540 ಅರಣ್ಯ ರಕ್ಷಕರ ಭರ್ತಿಗೆ ಅಧಿಸೂಚನೆ: ಆಯ್ಕೆ ಪ್ರಕ್ರಿಯೆಯ ಕಂಪ್ಲೀಟ್‌ ಡೀಟೇಲ್ಸ್‌ ತಿಳಿಯಿರಿ

 KFD Forest Guard Jobs: ಕರ್ನಾಟಕ ಫಾರೆಸ್ಟ್‌ ಡಿಪಾರ್ಟ್‌ಮೆಂಟ್‌ ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳಂತೆ ಅರಣ್ಯ ರಕ್ಷಕ) ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಸಂಪೂರ್ಣ ಮಾಹಿತಿ ತಿಳಿದು ಅರ್ಜಿ ಸಲ್ಲಿಸಿ.



ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 (506 ಸರ್ಕಾರವು ಅನುಮತಿಸಿದ ಹುದ್ದೆ +34 ಹಿಂದಿನ ಅಧಿಸೂಚನೆಯಲ್ಲಿನ ಹಿಂಬಾಕಿ ಹುದ್ದೆಗಳು) ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳಂತೆ 'ಅರಣ್ಯ ರಕ್ಷಕ) ಗ್ರೂಪ್‌ 'ಸಿ' ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅರ್ಹ ಮತ್ತು ಆಸಕ್ತರಿಂದ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ಹುದ್ದೆಗಳಿಗೆ ಡಿಸೆಂಬರ್ 01 ರಿಂದ ಅರ್ಜಿ ಸ್ವೀಕಾರ ಆರಂಭವಾಗಲಿದೆ. ಡಿಸೆಂಬರ್ 30 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತಿದೆ. ಅರ್ಹತೆ, ವೇತನ ಶ್ರೇಣಿ, ಇತರೆ ಮಾಹಿತಿಗಳನ್ನು ಕೆಳಗಿನಂತೆ ತಿಳಿಸಲಾಗಿದೆ.

ನೇಮಕಾತಿ ಪ್ರಾಧಿಕಾರ : ಕರ್ನಾಟಕ ಅರಣ್ಯ ಇಲಾಖೆ

ಹುದ್ದೆ ಹೆಸರು : ಅರಣ್ಯ ರಕ್ಷಕರು (ಗಸ್ತು ಅರಣ್ಯ ಪಾಲಕರು)

ಒಟ್ಟು ಹುದ್ದೆಗಳ ಸಂಖ್ಯೆ : 540

ಅರ್ಜಿ ಸಲ್ಲಿಸಲು ಭೇಟಿ ನೀಡಬೇಕಾದ ವೆಬ್‌ಸೈಟ್‌ ವಿಳಾಸ : https://kfdrecruitment.in/

ಅರಣ್ಯ ರಕ್ಷಕರ ಹುದ್ದೆಗೆ ಶೈಕ್ಷಣಿಕ ಅರ್ಹತೆ

ಅಧಿಸೂಚನೆಯ ದಿನಾಂಕದೊಳಗೆ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ಶೈಕ್ಷಣಿಕ ಅರ್ಹತೆ ಪಾಸ್‌ ಮಾಡಿರಬೇಕು. ಅರ್ಜಿ ಸಲ್ಲಿಕೆ ವೇಳೆ ಆನ್‌ಲೈನ್‌ನಲ್ಲಿ ಅಂಕಪಟ್ಟಿಗಳ ಅಪ್‌ಲೋಡ್‌ ಮಾಡಬೇಕಿರುತ್ತದೆ.

ಅರಣ್ಯ ರಕ್ಷಕರ ಹುದ್ದೆಗೆ ವಯಸ್ಸಿನ ಅರ್ಹತೆ

ಅಧಿಸೂಚನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ಪೂರೈಸಿರಬೇಕು. ಗರಿಷ್ಠ ವಯೋಮಿತಿ SC / ST / CAT-1 ಅಭ್ಯರ್ಥಿಗಳಿಗೆ 32 ವರ್ಷ, ಓಬಿಸಿ ಅಭ್ಯರ್ಥಿಗಳಿಗೆ 30 ವರ್ಷ, ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳಿಗೆ 27 ವರ್ಷ ನಿಗದಿಪಡಿಸಲಾಗಿದೆ.

