ಜನವರಿ 21 ರಂದು ವಿಶೇಷ ಚೇತನರ ಸಾಮೂಹಿಕ ವಿವಾಹವನ್ನು ಹಮ್ಮಿಕೊಳ್ಳಲಾಗಿದ್ದು, ಈ ಬಾರಿ 50 ಜೋಡಿಗಳಿಗೆ ವಿವಾಹ ಮಾಡಿಸುವ ಸಂಕಲ್ಪ ಮಾಡಲಾಗಿದೆ.
ಕೊಪ್ಪಳ: ಎಲ್ಲ ಇದ್ದೂ ಮದುವೆಯಾಗಲು (Marriage) ಬಯಸುವ ಯುವಕರಿಗೆ ವಧು ಸಿಗದ ಕಾಲ ಇದು, ಆದರೆ ಗವಿಮಠದ ಜಾತ್ರೆಯಲ್ಲಿ (Shree Gavisiddeshwara Matha) ವಿಶೇಷ ಚೇತನರಿಗೆ ಕಂಕಣ ಭಾಗ್ಯ ಕೂಡಿಬರಲಿದೆ.
ಜನವರಿ 27 ರಂದು ಶ್ರೀ ಗವಿಸಿದ್ದೇಶ್ವರ ಜಾತ್ರೆ ನಡೆಯಲಿದ್ದು, ಜಾತ್ರಾ ಸಂದರ್ಭದಲ್ಲಿ ವಿಶೇಷ ಸಾಮಾಜಿಕ ಕಾರ್ಯಗಳಿಗೆ ಗವಿಮಠ ಮುನ್ನುಡಿ ಹಾಕಲು ಸಿದ್ಧತೆ ನಡೆಸಿದೆ.
ಹಲವಾರು ಸಾಮಾಜಿಕ ಕಾರ್ಯಗಳನ್ನು ನಡೆಸುವ ಮಠ
ಈ ಹಿಂದೆ ರಕ್ತದಾನ, ದೇಹದಾನ, ಪರಿಸರ- ಕೆರೆ ಉಳಿಸುವ ಕಾರ್ಯ, ವಿಧವಾ-ವಿಧುರ ಮರುವಿವಾಹ ಹೀಗೆ ಹಲವಾರು ಸಾಮಾಜಿಕ ಕಾರ್ಯಗಳನ್ನು ಗವಿಮಠ ನಡೆಸಿತ್ತು. ಈ ಬಾರಿಯ ಜಾತ್ರೆಯಲ್ಲಿ ವಿಶೇಷ ಚೇತನರಿಗೆ ವಿವಾಹ ಭಾಗ್ಯ ಕಲ್ಪಿಸಲು ಮುಂದಾಗಿದೆ.
ಜನವರಿ 21 ರಂದು ವಿಶೇಷ ಚೇತನರ ಸಾಮೂಹಿಕ ವಿವಾಹವನ್ನು ಹಮ್ಮಿಕೊಳ್ಳಲಾಗಿದ್ದು, ಈ ಬಾರಿ 50 ಜೋಡಿಗಳಿಗೆ ವಿವಾಹ ಮಾಡಿಸುವ ಸಂಕಲ್ಪ ಮಾಡಲಾಗಿದೆ. ಈಗಾಗಲೇ 18 ಜೋಡಿಗಳು ವಿವಾಹಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಹೆಚ್ಚಿನ ಮಾಹಿತಿಗಾಗಿ ಅಥವಾ ವಿಶೇಷ ಚೇತನರು ಮದುವೆಗಾಗಿ ನೋಂದಣಿ ಮಾಡಿಸಲು ನಾಗರಾಜ ದೇಸಾಯಿ - 9448263019 (ಮುಖ್ಯಸ್ಥರು, ಸರ್ವೋದಯ ಸಂಸ್ಥೆ, ಕೊಪ್ಪಳ), ಅಥವಾ ಮಲ್ಲಿಕಾರ್ಜುನ ವೈ ಪೂಜಾರ - 9901501235 (ಜಿಲ್ಲಾಧ್ಯಕ್ಷರು ವಿಕಲಚೇತನರ ಒಕ್ಕೂಟ ಕೊಪ್ಪಳ) ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸುವಂತೆ ಮಾಹಿತಿ ನೀಡಲಾಗಿದೆ.