ವಿವೋ ಫೋನ್‌ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿ!..ಇದು ಬೆಸ್ಟ್‌ ಆಫರ್‌!

ವಿವೋ ಮೊಬೈಲ್‌ ಸಂಸ್ಥೆಯು ಈಗಾಗಲೇ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಈ ಸಂಸ್ಥೆಯ ಭಿನ್ನ ಬೆಲೆಯ ರೇಂಜ್‌ನಲ್ಲಿ ಹಲವು ಮಾಡೆಲ್‌ ಮೊಬೈಲ್‌ಗಳನ್ನು ಪರಿಚಯಿಸಿ ಗ್ರಾಹಕರಿಂದ ಸೈ ಎನಿಸಿಕೊಂಡಿದೆ. ಆ ಪೈಕಿ ವಿವೋ V29e 5G ಫೋನ್‌ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಸಖತ್‌ ಡಿಸ್ಕೌಂಟ್‌ ಪಡೆದುಕೊಂಡಿದೆ.



ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ನಲ್ಲಿ ವಿವೋ ವಿವೋ V29e 5G ಮೊಬೈಲ್‌ ಶೇ. 15% ರಷ್ಟು ಡಿಸ್ಕೌಂಟ್‌ ದರದಲ್ಲಿ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ಫೋನಿನ 8 GB RAM + 128 GB ವೇರಿಯಂಟ್‌ ಫೋನ್‌ ಈಗ 26,999ರೂ. ಗಳ ರಿಯಾಯಿತಿ ದರದಲ್ಲಿ ಲಭ್ಯ ಇದೆ. ಹಾಗೆಯೇ ಇದರೊಂದಿಗೆ ಬ್ಯಾಂಕ್‌ ಆಫರ್‌ ಸಹ ಖರೀದಿದಾರರಿಗೆ ಲಭ್ಯ ಆಗಲಿವೆ.

ಇನ್ನು ವಿವೋ V29e 5G ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆನ್ಸಾರ್ ರಚನೆ ಒಳಗೊಂಡಿದ್ದು, ಮೊದಲ ಕ್ಯಾಮೆರಾವು 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ಪಡೆದಿದೆ. ಇದರ ಸೆಲ್ಫಿ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನಲ್ಲಿದೆ. ಹಾಗೆಯೇ ಈ ಫೋನ್‌ 5000 mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಇನ್ನುಳಿದಂತೆ ವಿವೋ V29e 5G ಮೊಬೈಲ್‌ನ ಇತರೆ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಡಿಸ್‌ಪ್ಲೇ ಹಾಗೂ ವಿನ್ಯಾಸ

ವಿವೋ V29e 5G ಸ್ಮಾರ್ಟ್‌ಫೋನ್‌ 6.73 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಇದರ ಡಿಸ್‌ಪ್ಲೇಯು 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಸೆಲ್ಫಿ ಕ್ಯಾಮೆರಾ ಉದ್ದೇಶಕ್ಕಾಗಿ ಮುಂಭಾಗದಲ್ಲಿ ಪಂಚ್ ಹೋಲ್‌ ಕಟೌಟ್ ಒದಗಿಸಲಾಗಿದ್ದು, ಡಿಸ್‌ಪ್ಲೇ ಆಕರ್ಷಕ ಎನಿಸುತ್ತದೆ.

ಪ್ರೊಸೆಸರ್‌ ಯಾವುದು

ವಿವೋದ ಈ ಫೋನ್‌ ಕ್ವಾಲ್ಕಾಮ್ ಸ್ನ್ಯಾಪ್ ಡ್ರ್ಯಾಗನ್ 695 SoC ಪ್ರೊಸೆಸರ್‌ ಪವರ್‌ನಲ್ಲಿ ಕಾರ್ಯ ನಿರ್ವಹಿಸಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 13 ಆಧಾರಿತ ಫನ್‌ಟಚ್‌ ಓಎಸ್‌ ಸಪೋರ್ಟ್‌ ಪಡೆದಿದೆ. ಇದರ ಜೊತೆಗೆ 128GB ಹಾಗೂ 256GB ಆಂತರೀಕ ಸ್ಟೋರೇಜ್ ಆಯ್ಕೆಯ ಜೊತೆಗೆ 8GB RAM ಸಪೋರ್ಟ್‌ ಪಡೆದಿದೆ.

ಕ್ಯಾಮೆರಾ ಸೆನ್ಸಾರ್‌ ಸೌಲಭ್ಯ

ವಿವೋ V29e 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್ ಕ್ಯಾಮೆರಾ ಆಯ್ಕೆ ಒಳಗೊಂಡಿದ್ದು, ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ OIS ಸೌಲಭ್ಯ ಪಡೆದಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಕ್ಯಾಮೆರಾ ಪಡೆದಿದೆ. ಇನ್ನು ಸೆಲ್ಫಿಗಾಗಿ 50 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಹಾಗೆಯೇ ಪೋರ್ಟ್ರೇಟ್, ಮೈಕ್ರೋ ಮೂವಿ, ಹೈ-ರೆಸಲ್ಯೂಶನ್, ಪ್ಯಾನೋ, ಸ್ಲೋ ಮೋಷನ್, ಡಬಲ್ ಎಕ್ಸ್‌ಪೋಸರ್, ಡ್ಯುಯಲ್ ವ್ಯೂ, ಸೂಪರ್‌ಮೂನ್ ಮತ್ತು ಲೈಟ್ ಎಫೆಕ್ಟ್‌ ಆಯ್ಕೆ ಕಾಣಬಹುದು.

ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ

ವಿವೋದ ಈ ಮೊಬೈಲ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಅದಕ್ಕೆ ಪೂರಕವಾಗಿ 44W ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಹಾಗೆಯೇ ಇದು 5G, ಟೈಪ್ ಟಿ ಚಾರ್ಜಿಂಗ್ ಪೋರ್ಟ್, ಡ್ಯುಯಲ್-ಸಿಮ್ ಕಾರ್ಡ್ ಸ್ಲಾಟ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಸೇರಿದಂತೆ, ಅಗತ್ಯ ಕನೆಕ್ಟಿವಿಟಿ ಫೀಚರ್ಸ್‌ ಆಯ್ಕೆ ಒಳಗೊಂಡಿದೆ.

ಮೆಮೊರಿ ಹಾಗೂ ಕಲರ್ ಆಯ್ಕೆ

ವಿವೋದ ಈ ಮೊಬೈಲ್‌ 8GB RAM ಜೊತೆಗೆ 128GB ಮತ್ತು 256GB ಆಂತರೀ ಸ್ಟೋರೇಜ್‌ ವೇರಿಯಂಟ್‌ಗಳನ್ನು ಪಡೆದಿದೆ. ಇನ್ನು ಈ ಫೋನ್‌ ಕೆಂಪು ಅಥವಾ ನೀಲಿ ಬಣ್ಣದಲ್ಲಿ ಈ ಫೋನ್‌ಗಳಿದ್ದು, ಆರ್ಟಿಸ್ಟಿಕ್ ರೆಡ್ ಆಯ್ಕೆ ಪಡೆದಿದೆ.


Previous Post Next Post