ಸೋಲಾರ್‌ ಪಂಪ್‌ಸೆಟ್‌ ಪಡೆಯಲು ಸರ್ಕಾರದಿಂದ 80% ಸಹಾಯಧನ.! ʼಸೌರ ಮಿತ್ರʼ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ

ಸೋಲಾರ್‌ ಪಂಪ್‌ಸೆಟ್‌ ಪಡೆಯಲು ಸರ್ಕಾರದಿಂದ 80% ಸಹಾಯಧನ.! ʼಸೌರ ಮಿತ್ರʼ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ

ಹಲೋ ಸ್ನೇಹಿತರೇ, ಸಾಂಪ್ರದಾಯಿಕ ವಿದ್ಯುತ್‌ ಮೇಲಿನ ಪಂಪ್‌ಸೆಟ್‌ಗಳ ಅವಲಂಬನೆ ತಗ್ಗಿಸುವ ಗುರಿ ಹೊಂದಿರುವ ರಾಜ್ಯ ಸರಕಾರ ಕುಸುಮ್‌- ಬಿ ಯೋಜನೆಯ ಅನುಷ್ಠಾನಕ್ಕೆ ಒತ್ತು ನೀಡಲು ತೀರ್ಮಾನಿಸಿದೆ. 4 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳ ಪೈಕಿ ಈ ವರ್ಷ 40 ಸಾವಿರ ಪಂಪ್‌ಸೆಟ್‌ಗಳಿಗೆ ಯೋಜನೆಯಡಿ ಸೌರ ವಿದ್ಯುತ್‌ ಸಂಪರ್ಕ ಕಲ್ಪಿಸಿ ಸಕ್ರಮಗೊಳಿಸಲಿದ್ದೇವೆ ಎಂದು ಇಂಧನ ಸಚಿವ ಕೆಜೆ ಜಾರ್ಜ್‌ ಹೇಳಿದ್ದಾರೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.



“ರಾಜ್ಯದಲ್ಲಿ 2008 ರಿಂದ 2023ರ ಸೆ.22ರವರೆಗೆ ನೋಂದಣಿ ಮಾಡಿರುವ 4 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ ಇದ್ದು, ಈ ಪೈಕಿ 40 ಸಾವಿರ ಪಂಪ್‌ಸೆಟ್‌ಗಳಿಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಕುಸುಮ್‌- ಬಿ ಯೋಜನೆಯಡಿಯಲ್ಲಿ ಸೌರ ವಿದ್ಯುತ್‌ ಸಂಪರ್ಕ ಕಲ್ಪಿಸಿ ಸಕ್ರಮಗೊಳಿಸಲಿದ್ದೇವೆ ಎಂದು ಇಂಧನ ಸಚಿವರು ತಿಳಿಸಿದ್ದಾರೆ.

“4 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳ ರೈತರು ವಿದ್ಯುತ್‌ ಸಂಪರ್ಕಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಈ ಪಂಪ್‌ಸೆಟ್‌ಗಳು ವಿದ್ಯುತ್‌ ಮಾರ್ಗ ಜಾಲದಿಂದ 500 ಮೀಟರ್‌ನ ಒಳಗಿದ್ದರೆ, ಫೀಡರ್‌ನಿಂದ ವಿದ್ಯುತ್‌ ಸಂಪರ್ಕ & ಮೂಲಸೌಕರ್ಯ ಕಲ್ಪಿಸಲು ನಿರ್ಧಾರ ಮಾಡಲಾಗಿದೆ. 500 ಮೀಟರ್‌ಗಿಂತ ದೂರವಿರುವ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಲಾಗುತ್ತದೆ.

“ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್‌ ಅವಲಂಬನೆಯು ಕಡಿಮೆಯಾಗಬೇಕು. ಈ ಕಾರಣಕ್ಕೆ ಕುಸುಮ್‌ – ಬಿ ಯೋಜನೆ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ಸೌರ ವಿದ್ಯುತ್‌ ಚಾಲಿತ ಪಂಪ್‌ಸೆಟ್‌ ಅಳವಡಿಕೆಗೆ ಕೇಂದ್ರ ಸರ್ಕಾರದ ಕುಸುಮ್‌ ಯೋಜನೆಯಡಿ ಶೇ. 30ರಷ್ಟು ಸಹಾಯಧನ ನೀಡಲಾಗುತ್ತದೆ. ರಾಜ್ಯ ಸರ್ಕಾರದ ಸಹಾಯಧನವನ್ನು ಶೇ. 50ಕ್ಕೆ ಏರಿಸಲಾಗಿದೆ. ಬಾಕಿ ಶೇ. 20ರಷ್ಟನ್ನು ರೈತರೇ ಭರಿಸಬೇಕು. ಯೋಜನೆ ಅಡಿಯಲ್ಲಿ ರೈತರಿಗೆ ಪಂಪ್‌, ಮೋಟರ್‌, ಪೈಪ್‌ ಒದಗಿಸಲಾಗುವುದು.

