ಬೆಂಗಳೂರು ನೀಟ್ ಮತ್ತು ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಚಿಂಗ್ ಪಡೆಯಲು ಬಯಸುವ ಗ್ರಾಮೀಣ ವಿದ್ಯಾರ್ಥಿಗಳಿಗೆ ರಾಷ್ಟ್ರೋತ್ಥಾನ ಪರಿಷತ್‌ನ ಸಾಧನಾ ಮತ್ತು ತಪಸ್ ಹೆಸರಿನಲ್ಲಿ ಊಟ, ವಸತಿ ಸಹಿತ ಉಚಿತ ತರಬೇತಿ ನೀಡುತ್ತಿದೆ.
ಶಿಕ್ಷಕಿ, ವೈದ್ಯ, ಇಂಜಿನಿಯರಿಂಗ್ ಆಗಬೇಕೆಂಬ ಗುರಿಯನ್ನಿಟ್ಟುಕೊಂಡಿರುವ ವಿದ್ಯಾರ್ಥಿಗಳು ಡಿ.15ರ ವರೆಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ಡಿ.25ರಂದು ಸ್ಪಧಾತ್ಮಕ ಪರೀಕ್ಷೆ ನಡೆಯಲಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ತಮ್ಮ ಪ್ರವೇಶ ಪತ್ರ, ಮಾದರಿ ಪ್ರಶ್ನೆಪತ್ರಿಕೆ ಹಾಗೂ ಅರ್ಜಿಗಳನ್ನು ಆನ್‌ಲೈನ್ ವೆಬ್‌ಸೈಟ್ ಡಿಡಿಡಿ.ಠಿಚ್ಞ.ಟ್ಟಜ ನಲ್ಲಿಯೇ ಪಡೆಯಬಹುದು.
ವೈದ್ಯ ಸೀಟು ಪಡೆದ 58 ವಿದ್ಯಾರ್ಥಿಗಳು:
‘ಸಾಧನಾ’ ಸ್ಕಾಲರ್‌ಶಿಪ್ ವೈದ್ಯೆಯಾಗಬಯಸುವ ಹೆಣ್ಣು ಮಕ್ಕಳಿಗೆ ಮತ್ತು ‘ತಪಸ್’ ಇಂಜಿನಿಯರಿಂಗ್ ಮಾಡಬೇಕೆಂಬ ಗಂಡು ಮಕ್ಕಳ ವಿಭಾಗವಾಗಿದೆ.
ತಪಸ್‌ಗೆ ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು 2 ವರ್ಷಗಳ ಕಾಲ ಬೆಂಗಳೂರಿನ ಬವಶಂಕರಿಯಲ್ಲಿರುವ ರಾಷ್ಟ್ರೋತ್ಥಾನದ ವಿಶೇಷ ವಿದ್ಯಾರ್ಥಿನಿಲಯದಲ್ಲಿ ಹಾಗೂ ಸಾಧನಾಕ್ಕೆ ಆಯ್ಕೆಯಾದವರು ಥಣಿಸಂದ್ರದಲ್ಲಿರುವ ವಿಶೇಷ ಹಾಸ್ಟೆಲ್‌ನಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿ ಪಿಯು ಶಿಕ್ಷಣದ ಜತೆಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ನೀಡಲಾಗುತ್ತದೆ.
ಹಾಸ್ಟೆಲ್ ಮತ್ತು ಶೈಕ್ಷಣಿಕ ಶುಲ್ಕ ಸಂಪೂರ್ಣ ಉಚಿತವಾಗಿರುತ್ತದೆ. ಅರ್ಜಿ ಸಲ್ಲಿಸುವವರು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. 9ನೇ ತರಗತಿಯಲ್ಲಿ ಶೇ.80ಕ್ಕಿಂತ ಹೆಚ್ಚಿನ ಅಂಕ ಗಳಿಸಿರಬೇಕು. ವಾರ್ಷಿಕ ಕುಟುಂಬದ ಆದಾಯ 2 ಲಕ್ಷ ರೂ.ಗಳಿಗಿಂತ ಹೆಚ್ಚಿರಬಾರದು.
ಕಳೆದ 10 ವರ್ಷಗಳಲ್ಲಿ 366 ವಿದ್ಯಾರ್ಥಿಗಳು ತಪಸ್‌ನ ಪ್ರಯೋಜನ ಪಡೆದಿದ್ದಾರೆ. ಈ ಪೈಕಿ 36 ವಿದ್ಯಾರ್ಥಿಗಳು ಐಐಟಿ ಯಲ್ಲಿ ಪ್ರವೇಶ ಪಡೆದಿದ್ದಾರೆ. 92 ವಿದ್ಯಾರ್ಥಿಗಳು ಸುರತ್ಕಲ್ ಇಂಜಿನಿಯರಿಂಗ್ ಕಾಲೇಜು, ಎನ್‌ಐಟಿ ಯಲ್ಲಿ ಪ್ರವೇಶ ಪಡೆದಿದ್ದಾರೆ. 150ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ರಾಜ್ಯದ ಉಳಿದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಾದ ಆರ್.ವಿ., ಪಿಇಎಸ್‌ಐಟಿ ಮತ್ತು ಬಿಎಂಎಸ್ ಕಾಲೇಜುಗಳಲ್ಲಿ ಸೀಟು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.58 ವಿದ್ಯಾರ್ಥಿಗಳು ವೈದ್ಯಕೀಯ ಸೀಟು ಪಡೆದಿದ್ದಾರೆ.