ಅರಣ್ಯ ರಕ್ಷಕರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ?

ಅರಣ್ಯ ರಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿದವರ ವಿದ್ಯಾರ್ಹತೆ ಅಂಕಗಳ ಆಧಾರದಲ್ಲಿ ಮೀಸಲಾತಿಗೆ ಅನುಗುಣವಾಗಿ ಮತ್ತು ವೃತ್ತವಾರು ಹುದ್ದೆಗಳಿಗೆ ಅನುಗುಣವಾಗಿ 1:20 ಅನುಪಾತದಲ್ಲಿ ದೇಹದಾರ್ಢ್ಯತೆ, ದೈಹಿಕ ತಾಳ್ವಿಕೆ ಮತ್ತು ದೈಹಿಕ ಕಾರ್ಯ ಸಮರ್ಥತೆ ಪರೀಕ್ಷೆಗಳಿಗೆ ಅರ್ಹತಾ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ನಿಗದಿಪಡಿಸಿದ ದಿನಾಂಕದಂದು ಈ ಪರೀಕ್ಷೆಗಳಿಗೆ ಪ್ರವೇಶ ಪತ್ರದೊಂದಿಗೆ ಹಾಜರಾಗಬೇಕು. ಈ ಮಾರ್ಗದಲ್ಲಿ ಆಯ್ಕೆ ಪ್ರಕ್ರಿಯೆಗಳು ಇರುತ್ತವೆ.

ಅರಣ್ಯ ರಕ್ಷಕರ ಹುದ್ದೆಗೆ ವೇತನ ಶ್ರೇಣಿ

ಅರಣ್ಯ ರಕ್ಷಕ ಹುದ್ದೆಗಳಿಗೆ ವೇತನ ಶ್ರೇಣಿ ರೂ.18,600 - 32,600 ವರೆಗೆ ನೀಡಲಾಗುತ್ತದೆ. ಅಲ್ಲದೇ ಪಿಂಚಣಿ ಸೌಲಭ್ಯ, ವಿಶೇಷ ಭತ್ಯೆಗಳನ್ನು ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು

ಅರ್ಜಿ ಸ್ವೀಕಾರ ಆರಂಭ ದಿನಾಂಕ : 01-12-2023

ಅರ್ಜಿ ಸ್ವೀಕರಿಸುವ ಕೊನೆ ದಿನಾಂಕ: 30-12-2023

ಉದ್ಯೋಗ ವಿವರ

INR 18600 to 32600 /Month

ಹುದ್ದೆಯ ಹೆಸರು               ಅರಣ್ಯ ರಕ್ಷಕರು

ವಿವರ                        ಅರಣ್ಯ ಇಲಾಖೆ ಅಧಿಸೂಚನೆ

ಪ್ರಕಟಣೆ ದಿನಾಂಕ                 2023-11-30

ಕೊನೆ ದಿನಾಂಕ                         2023-12-30

ಉದ್ಯೋಗ ವಿಧ                          ಪೂರ್ಣಾವಧಿ

ಉದ್ಯೋಗ ಕ್ಷೇತ್ರ                       ಸರ್ಕಾರಿ ಉದ್ಯೋಗ


ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ --

ವಿದ್ಯಾರ್ಹತೆ ದ್ವಿತೀಯ ಪಿಯುಸಿ

ಕಾರ್ಯಾನುಭವ 0 Years

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರು ಕರ್ನಾಟಕ ಅರಣ್ಯ ಇಲಾಖೆ

ವೆಬ್‌ಸೈಟ್‌ ವಿಳಾಸ https://kfdrecruitment.in/

ಉದ್ಯೋಗ ಸ್ಥಳ

ವಿಳಾಸ ಕರ್ನಾಟಕ ರಾಜ್ಯದಾದ್ಯಂತ

ಸ್ಥಳ ಕರ್ನಾಟಕ ರಾಜ್ಯದಾದ್ಯಂತ

ಪ್ರದೇಶ ಕರ್ನಾಟಕ

ಅಂಚೆ ಸಂಖ್ಯೆ 560003

ದೇಶ IND

Previous Post Next Post