ಕಟ್ಟಡ ಮತ್ತು ಇತರೆ ಕೆಲಸ ಮಾಡುವವವರಿಗೆ ಇದೀಗ ಸಿಹಿ ಸುದ್ದಿ ತಿಳಿದು ಬಂದಿದೆ. ಹೌದು, ಇದೀಗ ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಯಾಗುತ್ತಿವೆ ಈ ಎಲ್ಲ ಯೋಜನೆಗಳಿಂದ ಮಹಿಳೆಯರಿಗೆ, ಬಡವರಿಗೆ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಹಿಂದುಳಿದಿರುವ ಸರ್ಕಾರದಿಂದ ಸಿಗುವ ಈ ಯೋಜನೆಗಳು, ಸಾಲ(loan) ಸೌಲಭ್ಯಗಳು ಬಹಳ ಉಪಯೋಗವಾಗಿವೆ. ಇದರಿಂದ ಅವರು ತಮ್ಮ ತಮ್ಮ ಸ್ವಂತ ಉದ್ಯೋಗ ( Own Work ) ನಡೆಸಿಕೊಂಡು ಜೀವನ ನಡೆಸಲು ಸಹಾಯವಾಗಿದೆ. ಹಾಗೆಯೇ ಇದೀಗ ಕಾರ್ಮಿಕ ಇಲಾಖೆಯಿಂದ ಹಲವಾರು ಯೋಜನೆಗಳು ಜಾರಿಯಾಗುತ್ತಿವೆ. ಅವುಗಳನ್ನು ಪಡೆಯಲು ಕಾರ್ಮಿಕರು ಲೇಬರ್ ಕಾರ್ಡ್ ಅನ್ನು ( Labour card ) ಪಡೆಯಬೇಕು. ಅದನ್ನು ಹೇಗೆ ಪಡೆಯುವುದು ಮತ್ತು ಈ ಯೋಜನೆಗಳ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.
ಲೇಬರ್ ಕಾರ್ಡ್ ಪಡೆಯಲು ನೋಂದಣಿ ಕಡ್ಡಾಯ :
ಕಾರ್ಮಿಕ ಇಲಾಖೆಯಿಂದ ದೊರೆಯುವ ಈ ಯೋಜನೆಗಳು ಬಹಳಷ್ಟು ಜನರಿಗೆ ಉಪಯೋಗವಾಗಲಿವೆ.ಹಾಗೆಯೇ, ಸರ್ಕಾರದಿಂದ ದೊರೆಯುವ ಈ ಸೌಲಭ್ಯವನ್ನು ಪಡೆಯಲು ಕಾರ್ಮಿಕರು ಅಥವಾ ಅರ್ಹ ಅಭ್ಯರ್ಥಿ ಲೇಬರ್ ಕಾರ್ಡ್ ಅನ್ನು ಹೊಂದಬೇಕು. ಅವಾಗ ಮಾತ್ರ ಸರ್ಕಾರ ನೀಡುತ್ತಿರುವ ಈ ಎಲ್ಲ ಸೌಲಭ್ಯ ಪಡೆಯಲು ಸಾಧ್ಯ. ಹಾಗಾಗಿ ಲೇಬರ್ ಕಾರ್ಡ್ ದೊರೆಯಬೇಕಿದ್ದರೆ ಅಥವಾ ಈoo ಯೋಜನೆಗಳನ್ನು ಪಡೆಯಲು ಕಾರ್ಮಿಕರು ನೋಂದಣಿ (Labour Card ) ಕಡ್ಡಾಯವಾಗಿರುತ್ತದೆ. ಮತ್ತು ಅವರು ನೋಂದಣಿ ಮಾಡುವ ಮೂಲಕ ಅದನ್ನು ಪಡೆಯಬಹದು.
