Prize Money Scholarship 2023: ಮೆಟ್ರಿಕ್ ಹಾಗೂ ಮೆಟ್ರಿಕ್ ನಂತರದ ಕೋರ್ಸ್‌ಗಳಲ್ಲಿ ಪ್ರಥಮ ಪ್ರಯತ್ನ ಪ್ರಥಮ ಶ್ರೇಣಿಯಲ್ಲಿ ಪಾಸಾದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಯಾವುದೇ ಆದಾಯ ಮಿತಿ ಇಲ್ಲದೇ ರೂ.35,000 ವರೆಗೆ ಪ್ರೈಜ್ ಮನಿ ನೀಡಲು ಪರಿಷ್ಕರಣೆ ಮಾಡಲಾಗಿದೆ
ಪ್ರಥಮ ಪ್ರಯತ್ನದಲ್ಲಿ, ಪ್ರಥಮ ಶ್ರೇಣಿಯಲ್ಲಿ ಪಾಸಾದ ಮೆಟ್ರಿಕ್ ಹಾಗೂ ಮೆಟ್ರಿಕ್ ನಂತರದ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳಿಗೆ ರೂ.35,000 ವರೆಗೆ ಪ್ರೊತ್ಸಾಹಧನವನ್ನು ನೀಡಲು, ಯಾವುದೇ ಆದಾಯ ಮಿತಿ ವಿಧಿಸದೆ ಪರಿಷ್ಕರಣೆ ಮಾಡಿ ಹೆಚ್ಚಿಸಲಾಗಿದೆ.
ಹೌದು. ಎಸ್‌ಎಸ್‌ಎಲ್‌ಸಿ ಮತ್ತು ಮೆಟ್ರಿಕ್ ನಂತರದ ವ್ಯಾಸಂಗದಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯು ನೀಡುವ ಪ್ರೋತ್ಸಾಹಧನವನ್ನು ಮೇಲಿನಂತೆ ಪರಿಷ್ಕರಿಸಿ, ನಿಯಮ ವಿಧಿಸಿದೆ.
ಎಸ್‌ಎಸ್‌ಎಲ್‌ಸಿ ಮತ್ತು ಮೆಟ್ರಿಕ್ ನಂತರದ ವ್ಯಾಸಂಗದಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗುವ ಎಸ್‌ಸಿ / ಎಸ್‌ಟಿ ವಿದ್ಯಾರ್ಥಿಗಳಿಗೆ ಈ ಹಿಂದೆ ಶೇಕಡ.60-74.99 ಅಂಕ ಪಡೆದಲ್ಲಿ ರೂ.7000 ವರೆಗೆ, ಮತ್ತು ಶೇಕಡ.75 ಕ್ಕಿಂತ ಹೆಚ್ಚಿನ ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ರೂ.15,000 ವರೆಗೆ ಒಂದು ಬಾರಿಗೆ ಈ ಹಿಂದೆ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಇದೀಗ ಪರಿಷ್ಕರಿಸಿ ಈ ಪ್ರೋತ್ಸಾಹಧನವನ್ನು ರೂ.35,000 ವರೆಗೆ ನೀಡಲಾಗುತ್ತಿದೆ ಎಂದು ಪರಿಷ್ಕರಿಸಲಾಗಿದೆ. ಇಲಾಖೆಯು ಯಾವುದೇ ಆದಾಯ ಮಿತಿ ನಿಗದಿ ಮಾಡಬಾರದು ಎಂದಿದೆ
ಯಾವ ಕೋರ್ಸ್‌ನವರಿಗೆ ಎಷ್ಟು ಪ್ರೋತ್ಸಾಹಧನ ಎಂದು ಕೆಳಗಿನಂತೆ ತಿಳಿಸಲಾಗಿದೆ.
ದ್ವಿತೀಯ ಪಿಯುಸಿ, 3 ವರ್ಷಗಳ ಪಾಲಿಟೆಕ್ನಿಕ್ ಡಿಪ್ಲೊಮ ಕೋರ್ಸ್‌ನವರಿಗೆ : ರೂ.20,000.
