420 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗೆ ಪಿಇಟಿ, ಪಿಎಸ್‌ಟಿ ದಿನಾಂಕ ನಿಗದಿ

Karnataka Police Recruitment 2024 : ಕರ್ನಾಟಕ ಪೊಲೀಸ್‌ ಇಲಾಖೆಯು 2022-23ನೇ ಸಾಲಿನ 420 ಎಪಿಸಿ ಹುದ್ದೆಗಳಿಗೆ ಸಹಿಷ್ಣುತೆ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಈ ಪರೀಕ್ಷೆಗಳ ವಿಧಾನ ಹೇಗಿರುತ್ತದೆ ಎಂದು ಈ ಲೇಖನದಲ್ಲಿ ತಿಳಿಸಲಾಗಿದೆ.



2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶದ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ (ಸಿಎಆರ್ / ಡಿಎಆರ್‌) (ಪುರುಷ ಮತ್ತು ತೃತೀಯಲಿಂಗ ಪುರುಷ) - 420 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪೊಲೀಸ್ ಇಲಾಖೆಯು ಸಹಿಷ್ಣುತೆ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಗಳನ್ನು ನಡೆಸಲು ದಿನಾಂಕ ನಿಗದಿ ಮಾಡಿದೆ.

ಕಲ್ಯಾಣ ಕರ್ನಾಟಕ ಪ್ರದೇಶದ 420 ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗೆ ಅರ್ಜಿ ಸಲ್ಲಿಸಿದವರಿಗೆ ಲಿಖಿತ ಪರೀಕ್ಷೆಯನ್ನು ದಿನಾಂಕ 10-09-2023 ರಂದು ನಡೆಸಲಾಗಿತ್ತು. ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಮುಂದಿನ ಹಂತವಾದ ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ದೈಹಿಕ ಸಹಿಷ್ಣುತೆ ಪರೀಕ್ಷೆಗಳನ್ನು (ಪಿಎಸ್‌ಟಿ / ಪಿಇಟಿ) ನಡೆಸಲು ಅರ್ಹ ಅಭ್ಯರ್ಥಿಗಳ 1:5 ಅನುಪಾತದ ಆಯ್ಕೆಪಟ್ಟಿಯನ್ನು ತಯಾರಿಸಲಾಗಿರುತ್ತದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳಿಗೆ ಈ ಕೆಳಗಿನ ದಿನಾಂಕಗಳಂದು ಸದರಿ ಪರೀಕ್ಷೆಗಳನ್ನು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.

420 ಸಶಸ್ತ್ರ ಪೊಲೀಸ್‌ ಕಾನ್ಸ್‌ಟೇಬಲ್‌ಗೆ ಪಿಇಟಿ, ಪಿಎಸ್‌ಟಿ ಪರೀಕ್ಷೆ ದಿನಾಂಕ : 

12-02-2024 ರಿಂದ 17-02-2024 ರವರೆಗೆ.

ಪಿಇಟಿ, ಪಿಎಸ್‌ಟಿ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಒಂದು ವಾರ ಮುಂಚಿತವಾಗಿ ಇಲಾಖೆಯು ಕರೆ ಪತ್ರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ. ಅದರಲ್ಲಿ ಅಗತ್ಯ ಸೂಚನೆಗಳು, ಮಾರ್ಗದರ್ಶನಗಳನ್ನು ಸಹ ನೀಡಲಿದೆ.

ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಗೆ ಎತ್ತರ ಎಷ್ಟಿರಬೇಕು? ದೇಹದಾರ್ಢ್ಯತೆ ಪರೀಕ್ಷೆ ಹೇಗಿರುತ್ತದೆ?

ಎಲ್ಲಾ ಸಾಮಾನ್ಯ ಪುರುಷ ಮತ್ತು ತೃತೀಯ ಲಿಂಗ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ - 168 ಸೆಂ.ಮೀ. ಕನಿಷ್ಠ ಎದೆ ಸುತ್ತಳತೆ 86 ಸೆಂ.ಮೀ (ಪೂರ್ತಿ ವಿಸ್ತರಿಸಿದಾಗ ಕನಿಷ್ಠ ವಿಸ್ತರಣೆ 5 ಸೆಂ.ಮೀ)

ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ - 155 ಸೆಂ.ಮೀ. ಎದೆ ಸುತ್ತಳತೆ 5 ಸೆಂ.ಮೀ.ಗಳ ಕನಿಷ್ಠ ವಿಸ್ತರಿಸುವುದರೊಂದಿಗೆ ಸಂಪೂರ್ಣವಾಗಿ ಹಿಗ್ಗಿಸಿದಾಗ 75 ಸೆಂ.ಮೀ.ಗಳಿಗಿಂತ ಕಡಿಮೆ ಇಲ್ಲದಂತೆ.

ಸಹಿಷ್ಣುತೆ ಪರೀಕ್ಷೆ ಹೇಗಿರುತ್ತದೆ?

ಎಲ್ಲಾ ಸಾಮಾನ್ಯ ಪುರುಷ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ ಸಹಿಷ್ಣುತೆ ಪರೀಕ್ಷೆ ಈ ಕೆಳಗಿನಂತೆ ಇರುತ್ತದೆ.

1600 ಮೀಟರ್ ಓಟ : 6 ನಿಮಿಷ 30 ಸೆಕೆಂಡ್.

ಎತ್ತರ ಜಿಗಿತ : 1.20 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.

ಉದ್ದ ಜಿಗಿತ : 3.80 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.

ಗುಂಡು ಎಸೆತ (7.26 KG) : 5.60 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.

ಮಾಜಿ ಸೈನಿಕ ಅಭ್ಯರ್ಥಿಗಳಿಗೆ

400 ಮೀಟರ್ ಓಟ : 2 ನಿಮಿಷಕ್ಕಿಂತ ಮೀರದಂತೆ.

ಎತ್ತರ ಜಿಗಿತ : 0.90 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.

ಉದ್ದ ಜಿಗಿತ : 2.50 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.

ಗುಂಡು ಎಸೆತ (4 KG) : 3.75 ಮೀಟರ್‌ಗಿಂತ ಕಡಿಮೆ ಇಲ್ಲದಂತೆ.

ಈ ಮೇಲಿನ ಎಲ್ಲ ಪರೀಕ್ಷೆಗೆ 3 ಅವಕಾಶಗಳು ಇರುತ್ತವೆ.


Previous Post Next Post