191 ಜನ ಮಕ್ಕಳು, ಹಾಗೂ 8 ಶಿಕ್ಷಕರಿರುವ ಶಾಲೆ ಇದು. ಪ್ರತಿ ತಿಂಗಳು ಕೂಡ ವಿದ್ಯುತ್ ಖರ್ಚು ಉಳಿದು, ನಂತರ ಉತ್ಪತ್ತಿಯಾದ ವಿದ್ಯುತ್ ಅನ್ನು ಕುಮಟಾದ ಹೆಸ್ಕಾಂ ಗ್ರಿಡ್‍ಗೆ ಸಪ್ಲೈ ಮಾಡುತ್ತಾರೆ.
ಉತ್ತರ ಕನ್ನಡ: ಪ್ರಧಾನಮಂತ್ರಿ ಹರ್ ಘರ್ ಬಿಜಲಿ ಎಂಬ ಸೌರ ವಿದ್ಯುತ್ ಯೋಜನೆ (Solar Power Project) ಇನ್ನೇನು ಜಾರಿಗೆ ಬರಲು ತಯಾರಾಗಿದೆ. ಈ ಸಂದರ್ಭದಲ್ಲಿ ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ಒಂದು ಮಾದರಿ ಶಾಲೆಯ ಬಗ್ಗೆ ಹೇಳಲೇಬೇಕು. ಕಾರಣ ಇವರು ತುಂಬಾ ಹಿಂದೆಯೇ ಈ ಯೋಜನೆಯಂತೆಯೇ ತಮ್ಮ ಶಾಲೆಗೆ ಸೋಲಾರ್ ಪ್ಯಾನೆಲ್‍ಗಳ ಮೂಲಕ ವಿದ್ಯುತ್ ಪಡೆದುಕೊಳ್ಳುತ್ತಿದ್ದಾರೆ. ಅಲ್ಲದೇ ಕುಮಟಾದ ಹೆಸ್ಕಾಂ ಕಛೇರಿಗೆ ವಿದ್ಯುತ್ ಸಪ್ಲೈ ಸಹ ಮಾಡುತ್ತಿದ್ದಾರೆ. ಅದೆಲ್ಲಿ ಹಾಗೂ ಅದು ಯಾವ ಶಾಲೆ? ಎಂಬ ಮಾಹಿತಿ ಇಲ್ಲಿದೆ ನೋಡಿ
ಸೌರವಿದ್ಯುತ್ ಯೋಜನೆ
ಕತಗಾಲ್‍ನ ಎಸ್‍ಕೆಪಿ ಪ್ರೌಢಶಾಲೆಗೆ ಪುಣೆಯಲ್ಲಿರುವ ಹಳೆಯ ವಿದ್ಯಾರ್ಥಿ ಶಿವಶಂಕರ್ ಪಿಕಳೆಯವರು 12.75 ಲಕ್ಷ ವೆಚ್ಚದಲ್ಲಿ ಕಂಪೆನಿಯ ಸಿ.ಎಸ್. ಆರ್ ಫಂಡ್ ಅಡಿಯಲ್ಲಿ ಸೋಲಾರ್ ವಿದ್ಯುತ್ ಘಟಕ ದೇಣಿಗೆಯಾಗಿ ನೀಡಿದರು. ಇದು 20 ಕಿಲೋ ವ್ಯಾಟ್ ಸಾಮಥ್ರ್ಯ ಹೊಂದಿದ ಘಟಕವಾಗಿದೆ.
ಹೆಸ್ಕಾಂ ಗ್ರಿಡ್‍ಗೆ ಸಪ್ಲೈ
191 ಜನ ಮಕ್ಕಳು, ಹಾಗೂ 8 ಶಿಕ್ಷಕರಿರುವ ಶಾಲೆ ಇದು. ಪ್ರತಿ ತಿಂಗಳು ಕೂಡ ವಿದ್ಯುತ್ ಖರ್ಚು ಉಳಿದು, ನಂತರ ಉತ್ಪತ್ತಿಯಾದ ವಿದ್ಯುತ್ ಅನ್ನು ಕುಮಟಾದ ಹೆಸ್ಕಾಂ ಗ್ರಿಡ್‍ಗೆ ಸಪ್ಲೈ ಮಾಡುತ್ತಾರೆ. ಅದರಿಂದ ಶಾಲೆಗೆ ಮಾಸಿಕ 5000, 6000ವರೆಗೆ ಲಾಭವಾಗುತ್ತಿದೆ. 2019ರಿಂದ ಶುರುವಾದ ಈ ಮಾದರಿ ಕೆಲಸ ಎಸ್.ಕೆ.ಪಿ ಪ್ರೌಢಶಾಲೆಗೆ ಆದಾಯ ತರುತ್ತಿದೆ. ಪ್ರತಿ ಸಲವೂ ಕೂಡ ಆಗುವ ಲಾಭದಿಂದ ಈ ಶಾಲೆಗೆ ಬೇಕಾದ ಸೌಲಭ್ಯವನ್ನು ಶಿಕ್ಷಕರು ತರುತ್ತಿದ್ದಾರೆ kisan-credit-card-joyana-apply-for-various-schemes.
