Atal Pension Scheme: ಪ್ರತಿ ತಿಂಗಳು ಕೇವಲ 210 ರೂಪಾಯಿ ಹೂಡಿಕೆ ಮಾಡಿ, 60 ಸಾವಿರ ಪಡೆಯಿರಿ

Atal Pension Scheme: ಪ್ರತಿ ತಿಂಗಳು ಕೇವಲ 210 ರೂಪಾಯಿ ಹೂಡಿಕೆ ಮಾಡಿ, 60 ಸಾವಿರ ಪಡೆಯಿರಿ

ಅನೇಕ ಪಿಂಚಣಿ ಯೋಜನೆಗಳು ಲಭ್ಯವಿದ್ದು, ಸರಕಾರ ನೀಡುವ ಕೆಲವೊಂದು ಪಿಂಚಣಿ ಯೋಜನೆಗಳಲ್ಲಿ ಅಟಲ್ ಪಿಂಚಣಿ ಯೋಜನೆ ಅತ್ಯಂತ ಪ್ರಮುಖ ಹಾಗೂ ಲಾಭದಾಯಕ ಎಂದೆನಿಸಿದೆ.



ಪಿಂಚಣಿ ಯೋಜನೆ (Pension Scheme) ಮುಖ್ಯವಾಗಿ ಹಿರಿಯ ನಾಗರಿಕರಿಗೆ (Senior citizens) ಹೆಚ್ಚು ಪ್ರಯೋಜನಕಾರಿ ಎಂದೆನಿಸಿದ್ದು, ಇನ್ನೊಬ್ಬರನ್ನು ಆಧರಿಸಿದೆ ತಮ್ಮ ಆರ್ಥಕ ಅಗತ್ಯಗಳನ್ನು ಈಡೇರಿಸಿಕೊಳ್ಳಲು, ಸ್ವತಂತ್ರರಾಗಿರಲು ಪಿಂಚಣಿ ಯೋಜನೆಗಳು ಸಹಕಾರಿಯಾಗಿವೆ. ಪಿಂಚಣಿ ಯೋಜನೆಗಳನ್ನು ಆಯ್ಕೆಮಾಡುವಾಗ ಸರಿಯಾದ ಹಾಗೂ ಹೆಚ್ಚು ಪ್ರಯೋಜನಕಾರಿಯಾಗಿರುವ ಯೋಜನೆಗಳನ್ನು ಆಯ್ಕೆಮಾಡಿಕೊಳ್ಳುವುದು ಮುಖ್ಯವಾಗಿದೆ.

ಅನೇಕ ಪಿಂಚಣಿ ಯೋಜನೆಗಳು ಲಭ್ಯವಿದ್ದು, ಸರಕಾರ ನೀಡುವ ಕೆಲವೊಂದು ಪಿಂಚಣಿ ಯೋಜನೆಗಳಲ್ಲಿ ಅಟಲ್ ಪಿಂಚಣಿ ಯೋಜನೆ ಅತ್ಯಂತ ಪ್ರಮುಖ ಹಾಗೂ ಲಾಭದಾಯಕ ಎಂದೆನಿಸಿದೆ.

ಸರಕಾರದ ಪಿಂಚಣಿ ಯೋಜನೆ ಹೇಗೆ ಸಹಕಾರಿ?

