ಅನ್ನಭಾಗ್ಯ ಯೋಜನೆ ಉಚಿತ ಹಣ ಇನ್ಮುಂದೆ ಸಿಗೋದಿಲ್ಲ; ಸರ್ಕಾರದ ಹೊಸ ಅಪ್ಡೇಟ್

ಅನ್ನಭಾಗ್ಯ ಯೋಜನೆಯ ಉಚಿತ ಅಕ್ಕಿ ವಿತರಣೆಯಲ್ಲಿ ಮಹಿಳೆಯರ ಹೊಸ ಬೇಡಿಕೆ; ಈಡೇರಿಸುತ್ತಾ ರಾಜ್ಯ ಸರ್ಕಾರ ರಾಜ್ಯ ಕಾಂಗ್ರೆಸ್ ಸರ್ಕಾರ (Congress government) ತನ್ನ ಪ್ರಣಾಳಿಕೆಯಲ್ಲಿ ಹೇಳಿರುವ ಎಲ್ಲ ಯೋಜನೆಗಳನ್ನು ಜಾರಿಗೆ ತಂದಿದೆ ನಿಜ, ಆದರೆ ಸರ್ಕಾರ ಏನು ಅಂದುಕೊಂಡಿತ್ತೋ ಅದನ್ನು ನಿರೀಕ್ಷೆಪಟ್ಟಂತೆ ನೆರವೇರಿಸಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಅನ್ನಭಾಗ್ಯ ಯೋಜನೆ (Annabhagya scheme) ಯ ವಿಶೇಷವಾಗಿ ನೋಡಿದರೆ ರಾಜ್ಯ ಸರ್ಕಾರ ನೀಡಿದ ಭರವಸೆ ಈಡೇರಿಸಲು ಸಾಧ್ಯವಾಗಿಲ್ಲ.



ನಿಮಗೆಲ್ಲರಿಗೂ ತಿಳಿದಿರುವಂತೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ರಾಜ್ಯ ಸರ್ಕಾರ ಒಟ್ಟು ಹತ್ತು ಕೆಜಿ ಉಚಿತವಾಗಿ ಅಕ್ಕಿಯನ್ನು ಕೊಡಬೇಕಿತ್ತು. ಇಲ್ಲಿ ಐದು ಕೆಜಿ ಅಕ್ಕಿಯನ್ನು ಕೇಂದ್ರ ಸರ್ಕಾರ ಉಚಿತವಾಗಿಯೇ ಕೊಡುತ್ತಿದೆ. ಇದಕ್ಕೆ ಇನ್ನೂ ಐದು ಕೆಜಿ ಉಚಿತ ಅಕ್ಕಿಯನ್ನು ರಾಜ್ಯ ಸರ್ಕಾರ (state government) ಸೇರಿಸಿ ಫಲಾನುಭವಿಗಳಿಗೆ ಹತ್ತು ಕೆಜಿ ವಿತರಣೆ ಮಾಡಬೇಕಿತ್ತು.

ಆದರೆ ಯೋಜನೆಯಲ್ಲಿ ಸರ್ಕಾರ ವಿಫಲವಾಗಿದೆ. ಕಳೆದ ಆರು ತಿಂಗಳಿನಿಂದಲೂ ಕೂಡ ಫಲಾನುಭವಿಗಳಿಗೆ ಅಕ್ಕಿ ಬದಲು ಹಣವನ್ನೇ ಸರ್ಕಾರ ಖಾತೆಗೆ (Bank Account) ಜಮಾ ಮಾಡುತ್ತಿದೆ.

ಮಹಿಳೆಯರ ಆಕ್ರೋಶ!

ಅಷ್ಟು ದೊಡ್ಡ ಪ್ರಮಾಣದಲ್ಲಿ ಅಕ್ಕಿ ಹೊಂದಿಸಲು ಸಾಧ್ಯವಾಗದೆ ಇರುವುದರಿಂದ ಅಕ್ಕಿಗೆ ಸಂದಾಯವಾಗುವ ಬೆಲೆಯ ಮೊತ್ತವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತೇವೆ ಎಂದು ಸರ್ಕಾರ ಘೋಷಣೆ ಮಾಡಿತ್ತು. ಕಳೆದ ಆರು ತಿಂಗಳಿನಿಂದಲೂ ಕೂಡ 34 ರೂಪಾಯಿ ಪ್ರತಿ ಕೆಜಿ ಅಕ್ಕಿಗೆ ಅಂದರೆ ಒಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿಗೆ 170ಗಳಂತೆ ಖಾತೆಗೆ ಜಮಾ (Money Deposit) ಮಾಡುತ್ತಿದೆ. ಆದರೆ ಈ ಹಣ ಫಲಾನುಭವಿಗಳಿಗೆ ಬೇಕಾಗಿಲ್ಲ. ಬದಲು ನಮಗೆ ಅಕ್ಕಿಯನ್ನು ಕೊಡಿ ಎನ್ನುವುದು ಹಲವರ ಒತ್ತಾಯ.

