ರೇಷನ್ ಕಾರ್ಡ್ ಇದ್ದರೆ ಇಷ್ಟೆಲ್ಲಾ ಲಾಭಗಳು! ತಪ್ಪದೇ ಈ ಮಾಹಿತಿ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಒಂದು ರೇಷನ್ ಕಾರ್ಡ್ ನಿಂದ ಯಾವೆಲ್ಲಾ ಉಪಯೋಗಗಳು ಸರ್ಕಾರದಿಂದ ದೊರಕಲಿವೆ ಮತ್ತು ರೇಷನ್ ಕಾರ್ಡ್ ಇರುವುದರಿಂದ ಸರ್ಕಾರ ದೊರಕುವ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿರುತ್ತೇನೆ ಕೊನೆಯವರೆಗೂ ಓದಿಕೊಳ್ಳಿ.



  • ಇದೇ ರೀತಿಯ ಹೆಚ್ಚಿನ ಸುದ್ದಿಗಳನ್ನು ದಿನಾಲು ಓದಲು ಇಷ್ಟಪಡುತ್ತಿದ್ದಾರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ ಅಲ್ಲಿ ನಿಮಗೆ ಎಲ್ಲ ರೀತಿಯ ಮಾಹಿತಿಗಳು ದಿನನಿತ್ಯ ಮತ್ತು ಉದ್ಯೋಗದ ಮಾಹಿತಿ ಹಾಗೂ ಇತ್ತೀಚಿನ ಯೋಜನೆಗಳ ಬಗ್ಗೆ ಮಾಹಿತಿಗಳು ಕೂಡ ದೊರಕುತ್ತವೆ.
  • ನಮ್ಮ ದೇಶದಲ್ಲಿ ವಾಸಿಸುವ ಬಡ ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಕೇಂದ್ರ ಸರ್ಕಾರ (Central government) ಯಾವಾಗ್ಲೂ ಪರಿಚಯಿಸುತ್ತದೆ. ರಾಜ್ಯ ಸರ್ಕಾರ ಈ ಯೋಜನೆಗಳನ್ನು ರಾಜ್ಯದ ಜನತೆಗೆ ತಲುಪಿಸುವ ಕೆಲಸ ಮಾಡುತ್ತದೆ ಅಂತಾನೆ ಹೇಳಬಹುದು.
  • ನಮ್ಮ ದೇಶದಲ್ಲಿ ವಾಸಿಸುವ ಅದೆಷ್ಟೋ ಜನ ಇಂದು ಪಡಿತರ ಚೀಟಿ (Ration card) ಹೊಂದಿರುವ ಕಾರಣಕ್ಕೆ ಉಚಿತವಾಗಿ ಅಥವಾ ಅತ್ಯಂತ ಕಡಿಮೆ ಬೆಲೆಗೆ ಪಡಿತರ ವಸ್ತುಗಳನ್ನು ಪಡೆದುಕೊಳ್ಳಲು ಕೂಡ ಸಾಧ್ಯವಾಗಿದೆ.

ಕೇಂದ್ರ ಸರ್ಕಾರದ ಯೋಜನೆ:

ಈ ಹಿಂದೆ ಕಳೆದ ಎರಡು ವರ್ಷಗಳಿಂದ ಅಂತ್ಯೋದಯ ಕಾರ್ಡ್ (Antyodaya card) ಹೊಂದಿರುವವರಿಗೆ ವಿಶೇಷ ಸೌಲಭ್ಯವನ್ನಾ ಕೇಂದ್ರ ಸರ್ಕಾರ ನೀಡಿರುವ ಈ ಯೋಜನೆಯನ್ನು ಮುಂದುವರೆಸಲು ಇದೀಗ ನಿರ್ಧರಿಸಿದೆ. ಅಂತ್ಯೋದಯ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಅಂಗವಿಕಲರು ಪ್ರಯೋಜನ ಪಡೆಯಬಹುದು ಜೊತೆಗೆ ಯಾವುದೇ ಶಾಶ್ವತ ಆದಾಯ ಇಲ್ಲದ ಹಾಗೂ 60 ವರ್ಷಗಳು ಮೇಲ್ಪಟ್ಟವರು ಕೂಡ ಈ ಪಡಿತರ ಚೀಟಿ ಪಡೆಯಬಹುದಾಗಿದೆ ಎಂದು ತಿಳಿಸಲಾಗಿದೆ.

ಅಂತ್ಯೋದಯ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು!

  • ಆಧಾರ್ ಕಾರ್ಡ್(Adhar Card)
  • ಪಾಸ್ಪೋರ್ಟ್ ಅಳತೆಯ ಫೋಟೋ(Photo)
  • ವಿಳಾಸದ ಪುರಾವೆ(Adress proof)
  • ಜಾತಿ ಹಾಗೂ ಆದಾಯ ಪ್ರಮಾಣ ಪತ್ರ (Caste and Income Certificate) ಕೂಡ ಬೇಕು

ಅಂತ್ಯೋದಯ ಕಾರ್ಡ್ ಯಾರಿಗೆ ಮೀಸಲು?

  • ಭೂ ಒಡೆತನ ಇಲ್ಲದ ಕಾರ್ಮಿಕರು
  • ಸಣ್ಣ ರೈತರು/ ಅತಿ ಸಣ್ಣ ರೈತರು
  • ಪೌರ ಕಾರ್ಮಿಕರು(Labours)
  • ಆಟೋ ಚಾಲಕರು(auto drivers)
  • ಕೊಳಗೇರಿಯಲ್ಲಿ ವಾಸ ಮಾಡುತ್ತಿರುವ ಕುಟುಂಬದವರು.
  • ಯಾವುದೇ ಆದಾಯದ ಮೂಲ ಇಲ್ಲದ 60 ವರ್ಷ ಮೇಲ್ಪಟ್ಟ ವಿಧವಾ ಮಹಿಳೆಯರು ಕೂಡ ಪಡೆದುಕೊಳ್ಳಬಹುದು
  • ಒಂದು ವರ್ಷಕ್ಕೆ 20,000 ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವವರು ಕೂಡ ಪಡೆದುಕೊಳ್ಳಬಹುದು

Previous Post Next Post