ಗ್ಯಾಸ್ ಸಿಲೆಂಡರ್(Gas cylinder) ಹೊಂದಿರುವವರಿಗೆ ಒಂದು ಮಹತ್ತರವಾದ ಮಾಹಿತಿ. ನೀವೇನಾದರೂ ಗ್ಯಾಸ್ ಸಿಲೆಂಡರ್ ಗಳನ್ನು ಹೊಂದಿದ್ದು ಅದರಿಂದ ಸಬ್ಸಿಡಿ (Subsidy) ಯನ್ನು ಪಡೆಯುತ್ತಿದ್ದರೆ ನೀವು ಈ ವಿಷಯವನ್ನು ತಿಳಿದುಕೊಳ್ಳಲೇಬೇಕು. ಅದೇನೆಂದರೆ ಸರ್ಕಾರವು ಗ್ಯಾಸ್ ಸಿಲಿಂಡರಿನ ಸಬ್ಸಿಡಿಯ (LPG Cylinder) ಹಣವನ್ನು ಪಡೆದುಕೊಳ್ಳುವುದನ್ನು ಮುಂದುವರಿಸಬೇಕಾಗಿದ್ದಲ್ಲಿ, ಇ-ಕೆ ವೈ ಸಿ(e-kyc) ಯನ್ನು ಮಾಡಿಕೊಳ್ಳುವುದು ಕಡ್ಡಾಯ ಎಂದು ಘೋಷಿಸಿದೆ. ಗ್ಯಾಸ್ ಸಿಲೆಂಡರ್ e-kyc ಹೇಗೆ ಮಾಡಿಸಿಕೊಳ್ಳುವುದು?, ಇಲ್ಲದಿದ್ದರೆ ಏನಾಗುತ್ತದೆ?, ಹಾಗೂ ಯಾವ ದಿನಾಂಕದ ಒಳಗೆ e-kyc ಮಾಡಿಸಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವರದಿಯಲ್ಲಿ ನೀಡಲಾಗಿದೆ. ಹಾಗಾಗಿ ಈ ವರದಿಯನ್ನು ಕೊನೆವರೆಗೂ ಓದಿ.
ಗ್ಯಾಸ್ ಸಿಲಿಂಡರ್ ಇ ಕೆವೈಸಿ ಕಡ್ಡಾಯ :
ಭಾರತ ಸರ್ಕಾರದ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಗ್ಯಾಸ್ ಸಿಲಿಂಡರಿಗೆ e-kyc ಮಾಡಿಸುವುದು ಕಡ್ಡಾಯ ಎಂದು ಘೋಷಿಸಿದೆ. e-kyc ಮಾಡಿಸದಿದ್ದರೆ ಸದ್ಯ ದೊರೆಯುತ್ತಿರುವ ಸಬ್ಸಿಡಿ ನಿಲ್ಲುತ್ತದೆ. ಸರ್ಕಾರವು e-kyc ಮಾಡಿಸಲು ಈಗಾಗಲೇ ನವಂಬರ್ 25 ರಿಂದ ಅವಕಾಶವನ್ನು ನೀಡಿದೆ. ಇ – ಕೆವೈಸಿಯನ್ನು ಮಾಡಿಸಲು ಡಿಸೆಂಬರ್ 31ರವರೆಗೂ ಅವಕಾಶವಿದೆ, 31ನೇ ಡಿಸೆಂಬರ್ ಒಳಗೆ ಇ-ಕೆವೈಸಿ ಮಾಡಿಸದಿದ್ದರೆ ನಿಮಗೆ ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಗಳಿಗೆ ದೊರೆಯುತ್ತಿದ್ದ ಸಬ್ಸಿಡಿಯು ಕಡಿತಗೊಳ್ಳುತ್ತದೆ. ಇದುವರೆಗೂ ಕೇವಲ ಅರ್ಧದಷ್ಟು ಜನರು ಕೂಡ ಇ-ಕೆವೈಸಿ ಯನ್ನು ಮಾಡಿಸದಿರುವುದ ನ್ನು ಸರ್ಕಾರವು ಗಮನಿಸಿ, ಕೂಡಲೇ ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ಘೋಷಿಸಿದೆ.
ಎಲ್‌ಪಿಜಿ ಗ್ಯಾಸ್‌ನ ಇ-ಕೆವೈಸಿ ಮಾಡಿಸುವುದು ಸರ್ಕಾರದ ಕಡೆಯಿಂದ ಕಡ್ಡಾಯವಾಗಿದೆ, ಏಕೆಂದರೆ ಅರ್ಹವುಳ್ಳ ಜನರಿಗೆ ಮಾತ್ರ ಈ ಸಬ್ಸಿಡಿಯ ಸಹಾಯಧನವು ದೊರೆಯಬೇಕು. ಕೆಲವು ಜನರು ಅರ್ಹತೆ ಇಲ್ಲದಿದ್ದರೂ ಕೂಡ ವಂಚನೆಯಿಂದ ಸಹಾಯಧನವನ್ನು ಪಡೆದುಕೊಳ್ಳುತ್ತಿದ್ದಾರೆ. ಇಂತಹ ವಚನಗಳನ್ನು ತಡೆಗಟ್ಟಲು ಸರ್ಕಾರವು ಈ ಮಹಾತರ ಕಾರ್ಯವನ್ನು ಕೈಗೊಂಡಿದೆ.
ಇ-ಕೆವೈಸಿ ಯನ್ನು ಎಲ್ಲಿ ಯಾವಾಗ ಮಾಡಿಸಿಕೊಳ್ಳಬೇಕು?:
ಹೊಸ LPG ಬಯೋಮೆಟ್ರಿಕ್ ವಿಧಾನದ ಮೂಲಕ KYC ಅನ್ನು ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ನೀವು ನಿಮ್ಮ ಹತ್ತಿರದ ಗ್ಯಾಸ್ ಸಂಪರ್ಕದ ಡೀಲರ್ ಕಚೇರಿಗೆ ಭೇಟಿ ನೀಡಬೇಕು. ನಿಮ್ಮ ಆಧಾರ್ ಕಾರ್ಡ್ ಮತ್ತು ಗ್ಯಾಸ್ ಸಂಪರ್ಕದ ನಕಲು ಪ್ರತಿಯನ್ನು ನೀವು ಕೊಂಡೊಯ್ಯಬೇಕಾಗುತ್ತದೆ. ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ e-KYC ಮಾಡಿಕೊಡಲಾಗುವುದು. ಇದು ಕಡ್ಡಾಯವಾಗಿರುವುದರಿಂದ ಸಮಯವನ್ನು ವ್ಯರ್ಥ ಮಾಡದೆ ಕೂಡಲೇ ಡಿಸೆಂಬರ್ 31ರ ಒಳಗೆ ಗ್ಯಾಸ್ ಸಿಲಿಂಡರಿನ ಇ-ಕೆ ವೈ ಸಿ ಯನ್ನು ಮಾಡಿಸಿಕೊಳ್ಳಿ. ಹಾಗೆಯೇ ಇಂತಹ ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ಕೂಡಲೇ ನಿಮ್ಮೆಲ್ಲ ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.