Labour Card: ಹೊಸ ಲೇಬರ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ | Labour Card Karnataka Application 2024

Labour Card: ಹೊಸ ಲೇಬರ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ | Labour Card Karnataka Application 2024

ಕಾರ್ಮಿಕ ಇಲಾಖೆಯಿಂದ ನಿಮ್ಮ ಉನ್ನತೀಕರಣಕ್ಕಾಗಿ ಅನೇಕ ಯೋಜನೆಗಳು ಜಾರಿಗೆ ಬರಲಿವೆ. ಈ ಯೋಜನೆಗಳ ಪ್ರಯೋಜನ ಪಡೆಯಲು ಕಾರ್ಮಿಕ ಕಾರ್ಡ್ (Labour Card Karnataka) ನೋಂದಣಿ ಕಡ್ಡಾಯವಾಗಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (Karnataka Building and Other Construction Workers’ Welfare Board) ಮೂಲಕ ಕರ್ನಾಟಕ ಸರ್ಕಾರವು ಈ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳ ಲಾಭ ಪಡೆಯಲು ಕಾರ್ಮಿಕರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು.



ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳು :

ಕಾರ್ಮಿಕ ಕಾರ್ಡ್ ಕೇವಲ ಗುರುತಿನ ಚೀಟಿಯಲ್ಲ, ಅದು ದುಡಿಯುವ ವರ್ಗದ ಭದ್ರಕೋಟೆ. ಈ ಕಾರ್ಡ್ ಧಾರಕರಿಗೆ ಲಭ್ಯವಿರುವ ಸೌಲಭ್ಯಗಳ ಪಟ್ಟಿ :

  • ಅಪಘಾತ ಪರಿಹಾರ: ದುರದೃಷ್ಟಕರ ಘಟನೆಗಳಲ್ಲಿ ಭದ್ರತೆ.
  • ವೈದ್ಯಕೀಯ ಸಹಾಯಧನ: ಚಿಕಿತ್ಸೆಗೆ ಚಿಂತೆಯಿಲ್ಲ.
  • ತಾಯಿ ಮಗು ಸಹಾಯ ಹಸ್ತ: ಜನನದ ಸಮಯದಲ್ಲಿ ಆರ್ಥಿಕ ನೆರವು.
  • ಮದುವೆ ಸಹಾಯಧನ: ಹೊಸ ಜೀವನಕ್ಕೆ ಒಂದು ಕೈತುಂಬ ಭರವಸೆ.
  • ದುರ್ಬಲತೆ ಪಿಂಚಣಿ: ವೃದ್ಧಾಪ್ಯದಲ್ಲಿ ಜೀವನ ನಡೆಸಲು ಒಂದು ಆಸರೆ.
  • ಪಿಂಚಣಿ ಮುಂದುವರಿಕೆ: ಭವಿಷ್ಯದ ಭದ್ರತೆಗೆ ಖಾತರಿ.
  • ಶೈಕ್ಷಣಿಕ ಸಹಾಯಧನ: ಮಕ್ಕಳ ಶಿಕ್ಷಣಕ್ಕೆ ಉತ್ತೇಜನ.
  • ಹೆರಿಗೆ ಸೌಲಭ್ಯ: ಗರ್ಭಿಣಿ ಮಹಿಳೆಯರಿಗೆ ಆರೈಕೆ.
  • ಅಂತ್ಯಕ್ರಿಯೆ ವೆಚ್ಚ: ದುಃಖದ ಸಮಯದಲ್ಲಿ ಒಂದು ನೆರವು.
  • ಉಚಿತ ಸಾರಿಗೆ ಬಸ್ ಪಾಸ್: ಓಡಾಟಕ್ಕೆ ಯಾವುದೇ ಖರ್ಚಿಲ್ಲ.
  • ಶ್ರಮಸಮರ್ಥ್ಯ ಟೂಲ್ ಕಿಟ್: ಕೆಲಸಕ್ಕೆ ಉಪಯುಕ್ತ ಸಾಧನಗಳ ಉಡುಗೊರೆ

Labour Card Karnataka ಅರ್ಹತೆ :

ನೋಂದಣಿ ಮಾಡುವ ಪೂರ್ವದಲ್ಲಿ 1 ವರ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು.