ಲೇಬರ್ ಕಾರ್ಡ್ ಪಡೆಯಲು ನೋಂದಣಿ ಅಭಿಯಾನ ಪ್ರಾರಂಭ :
ಈಗಾಗಲೇ ಸರ್ಕಾರದಿಂದ ಜಾರಿಗೆ ಆಗಿರುವ ಲೇಬರ್ ಕಾರ್ಡ್ ಮತ್ತು ಅದರ ಅಡಿಯಲ್ಲಿ ದೊರೆಯುವ ಯೋಜನೆಗಳನ್ನು ಪಡೆಯಲು ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಒಂದು ನೋಂದಣಿ ಪ್ರಕ್ರಿಯೆ ಈಗಾಗಲೇ ಶುರುವಾಗಿದ್ದು, ನೋಂದಣಿ ನಡೆಯುವ ಸ್ಥಳ ಹಾಗೂ ದಿನಾಂಕದ ವಿವರ ಈ ಕೆಳಗೆ ನೀಡಲಾಗಿದೆ.
ಸ್ಥಳ ( Place ) : ಬೆಂಗಳೂರು ನಗರದ ಸ್ಥಳದಲ್ಲೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ನೋಂದಣಿ ಅಭಿಯಾನವು ನಡೆಯಲಿದೆ. ನೋಂದಣಿ ಪ್ರಕ್ರಿಯೆಯನ್ನು ಮಾಡಲು ಹಿರಿಯ ಕಾರ್ಮಿಕ ನಿರೀಕ್ಷಕರು / ಕಾರ್ಮಿಕ ನಿರೀಕ್ಷಕರ ಕಛೇರಿಗಳಿಗೆ ಭೇಟಿ ನೀಡಬಹುದು.
ದಿನಾಂಕ ( Date ) : 30 ನೇ ಡಿಸೆಂಬರ್ 2023 ರಿಂದ 31 ನೇ ಮಾರ್ಚ್ 2024 ರವರೆಗೆ ಈ ಒಂದು ಲೇಬರ್ ಕಾರ್ಡ್ ನೋಂದಣಿ ಪ್ರಕ್ರಿಯೆ ನಡೆಯಲಿದೆ.
ಕರ್ನಾಟಕ ಸರ್ಕಾರ ( Karnataka Government ) ನೀಡುತ್ತಿರುವ ಈ ಯೋಜನಗಳು ಅದೆಷ್ಟೋ ಜನರಿಗೆ ಸಾಹಾಯ ಆಗಲಿದೆ.
ಇದರಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿವೆ, ಅವುಗಳೆಂದರೆ :
ಅರ್ಹ ಅಭ್ಯರ್ಥಿಗಳು ಲೇಬರ್ ಕಾರ್ಡ್ ಅನ್ನು ನೊಂದಣಿ ಮಾಡುವ ಮೂಲಕ ಪಡೆದುಕೊಂಡು ಈ ಕೆಳಗೆ ನೀಡಲಾದ ಎಲ್ಲ ಯೋಜನೆಗಳ ಸೌಲಭ್ಯಗಳನ್ನು ( karnataka labour card schemes ) ಪಡೆಯಬಹುದು.
- ಅಪಘಾತ ಪರಿಹಾರ
- ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ
- ತಾಯಿ ಮಗು ಸಹಾಯಹಸ್ತಾ
- ದುರ್ಬಲತೆ ಪಿಂಚಣಿ ಮುಂದುವರಿಕೆ
- ಪಿಂಚಣಿ ಮುಂದುವರಿಕೆ
- ಹೆರಿಗ ಸೌಲಭ್ಯ
- ದುರ್ಬಲತೆ ಪಿಂಚಣಿ ಸಾಲಭ್ಯ
- ಶೈಕ್ಷಣಿಕ ಸಹಾಯಧನ
- ಅಂತ್ಯಕ್ರಿಯೆ ವೆಚ್ಚ
- ಮದುವೆ ಸಹಾಯಧನ
- ವೈದ್ಯಕೀಯ ಸಹಾಯಧನ
- ಪಿಂಚಣಿ ಸೌಲಭ್ಯ
- ಶ್ರಮಸಾಮರ್ಥ್ಯ ಟೂಲ್ ಕಿಟ್
- ಉಚತ ಸಾರಿಗೆ ಬಸ್ ಪಾಸ್ ಸೌಲಭ್ಯ.