ಪದವಿ ಕೋರ್ಸ್‌ನವರಿಗೆ : ರೂ.25,000.
ಎಂಎ, ಎಂಎಸ್ಸಿ, ಇತರೆ ಸ್ನಾತಕೋತ್ತರ ಪದವಿ ಕೋರ್ಸ್‌ನವರಿಗೆ : ರೂ.30,000.
ಕೃಷಿ, ಇಂಜಿನಿಯರಿಂಗ್, ವೆಟರಿನರಿ, ಮೆಡಿಷನ್ ಕೋರ್ಸ್‌ನವರಿಗೆ : ರೂ.35,000.
ಅರ್ಜಿ ಸಲ್ಲಿಸಲು, ಅರ್ಜಿ ತಿದ್ದುಪಡಿ ಮಾಡಲು, ಕಾಲೇಜು / ವಿಶ್ವವಿದ್ಯಾಲಯಗಳ ಪಟ್ಟಿ ಚೆಕ್ ಮಾಡಲು, ಅರ್ಜಿಯ ಅಂಕಿ-ಅಂಶ ತಿಳಿಯಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿರಿ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31-12-2023
ಅರ್ಜಿ ಸಲ್ಲಿಸಲು ಅರ್ಹತೆಗಳು
ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಐಟಿಐ, ಡಿಪ್ಲೊಮ, ಸ್ನಾತಕೋತ್ತರ ಪದವಿ ಸೇರಿದಂತೆ ಯಾವುದೇ ಶಿಕ್ಷಣವನ್ನು ಪ್ರಥಮ ಪ್ರಯತ್ನದಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾದವರು ಅರ್ಜಿ ಸಲ್ಲಿಸಬಹುದು.
ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಪಡೆದು ಸಲ್ಲಿಸಬಹುದು.
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಹೊರತುಪಡಿಸಿ ಹೊರ ರಾಜ್ಯದ ಮುಕ್ತ ವಿವಿಗಳಲ್ಲಿ ಉತ್ತೀರ್ಣರಾಗಿದ್ದರೆ ಅರ್ಹತೆ ಇರುವುದಿಲ್ಲ.
ಪಿಯುಸಿ ನಂತರ ಐಟಿಐ ವ್ಯಾಸಂಗ ಮಾಡಿದ್ದರೆ ಅವರು ಸಹ ಅರ್ಹತೆ ಹೊಂದಿರುವುದಿಲ್ಲ.
ಗರಿಷ್ಠ ವಯೋಮಿತಿ 35 ವರ್ಷ ಮೀರಿರಬಾರದು.
ಪ್ರಾಕೃತಿಕ ವಿಕೋಪ, ಇನ್ನಿತರ ಅನಿಯಂತ್ರಿತ ಕಾರಣಗಳಿಗಾಗಿ ಪರೀಕ್ಷೆ ಬರೆಯದೇ ಕೇವಲ ತರಗತಿ ಅಂಕಗಳ ಆಧಾರದ ಮೇಲೆ ಅಂತಿಮ ವರ್ಷದಲ್ಲಿ ಪಾಸಾಗಿದ್ದರೆ ಅವರು ಅರ್ಹರಲ್ಲ
ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಪಾಸಾದ ಫಲಿತಾಂಶ ಶೀಟ್, ಜಾತಿ ಪ್ರಮಾಣ ಪತ್ರ, ಇತರೆ ದಾಖಲೆಗಳು.
ಆಯ್ಕೆ ಪ್ರಕ್ರಿಯೆ : ವಿದ್ಯಾರ್ಥಿಗಳು ಗಳಿಸಿದ ಅಂಕಗಳ ಆಧಾರದಲ್ಲಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿ ಪ್ರೋತ್ಸಾಹಧನ ವಿತರಣೆ ಮಂಜೂರು ಮಾಡಲಾಗುತ್ತದೆ.
