2022ನೇ ಸಾಲಿನಲ್ಲಿ ಅಧಿಸೂಚಿಸಲಾದ ಮೂರು ಸಾವಿರಕ್ಕೂ ಹೆಚ್ಚು ಆರ್ಮ್ಡ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ, ಇಲಾಖೆಯು ಲಿಖಿತ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. 2024 ರ ಜನವರಿ 28 ರಂದು ಪರೀಕ್ಷೆ ನಡೆಸಲು ನಿರ್ಧರಿಸಿದೆ.
3064 armed police constable written exam date fixed
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 2022-23ನೇ ಸಾಲಿನ 3064 NKK ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ ಡಿಎಆರ್) (ಪುರುಷ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಗೆ ಕೇಂದ್ರಗಳ ನಿಯೋಜನೆ ಹಾಗೂ ಇತರೆ ಸಿದ್ಧತೆಗಳಿಗೆ ಮುಂದಾಗಿದೆ. ಜತೆಗೆ ಲಿಖಿತ ಪರೀಕ್ಷೆ ದಿನಾಂಕವನ್ನು ನಿಗದಿಪಡಿಸಿದೆ.
ಇಲಾಖೆಯು ದಿನಾಂಕ 28-01-2024 ರಂದು ಲಿಖಿತ ಪರೀಕ್ಷೆ ನಡೆಸಲು ಉದ್ದೇಶಿಸಿದೆ. ಎಲ್ಲ ಸಿದ್ಧತೆಗಳು ನಿಯೋಜನೆಯಂತೆ ಆದಲ್ಲಿ ಈ ದಿನಾಂಕವೇ ಅಂತಿಮವಾಗಲಿದೆ. ಸದರಿ ದಿನಾಂಕವನ್ನು ಸ್ಪರ್ಧಾತ್ರಿಗಳ ಗಮನಕ್ಕಾಗಿ ಬಿಡುಗಡೆ ಮಾಡಿಲ್ಲ. ಪೊಲೀಸ್ ಇಲಾಖೆಯು ಒಟ್ಟು 8 ಡಿವಿಷನ್‌ಗಳ ವ್ಯಾಪ್ತಿಯಲ್ಲಿ ಪರೀಕ್ಷೆ ನಡೆಸಲಿದೆ.
ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ಅತ್ಯಗತ್ಯವೇ?
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪ್ರವೇಶ ಪತ್ರವನ್ನು, ಪರೀಕ್ಷೆಗೆ ಒಂದು ವಾರ ಮುಂಚಿತವಾಗಿ ಡೌನ್‌ಲೋಡ್ ಮಾಡಲು ಅವಕಾಶ ನೀಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್ ನಂಬರ್, ಜನ್ಮ ದಿನಾಂಕ ಮಾಹಿತಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ಲಿಖಿತ ಪರೀಕ್ಷೆ ಹೇಗಿರುತ್ತದೆ?
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ 100 ಅಂಕಗಳಿಗೆ ವಸ್ತುನಿಷ್ಠ ಮಾದರಿಯ ಕನ್ನಡ / ಇಂಗ್ಲಿಷ್ ಭಾಷೆಯ ಪ್ರಶ್ನೆ ಪತ್ರಿಕೆ ಇರುತ್ತದೆ. ಸರಿ ಉತ್ತರಕ್ಕೆ 1 ಅಂಕ, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ ಕಳೆಯಲಾಗುತ್ತದೆ. ಪರೀಕ್ಷೆ ಅವಧಿ 01 ಗಂಟೆ 30 ನಿಮಿಷ ಇರುತ್ತದೆ.
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಅಂತಿಮ ಆಯ್ಕೆಪಟ್ಟಿ ಸಿದ್ಧತೆ ಹೇಗೆ?
