RTE ಕಾಯಿದೆ ಅಡಿ ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶಾತಿ ಅರ್ಜಿಗೆ 1 ತಿಂಗಳು ದಿನಾಂಕ ವಿಸ್ತರಣೆ

RTE ಕಾಯಿದೆ ಅಡಿ ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶಾತಿ ಅರ್ಜಿಗೆ 1 ತಿಂಗಳು ದಿನಾಂಕ ವಿಸ್ತರಣೆ

2024-25ನೇ ಸಾಲಿಗೆ ಖಾಸಗಿ ಶಾಲೆಗಳಲ್ಲಿ 1 ನೇ ಕ್ಲಾಸ್‌ನಿಂದ 8ನೇ ಕ್ಲಾಸ್‌ ವರೆಗೆ ಉಚಿತ ಪ್ರವೇಶಾತಿಯನ್ನು ಪಡೆಯುವ ಸಂಬಂಧ, ಆನ್‌ಲೈನ್‌ ಅರ್ಜಿಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ. ಹೊಸ ವೇಳಾಪಟ್ಟಿ ಇಲ್ಲಿ ನೀಡಲಾಗಿದೆ. ಹಾಗೂ ನೆರೆಹೊರೆ ಶಾಲೆ ಚೆಕ್‌ ಮಾಡುವ ವಿಧಾನವನ್ನು ಇಲ್ಲಿ ತಿಳಿಸಲಾಗಿದೆ.



  • ಖಾಸಗಿ ಶಾಲೆಗಳು, ಸರ್ಕಾರಿ ಅನುದಾನಿತ, ಅನುದಾನ ರಹಿತ (ಅಲ್ಪಸಂಖ್ಯಾತವಲ್ಲದ) ಶಾಲೆಗಳಲ್ಲಿ 1ನೇ ತರಗತಿ ಇಂದ 8ನೇ ತರಗತಿ ವರೆಗೆ ಶಿಕ್ಷಣ ಹಕ್ಕು ಕಾಯಿದೆ 2009 ರ ಅಡಿ ಉಚಿತವಾಗಿ ಪ್ರವೇಶ ಪಡೆಯಲು ಇತ್ತೀಚೆಗೆ ಅರ್ಜಿ ಆಹ್ವಾನಿಸಿ ಶಾಲಾ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಇದೀಗ ಸದರಿ ಪ್ರವೇಶಾತಿ ಅರ್ಜಿಗೆ ಅವಧಿ ವಿಸ್ತರಣೆ ಮಾಡಿದೆ ಶಿಕ್ಷಣ ಇಲಾಖೆ.
  • ಈ ಹಿಂದೆ ಆರ್‌ಟಿಇ ಅಡಿ ದಾಖಲಾತಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕವಾಗಿ 22-04-2024 ರವರೆಗೆ ಅವಕಾಶ ನೀಡಲಾಗಿತ್ತು. ಉಪನಿರ್ದೇಶಕರುಗಳಿಂದ ಸ್ವೀಕೃತಗೊಂಡ ಮನವಿಗಳ ಮೇರೆಗೆ ಅರ್ಜಿ ಸಲ್ಲಿಸುವ ಅವಧಿಯ ದಿನಾಂಕವನ್ನು ಈಗ 20-05-2024 ರವರೆಗೆ ವಿಸ್ತರಣೆ ಮಾಡಲಾಗಿದೆ. ಹಾಗೂ ಪರಿಷ್ಕೃತ ವೇಳಾಪಟ್ಟಿಯನ್ನು ಇಲಾಖೆ ಬಿಡುಗಡೆ ಮಾಡಿದೆ.
  • 2024-25ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ ಅಡಿ ಪ್ರವೇಶಾತಿಗೆ ಲಿಂಕ್

2024-25ನೇ ಸಾಲಿಗೆ ಶಿಕ್ಷಣ ಹಕ್ಕು ಕಾಯಿದೆ ಅಡಿ ದಾಖಲಾತಿಗೆ ನಿಗದಿಪಡಿಸಿರುವ ಪರಿಷ್ಕೃತ ವೇಳಾಪಟ್ಟಿ ಕೆಳಗಿನಂತಿದೆ.

