Civil Police Written Exam Date, Admit Card : 2022-23ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶದ 454 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿಗೆ ಸಂಬಂಧ, ಲಿಖಿತ ಪರೀಕ್ಷೆಯ ಅಡ್ಮಿಟ್ ಕಾರ್ಡ್ ಅನ್ನು ಇದೀಗ ಬಿಡುಗಡೆ ಮಾಡಲಾಗಿದೆ. ಡೌನ್‌ಲೋಡ್‌ಗೆ ವಿಧಾನ, ಲಿಂಕ್ ಇಲ್ಲಿದೆ.
ಕರ್ನಾಟಕ ಪೊಲೀಸ್ ಇಲಾಖೆಯು 454 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆಗೆ ಸಂಬಂಧ, ಅಭ್ಯರ್ಥಿಗಳ ಪ್ರವೇಶ ಪತ್ರವನ್ನು ಇದೀಗ ಇಲಾಖೆಯ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಡೌನ್‌ಲೋಡ್ ಮಾಡಲು ಅವಕಾಶ ನೀಡಿದೆ.
ಕಲ್ಯಾಣ- ಕರ್ನಾಟಕ ಪ್ರದೇಶದ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) (ಪುರುಷ ಮತ್ತು ಮಹಿಳಾ) ಮತ್ತು (ತೃತೀಯಲಿಂಗ ಪುರುಷ ಮತ್ತು ಮಹಿಳಾ) ಹಾಗೂ ಸೇವಾನಿರತ ಮತ್ತು ಬ್ಯಾಕ್‌ಲಾಗ್ -454 ಖಾಲಿ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ಈಗ ಲಿಖಿತ ಪರೀಕ್ಷೆಗೆ ಹಾಜರಾಗಲು, ಪ್ರವೇಶ ಪತ್ರವನ್ನು ಕೆಳಗಿನ ವಿಧಾನ ಅನುಸರಿಸಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
454 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆ ದಿನಾಂಕ : 10-12-2023
ಪ್ರವೇಶ ಪತ್ರ ಡೌನ್‌ಲೋಡ್ ಮಾಡುವುದು ಹೇಗೆ?
- ಪೊಲೀಸ್ ಇಲಾಖೆಯ 454 ಸಿಪಿಸಿ ನೇಮಕ ಪ್ರಕ್ರಿಯೆ ವೆಬ್ ವಿಳಾಸ https://cpc454.ksp-recruitment.in/ ಕ್ಕೆ ಭೇಟಿ ನೀಡಿ.
- 'My Application' ಎಂದಿರುವಲ್ಲಿ ಕ್ಲಿಕ್ ಮಾಡಿ.
- ನಂತರ ತೆರೆದ ವೆಬ್‌ಪೇಜ್‌ನಲ್ಲಿ ಅಪ್ಲಿಕೇಶನ್ ನಂಬರ್, ಜನ್ಮ ದಿನಾಂಕ ಮಾಹಿತಿ ನೀಡಿ ಲಾಗಿನ್ ಆಗಿರಿ.
- ಪ್ರವೇಶ ಪತ್ರ ಪ್ರದರ್ಶಿತವಾಗುತ್ತದೆ. ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿ ಇರುವ ಸೂಚನೆಗಳನ್ನು ಕಡ್ಡಾಯವಾಗಿ ಓದಿಕೊಂಡು, ಇದರ ಜತೆಗೆ ಅಧಿಕೃತ ಸರ್ಕಾರಿ ಗುರುತಿನ ಚೀಟಿ ತೆಗೆದುಕೊಂಡು ಹಾಜರಾಗಬೇಕು.
ಕಲ್ಯಾಣ- ಕರ್ನಾಟಕ ಪ್ರದೇಶದ ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) (ಪುರುಷ ಮತ್ತು ಮಹಿಳಾ) ಮತ್ತು (ತೃತೀಯಲಿಂಗ ಪುರುಷ ಮತ್ತು ಮಹಿಳಾ) ಹಾಗೂ ಸೇವಾನಿರತ ಮತ್ತು ಬ್ಯಾಕ್‌ಲಾಗ್ -454 ಖಾಲಿ ಹುದ್ದೆಗಳ ನೇರ ನೇಮಕಾತಿಗೆ ಅಧಿಸೂಚಿಸಿ ದಿನಾಂಕ 20-10-2022 ರಿಂದ 21-11-2022 ರವರೆಗೆ ಅರ್ಜಿ ಸ್ವೀಕಾರ ಮಾಡಲಾಗಿತ್ತು.
ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಲಿಖಿತ ಪರೀಕ್ಷೆ ಮಾದರಿ
100 ಅಂಕಗಳಿಗೆ ಲಿಖಿತ ಪರೀಕ್ಷೆ ಇರುತ್ತದೆ. ವಸ್ತುನಿಷ್ಠ ಮಾದರಿಯ ಬಹು ಆಯ್ಕೆ ಉತ್ತರಗಳ ಪರೀಕ್ಷೆ ಇದು. ಪ್ರತಿ ಸರಿ ಉತ್ತರಕ್ಕೆ 1 ಅಂಕ ನೀಡಲಾಗುತ್ತದೆ. ತಪ್ಪು ಉತ್ತರಕ್ಕೆ 0.25 ಅಂಕ ಕಳೆಯಲಾಗುತ್ತದೆ.
ಸೂಚನೆ : ವೃಂದ ಮತ್ತು ನೇಮಕಾತಿ (ತಿದ್ದುಪಡಿ) ನಿಯಮಗಳು, 2020 ರನ್ವಯ ಸದರಿ ಲಿಖಿತ ಪರೀಕ್ಷೆಯಲ್ಲಿ ಶೇಕಡ.30 ಅಂಕಗಳಿಗಿಂತ ಕಡಿಮೆ ಅಂಕಗಳನ್ನು ಗಳಿಸಿರುವ ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ ಹಾಗೂ ಅರ್ಹತೆಗೆ ಪರಿಗಣಿಸಲಾಗುವುದಿಲ್ಲ. ಈ ಪರೀಕ್ಷೆ ಬರೆದವರನ್ನು ಮೆರಿಟ್ ಮತ್ತು ಮೀಸಲಾತಿ ಆಧಾರದಲ್ಲಿ ಹುದ್ದೆ ಸಂಖ್ಯೆಗೆ ಅನುಗುಣವಾಗಿ 1:5 ಅಭ್ಯರ್ಥಿಗಳನ್ನು ದೇಹದಾರ್ಢ್ಯತೆ ಪರೀಕ್ಷೆಗೆ ಕರೆಯಲಾಗುತ್ತದೆ.
