ಉತ್ತರ ಕೇಂದ್ರ ರೈಲ್ವೆಯಲ್ಲಿ ನೇಮಕಾತಿ: 1697 ಹುದ್ದೆಗೆ ಅರ್ಜಿ ಹಾಕಿ

 Railway Jobs For ITI Pass : ನಾರ್ಥ್‌ ಸೆಂಟ್ರಲ್ ರೈಲ್ವೆಯಲ್ಲಿ 1697 ಆಕ್ಟ್‌ ಅಪ್ರೆಂಟಿಸ್‌ ಪೋಸ್ಟ್‌ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಲು ಡಿಸೆಂಬರ್ 14 ಕೊನೆ ದಿನವಾಗಿದೆ. ಆಸಕ್ತರು ಕೊನೆ ಕ್ಷಣದವರೆಗೆ ಕಾಯದೇ ಆನ್‌ಲೈನ್‌ ರಿಜಿಸ್ಟ್ರೇಷನ್‌ ಪಡೆಯಿರಿ.



ಉತ್ತರ ಕೇಂದ್ರ ರೈಲ್ವೆ ವಲಯವು ತನ್ನ ವಿವಿಧ ಡಿವಿಷನ್‌ಗಳಲ್ಲಿ ಖಾಲಿ ಇದ್ದ ಅಪ್ರೆಂಟಿಸ್‌ ಪೋಸ್ಟ್‌ಗಳ ಭರ್ತಿಗೆ ಕಳೆದ ನವೆಂಬರ್‌ ನಲ್ಲಿ ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿತ್ತು. ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ 5 ದಿನಗಳು ಬಾಕಿ ಇವೆ. ಒಟ್ಟು 1697 ಆಕ್ಟ್‌ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಈ ನೇಮಕ ಪ್ರಕ್ರಿಯೆ ನಡೆಸಲಾಗುತ್ತಿದೆ. ಜಾನ್ಸಿ, ಪ್ರಯಾಗ್‌ರಾಜ್, ಆಗ್ರ, ವರ್ಕ್‌ಶಾಪ್‌ - ಜಾನ್ಸಿ ಡಿವಿಷನ್‌ಗಳಲ್ಲಿ ಹುದ್ದೆಗಳು ಇವೆ. ಆಸಕ್ತರು ಇನ್ನು ಅರ್ಜಿ ಸಲ್ಲಿಸದಿದ್ದಲ್ಲಿ, ಕೊನೆ ಕ್ಷಣದವರೆಗೆ ಕಾಯದೇ ಬೇಗ ಬೇಗ ಅರ್ಜಿ ಸಲ್ಲಿಸಿ.

ಉತ್ತರ ಕೇಂದ್ರ ರೈಲ್ವೆಯ ಡಿವಿಷನ್‌ವಾರು ಅಪ್ರೆಂಟಿಸ್‌ ಪೋಸ್ಟ್‌ಗಳ ಮಾಹಿತಿ

ಜಾನ್ಸಿ ಡಿವಿಷನ್ : 528

ಪ್ರಯಾಗ್‌ರಾಜ್ ಡಿವಿಷನ್ - ಮೆಕ್ಯಾನಿಕಲ್ ವಿಭಾಗ : 364

ಪ್ರಯಾಗ್‌ರಾಜ್ ಡಿವಿಷನ್ - ಇಲೆಕ್ಟ್ರಿಕಲ್ ವಿಭಾಗ : 339

ಆಗ್ರ ಡಿವಿಷನ್ : 296

ವರ್ಕ್‌ಶಾಪ್‌ ಜಾನ್ಸಿ ಡಿವಿಷನ್ : 170

ವಿದ್ಯಾರ್ಹತೆಗಳು

ಮೆಟ್ರಿಕ್ಯೂಲೇಷನ್‌ ಜತೆಗೆ ಹುದ್ದೆಗಳಿಗೆ ಅನುಗುಣವಾಗಿ ಮೆಕ್ಯಾನಿಕಲ್ / ಇಲೆಕ್ಟ್ರೀಷಿಯನ್/ ಇತರೆ ಟ್ರೇಡ್‌ಗಳಲ್ಲಿ ಐಟಿಐ ಪಾಸ್‌ ಮಾಡಿರಬೇಕು

ವಯಸ್ಸಿನ ಅರ್ಹತೆಗಳು

ಕನಿಷ್ಠ 15 ವರ್ಷ ತುಂಬಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.

ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಅರ್ಜಿ ಸಲ್ಲಿಸಲು ಇದೆ.

ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 15-11-2023

ಆನ್‌ಲೈನ್‌ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 14-12-2023 ರ ರಾತ್ರಿ 11-59 ಗಂಟೆವರೆಗೆ.

ಅರ್ಜಿ ಶುಲ್ಕ ರೂ.100

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ / ಪಿಹೆಚ್‌ /ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ನೇಮಕಾತಿ ವಿಧಾನ?

ಅಭ್ಯರ್ಥಿಗಳ ಮೆಟ್ರಿಕ್ಯೂಲೇಷನ್‌ ಶಿಕ್ಷಣದ ಶೇಕಡ.50 ಅಂಕಗಳು ಹಾಗೂ ಐಟಿಐ ಟ್ರೇಡ್‌ನ ಶೇಕಡ.50 ಅಂಕಗಳನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಶಾರ್ಟ್ ಲಿಸ್ಟ್‌ ಮಾಡಲಾಗುತ್ತದೆ. ನಂತರ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.

ಅಪ್ಲಿಕೇಶನ್‌ ಸಲ್ಲಿಸುವುದು ಹೇಗೆ?

ಅಭ್ಯರ್ಥಿಗಳು ಉತ್ತರ ಕೇಂದ್ರ ರೈಲ್ವೆಯ ಅಧಿಕೃತ ವೆಬ್‌ ಸೈಟ್‌ ವಿಳಾಸ www.rrcpryj.org ಕ್ಕೆ ಭೇಟಿ ನೀಡಿ, ಆನ್‌ಲೈನ್‌ ಮೂಲಕ ರಿಜಿಸ್ಟ್ರೇಷನ್ ಪಡೆಯಬೇಕು. ಮೆಟ್ರಿಕ್ಯೂಲೇಷನ್, ಐಟಿಐ ಪಾಸ್ ಸರ್ಟಿಫಿಕೇಟ್‌, ಜನ್ಮ ದಿನಾಂಕ ಮಾಹಿತಿ ಪ್ರಮಾಣ ಪತ್ರಗಳು, ಆಧಾರ್ ಕಾರ್ಡ್‌, ಇತರೆ ಮಾಹಿತಿ, ದಾಖಲೆಗಳನ್ನು ಅರ್ಜಿ ಸಲ್ಲಿಸುವ ವೇಳೆ ಅಪ್‌ಲೋಡ್ ಮಾಡಬೇಕಾಗುತ್ತದೆ.

ಅಪ್ರೆಂಟಿಸ್ ಹುದ್ದೆ ಅವಧಿ: 1 ವರ್ಷ.

ಅಪ್ರೆಂಟಿಸ್ ಹುದ್ದೆಗಳಿಗೆ ಮಾಸಿಕ ಸ್ಟೈಫಂಡ್ : ರೂ.8000-9000.


ಹೆಚ್ಚಿನ ವಿವರಗಳಿಗಾಗಿ ಈ ಕೆಳಗೆ ನೀಡಲಾದ ನೋಟಿಫಿಕೇಶನ್‌ ಲಿಂಕ್ ಕ್ಲಿಕ್, ನವೆಂಬರ್ 10, 2023 ರಂದು ಹೊರಡಿಸಲಾದ ಅಧಿಸೂಚನೆ ಲಿಂಕ್‌ ಕ್ಲಿಕ್ ಮಾಡಿ ಓದಿರಿ.


North Central Railway Apprentice Notification 2023

Apply Online

Previous Post Next Post