  • ಅನುದಾನಿತ ಶಾಲೆಗಳು ಸೇರಿದಂತೆ ದಾಖಲಾತಿ ಕೋರಿ ಪೋಷಕರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅವಧಿ 22-03-2024 To 20-05-2024
  • ಇ.ಐ.ಡಿ ಮೂಲಕ ಸಲ್ಲಿಸಿದ ಅರ್ಜಿಗಳ ದತ್ತಾಂಶದ ನೈಜತೆ ಪರಿಶೀಲನೆ 30-05-2024 ವರೆಗೆ
  • ವಿಶೇಷ ಪ್ರವರ್ಗಗಳು ಮತ್ತು ಕ್ರಮಬದ್ಧವಲ್ಲದ ಅರ್ಜಿಗಳ ಪರಿಶೀಲನೆ 30-05-2024 ವರೆಗೆ.
  • ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ 01-06-2024
  • ಆನ್‌ಲೈನ್ ತಂತ್ರಾಂಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ 05-06-2024
  • ಶಾಲೆಗಳಲ್ಲಿ ದಾಖಲಾತಿ ಪ್ರಾರಂಭ 06-06-2024 To 13-06-2024
  • ಶಾಲೆಗಳಲ್ಲಿ ದಾಖಲಾದ ಮೊದಲ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಪ್‌ಲೋಡ್‌ ಮಾಡುವುದು 06-06-2024 ರಿಂದ 14-06-2024
  • ಆನ್‌ಲೈನ್‌ ತಂತ್ರಾಂಶದ ಮೂಲಕ ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆ 19-06-2024
  • 2ನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿ ಅವಧಿ 20-06-2024 ರಿಂದ 27-06-2024
  • ಶಾಲೆಗಳಲ್ಲಿ ದಾಖಲಾದ 2ನೇ ಸುತ್ತಿನ ಮಕ್ಕಳ ವಿವರಗಳನ್ನು ತಂತ್ರಾಂಶದಲ್ಲಿ ಅಳವಡಿಸುವುದು 20-06-2024 ರಿಂದ 28-06-2024 ರವರೆಗೆ.

'RTE - ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ' - ಚೆಕ್‌ ಮಾಡಲು ಕ್ಲಿಕ್ ಮಾಡಿ.

ಆರ್‌ಟಿಇ ಅಡಿ ಪ್ರವೇಶಕ್ಕೆ ನೆರೆ ಹೊರೆ ಶಾಲೆ ತಿಳಿಯುವ ವಿಧಾನ

  • ಪೋಷಕರು ಮೇಲೆ ನೀಡಲಾದ ವೆಬ್‌ ಲಿಂಕ್ 'RTE - ನೆರೆಹೊರೆ ಶಾಲೆಗಳ ಅಂತಿಮ ಪಟ್ಟಿ' ಕ್ಲಿಕ್ ಮಾಡಿ.
  • ತೆರೆದ ವೆಬ್‌ ಪುಟದಲ್ಲಿ ಜಿಲ್ಲೆ, ಬ್ಲಾಕ್‌ (ತಾಲ್ಲೂಕು), ಗ್ರಾಮ, ವಾರ್ಡ್‌ ಆಯ್ಕೆ ಮಾಡಿ.
  • ನಂತರ ನಿಮ್ಮ ಸುತ್ತ ಮುತ್ತ ಹತ್ತಿರದಲ್ಲಿರುವ ಸರ್ಕಾರಿ, ಅನುದಾನಿತ, ಅನುದಾನರಹಿತ, ಖಾಸಗಿ ಶಾಲೆಗಳ ಲಿಸ್ಟ್‌ ಪ್ರದರ್ಶಿತವಾಗುತ್ತದೆ.ನಿಮ್ಮ ಆಸಕ್ತಿಯ ಶಾಲೆಗೆ ಅರ್ಜಿ ಸಲ್ಲಿಸಿ.

ತಂದೆ / ತಾಯಿ / ಪಾಲಕರು ಸ್ವಂತ ಮೊಬೈಲ್‌ ಫೋನ್‌ ಮತ್ತು ಇಂಟರ್‌ನೆಟ್‌ ಸೌಲಭ್ಯ ಲಭ್ಯವಿದ್ದಲ್ಲಿ ಆನ್‌ಲೈನ್‌ ಮುಖಾಂತರ ನೇರವಾಗಿ ಅರ್ಜಿ ಸಲ್ಲಿಸಬಹುದು.


Post a Comment

Previous Post Next Post
CLOSE ADS
CLOSE ADS
×