ಲೇಬರ್ ಕಾರ್ಡ್ ಪಡೆಯಲು ಇರಬೇಕಾದ ಅರ್ಹತೆಗಳ ( Qualifications ) ವಿವರ :
ಲೇಬರ್ ಕಾರ್ಡ್ ಅನ್ನು ಪಡೆಯುವ ಅಥವಾ ನೋಂದಣಿ ಮಾಡುವ ಮೊದಲು ಅರ್ಹ ಅಭ್ಯರ್ಥಿಯು ಮೊದಲು 12 ತಿಂಗಳುಗಳ ಕಾಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು. ಹಾಗಾದರೆ ಮಾತ್ರ ಅವರಿಗೆ ಸರ್ಕಾರದಿಂದ ದೊರೆಯುವ ಈ ಯೋಜನೆಗಳನ್ನು ಪಡೆಯಲು ಸಾಧ್ಯ.
ಲೇಬರ್ ಕಾರ್ಡ್ ಪಡೆಯಲು ಇರಬೇಕಾದ ವಯೋಮಿತಿ ( Age limit ) :
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಂಡಳಿಯಲ್ಲಿ ನೋಂದಣಿಯಾಗಲು ವಯೋಮಿತಿಯು 18 ರಿಂದ 60 ವರ್ಷದೊಳಗಿರಬೇಕು.
ಲೇಬರ್ ಕಾರ್ಡ್ ಗೆ ನೋಂದಣಿ ಮಾಡಿಕೊಳ್ಳಲು ಬೇಕಾಗುವ ಮುಖ್ಯ ದಾಖಲೆಗಳ ( Important documents ) ವಿವರ:
- 90 ದಿನಗಳ ಉದ್ಯೋಗ ದೃಢೀಕರಣ ಪತ್ರ.
- ಅರ್ಜಿದಾರ ಹಾಗೂ ಅವಲಂಬಿತರ ಆಧಾರ್ ಕಾರ್ಡ್ ಪ್ರತಿ.
- ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿ.
- ಅರ್ಜಿದಾರರ ಆಧಾರ್ ಕಾರ್ಡ್’ಗೆ ಲಿಂಕ್ ಇರುವ ದೂರವಾಣಿ ಸಂಖ್ಯೆ.
ಇದರಲ್ಲಿ ನಿಮಗೆ ಇನ್ನಾವುದೇ ಇತರ ಮಾಹಿತಿ ಬೇಕಿದ್ದರೆ ಅಥವಾ ಹೆಚ್ಚಿನ ಮಾಹಿತಿಗಾಗಿ ( For More Information ) ಈ ಕೆಳಗೆ ನೀಡಿರುವ ಮಾಹಿತಿಯನ್ನು ಸಂರ್ಕಿಸಬಹುದು :
ನೋಂದಣಿ ಪ್ರಕ್ರಿಯೆಯಲ್ಲಿ ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಕಾರ್ಮಿಕ ಅಧಿಕಾರಿಗಳು & ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಬಹುದು. ಹಾಗೆಯೇ ಸಹಾಯವಾಣಿ ಸಂಖ್ಯೆ 155214 ಕರೆ ಮಾಡಿ ಮಾಹಿತಿ ಪಡೆಯಬಹುದು.
ಹಾಗೆಯೇ ಯಾವುದೇ ಮಾಹಿತಿ ಬೇಕಿದ್ದಲ್ಲಿ ಇಲಾಖೆಯ ಪ್ರಮುಖ ಲಿಂಕ್‌ಗಳು ( website links ) ಲಭ್ಯವಿದೆ ಅವುಗಳಲಿಗೆ ಭೇಟಿ ನೀಡಿ ಮಾಹಿತಿ ತಿಳಿದು ಕೊಳ್ಳಬಹುದು.
ಇಲಾಖೆಯ ವೆಬ್‌ಸೈಟ್ :
ವಿಶೇಷ ಸೂಚನೆ ( Important notice ) :
ಕಟ್ಟಡ ಕಾರ್ಮಿಕರಲ್ಲದವರು ನಕಲಿ ದಾಖಲಾತಿ ಸೃಷ್ಟಿಸಿ ಮಂಡಳಿಯು ನೀಡುವ ಕಾರ್ಮಿಕರ ಗುರುತಿನ ಚೀಟಿಯನ್ನು ಪಡೆದು ಸೌಲಭ್ಯಗಳನ್ನು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಅಧಿಕಾರಿಗಳು ಎಚ್ಚರಿಕೆ ನೀಡಿದಾರೆ. ಇದು ಎಲ್ಲರಿಗೂ ಅನ್ವಯಿಸುತ್ತದೆ.