ಸೇನೆ, ಪೊಲೀಸ್‌, ಇತರೆ ಪಡೆಗಳಿಗೆ ಪೂರ್ವ ಸಿದ್ಧತೆಗೆ ಉಚಿತ ವಸತಿಯೊಂದಿಗೆ ತರಬೇತಿ: ಅರ್ಜಿ ಆಹ್ವಾನ

ಸೋಷಿಯಲ್ ವೆಲ್‌ಫೇರ್ ಡಿಪಾರ್ಟ್‌ಮೆಂಟ್‌ ಸೇನೆ / ಭದ್ರತಾ ಪಡೆ / ಪೊಲೀಸ್ ಸೇವೆ ಸೇರಿದಂತೆ ಇತರೆ ಭದ್ರತಾ ಪಡೆಗಳಿಗೆ ಉಚಿತ ಆಯ್ಕೆ ಪೂರ್ವ ಸಿದ್ಧತಾ ತರಬೇತಿಯನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಇದಕ್ಕೆ ರಾಜ್ಯದ ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.


2023-24ನೇ ಸಾಲಿಗೆ ಭಾರತೀಯ ಸೇನೆ / ಭದ್ರತಾ ಪಡೆ / ಪೊಲೀಸ್ ಸೇವೆ ಸೇರಿದಂತೆ ಇತರೆ ಸಮವಸ್ತ್ರ ಸೇವೆಗಳಿಗೆ ಸೇರ ಬಯಸುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಸಮಾಜ ಕಲ್ಯಾಣ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಈ ಇಲಾಖೆವತಿಯಿಂದ ಸದರಿ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಅಭ್ಯರ್ಥಿಗಳು ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ಉಚಿತವಾಗಿ 2 ತಿಂಗಳು ವಸತಿಯುತ ದೈಹಿಕ ಸಾಮರ್ಥ್ಯ ತರಬೇತಿ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಪಡೆಯಲು ಇಚ್ಛಿಸಿದಲ್ಲಿ ಆನ್‌ಲೈನ್‌ ಮೂಲಕ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ.

ಅರ್ಹತೆಗಳು

ವಿದ್ಯಾರ್ಹತೆ : 10ನೇ ತರಗತಿ ಪಾಸ್.

ವಯಸ್ಸಿನ ಅರ್ಹತೆ: 17 ವರ್ಷ 6 ತಿಂಗಳಿನಿಂದ 23 ವರ್ಷದ ವಯೋಮಾನದವರಾಗಿರಬೇಕು.

ಸಾಮಾನ್ಯ ಅರ್ಹತೆ

> ಕರ್ನಾಟಕ ರಾಜ್ಯದ ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಾಗಿದ್ದು, ಇಲ್ಲಿಯ ನಿವಾಸಿಯಾಗಿರಬೇಕು.

> ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿಗದಿತ ನಮೂನೆಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದಿರಬೇಕು.

> ವಾರ್ಷಿಕ ಆದಾಯ : ಕುಟುಂಬದ ವಾರ್ಷಿಕ ಆದಾಯ ರೂ.5.00 ಲಕ್ಷ ಮೀರಿರಬಾರದು.

> ಇಲಾಖೆ ನಿಗಧಿತ ಈ ಕೆಳಗಿನ ದೈಹಿಕ ಸಾಮರ್ಥ್ಯ ಅರ್ಹತೆಗಳನ್ನು ಹೊಂದಿರಬೇಕು.

> ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ : www.sw.kar.nic.in

> ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10-12-2023 ರ ಸಂಜೆ 06-00 ಗಂಟೆವರೆಗೆ.

ಅಭ್ಯರ್ಥಿಗಳ ಆಯ್ಕೆ ವಿಧಾನ

ಮೊದಲು ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಆದ್ಯತೆ ಮೇರೆಗೆ ಹಂತ ಹಂತವಾಗಿ ತರಬೇತಿಗೆ ನಿಯೋಜಿಸಲಾಗುವುದು.

250 ಅಭ್ಯರ್ಥಿಗಳಂತೆ 4 ಬ್ಯಾಚ್‌ಗಳಲ್ಲಿ ತರಬೇತಿ ಸಂಸ್ಥೆ ಮೂಲಕ ಆಯ್ಕೆ ಮಾಡಲಾಗುವುದು. ತರಬೇತಿ ನೀಡಲು ನಿಗಧಿಪಡಿಸಿದ ತರಬೇತಿ ಸಂಸ್ಥೆಯ ನೇತೃತ್ವದಲ್ಲಿ ನಡೆಸಲಾಗುವ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಷರತ್ತಿಗೊಳಪಟ್ಟು ಅಭ್ಯರ್ಥಿಗಳ ಆಯ್ಕೆ ನಡೆಸಲಾಗುವುದು. ಅಭ್ಯರ್ಥಿಗಳ ಅಂತಿಮ ಆಯ್ಕೆ ತರಬೇತಿ ನೀಡುವ ಸಂಸ್ಥೆಯದ್ದಾಗಿರುತ್ತದೆ.

ತರಬೇತಿ ಸೌಲಭ್ಯ

ಆಯ್ಕೆಯಾದವರಿಗೆ ಉಚಿತ ಊಟ, ವಸತಿಯೊಂದಿಗೆ 2 ತಿಂಗಳ ಸಮವಸ್ತ್ರ ಸೇವೆಗೆ ದೈಹಿಕ ಸಾಮರ್ಥ್ಯ ತರಬೇತಿ ಹಾಗೂ ಇತರೆ ಅಗತ್ಯವಾಗಿರುವ ತರಬೇತಿಗಳನ್ನು ನೀಡಲಾಗುತ್ತದೆ. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ತರಬೇತಿ ಸಂಸ್ಥೆ ಮೂಲಕ ಪ್ರತ್ಯೇಕ ವಸತಿ ಸೌಲಭ್ಯ ಕಲ್ಪಿಸಲಾಗುವುದು.

ಇತರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ನೋಟಿಸ್ ಲಿಂಕ್ ಕ್ಲಿಕ್ ಮಾಡಿ ಓದಿರಿ.

Notice


Previous Post Next Post