ಹೂಡಿಕೆ ಮೊತ್ತ ಕಡಿಮೆ ಇದ್ದು ಜೀವನದುದ್ದಕ್ಕೂ ಪಿಂಚಣಿ ಪ್ರಯೋಜನಗಳು ದೊರೆಯುವ ಆಯ್ಕೆಯನ್ನು ನೀವು ಅನ್ವೇಷಿಸುತ್ತಿದ್ದರೆ ಸರಕಾರದ ಈ ಪಿಂಚಣಿ ಯೋಜನೆ ನಿಮಗೆ ಸಹಕಾರಿ ಎಂದೆನಿಸಿದೆ. ಹಾಗಿದ್ದರೆ ಆ ಪಿಂಚಣಿ ಯೋಜನೆ ಯಾವುದು ಅದರ ವಿಶೇಷತೆಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ಸರಕಾರದ ಅಟಲ್ ಪಿಂಚಣಿ ಯೋಜನೆಯಡಿಯಲ್ಲಿ ಪ್ರತಿ ವರ್ಷ 60,000 ರೂ ಪಿಂಚಣಿ ಲಭ್ಯವಿರುತ್ತದೆ. ಇನ್ನಷ್ಟು ಪಿಂಚಣಿ ಪ್ರಯೋಜನಗಳು ಹಾಗೂ ಲಾಭಗಳನ್ನು ಈ ಯೋಜನೆ ಒಳಗೊಂಡಿದ್ದು ಇದನ್ನು ತಿಳಿದುಕೊಳ್ಳೋಣ.

ರೂ 5,000 ದ ಮಾಸಿಕ ಪಿಂಚಣಿ

ಪ್ರತಿ ತಿಂಗಳು ಕೇವಲ 210 ರೂಪಾಯಿಗಳನ್ನು ಠೇವಣಿ ಮಾಡುವ ಮೂಲಕ, ಪಿಂಚಣಿದಾರರು ನಿವೃತ್ತಿಯ ನಂತರ ಅಂದರೆ 60 ವರ್ಷಗಳ ನಂತರ ಪ್ರತಿ ತಿಂಗಳು ಗರಿಷ್ಠ 5,000 ರೂಪಾಯಿಗಳ ಪಿಂಚಣಿ ಪಡೆಯಬಹುದು.

ಇದಕ್ಕಾಗಿ ಹಿರಿಯ ನಾಗರಿಕರು 7 ರೂಗಳನ್ನು ಉಳಿಸಬೇಕಾಗುತ್ತದೆ. ಈ ಪಿಂಚಣಿ ಯೋಜನೆಯಲ್ಲಿ ಖಾತರಿ ಪಿಂಚಣಿ ನೀಡಲಾಗುತ್ತದೆ. ಪ್ರಸ್ತುತ ನಿಯಮಗಳ ಪ್ರಕಾರ, 18 ವರ್ಷ ವಯಸ್ಸಿನಲ್ಲಿ ಮಾಸಿಕ ಪಿಂಚಣಿಗೆ ಗರಿಷ್ಠ 5,000 ರೂ.ಗಳನ್ನು ಸೇರಿಸಿದರೆ, ನೀವು ಪ್ರತಿ ತಿಂಗಳು 210 ರೂ ಪಾವತಿಸಬೇಕಾಗುತ್ತದೆ.

ಪ್ರತಿ ಮೂರು ತಿಂಗಳಿಗೊಮ್ಮೆ ಇದೇ ಮೊತ್ತವನ್ನು ಪಾವತಿಸಿದರೆ 626 ರೂ ವನ್ನು ಪಾವತಿಸಬೇಕಾಗುತ್ತದೆ. ಆರು ತಿಂಗಳಿಗೊಮ್ಮೆ ಪಾವತಿಸಿದರೆ 1,239 ರೂ ಪಾವತಿ ಮಾಡಬೇಕು.

ತಿಂಗಳಿಗೆ 1,000 ರೂಪಾಯಿ ಪಿಂಚಣಿ ಪಡೆಯಲು, ನೀವು 18 ನೇ ವಯಸ್ಸಿನಲ್ಲಿ ಹೂಡಿಕೆ ಮಾಡಿದರೆ, ನೀವು ತಿಂಗಳಿಗೆ 42 ರೂಪಾಯಿ ಪಾವತಿಸಬೇಕಾಗುತ್ತದೆ.

ಅಟಲ್ ಪಿಂಚಣಿ ಯೋಜನೆ ಯಾರಿಗೆಲ್ಲಾ ಪ್ರಯೋಜನಕಾರಿ?

