ಸರ್ಕಾರವು ಗೃಹಜ್ಯೋತಿ ಯೋಜನೆ ಅಡಿಯಲ್ಲಿ ವಿದ್ಯುತ್ ಬಳಕೆ ಮಾಡುತ್ತಿದ್ದವರಿಗೆ ಶೇ.1೦ ರಷ್ಟು ಹೆಚ್ಚು ವಿದ್ಯುತ್ ಉಚಿತವಾಗಿ (Free Electricity) ನೀಡುವುದಾಗಿ ತಿಳಿಸಿತ್ತು
ಇಂದು ಎಲ್ಲ ಕೆಲಸಗಳು ವಿದ್ಯುತ್ (electricity) ಅವಲಂಬಿಸಿವೆ. ಹಾಗಾಗಿ ಒಂದು ಗಂಟೆ ವಿದ್ಯುತ್ ಕಡಿತವಾದರೂ ಎಲ್ಲ ಕೆಲಸಗಳು ನಿಂತು ಹೋಗಿ ಬಿಡುತ್ತವೆ, ಅಷ್ಟು ವಿದ್ಯುತ್ ಅವಲಂಭಿಸಿದ್ದೇವೆ.
ಇಂಧನ ಇಲಾಖೆಯವರು ವರ್ಷಕ್ಕೆ ಒಮ್ಮೆ ಇಲ್ಲವೇ ಎರಡು ಬಾರಿ ವಿದ್ಯುತ್ ದರ ಏರಿಕೆ (electricity price increased) ಮಾಡುವುದರಿಂದ ಗ್ರಾಹಕರು ವಿದ್ಯುತ್ ಬಿಲ್ ನೋಡಿಯೇ ಶಾಕ್ ಆಗುತ್ತಿದ್ದರು.
ಇದನ್ನೇ ಅಸ್ತ್ರ ಮಾಡಿಕೊಂಡ ಕಾಂಗ್ರೆಸ್ ಪಕ್ಷವು ತಾವು ಅಧಿಕಾರಕ್ಕೆ ಬಂದಲ್ಲಿ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಘೋಷಿಸಿದ್ದರು. ಅದರಂತೆ ಅಧಿಕಾರಕ್ಕೆ ಬಂದ ಮೇಲೆ 2೦೦ ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡಿದ್ದಾರೆ.
ಈ ಯೋಜನೆಗೆ ಗೃಹಜ್ಯೋತಿ ಯೋಜನೆ (Gruha jyothi scheme) ಎಂದು ಹೆಸರಿಡಲಾಗಿದೆ. ಇದೀಗ ಈ ಯೋಜನೆ ಅಡಿಯಲ್ಲಿ ಇನ್ನಷ್ಟು ಸೌಲಭ್ಯ ನೀಡಲಾಗುತ್ತಿದೆ. ಅದು ಏನು ಎಂದು ಈಗ ನೋಡೋಣ.
ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 2೦೦ ಯೂನಿಟ್ ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುತ್ತದೆ. ಆದರೆ ಇದು ನೀವು ವಾರ್ಷಿಕವಾಗಿ ವಿದ್ಯುತ್ ಬಳಸುವದರ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಹಾಗಾಗಿ ಕೆಲವರಿಗೆ 5೦, 7೦, 1೦೦ ಯೂನಿಟ್ ಹೀಗೆ ಉಚಿತವಾಗಿ ಸಿಗುತ್ತಿದೆ. ಇದಕ್ಕಿಂತ ಹೆಚ್ಚಿಗೆ ಬಳಸಿದ್ದಲ್ಲಿ ಅವರು ಹೆಚ್ಚುವರಿ ಬಳಕೆಗೆ ಬಿಲ್ ಪಾವತಿ ಮಾಡಬೇಕಾಗುತ್ತದೆ.
ಈ ಹಿಂದೆ ಸರ್ಕಾರವು ಗೃಹಜ್ಯೋತಿ ಯೋಜನೆ ಅಡಿಯಲ್ಲಿ ವಿದ್ಯುತ್ ಬಳಕೆ ಮಾಡುತ್ತಿದ್ದವರಿಗೆ ಶೇ.1೦ ರಷ್ಟು ಹೆಚ್ಚು ವಿದ್ಯುತ್ ಉಚಿತವಾಗಿ (Free Electricity) ನೀಡುವುದಾಗಿ ತಿಳಿಸಿತ್ತು. ಇದೀಗ ಈ ತೀರ್ಮಾನದಲ್ಲಿ ಬದಲಾವಣೆ ಮಾಡಲಾಗಿದ್ದು, ಯಾರು 48 ಯೂನಿಟ್ಗಿಂತ ಕಡಿಮೆ ಬಳಕೆ ಮಾಡುತ್ತಾರೋ ಅಂತಹವರಿಗೆ 1೦ ಯೂನಿಟ್ ಹೆಚ್ಚುವರಿ ಬಳಕೆ ಮಾಡಿದರೂ ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿದೆ.
ಅಂದರೆ ಇದುವರೆಗೆ ಪ್ರತಿ ತಿಂಗಳು ಯಾರ ಮನೆಯಲ್ಲಿ 48 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಕೆ ಆಗುತ್ತಿತ್ತೋ ಅವರಿಗೆ ಇನ್ಮುಂದೆ 58 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ಬಳಕೆ ಮಾಡಬಹುದಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರವು ಪ್ರತಿ ತಿಂಗಳು 398 ಕೋಟಿ ರೂ. ವ್ಯಯ ಮಾಡುತ್ತಿದೆ.
ರಾಜ್ಯ ಸರ್ಕಾರವು ಗೃಹ ಜ್ಯೋತಿ ಒಂದೆ ಅಲ್ಲದೆ ಐದು ಯೋಜನೆಗಳನ್ನು ಜಾರಿಗೆ ತಂದಿದೆ. ಮನೆಯ ಯಜಮಾನಿಗೆ ಪ್ರತಿ ತಿಂಗಳು 2೦೦೦ ರೂ. ನೀಡುವ ಗೃಹ ಲಕ್ಷ್ಮಿ ಯೋಜನೆ, ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ರಾಜ್ಯದೊಳಗೆ ಓಡಾಡಲು ಶಕ್ತಿ ಯೋಜನೆ, ಬಡವರಿಗೆ ಉಚಿತವಾಗಿ ಪಡಿತರ ನೀಡಲು ಅನ್ನಭಾಗ್ಯ ಯೋಜನೆ, ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ಮಾಶಾಸನ ನೀಡುವ ಯುವನಿಧಿ ಯೋಜನೆಗಳನ್ನು ಜಾರಿಗೆ ತಂದಿದೆ.
ಈ ಎಲ್ಲ ಗ್ಯಾರಂಟಿ ಯೋಜನೆಗಳು ಸರಿಯಾಗಿ ಜಾರಿಯಾಗುವಂತೆ, ಅರ್ಜಿ ಸಲ್ಲಿಸಿದ ಎಲ್ಲ ಫಲಾನುಭವಿಗಳಿಗೂ ಪ್ರತಿ ತಿಂಗಳು ಮುಟ್ಟುವಂತೆ ನೋಡಿಕೊಳ್ಳಲು ಗ್ಯಾರಂಟಿ ಯೋಜನೆಗಳ ಸಮಿತಿ ಸಹ ರಚನೆ ಮಾಡಲಾಗಿದೆ. ಒಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಅಭಿವೃದ್ಧಿ ಮಾಡುವುದು ಸರ್ಕಾರದ ಉದ್ದೇಶವಾಗಿದೆ.