ಸರ್ಕಾರ ಸಬ್ಸಿಡಿ ದರದಲ್ಲಿ ಸಲಕರಣೆ (subsidy Loan for agricultural equipment) ಒದಗಿಸಿ ಕೊಡುವುದರಿಂದ ರೈತರು ಫಸಲು ಬೆಳೆಯಲು ಅಗತ್ಯವಾದ ನೀರನ್ನು ತಮ್ಮ ಜಮೀನಿಗೆ ತುಂತುರು ನೀರಾವರಿ ಪದ್ಧತಿಯ ಪ್ರಕಾರ ಒದಗಿಸಿಕೊಳ್ಳಬಹುದು
ರೈತರ ಪರವಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುವ ಸರ್ಕಾರ ರೈತರ ಜಮೀನಿನಲ್ಲಿ ಸರಿಯಾದ ಫಸಲು ಬರಲು ಸಹಾಯಕವಾಗುವಂತೆ ಸಬ್ಸಿಡಿ ದರದಲ್ಲಿ ಸಾಲ ಸೌಲಭ್ಯವನ್ನು (subsidy loan for farmers) ಕೂಡ ನೀಡುತ್ತಿದೆ.
ತಮ್ಮ ಬೆಳೆ ಬೆಳೆಯಲು ಸರಿಯಾದ ಬೀಜಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಅದರ ಜೊತೆಗೆ ಬಿತ್ತನೆಗೆ ಅನುಕೂಲವಾದ ಉಪಕರಣಗಳು ಕೂಡ ಬೇಕು, ಎಲ್ಲ ರೈತರಿಗೂ, ಬೇಕಾಗಿರುವ ಉಪಕರಣಗಳನ್ನು ಒದಗಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ಸಬ್ಸಿಡಿ ಸಹಾಯಧನ ನೀಡುವುದರಿಂದ ಉಪಕರಣಗಳ ಖರೀದಿ ಮಾಡಬಹುದು.
ಕೃಷಿ ಉಪಕರಣಗಳಿಗೆ ಸಬ್ಸಿಡಿ (subsidy Loan for agricultural equipment)
ಕೃಷಿಗೆ ಅಗತ್ಯವಾದಷ್ಟು ನೀರು ಈ ಬಾರಿ ರೈತರಿಗೆ ಒದಗಿಸಲು ಸಾಧ್ಯವಾಗುತ್ತಿಲ್ಲ, ಯಾಕೆಂದರೆ ಮಳೆಯ ಅಭಾವದಿಂದ ನೀರಿನ ಕೊರತೆ ಉಂಟಾಗಿದೆ ಈ ಹಿನ್ನೆಲೆಯಲ್ಲಿ ತುಂತುರು ನೀರಾವರಿ ಮಾಡಲು ಅಗತ್ಯ ಇರುವ ಸಲಕರಣೆಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ.
ಕಳೆದ ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರದಿಂದ (Central government) ಕೃಷಿ ಸಲಕರಣೆಗೆ ಸಬ್ಸಿಡಿ ನೀಡಲಾಗುತ್ತಿದ್ದು ಇದೀಗ ರಾಜ್ಯ ಸರ್ಕಾರವು ಕೂಡ ರೈತರಿಗೆ ಸಹಾಯ ಮಾಡಲು ಮುಂದಾಗಿದೆ.
ರೈತರಿಗೆ ಹನಿ ನೀರಾವರಿ ಅಥವಾ ತುಂತುರು ನೀರಾವರಿಗಾಗಿ ಸ್ಪಿಂಕ್ಲರ್ (sprinkler) ಖರೀದಿಸುವ ಅಗತ್ಯವಿರುತ್ತದೆ. ಆದರೆ ಇದು ದುಬಾರಿಯಾಗಿರುವುದರಿಂದ ಪ್ರತಿಯೊಬ್ಬ ರೈತರಿಗೂ ಕೂಡ ಖರೀದಿ ಮಾಡಲು ಸಾಧ್ಯವಿಲ್ಲ
ಈ ಹಿನ್ನೆಲೆಯಲ್ಲಿ ಸರ್ಕಾರ ಸಬ್ಸಿಡಿ ದರದಲ್ಲಿ ಸಲಕರಣೆ (subsidy Loan for agricultural equipment) ಒದಗಿಸಿ ಕೊಡುವುದರಿಂದ ರೈತರು ಫಸಲು ಬೆಳೆಯಲು ಅಗತ್ಯವಾದ ನೀರನ್ನು ತಮ್ಮ ಜಮೀನಿಗೆ ತುಂತುರು ನೀರಾವರಿ ಪದ್ಧತಿಯ ಪ್ರಕಾರ ಒದಗಿಸಿಕೊಳ್ಳಬಹುದು.
ಕೂಡಲೇ ಅರ್ಜಿ ಸಲ್ಲಿಸಿ (Apply now)
2023 – 24ನೇ ಸಾಲಿನ ಸೂಕ್ಷ್ಮ ನೀರಾವರಿ ಯೋಜನೆಯ ಅಡಿಯಲ್ಲಿ ತುಂತುರು ನೀರಾವರಿಗೆ ಅಗತ್ಯ ಇರುವ ಸಲಕರಣೆಗಳನ್ನು ಒದಗಿಸಿ ಕೊಡಲಾಗುತ್ತಿದೆ. ರೈತರು ಈ ಸಹಾಯಧನವನ್ನು ಪಡೆದುಕೊಳ್ಳಲು ಆಧಾರ್ ಕಾರ್ಡ್, ತಮ್ಮ ಜಮೀನಿನ ಪಹಣಿ ಪತ್ರ, ಆದಾಯ ಪ್ರಮಾಣ ಪತ್ರ ಮೊದಲಾದ ದಾಖಲೆಗಳನ್ನು ಕೃಷಿ ಇಲಾಖೆಗೆ ಒದಗಿಸಿ ಅರ್ಜಿ ಸಲ್ಲಿಸುವುದರ ಮೂಲಕ ಧನ ಸಹಾಯ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕೃಷಿ ಇಲಾಖೆಯನ್ನು ಸಂಪರ್ಕಿಸಿ.