Labour Card Karnataka Application ಗಾಗಿ ಬೇಕಾಗಿರುವ ದಾಖಲೆಗಳು :

  • 90 ದಿನಗಳ ಉದ್ಯೋಗ ದೃಡೀಕರಣ ಪತ್ರ
  • ಅರ್ಜಿದಾರ ಮತ್ತು ಅವಲಂಬಿತರ ಆಧಾರ ಕಾರ್ಡ್ (Aadhar card)
  • ಅರ್ಜಿದಾರರ ಬ್ಯಾಂಕ್ ಪಾಸುಬೂಕ್(Bank passbook )
  • ಅರ್ಜಿದಾರರ ಆಧಾರ ಲಿಂಕ್ ಆಗಿರುವ ಮೊಬೈಲ್ ನಂಬರ್(Aadhar linked Mobile number)

ವಯೋಮಿತಿ :

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿ ಮಾಡಿಕೊಳ್ಳಲು ವಯೋಮಿತಿ 18 ರಿಂದ 60 ಮೀರಿರಬಾರದು.

ನೋಂದಣಿ ಮಾಡುವ ಕಚೇರಿಗಳು :

  • ಹಿರಿಯ ಕಾರ್ಮಿಕ ನಿರೀಕ್ಷಿಕರು(Senior Labor Inspector) 
  • ಕಾರ್ಮಿಕ ನಿರೀಕ್ಷಿಕರ ಕಚೇರಿ (Labor Inspector)

ನೋಂದಣಿ ಅಭಿಯಾನ :

  • ಬೆಂಗಳೂರು ನಗರದಲ್ಲಿ 30 ನೇ ಡಿಸೆಂಬರ್ 2023 ರಿಂದ 31 ನೇ ಮಾರ್ಚ್ 2024 ರವರೆಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಅಭಿಯಾನ ನಡೆಯಲಿದೆ.
  • ಇನ್ನುಳಿದ ಭಾಗದ ಜನರು ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಗಳು ಮತ್ತು ಹಿರಿಯ ಕಾರ್ಮಿಕ ನಿರೀಕ್ಷಿಕರನ್ನು ಸಂಪರ್ಕಿಸಬಹುದು. ಸಹಾಯವಾಣಿ ಸಂಖ್ಯೆ 155214 ಗೆ ಕರೆ ಮಾಡಿ ಹೆಚ್ಚಿನ ಮಾಹಿತಿಯನ್ನು ತಿಳಿಯಬಹುದು.
  • ನೋಂದಣಿ ಪ್ರಕ್ರಿಯೆಯಲ್ಲಿ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಕಾರ್ಮಿಕ ಅಧಿಕಾರಿಗಳು & ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಬಹುದು. ಹಾಗೆಯೇ ಸಹಾಯವಾಣಿ ಸಂಖ್ಯೆ 155214 ಕರೆ ಮಾಡಿ ಮಾಹಿತಿ ಪಡೆಯಬಹುದು.
  • ಹಾಗೆಯೇ ಯಾವುದೇ ಮಾಹಿತಿ ಬೇಕಿದ್ದಲ್ಲಿ ಇಲಾಖೆಯ ಪ್ರಮುಖ ಲಿಂಕ್‌ಗಳು ( website links ) ಲಭ್ಯವಿದೆ ಅವುಗಳಲಿಗೆ ಭೇಟಿ ನೀಡಿ ಮಾಹಿತಿ ತಿಳಿದು ಕೊಳ್ಳಬಹುದು.

ಇಲಾಖೆಯ ವೆಬ್‌ಸೈಟ್‌ :

karbwwb.karnataka.gov.in

ವಿಶೇಷ ಸೂಚನೆ ( Important notice ) :

ಕಟ್ಟಡ ಕಾರ್ಮಿಕರಲ್ಲದವರು ನಕಲಿ ದಾಖಲಾತಿ ಸೃಷ್ಟಿಸಿ ಮಂಡಳಿಯು ನೀಡುವ ಕಾರ್ಮಿಕರ ಗುರುತಿನ ಚೀಟಿಯನ್ನು ಪಡೆದು ಸೌಲಭ್ಯಗಳನ್ನು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದಾರೆ. ಇದು ಎಲ್ಲರಿಗೂ ಅನ್ವಯಿಸುತ್ತದೆ.

Post a Comment

Previous Post Next Post
CLOSE ADS
CLOSE ADS
×