ರಾಜ್ಯದ್ಯಂತ ಸಮೀಕ್ಷೆ (survey) ನಡೆಸಿರುವ ಸರ್ಕಾರ 80ರಷ್ಟು ಫಲಾನುಭವಿ ಮಹಿಳೆಯರು ತಮಗೆ ಅಕ್ಕಿಯನ್ನು ರೇಶನ್ ಆಗಿ ಕೊಡಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ, ಹಣವನ್ನು ಕೊಟ್ಟರೆ, ಅದು ಬೇರೆ ಬೇರೆ ಕಾರಣಗಳಿಗೆ ವಿನಿಯೋಗವಾಗುತ್ತದೆಯೇ ಹೊರತು ಅದರಿಂದ ಅಕ್ಕಿ ಖರೀದಿಸುವುದಿಲ್ಲ. ಇದರಿಂದಾಗಿ ನಮಗೆ ಯಾವುದೇ ಪ್ರಯೋಜನ ಆಗಿಲ್ಲ. ನಮಗೆ ಹಣ ಬೇಡ ಅಕ್ಕಿಯನ್ನು ಕೊಡಿ ಎಂದು ಮಹಿಳೆಯರು ಸರ್ಕಾರದ ಮೊರೆ ಹೋಗಿದ್ದಾರೆ.

ಅಕ್ಕಿ ಹೊಂದಿಸುವುದೇ ಕಷ್ಟ!

  • ಈ ವರ್ಷದ ಮುಂಗಾರು ಕೈಕೊಟ್ಟಿದೆ. ಇದರಿಂದಾಗಿ ರೈತರು (farmers ) ಸುಲಭವಾಗಿ ಅಕ್ಕಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದು ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರ ಮೇಲೆ ಕೂಡ ಪರಿಣಾಮ ಬೀರಲಿದ್ದು, ಅಕ್ಕಿ ಬೆಲೆ ಇನ್ನಷ್ಟು ದುಬಾರಿ ಆಗುವ ಸಾಧ್ಯತೆ ಇದೆ.
  • ಅಕ್ಕಿ ಬೆಳೆಯ ಪ್ರಮಾಣವೇ ಕಡಿಮೆ ಆಗಿರುವುದರಿಂದ ಜನರ ಬೇಡಿಕೆಗೆ ತಕ್ಕಷ್ಟು ಅಕ್ಕಿ ಒದಗಿಸಿದರೆ, ಉಚಿತವಾಗಿ ಅಕ್ಕಿ ಒದಗಿಸಲು ಸರ್ಕಾರ ಅಕ್ಕಿ ಖರೀದಿಸುವುದಕ್ಕೂ ಕೂಡ ಸಾಧ್ಯವಿಲ್ಲ.
  • ಹೀಗಾಗಿ ಈ ಬಗ್ಗೆ ಮಾಹಿತಿ ನೀಡಿರುವ ಕೆಎಚ್ ಮುನಿಯಪ್ಪ ಅವರು, ಉಚಿತ ಅಕ್ಕಿ ವಿತರಣೆ ಮಾಡುವುದಕ್ಕಾಗಿ ಈಗಾಗಲೇ ತೆಲಂಗಾಣ ಹಾಗೂ ಉತ್ತರ ಪ್ರದೇಶ ಮೊದಲಾದ ಅಕ್ಕಿ ಬೆಳೆಯುವ ರಾಜ್ಯ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೆ ದರದಲ್ಲಿ ಹೊಂದಾಣಿಕೆ ಆಗದೆ ಇರುವುದರಿಂದ ಬೇರೆ ಕಡೆಯಿಂದ ಅಕ್ಕಿ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಉಚಿತ ಅಕ್ಕಿ ವಿತರಣೆ ವಿಳಂಬವಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
  • ಒಟ್ಟಾರೆಯಾಗಿ, ಫಲಾನುಭವಿಗಳು ತಮಗೆ ಅಕ್ಕಿಯನ್ನು ನೀಡಿ ಎಂದು ಸರಕಾರಕ್ಕೆ ಮನವಿ ಮಾಡಿದ್ದರು ಕೂಡ, ಈ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಆ ಪ್ರಯತ್ನ ಇದುವರೆಗೆ ಫಲ ಕೊಟ್ಟಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಉಚಿತ ಅಕ್ಕಿಯನ್ನು ನೀಡಲು ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Previous Post Next Post