ನಿಮ್ಮ ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಉಚಿತ ಶಿಕ್ಷಣಕ್ಕಾಗಿ ಪ್ರವೇಶಾತಿ ಬೇಕೇ?., ಈಗಲೇ RTE ಅರ್ಜಿ ಹಾಕಿ

ನಿಮ್ಮ ಮಕ್ಕಳಿಗೆ ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಉಚಿತ ಶಿಕ್ಷಣಕ್ಕಾಗಿ ಪ್ರವೇಶಾತಿ ಬೇಕೇ?., ಈಗಲೇ RTE ಅರ್ಜಿ ಹಾಕಿ

KVS Admission Form 2024-25 Time Table : ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ವಿವಿಧ ತರಗತಿಗಳ ಪ್ರವೇಶಾತಿ ಆರಂಭವಾಗಿದೆ. ಬಾಲವಾಟಿಕ, ಆರ್‌ಟಿಇ ಪ್ರವೇಶ ಅರ್ಜಿ, ಒಂದನೇ ತರಗತಿ, ಎರಡನೇ ತರಗತಿ, ಹೆಚ್ಚಿನ ತರಗತಿಗಳ ಪ್ರವೇಶಾತಿಗೆ ಆನ್‌ಲೈನ್‌ ರಿಜಿಸ್ಟ್ರೇಷನ್‌, ಆಫ್‌ಲೈನ್‌ ರಿಜಿಸ್ಟ್ರೇಷನ್‌ ವೇಳಾಪಟ್ಟಿ ಬಿಡುಗಡೆ ಆಗಿದೆ.



ಪೋಷಕರೇ ನೀವಿರುವ ಸುತ್ತ ಮುತ್ತಲ ಹಳ್ಳಿ, ನಗರ, ಪಟ್ಟಣ ಯಾವುದೇ ಪ್ರದೇಶದಲ್ಲಿ ಸರ್ಕಾರಿ ಶಾಲೆ ಇರುತ್ತದೆ. ಆದರೆ ಒಳ್ಳೆಯ ಮೂಲ ಸೌಕರ್ಯ, ಅಗತ್ಯ ಶಿಕ್ಷಕರು, ಉತ್ತಮ ಶಿಕ್ಷಣ, ಓಡಾಡಲು ಅನುಕೂಲ ಹೀಗೆ ಹಲವು ಸಮಸ್ಯೆಗಳು ಇರಬಹುದು. ಇಂತಹ ಸನ್ನಿವೇಶ ಇದ್ದಾಗ ಸಾಮಾನ್ಯವಾಗಿ ನೀವು ಸಹ ನಿಮ್ಮ ಮಕ್ಕಳನ್ನು ಉತ್ತಮ ಖಾಸಗಿ ಶಾಲೆಗಾದರೂ ಸೇರಿಸಿ ಶಿಕ್ಷಣ ಕೊಡಿಸಬೇಕು ಎಂದುಕೊಳ್ಳುತ್ತೀರಾ. ಆದರೆ ಬಹುಸಂಖ್ಯಾತ ಪೋಷಕರಿಗೆ ಉತ್ತಮ ಖಾಸಗಿ ಶಾಲೆಯ ಪ್ರವೇಶ ಶುಲ್ಕ ಅತಿ ದುಬಾರಿಯಾದ ಹಿನ್ನೆಲೆಯಲ್ಲಿ, ಅಲ್ಲಿಗೆ ಪ್ರವೇಶ ಮಾಡಿಸಲು ಸಾಧ್ಯವಾಗದೇ ಇರಬಹುದು. ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಇರುವುದೇ ಶಿಕ್ಷಣ ಹಕ್ಕು ಕಾಯ್ದೆ 2009 (RTE). ಈಗ ಆರ್‌ಟಿಇ ಮೂಲಕ ಸೀಟು ಹಂಚಿಕೆಗಾಗಿ ರಾಜ್ಯ ಸರ್ಕಾರವು ಅರ್ಜಿ ಕರೆದಿದೆ. ಅಲ್ಲದೇ ಕೇಂದ್ರೀಯ ವಿದ್ಯಾಲಯವು ಆರ್‌ಟಿಇ ಅರ್ಜಿ ಕರೆದಿದೆ.

