ಪಿಯು ನಂತರ ಹೆಚ್ಚು ವೇತನದ ಜಾಬ್ ಪಡೆಯಲು ಓದಬಹುದಾದ ಶಾರ್ಟ್‌ ಟರ್ಮ್‌ ಕೋರ್ಸ್‌ಗಳು ಯಾವುವು?

ನೀವು ದ್ವಿತೀಯ ಪಿಯುಸಿ ಮುಗಿಸಿ, ನಂತರ ಯಾವುದಾದರೊಂದು ಶಾರ್ಟ್‌ ಟರ್ಮ್‌ ಕೋರ್ಸ್‌ ಮಾಡುವ ಮೂಲಕ ಬಹುಬೇಗ ಕರಿಯರ್‌ ರೂಪಿಸಿಕೊಳ್ಳಬೇಕು ಎಂದುಕೊಂಡಿದ್ದೀರಾ.. ಹಾಗಿದ್ರೆ ಈ ಲೇಖನ ನಿಮಗಾಗಿ.



ಇದು ಸ್ಪರ್ಧಾತ್ಮಕ ಜಗತ್ತು. ಶಿಕ್ಷಣದಲ್ಲಿಯೇ ಆಗಲಿ, ಬ್ಯುಸಿನೆಸ್‌ ಕ್ಷೇತ್ರದಲ್ಲೇ ಆಗಲಿ, ಸರ್ಕಾರಿ ಉದ್ಯೋಗವೇ ಆಗಲಿ. ಎಲ್ಲೆಲ್ಲೂ ಸ್ಪರ್ಧೆ ಎಂಬುದು ದಿನೇ ದಿನೇ ಹೆಚ್ಚುತ್ತಲೇ ಇದೆ. ಉನ್ನತ ಶಿಕ್ಷಣ ಪಡೆದವರಿಗಿಂತ ಸ್ಕಿಲ್‌ಗಳನ್ನು ಬಹುಬೇಗ ಕಲಿತವರೇ ಹಲವು ಫೀಲ್ಡ್‌ಗಳಲ್ಲಿ ಹೆಚ್ಚೆಚ್ಚು ದುಡಿಯುತ್ತಿದ್ದಾರೆ ಎಂಬುದು ಹಲವರ ಗಮನಕ್ಕೆ ಬರುತ್ತಿದೆ. ಇನ್ನು ಕೆಲವರು ಆರ್ಥಿಕ ದುಸ್ಥಿತಿಯಿಂದ ಉನ್ನತ ಶಿಕ್ಷಣಕ್ಕೆ ಹೋಗಲು ಸಾಧ್ಯವಾಗದೇ ಶಾರ್ಟ್‌ ಟರ್ಮ್‌ ಕೋರ್ಸ್‌ಗಳನ್ನು ಜಾಬ್‌ಗಾಗಿ ಹುಡುಕಾಡುತ್ತಿದ್ದಾರೆ. ಅಂತಹ ಅಭ್ಯರ್ಥಿಗಳಿಗಾಗಿ ಇಂದಿನ ಲೇಖನ. ದ್ವಿತೀಯ ಪಿಯುಸಿ ನಂತರ ಯಾವುದಾದರೊಂದು ಉತ್ತಮ ಜಾಬ್‌ಗೆ ಬಹುಬೇಗ ಸೇರಬೇಕು ಎಂದುಕೊಂಡವರು ಈ ಕೆಲವು ಜಾಬ್‌ ಓರಿಯೆಂಟೆಡ್‌ ಶಾರ್ಟ್‌ ಟರ್ಮ್‌ ಕೋರ್ಸ್‌ಗಳನ್ನು ಓದಿಕೊಳ್ಳಿ.

ವೆಬ್‌ ಡಿಸೈನಿಂಗ್

ರೆಸ್ಪಾನ್ಸಿವ್ ಮತ್ತು ಎಂಗೇಜಿಂಗ್ ವೆಬ್‌ಸೈಟ್‌ ಡೆವಲಪ್ಮೆಂಟ್ ಮಾಡುವ ಕೌಶಲವನ್ನು ವೆಬ್‌ ಡಿಸೈನಿಂಗ್ ಕುರಿತ 3 ರಿಂದ 6 ತಿಂಗಳ ಶಾರ್ಟ್‌ ಟರ್ಮ್‌ ಕೋರ್ಸ್‌ ಕಲಿಸಲಿದೆ. ಈ ಕೋರ್ಸ್‌ ಓದಿದವರು ರೂ.1,60,000 ದಿಂದ 7,50,000 ವರೆಗೆ ವಾರ್ಷಿಕ ಸಂಭಾವನೆ ಪಡೆಯಬಹುದು. ಇದೊಂದು ಆಧುನಿಕ ದಿನಗಳಿಗೆ ಬೇಕಾದ ಅತ್ಯುತ್ತಮ ಸ್ಕಿಲ್‌ ಕೋರ್ಸ್‌ ಆಗಿದೆ.

ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‌

ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಶನ್‌ ಕೋರ್ಸ್‌ ಅತ್ಯಂತ ಕಾಸ್ಟ್‌ ಎಫೆಕ್ಟಿವ್ ಕೋರ್ಸ್‌ ಆಗಿದೆ. ಅತ್ಯಮೂಲ್ಯ ಉಪಯೋಗಕಾರಿ ಸ್ಕಿಲ್‌ಗಳು ಈ ಕೋರ್ಸ್‌ನಿಂದ ಸಿಗಲಿವೆ. ಮಾಸಿಕ ರೂ.48,000 ದಿಂದ 59,574 ವರೆಗೆ ಈ ಕೋರ್ಸ್‌ ಕಲಿತವರು ವೇತನ ಪಡೆಯಬಹುದಾಗಿದೆ. ಆನ್‌ಲೈನ್‌ ಮೂಲಕವೇ ಈ ಕೋರ್ಸ್‌ ಪಡೆಯಬಹುದಾಗಿದೆ.

ಈವೆಂಟ್ ಮ್ಯಾನೇಜ್ಮೆಂಟ್ ಕೋರ್ಸ್‌

ಕಾರ್ಯಕ್ರಮಗಳನ್ನು ಆಯೋಜಿಸುವ, ನಿರ್ವಹಣೆ ಮಾಡುವ, ಮುಂದಾಳತ್ವ ವಹಿಸುವ ಕೆಲಸಗಳಲ್ಲಿ ಆಸಕ್ತಿ ಇರುವವರಿಗೆ ಈವೆಂಟ್ ಮ್ಯಾನೇಜ್ಮೆಂಟ್ ಕೋರ್ಸ್‌ ಸೂಕ್ತವಾಗಿದೆ. ಈ ವಿಷಯದಲ್ಲಿ ಪದವಿಯನ್ನು ಅಧ್ಯಯನ ಮಾಡಬಹುದಾಗಿದೆ. ಡಿಪ್ಲೊಮ ಶಾರ್ಟ್‌ ಟರ್ಮ್‌ ಕೋರ್ಸ್‌ ಅನ್ನು ಪಡೆಯಬಹುದಾಗಿದೆ. ಇದರಲ್ಲಿ ನಿರ್ವಹಣೆ ಕೌಶಲಗಳನ್ನು, ವ್ಯವಸ್ಥೆಗೊಳಿಸುವ ಕೌಶಲಗಳನ್ನು ಕಲಿಯಬಹುದಾಗಿದೆ. ಹೆಚ್ಚು ಕೌಶಲಗಳನ್ನು ಪಡೆದಂತೆಲ್ಲಾ ಹೆಚ್ಚು ದುಡಿಯುವ ಅವಕಾಶಗಳು ಈ ಕರಿಯರ್‌ನಿಂದ ಸಿಗಲಿವೆ.

ಹೋಟೆಲ್ ಮ್ಯಾನೇಜ್ಮೆಂಟ್ ಕೋರ್ಸ್‌

ಹೋಟೆಲ್ ಮ್ಯಾನೇಜ್ಮೆಂಟ್‌ ಕುರಿತು ಡಿಪ್ಲೊಮ ಕೋರ್ಸ್‌ಗಳಿವೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಹಡಗುಗಳಲ್ಲಿ, ಏರ್‌ಲೈನ್‌ ಸರ್ವೀಸ್‌, Cruises ಗಳಲ್ಲಿ ಎಂಟ್ರಿ ಲೆವೆಲ್ ಉದ್ಯೋಗ ಪಡೆಯಲು ಈ ಕೋರ್ಸ್‌ ಅನುಕೂಲಕರ. ಆರಂಭಿಕವಾಗಿ ವಾರ್ಷಿಕ ರೂ.3.3 ಲಕ್ಷವರೆಗೆ ವೇತನ ಶ್ರೇಣಿ ಪಡೆಯಬಹುದು.