ಲಿಖಿತ ಪರೀಕ್ಷೆ ನಂತರ ನಡೆಸಲಾಗುವ ಸಹಿಷ್ಣುತೆ ಪರೀಕ್ಷೆ ಹಾಗೂ ದೇಹದಾರ್ಢ್ಯತೆ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವ ಅಭ್ಯರ್ಥಿಗಳಲ್ಲಿ, ಅಧಿಸೂಚಿಸಲಾದ ಹುದ್ದೆಗಳನುಸಾರ ಮೆರಿಟ್ ಹಾಗೂ ಮೀಸಲಾತಿಗನುಗುಣವಾಗಿ 1:1 ಅನುಪಾತದಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ತಾತ್ಕಾಲಿಕ ಆಯ್ಕೆಪಟ್ಟಿಯ ಎಲ್ಲಾ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
ಈ ಪರೀಕ್ಷೆಯಲ್ಲಿ
ದೃಷ್ಟಿ: ದೂರದ ದೃಷ್ಟಿ, ಸಮೀಪದ ದೃಷ್ಟಿ ಪರೀಕ್ಷೆ.
ಶ್ರವಣ ಶಕ್ತಿ: ರಿನ್ನೇಸ್ ಪರೀಕ್ಷೆ, ವೆಬ್ಬರ್ ಪರೀಕ್ಷೆ, ವೆರ್ಟಿಗೋ ಪರೀಕ್ಷೆ.
ಅಪಧಮನಿ ಊತ ಸಹ ಅನರ್ಹತೆ.
ಮಾತಿನಲ್ಲಿ ಅಡಚಣೆ ಸಹ ಅನರ್ಹತೆ.
ಎದೆಯ ಕ್ಷ-ಕಿರಣವನ್ನು ಪರೀಕ್ಷೆಗೆ ತೆಗೆದುಕೊಳ್ಳಲಾಗುವುದು.
ಈ ಮೇಲಿನ ವೈದ್ಯಕೀಯ ಪರೀಕ್ಷೆ ವರದಿಯನ್ನಾದರಿಸಿ ಪೊಲೀಸ್ ಇಲಾಖೆ ಅಂತಿಮ ಆಯ್ಕೆಪಟ್ಟಿಯನ್ನು ಸಿದ್ಧಪಡಿಸಿ ಬಿಡುಗಡೆ ಮಾಡುತ್ತದೆ.
ಕರ್ನಾಟಕ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ವೇತನ ಎಷ್ಟು?
ಕರ್ನಾಟಕ ಪೊಲೀಸ್ ಇಲಾಖೆ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆ, ನಗರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ನಿಯೋಗ ಮಾಡುವ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗೆ ವೇತನ ಶ್ರೇಣಿ ರೂ.23,500 - 47,650 ವರೆಗೆ.
ಈ ಹುದ್ದೆಯಲ್ಲಿಯೇ ನಿವೃತ್ತಿ ವೇಳೆ ವರೆಗೂ ಮುಂದುವರೆಯುವವರಿಗೆ ಬೇಸಿಕ್ ಪೇ (ಮೂಲ ವೇತನ) ರೂ.23500 ರಿಂದ 47650 ವರೆಗೆ ಇರುತ್ತದೆ. ಪ್ರತಿ ಮೂಲ ವೇತನದ ಜತೆಗೆ ಮನೆ ಬಾಡಿಗೆ ಭತ್ಯೆ, ಪ್ರಯಾಣ ಭತ್ಯೆ, ವಿಶೇಷ ಭತ್ಯೆ, ಇತರೆ ಹಲವು ಭತ್ಯೆಗಳು ಸೇರಲಿವೆ.
ವಾರ್ಷಿಕವಾಗಿ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ ಅಭ್ಯರ್ಥಿಗೆ ಆರಂಭದಲ್ಲೇ ಬೇಸಿಕ್ ಪೇ ಮಾತ್ರ ರೂ.2,82,000 ಇರುತ್ತದೆ. ಇದರ ಜತೆಗೆ ಇತರೆ ಎಲ್ಲ ಭತ್ಯೆಗಳ ಹಣವು ಸೇರ್ಪಡೆ ಆಗುತ್ತದೆ. ಮನೆ ಬಾಡಿಗೆ ಭತ್ಯೆ ನಿಯೋಜನೆಗೊಳ್ಳುವ ಸ್ಥಳದ ಆಧಾರಿತವಾಗಿರುತ್ತದೆ.