ಆರ್‌ಟಿಇ ಕಾಯ್ದೆ ಮೂಲಕ ನಿಮ್ಮ ಮಕ್ಕಳಿಗೆ ನಿಮ್ಮ ಆಸಕ್ತ ಮತ್ತು ಹತ್ತಿರದ ಖಾಸಗಿ ಶಾಲೆಯಲ್ಲಿ ಉಚಿತ ಪ್ರವೇಶ ಪಡೆಯಬಹುದು. ನೀವು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಕಾಯ್ದೆ ಪ್ರಕಾರ ಶೇಕಡ.25 ರಷ್ಟು ಉಚಿತ ಸೀಟುಗಳು ಲಭ್ಯ ಇರುತ್ತವೆ.

ವಿಶೇಷ ಅಂದ್ರೆ ಈ ಕಾಯ್ದೆ ಪ್ರಕಾರ ಎಲ್‌ಕೆಜಿ ಇಂದ 8ನೇ ತರಗತಿವರೆಗೆ ಉಚಿತ ಪ್ರವೇಶ ಲಭ್ಯ. ಈ ಸೀಟು ಪಡೆಯಲು ನೀವು ಮಾಡಬೇಕಿರುವುದು - ಅರ್ಜಿ ಕರೆದಾಗ ಅರ್ಜಿ ಹಾಕಬೇಕು.

ಈಗ ರಾಜ್ಯದಾದ್ಯಂತ ಖಾಸಗಿ ಶಾಲೆಗಳು, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಆರ್‌ಟಿಇ ಸೀಟುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ದಿನಾಂಕ, ಅರ್ಜಿ ಹಾಕುವ ವಿಧಾನ, ಆರ್‌ಟಿಇ ಸೀಟು ಲಭ್ಯ ಇರುವ ನಿಮ್ಮ ಹತ್ತಿರದ ಶಾಲೆಗಳ ಮಾಹಿತಿ ತಿಳಿಯಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ.

ಕೇಂದ್ರೀಯ ವಿದ್ಯಾಲಯ ಶಾಲೆಗಳ ಆರ್‌ಟಿಇ ಸೀಟುಗಳಿಗೂ ಅರ್ಜಿ ಆಹ್ವಾನ

ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಲಭ್ಯ ಇರುವ ಶೇಕಡ.25 ರಷ್ಟು ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಯಡಿಯ ಸೀಟುಗಳ ಪ್ರವೇಶಕ್ಕೆ ಈಗ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಪೋಷಕರು ತಮ್ಮ ಮಕ್ಕಳನ್ನು (ಎಲ್‌ಕೆಜಿ ಇಂದ 8ನೇ ತರಗತಿವರೆಗೆ) ಕೇಂದ್ರೀಯ ವಿದ್ಯಾಲಯ ಶಾಲೆಗಳಲ್ಲಿ ಉಚಿತವಾಗಿ ಅಡ್ಮಿಷನ್‌ ಮಾಡಲು ಬಯಸಿದ್ದಲ್ಲಿ ಈಗಲೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ.

ಕೇಂದ್ರೀಯ ವಿದ್ಯಾಲಯ ಆರ್‌ಟಿಇ ಸೀಟುಗಳಿಗೆ ಅರ್ಜಿ ಹಾಕಲು ಕೊನೆ ದಿನಾಂಕ : 15-04-2024 ರ ಸಂಜೆ 05 ಗಂಟೆವರೆಗೆ.

ಪೋಷಕರು ಮೇಲಿನ ಲಿಂಕ್ ಕ್ಲಿಕ್ ಮಾಡಿ ಅರ್ಜಿ ಡೌನ್‌ಲೋಡ್‌ ಮಾಡಿ ಪ್ರಿಂಟ್ ತೆಗೆದುಕೊಳ್ಳಿ. ನಂತರ ಅದರಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ, ನಿಮ್ಮ ಹತ್ತಿರದ ಕೇಂದ್ರೀಯ ವಿದ್ಯಾಲಯ ಶಾಲೆಗೆ ತಲುಪಿಸಿ.

ಅರ್ಜಿ ಸಲ್ಲಿಸಲು ಯಾರು ಅರ್ಹರು ?

ಕೇಂದ್ರೀಯ ವಿದ್ಯಾಲಯ ಶಾಲೆಗಳ 5 ಕಿ.ಮೀ ವ್ಯಾಪ್ತಿಯಲ್ಲಿ ವಾಸವಿರುವ ಪೋಷಕರು ಮತ್ತು ಬಿಪಿಎಲ್‌ ಕಾರ್ಡ್‌ ಹೊಂದಿರುವ ಪೋಷಕರು ತಮ್ಮ ಮಕ್ಕಳನ್ನು ಆರ್‌ಟಿಇ ಸೀಟು ಮೂಲಕ ಅಡ್ಮಿಷನ್‌ ಪಡೆಯಲು ಅರ್ಜಿ ಸಲ್ಲಿಸಬಹುದು.