ಇಂಟೇರಿಯರ್ ಡಿಸೈನಿಂಗ್

ಸೃಜನಶೀಲತೆ, ಟೆಕ್ನಿಕಲ್ ನಾಲೆಡ್ಜ್‌ ಎರಡರ ಸಂಯೋಜನೆಯ ಅರಿವನ್ನು ಈ ಕೋರ್ಸ್‌ ತಿಳಿಸಲಿದೆ. ಡಿಪ್ಲೊಮ ಕೋರ್ಸ್‌ ಆಗಿ ಓದಬಹುದು, ಪದವಿ ಕೋರ್ಸ್‌ ಆಗಿ ಇದರ ಅಧ್ಯಯನ ಮಾಡಬಹುದು. ಸ್ಕಿಲ್‌ ಬೆಳೆಸಿಕೊಂಡಂತೆಲ್ಲಾ ಈ ಕೋರ್ಸ್‌ ನವರು ವಾರ್ಷಿಕ ಆರಂಭಿಕ 2 ಲಕ್ಷ ಸಂಭಾವನೆಯಿಂದ 8 ಲಕ್ಷವರೆಗೆ ಸಂಭಾವನೆ ಪಡೆಯಬಹುದು.

ಜರ್ನಲಿಸಂ ಅಂಡ್ ಮಾಸ್ ಕಮ್ಯುನಿಕೇಶನ್

ಇಂದು ಪತ್ರಿಕೋದ್ಯಮ ಕ್ಷೇತ್ರದ ವ್ಯಾಪ್ತಿ ಇನ್ನಷ್ಟು ಆಯಾಮಗಳಲ್ಲಿ ಹರಡಿದೆ. ಬರವಣಿಗೆ ಕಲಿತವರು, ನಿರೂಪಣೆ ಕಲಿತವರು, ಸುದ್ದಿಯ ಮೌಲ್ಯ ಅರಿತವರು ತಮ್ಮದೇ ಆದ ವೇದಿಕೆಯನ್ನು ಆನ್‌ಲೈನ್‌ ಮೂಲಕ ಯಾವುದೇ ಅಪಾರ ಬಂಡವಾಳ ಇಲ್ಲದೆ ಸೃಷ್ಟಿಸಿಕೊಳ್ಳಬಹುದು. ಯೂಟ್ಯೂಬ್ ಚಾನೆಲ್‌, ಬ್ಲಾಗ್‌ (ನ್ಯೂಸ್‌ ಬ್ಲಾಗ್‌) ಮಾಡಿಕೊಳ್ಳಬಹುದು. ಮೀಡಿಯಾ ಹೌಸ್‌ಗಳು ನೀಡುವ ಶಾರ್ಟ್‌ ಟರ್ಮ್‌ ಕೋರ್ಸ್‌ಗಳಿಂದ, ಶಿಕ್ಷಣ ಸಂಸ್ಥೆಗಳು ನೀಡುವ ಡಿಪ್ಲೊಮ, ಪದವಿ, ಸ್ನಾತಕೋತ್ತರ ಪದವಿ ಎಲ್ಲ ಹಂತದಲ್ಲೂ ಜರ್ನಲಿಸಂ ಅಂಡ್ ಮಾಸ್ ಕಮ್ಯುನಿಕೇಶನ್ ಕೋರ್ಸ್‌ ಲಭ್ಯ ಇದೆ. ಬಹುಬೇಗ ಜಾಬ್‌ ಪಡೆಯುವ ಜತೆಗೆ ಗೌರವಯುತ ಕರಿಯರ್‌ ಅನ್ನು ಈ ಕೋರ್ಸ್‌ ರೂಪಿಸಿಕೊಡಲಿದೆ.

