Charging Tips To Improve Battery Life: ಪ್ರತಿಯೊಬ್ಬರೂ ಮೊಬೈಲ್ ಚಾರ್ಜಿಂಗ್ ವಿಚಾರದಲ್ಲಿ ಒಂದಲ್ಲಾ ಒಂದು ತಪ್ಪು ಮಾಡೇ ಮಾಡುತ್ತಾರೆ. ಆದರೆ ಅನಿವಾರ್ಯ ಅಥವಾ ಅತಿ ಅವಶ್ಯಕವಲ್ಲದ ಹೊರತು ಈ ಕೆಳಗಿನ ತಪ್ಪುಗಳನ್ನು ಮಾಡಬೇಡಿ. ನಿಮ್ಮ ಸ್ಮಾರ್ಟ್‌ಫೋನ್ ಬ್ಯಾಟರಿ ಬಾಳಿಕೆ ಬರಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ.
ನಿಮ್ಮ ಸ್ಮಾರ್ಟ್‌ಫೋನ್ ಕಂಪನಿಯ ಚಾರ್ಜರ್ ಅನ್ನೇ ಯಾವಾಗಲೂ ಬಳಸಿ. ಬೇರೆ ಮೊಬೈಲ್ಗಳ ಚಾರ್ಜರ್ ಬಳಸಬೇಡಿ.
ಅತಿ ಅವಶ್ಯಕ ಇಲ್ಲದ ಹೊರತು ಫಾಸ್ಟ್ ಚಾರ್ಚರ್ ಹಾಗೂ ಪವರ್ ಬ್ಯಾಂಕ್ ಬಳಸಬೇಡಿ.
ಉಳಿದ ಸಮಯದಲ್ಲಿ ಬೇಗ ಚಾರ್ಜ್ ಆಗಬೇಕು ಅಂದ್ರೆ ನಿಮ್ಮ ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಅಥವಾ ಏರೊಪ್ಲೇನ್ ಮೋಡ್ಗೆ ಹಾಕಿ ಚಾರ್ಜ್ ಮಾಡಿ.
ನಿಮ್ಮ ಮೊಬೈಲ್ ಬ್ಯಾಟರಿ ಸಂಪೂರ್ಣವಾಗಿ ಖಾಲಿಯಾಗಲು ಬಿಡಬೇಡಿ. ಇದು ಬ್ಯಾಟರಿ ಅವಧಿಯನ್ನು ಕಡಿಮೆ ಮಾಡುತ್ತದೆ.
ರಾತ್ರಿ ಚಾರ್ಜ್ ಹಾಕಿ ಮಲಗುವ ಅಭ್ಯಾಸ ಬಿಟ್ಟುಬಿಡಿ. ಓವರ್ ಚಾರ್ಜಿಂಗ್ ಬ್ಯಾಟರಿಯೊಳಗೆ ಶಾಖವನ್ನು ಉತ್ಪಾದಿಸುತ್ತದೆ. ಇದು ಬ್ಯಾಟರಿಗೆ ಹಾನಿಯುಂಟು ಮಾಡುತ್ತದೆ.
ನಿಮ್ಮ ಮೊಬೈಲ್ನಲ್ಲಿ ನೀವು ಬಳಸದ ವೇಳೆ ಕೂಡ ಅನೇಕ ಅಪ್ಲಿಕೇಶನ್ಗಳು ಓಪನ್ ಇದ್ದರೆ ಇದು ಚಾರ್ಜ್ ಕಬಳಿಸುತ್ತದೆ. ಹೀಗಾಗಿ ಬಳಸದ ವೇಳೆ ಟ್ಯಾಬ್ಗಳನ್ನು, ಆ್ಯಪ್ಗಳನ್ನು ಕ್ಲೋಸ್ ಮಾಡಿ.