  • ಕೇಂದ್ರೀಯ ವಿದ್ಯಾಲಯದಲ್ಲಿ ಬಾಲವಾಟಿಕಾ, ಒಂದನೇ ತರಗತಿ, ಎರಡನೇ ತರಗತಿ ಸೇರಿದಂತೆ ವಿವಿಧ ತರಗತಿಗಳಿಗೆ ಪ್ರವೇಶಕ್ಕೆ ಸಂಬಂಧಿತ ವೇಳಾಪಟ್ಟಿ, ಅರ್ಜಿ ನಮೂನೆ, ಇತರೆ ಲೇಟೆಸ್ಟ್‌ ಮಾಹಿತಿಗಳಿಗಾಗಿ https://kvsangathan.nic.in/updates/ ವೆಬ್‌ ವಿಳಾಸಕ್ಕೆ ಭೇಟಿ ನೀಡಿ.

ಇತರೆ ಪ್ರಮುಖ ದಿನಾಂಕಗಳು

  • 1ನೇ ತರಗತಿಗೆ ಆನ್‌ಲೈನ್‌ ರಿಜಿಸ್ಟ್ರೇಷನ್‌ಗಾಗಿ ಕೊನೆ ದಿನಾಂಕ : 15-04-2024 - 05pm
  • ಅರ್ಜಿ ಸಲ್ಲಿಸಿದವರ ಮೊದಲನೇ ಮತ್ತು ಕಾಯ್ದಿರಿಸಿದ ಅರ್ಹತಾ ಪಟ್ಟಿ ಬಿಡುಗಡೆ ದಿನಾಂಕ : 19-04-2024
  • ಎರಡನೇ ಮತ್ತು ಕಾಯ್ದಿರಿಸಿದ ಅರ್ಹತಾ ಪಟ್ಟಿ ಬಿಡುಗಡೆ ದಿನಾಂಕ : 29-04-2024
  • ಮೂರನೇ ಅರ್ಹತಾ ಪಟ್ಟಿ ಬಿಡುಗಡೆ ದಿನಾಂಕ : 08-05-2024

ಆರ್‌ಟಿಇ ಸೀಟುಗಳು, ಎಸ್‌ಸಿ / ಎಸ್‌ಟಿ/ ಒಬಿಸಿ (ಎನ್‌ಸಿಎಲ್) ಸೀಟುಗಳಿಗೆ ಆನ್‌ಲೈನ್‌ ಮೂಲಕ ಲಭ್ಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸದೇ / ಪ್ರವೇಶ ಪಡೆಯದೇ ಸೀಟುಗಳು ಉಳಿದುಕೊಂಡಲ್ಲಿ ಕೇಂದ್ರೀಯ ವಿದ್ಯಾಲಯ ಎರಡನೇ ಅಧಿಸೂಚನೆ ಬಿಡುಗಡೆ ಮಾಡುತ್ತದೆ. ಆಫ್‌ಲೈನ್‌ ರಿಜಿಸ್ಟ್ರೇಷನ್‌ ಪಡೆಯಬಹುದು. ಈ ದಿನಾಂಕಗಳು ಕೆಳಗಿನಂತಿವೆ.

  • ನೋಟಿಫಿಕೇಶನ್‌ ಬಿಡುಗಡೆ ದಿನಾಂಕ : 08-05-2024
  • ಆಫ್‌ಲೈನ್‌ ಮಾದರಿಯಲ್ಲಿ ರಿಜಿಸ್ಟ್ರೇಷನ್‌ ಪಡೆಯಲು ಕೊನೆ ದಿನಾಂಕ : 15-05-2024
  • ಅರ್ಹತಾ ಪಟ್ಟಿ ಬಿಡುಗಡೆ ಮತ್ತು ಪ್ರವೇಶಾತಿಗೆ ಅವಕಾಶ : ಮೇ 22 ರಿಂದ 27, 2024 ರವರೆಗೆ.
  • ಎಲ್ಲ ತರಗತಿಗಳಿಗೆ ಪ್ರವೇಶ ಪಡೆಯಲು ಕೊನೆ ದಿನಾಂಕ : 29-06-2024

Post a Comment

Previous Post Next Post
CLOSE ADS
CLOSE ADS
×