ಬ್ಯುಸಿನೆಸ್‌ ಅನಾಲಿಟಿಕ್ಸ್‌ ಕೋರ್ಸ್‌

ಯಾವುದೇ ಕ್ಷೇತ್ರದ ಬ್ಯುಸಿನೆಸ್‌ ಅಭಿವೃದ್ಧಿ, ವಿಮರ್ಶೆ, ಲಾಭ-ನಷ್ಟ, ಭವಿಷ್ಯವನ್ನು ಲೆಕ್ಕಾಚಾರ ಹಾಕುವ ಸ್ವರೂಪ ಬದಲಾಗಿದೆ. ಇವೆಲ್ಲವು ಆನ್‌ಲೈನ್‌ ಮೂಲಕ ಆರಂಭವಾಗಿದೆ. ಕೇವಲ ಒಂದು ಎಕ್ಸೆಲ್‌ ಶೀಟ್‌ ಮೂಲಕವು ನಡೆಯುತ್ತಿದೆ. ಇಂತಹ ನಿರ್ವಹಣೆಯನ್ನು ಬ್ಯುಸಿನೆಸ್‌ ಅನಾಲಿಟಿಕ್ಸ್‌ ಕೋರ್ಸ್‌ನಲ್ಲಿ ಕಲಿಯಬಹುದಾಗಿದೆ. ವಾರ್ಷಿಕ ಸಂಭಾವನೆ ರೂ.8,00,000 ವರೆಗೆ ಪಡೆಯಬಹುದಾಗಿದೆ.

ಸ್ಟಾಕ್‌ ಮಾರ್ಕೆಟ್‌ ಕೋರ್ಸ್‌

ಸ್ಟಾಕ್‌ ಮಾರ್ಕೆಟಿಂಗ್ ಕೋರ್ಸ್‌ ಸಹ ಬ್ಯುಸಿನೆಸ್‌ ಫೀಲ್ಡ್‌ಗೆ ಸಂಬಂಧಿತ ಅರಿವನ್ನು ಮೂಡಿಸುವ ಕೋರ್ಸ್‌. ಯಾವುದೇ ಒಂದು ಕಂಪನಿ ಅಥವಾ ವ್ಯಕ್ತಿಯು ಆಸಕ್ತಿದಾರರಿಗೆ ಬ್ಯುಸಿನೆಸ್‌ಗಳು, ಇತರೆ ಸೆಕ್ಯೂರಿಟೀಸ್‌ಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಸಹಾಯ ಮಾಡುವ ಕೆಲಸವನ್ನು ಸ್ಟಾಕ್‌ ಮಾರ್ಕೆಟರ್‌ಗಳು ಮಾಡಲಿದ್ದಾರೆ. ಸ್ಟಾಕ್‌ ಮಾರ್ಕೆಟ್‌ ಬ್ರೋಕರ್‌ ಆಗಿ ಕೆಲಸ ಮಾಡುವವರಿಗೆ ವಾರ್ಷಿಕ ರೂ.7 ಲಕ್ಷವರೆಗೆ ಸಂಭಾವನೆ ಸರಾಸರಿ ಸಿಗಲಿವೆ.

ಈ ಮೇಲಿನ ಯಾವುದೇ ಕೋರ್ಸ್‌ಗಳನ್ನು ಆನ್‌ಲೈನ್‌ ಮೂಲಕ ಅಥವಾ ಆಫ್‌ಲೈನ್‌ ಮೂಲಕ ಶಾರ್ಟ್‌ ಟರ್ಮ್‌ ಕೋರ್ಸ್‌ಗಳಾಗಿ ಓದಬಹುದಾಗಿದೆ.

ಇತರೆ ಶಾರ್ಟ್‌ ಟರ್ಮ್‌ ಕೋರ್ಸ್‌ಗಳು

ಜಾಬ ಕೋರ್ಸ್‌, ಬಜೆಟಿಂಗ್ ಕೋರ್ಸ್‌, ಫ್ಯಾಷನ್ ಡಿಸೈನಿಂಗ್, ನರ್ಸಿಂಗ್ ಕೇರ್‌ ಸರ್ಟಿಫಿಕೇಟ್‌, ಕ್ಲಿಯರ್ ಟ್ಯಾಕ್ಸ್‌, ಕೋಡಿಂಗ್ ಕೋರ್ಸ್‌, ಫೈನಾನ್ಷಿಯಲ್ ಪ್ಲಾನರ್ ಕೋರ್ಸ್‌, ಮಷಿನ್ ಲರ್ನಿಂಗ್ ಕೋರ್ಸ್‌, ಅಕೌಂಟಿಂಗ್ ಕೋರ್ಸ್‌, ಅಬ್ರಾಡ್‌ ಕರಿಯರ್‌ಗಳಿಗಾಗಿ ಫಾರಿನ್ ಲಾಂಗ್ವೇಜ್‌ ಶಾರ್ಟ್‌ ಟರ್ಮ್‌ ಕೋರ್ಸ್‌ಗಳು.


Previous Post Next Post