ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ಯಾವುದೇ ಸಂದರ್ಭದಲ್ಲೂ ದಂಡ ವಸೂಲಿ ಮಾಡಲು ಸಂಚಾರಿ ಪೊಲೀಸರಿಗೆ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಪ್ರಯಾಣಿಕರೇ, ನಿಮಗೆ ಗೊತ್ತೇ? ಸಂಚಾರ ನಿಯಮ ಉಲ್ಲಂಘನೆ ಆದರೆ ಸಂಚಾರಿ ಪೊಲೀಸರು ನಿಮಗೆ ದಂಡ ವಿಧಿಸಿ ಹಣ ಪಡೆಯುತ್ತಾರೆ ತಾನೇ..ಆದ್ರೆ ನಿಜಕ್ಕೂ ಸಂಚಾರಿ ಪೊಲೀಸರು ಹೀಗೆ ದಂಡ ಸಂಗ್ರಹಿಸುವಂತಿಲ್ಲ!
ಹೌದು, ಈ ವಿಷಯದ ಕುರಿತು ಹೈಕೋರ್ಟ್ ಆದೇಶ ನೀಡಿದೆ. ಸಂಚಾರಿ ಪೊಲೀಸರು ವಾಹನ ಪ್ರಯಾಣಿಕರಿಂದ ದಂಡ ಸಂಗ್ರಹಿಸುವಂತಿಲ್ಲ ಎಂದು ತಿಳಿಸಿದೆ.
ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರಿಂದ ಯಾವುದೇ ಸಂದರ್ಭದಲ್ಲೂ ದಂಡ ವಸೂಲಿ ಮಾಡಲು ಸಂಚಾರಿ ಪೊಲೀಸರಿಗೆ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಕೆ.ಆರ್ ಪೇಟೆಯ ಕೆ.ಟಿ.ನಟರಾಜ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ಮಾಡಿದ ಹೈಕೋರ್ಟ್ ಸದಸ್ಯ ಪೀಠ ಈ ಆದೇಶ ನೀಡಿದೆ. ಈ ಕುರಿತು "ಸ್ಟಾರ್ ಆಫ್ ಮೈಸೂರು" ವರದಿ ಮಾಡಿದೆ.
ಸಂಚಾರ ಉಲ್ಲಂಘನೆಯ ಪ್ರಕರಣದಲ್ಲಿ ಪೊಲೀಸರು ಅಪರಾಧವನ್ನು ವಿಡಿಯೋ ರೆಕಾರ್ಡ್ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ಆದರೆ ವಾಹನ ಸವಾರರಿಂದ ದಂಡ ವಸೂಲಿ ಮಾಡಲು ಸಂಚಾರ ಪೊಲೀಸರಿಗೆ ಅವಕಾಶವಿಲ್ಲ ಎಂದು ಕೋರ್ಟ್ ಸೂಚಿಸಿದೆ.