ವೃದ್ಧಾಪ್ಯದಲ್ಲಿ ಹಿರಿಯ ನಾಗರಿಕರು ತೊಂದರೆಗೊಳಗಾಗಬಾರದು ಎಂಬ ನಿಟ್ಟಿನಲ್ಲಿ ಸರಕಾರ 2015-16ನೇ ಸಾಲಿನ ಬಜೆಟ್‌ನಲ್ಲಿ ಅಟಲ್ ಪಿಂಚಣಿ ಯೋಜನೆ ತಂದಿದೆ.

ಅಸಂಘಟಿತ ವಲಯದವರಿಗೆ ಆರ್ಥಿಕ ಭದ್ರತೆಯನ್ನು ನೀಡುವ ಗುರಿಯನ್ನು ಸರಕಾರ ಹೊಂದಿದ್ದು, ನಿವೃತ್ತಿಯ ನಂತರವೂ ಇವರಿಗೆ ಸಾಮಾಜಿಕ ಆರ್ಥಿಕ ಭದ್ರತೆಯನ್ನು ಒದಗಿಸಬೇಕೆಂಬ ಆಶಯವನ್ನು ಸರಕಾರ ಹೊಂದಿದೆ. ಈ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA) ನಡೆಸುತ್ತಿದೆ.

ಅಟಲ್ ಪಿಂಚಣಿಯ ಲೆಕ್ಕಾಚಾರವನ್ನು ಹೇಗೆ ನಡೆಸಲಾಗುತ್ತದೆ?

ಅಟಲ್ ಪಿಂಚಣಿ ಯೋಜನೆಯಡಿ ಗ್ರಾಹಕರು ಪ್ರತಿ ತಿಂಗಳು 1,000 ರೂ.ನಿಂದ 5,000 ರೂ.ವರೆಗೆ ಪಿಂಚಣಿ ಪಡೆಯುತ್ತಾರೆ. ಭಾರತ ಸರ್ಕಾರವು ಕನಿಷ್ಟ ಪಿಂಚಣಿ ಪ್ರಯೋಜನವನ್ನು ಖಾತರಿಪಡಿಸುತ್ತದೆ.

ಕೇಂದ್ರ ಸರ್ಕಾರವು ಚಂದಾದಾರರ ಕೊಡುಗೆಯ 50 ಪ್ರತಿಶತ ಅಥವಾ ವಾರ್ಷಿಕವಾಗಿ ರೂ 1,000 ಯಾವುದು ಕಡಿಮೆಯೋ ಅದನ್ನು ಕೊಡುಗೆ ನೀಡುತ್ತದೆ.

ಯಾವುದೇ ಶಾಸನಬದ್ಧ ಸಾಮಾಜಿಕ ಭದ್ರತಾ ಯೋಜನೆಯ ಅಡಿಯಲ್ಲಿ ಒಳಪಡದ ಮತ್ತು ತೆರಿಗೆದಾರರಲ್ಲದ ಜನರಿಗೆ ಸರ್ಕಾರದ ಕೊಡುಗೆಗಳನ್ನು ಪಾವತಿಸಲಾಗುತ್ತದೆ. ಯೋಜನೆಯಡಿ 1,000, 2000, 3,000, 4,000 ಮತ್ತು 5,000 ರೂ.ಗಳ ಪಿಂಚಣಿ ಲಭ್ಯವಿದೆ.

ಹೂಡಿಕೆಯು ಪಿಂಚಣಿ ಮೊತ್ತವನ್ನು ಅವಲಂಬಿಸಿರುತ್ತದೆ. ಸಣ್ಣ ವಯಸ್ಸಿನಲ್ಲಿಯೇ ಯೋಜನೆಗೆ ಸೇರಿಕೊಂಡರೆ ಹೆಚ್ಚಿನ ಲಾಭ ದೊರೆಯುತ್ತದೆ.


Post a Comment

Previous Post Next Post
CLOSE ADS
CLOSE ADS
×