Loan Scheme – ಸ್ವ ಉದ್ಯೋಗಕ್ಕೆ ಸಾಲ ಪಡೆಯಲು ಅರ್ಜಿ ಆಹ್ವಾನ.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಎಲ್ಲರಿಗೂ ಸಿಹಿ ಸುದ್ದಿ ತಿಳಿದು ಬಂದಿದೆ. ಸರ್ಕಾರದಿಂದ ( Government ) ಈ ಹಿಂದೆ ಅದೆಷ್ಟೋ ಯೋಜನೆಗಳು, ಸಾಲ ಸೌಲಭ್ಯ ಗಳು(loan schemes) ಮಹಿಳೆಯರಿಗೆ, ರೈತರಿಗೆ, ಹಾಗೂ ಆರ್ಥಿಕ ಪರಿಸ್ಥಿಯನ್ನು ಎದುರಿಸುತ್ತಿರುವವರಿಗೆ ಬಹಳ ಅನುಕೂಲವಾಗಿವೆ. ಹೌದು, ಈಗಲೂ ಕೂಡ ಸರ್ಕಾರದಿಂದ ಹಲವು ಸೌಲಭ್ಯಗಳು ಸಾರ್ವಜನಿಕರಿಗೆ ದೊರಕುತ್ತಿವೆ. ಹಾಗೆಯೇ ಇದೀಗ ಪಿಎಮ್ಇಜಿಪಿ ( PMEGP) ಅಡಿಯಲ್ಲಿ 50 ಲಕ್ಷಗಳವರೆಗೆ 250 ಬಗೆಯ ಸ್ವ- ಉದ್ಯೋಗ ಪ್ರಾರಂಭಿಸಲು, ಸಾಲಕ್ಕೆ ಸಹಾಯಧನ(subsidy) ಪಡೆಯಲು ಅರ್ಜಿ ಅಹ್ವಾನಿಸಲಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. 



ಆನ್ ಲೈನ್ ಮೂಲಕ ಅರ್ಜಿ ಆಹ್ವಾನ :

ಭಾರತ ಸರ್ಕಾರದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ( Prime Minister Employment Generation Program ) ಕಾರ್ಯಕ್ರಮದಡಿಯಲ್ಲಿ ಎಲ್ಲರಿಗೂ ಉತ್ಪಾದನ ಮತ್ತು ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‌ಲೈನ್(online) ಮೂಲಕ ಎಲ್ಲಾ ವರ್ಗದ ನಿರುದ್ಯೋಗಿ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಮತ್ತು ಬಡತನವನ್ನು ಹೋಗಲಾಡಿಸಲು ಅವರ ಬದುಕನ್ನು ಅವರೇ ರೂಪಿಸಿಕೊಳ್ಳಲು ಒಂದು ದಾರಿ ದೀಪವಾಗಿದೆ.

2023-24 ನೇ ಸಾಲಿನ ಭಾರತ ಸರ್ಕಾರದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (PMEGP) ಕಾರ್ಯಕ್ರಮದಡಿಯಲ್ಲಿ ಉತ್ಪಾದನ ಮತ್ತು ಸೇವಾ ಘಟಕಗಳಿಗೆ ಸಾಲ ಸೌಲಭ್ಯ ಪಡೆಯಲು ಆನ್‌ಲೈನ್ ಮೂಲಕ ಎಲ್ಲಾ ವರ್ಗದ ನಿರುದ್ಯೋಗಿ ಯುವಕ, ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (PMEGP) ಮುಖ್ಯ ಉದ್ದೇಶ ( Purpose ) :

ಇಂದು ಎಲ್ಲ ಕಡೆಗಳಲ್ಲೂ ನಿರುದ್ಯೋಗದ ಸಮಸ್ಯೆ ಕಾಡುತ್ತಿದೆ. ಹೌದು ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆ ಇಂದ ಅನೇಕ ಯುವಕ ಯುವತಿಯರು ಕೆಲಸ ವಿಲ್ಲದೆ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಒಂದು ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರ ಗ್ರಾಮೀಣ ಮತ್ತು ನಗರ ಭಾಗದ ಯುವಕ-ಯುವತಿಯರು ಸ್ವ- ಉದ್ಯೋಗ ಆರಂಭಿಸಲು ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ (PMEGP) ಯೋಜನೆಯಡಿ ಅರ್ಥಿಕ ನೆರವು ಮತ್ತು ನೀವು ಪಡೆದ ಸಾಲಕ್ಕೆ ಸಹಾಯಧನವನ್ನು ನೀಡುತ್ತಿದೆ.

ಈ ಯೋಜನೆ ಅಡಿಯಲ್ಲಿ ದೊರೆಯುವ ಸಾಲ ಸೌಲಭ್ಯ ( Facilities ) :

ಈ ಒಂದು ಯೋನೆಯಡಿಯಲ್ಲಿ ಸರ್ಕಾರದ ವತಿಯಿಂದ ನಿರುದ್ಯೋಗಿಗಳಿಗೆ ಸಾಲ ಪಡೆಯಲು ಅವರಿಗೆ ಬ್ಯಾಂಕಿನಿಂದ ಗರಿಷ್ಠ 50 ಲಕ್ಷಗಳವರೆಗೆ ಸಾಲವನ್ನು ನೀಡಿ ಗರಿಷ್ಟ ಶೇ.25 ರಿಂದ 35% ವರೆಗೆ ಸಹಾಯಧನವನ್ನು ಈ ಯೋಜನೆಯಡಿಯಲ್ಲಿ ಪಡೆಯಬಹುದು.

ಪಿಎಮ್ಇಜಿಪಿ ( PMEGP ) ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :

ಅರ್ಹ ಮತ್ತು ಆಸಕ್ತ ಅರ್ಜಿದಾರರು ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (PMEGP) ಯ ಅಧಿಕೃತ ವೆಬೈಟ್ ಭೇಟಿ ನೀಡಿ ಆನ್ ಲೈನ್ ನಲ್ಲಿ ( Online ) ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ನೀಡಬೇಕಾದ ಮುಖ್ಯ ದಾಖಲೆಗಳ ( Documents ) ವಿವರ :

  • ಅರ್ಜಿದಾರರ ಪೋಟೋ
  • ಆಧಾರ್ ಕಾರ್ಡ
  • ಗುರುತಿನ ಚೀಟಿ
  • ಬ್ಯಾಂಕ್ ಪಾಸ್ ಬುಕ್
  • ಪಾನ್ ಕಾರ್ಡ
  • ನೀವು ಪ್ರಾರಂಭಿಸಲು ಇಚ್ಚಿಸುವ ಸ್ವ- ಉದ್ಯೋಗದ ಯೋಜನಾ ವರದಿ

ಹೆಚ್ಚಿನ ಮಾಹಿತಿಗಾಗಿ ( For more Information ) :

ಹೆಚ್ಚಿನ ವಿವರಗಳಿಗೆ ನಿಮ್ಮ ಜಿಲ್ಲೆಯ ಜಿಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಅಧಿಕಾರಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಕಚೇರಿಯನ್ನು ಸಂಪರ್ಕಿಸಬಹುದು.

Previous Post Next Post