರ್ಷದ ನಂತರ 35, 681 ರೂಪಾಯಿ ಸಿಗಲಿದೆ.

ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ

ಈ ಒಂದು ಯೋಜನೆಗೆ PPF ಎಂದು ಕೂಡ ಕರೆಯುತ್ತಾರೆ. ಈ ಯೋಜನೆ ಅಡಿಯಲ್ಲಿ ಕನಿಷ್ಠ 500 ರೂಪಾಯಿ ಯಿಂದ ಗರಿಷ್ಟ 1.5ಲಕ್ಷ ರೂಪಾಯಿ ತನಕ ನೀವು ಹೂಡಿಕೆ ಮಾಡಬಹುದು. 15 ವರ್ಷದ ತನಕ ಸಮಯಾವಕಾಶ ಇದ್ದು ನೀವು ಬಯಸಿದರೆ ಹೆಚ್ಚುವರಿ ಕಾಲಕ್ಕೆ ಬ್ಯಾಂಕಿನಲ್ಲಿ 5ವರ್ಷದ ತನಕ ಹೂಡಿಕೆ ಇರಿಸಬಹುದು. ಈ ಯೋಜನೆ ಅಡಿಯಲ್ಲಿ 1.7 % ಬಡ್ಡಿ ನಿಮಗೆ ಸಿಗಲಿದ್ದು ತಿಂಗಳಿಗೆ 500 ಎಂದರೆ ವಾರ್ಷಿಕ 6000 ರೂಪಾಯಿ ಆಗಲಿದೆ. 15 ವರ್ಷಕ್ಕೆ 1,62,728. ರೂಪಾಯಿ ಆಗಲಿದೆ. ಅದನ್ನು ಮತ್ತೆ ಪುನಃ ಬ್ಯಾಂಕಿನಲ್ಲಿ 5ವರ್ಷ ವಿಸ್ತರಣೆ ಮಾಡಿದರೆ 2,66,332ರೂಪಾಯಿ ಆಗಲಿದೆ. ಅದನ್ನು ಮತ್ತೆ 25ವರ್ಷ ಹೂಡಿಕೆ ಮಾಡಿಟ್ಟರೆ 4,12,321ರೂಪಾಯಿ ಸಿಗಲಿದೆ.


Post a Comment

Previous Post Next Post
CLOSE ADS
CLOSE ADS
×