3 ಸಾವಿರ ಮೆ.ವ್ಯಾ ಉಳಿತಾಯ

ರಾಜ್ಯದಲ್ಲಿ ಸದ್ಯ 34 ಲಕ್ಷ ಕೃಷಿ ಪಂಪ್‌ಸೆಟ್‌ಗಳಿದೆ. ಪ್ರತಿ ವರ್ಷ ಸುಮಾರು 1.20 ಲಕ್ಷ ಕೃಷಿ ಪಂಪ್‌ಸೆಟ್‌ ಹೊಸದಾಗಿ ಸೇರ್ಪಡೆ ಆಗಿದೆ. ನೀರಾವರಿ ಪಂಪ್‌ಸೆಟ್‌ಗಳ ದೈನಂದಿನ ವಿದ್ಯುತ್‌ ಬೇಡಿಕೆ ಸುಮಾರು 4,500 ಮೆ.ವ್ಯಾ ಇರಲಿದೆ. ಈ ವರ್ಷ 40,000 ಪಂಪ್‌ಸೆಟ್‌ಗೆ ಸೌರ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸುವ ಗುರಿಯಿದೆ. ಇದರಿಂದ3,000 ಮೆಗಾವ್ಯಾಟ್‌ ವಿದ್ಯುತ್‌ ಉಳಿತಾಯವಾಗುತ್ತದೆ.

ವಿದ್ಯುತ್‌ ಬೇಡಿಕೆ ದುಪ್ಪಟ್ಟು

”ಬರ ಕಾರಣಕ್ಕೆ ರಾಜ್ಯದಲ್ಲಿ ವಿದ್ಯುತ್‌ ಬೇಡಿಕೆ ಸಾಕಷ್ಟು ಹೆಚ್ಚಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ದೈನಂದಿನ ವಿದ್ಯುತ್‌ ಬೇಡಿಕೆ 7,000 ಮೆಗಾ ವ್ಯಾಟ್‌ ಇತ್ತು. ಈಗ 16,000 ಮೆ.ವ್ಯಾ.ಗೆ ಹೆಚ್ಚಿಗೆಯಾಗಿದೆ. ಹಿಂದಿನ 4 ವರ್ಷದಲ್ಲಿ ಇಷ್ಟು ವಿದ್ಯುತ್‌ ಬೇಡಿಕೆ ಇರಲಿಲ್ಲ. ಮಳೆ ಕೊರತೆ & ಬೇಸಿಗೆ ಕಾರಣಕ್ಕೆ ನಿರೀಕ್ಷೆಗೂ ಮೀರಿ ವಿದ್ಯುತ್‌ ಬೇಡಿಕೆ ಹೆಚ್ಚಾಗಲಿದೆ.

ಮಾರ್ಚ್‌ 9ಕ್ಕೆ ರೈತ ಸೌರಶಕ್ತಿ ಮೇಳ

ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್‌ ಬಳಕೆ ಕುರಿತು ರೈತರಿಗೆ ವಿವರಣೆಯನ್ನು ನೀಡಲು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಶನಿವಾರ (ಮಾ.9) ರೈತ ಸೌರಶಕ್ತಿ ಮೇಳ ನೆಡೆಸಲಾಗುತ್ತಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಜತೆಗೆ, ಬೆಸ್ಕಾಂ ವ್ಯಾಪ್ತಿಯಲ್ಲಿ ‘ಕುಸುಮ್‌ ಸಿ’ ಯೋಜನೆ ಹಾಗೂ ರಾಜ್ಯದ 13 ಜಿಲ್ಲೆಗಳ ಹೊಸ ಸಬ್‌ಸ್ಟೇಷನ್‌ಗಳಿಗೆ ಚಾಲನೆ ನೀಡಲಾಗುತ್ತದೆ.

ಸೋಲಾರ್‌ ಪಂಪ್‌ಸೆಟ್‌ ಅಳವಡಿಸಿಕೊಳ್ಳಲು ಆಸಕ್ತಿ ಹೊಂದಿರುವ ರೈತರಿಗಾಗಿ ಆನ್‌ಲೈನ್‌ ಪೋರ್ಟಲ್‌ ವಿನ್ಯಾಸಗೊಳಿಸಲಾಗಿದೆ. ಮೇಳದಲ್ಲಿ ‘ಸೌರ ಮಿತ್ರ’ ಆ್ಯಪ್‌ ಬಿಡುಗಡೆಯಾಗಲಿದೆ, ಈ ಆ್ಯಪ್‌ ಮೂಲಕ ರೈತರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

Post a Comment

Previous Post Next Post
CLOSE ADS
CLOSE ADS
×