Kaatera Review: ಈ ಐದು ಕಾರಣಗಳಿಗೆ ನೀವು ಕಾಟೇರ ನೋಡಲೇಬೇಕು; ಹೇಗಿದೆ ಸಿನಿಮಾ?

Kaatera First Report: ಕಾಟೇರ ಸಿನಿಮಾ ಹೇಗಿದೆ? ಯಾಕೆ ಈ ಸಿನಿಮಾ ನೋಡಬೇಕು. ಕಾಟೇರ ಸಿನಿಮಾ ನೋಡಲು 5 ಕಾರಣಗಳನ್ನ ಹೇಳ್ತೇವೆ.



ಕಾಟೇರ, ಕಾಟೇರ ಎಲ್ಲಾ ಕಾಟೇರನದ್ದೇ ಅಬ್ಬರ, ಕಾಟೇರನದ್ದೇ (Kaatera) ಸೌಂಡು. ಡಿ ಬಾಸ್ ದರ್ಶನ್ ನಟನೆಯ ಈ ಸಿನಿಮಾ ತರುಣ್ ಸುಧೀರ್ (Tarun Sudheer) ಆಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್ ನಲ್ಲಿ ರಾಬರ್ಟ್ ಸಿನಿಮಾ ಬಂದಿತ್ತು. ನೂರು ಕೋಟಿ ಕ್ಲಬ್ ಸೇರಿತ್ತು. ಆ ಕಾರಣಕ್ಕೇನೆ ಕಾಟೇರ ಮೇಲೆ ಎಕ್ಸ್ ಟ್ರಾ ಹೈಪ್ ಕ್ರಿಯೇಟ್ ಆಗಿತ್ತು. ಯಾವಾಗ ಕಾಟೇರ ಸಿನ್ಮಾ ನೋಡ್ತೀವಪ್ಪ ಅಂತ ಕುತೂಹಲವನ್ನ ಅಭಿಮಾನಿಗಳಲ್ಲಿ ಸೃಷ್ಟಿಸಿತ್ತು. ಇದೀಗ ಕಾಟೇರನ ಆಗಮನವಾಗಿದೆ. ಮಧ್ಯರಾತ್ರಿಯೇ ನಾಡಿನಾದ್ಯಂತ ಕಾಟೇರ ದರ್ಶನ ಕೊಟ್ಟಿದ್ದಾನೆ. ಹಾಗಾದ್ರೆ ಕಾಟೇರ ಸಿನಿಮಾ ಹೇಗಿದೆ? ಯಾಕೆ ಈ ಸಿನಿಮಾ ನೋಡಬೇಕು. ಕಾಟೇರ ಸಿನಿಮಾ ನೋಡಲು 5 ಕಾರಣಗಳನ್ನ ಹೇಳ್ತೇವೆ.

ಕಾರಣ1: ಚಿತ್ರದ ಕಥೆ

ಕಾಟೇರ ಸಿನಿಮಾದ ಕಥೆಯೇ ಅದ್ಭುತವಾಗಿದೆ. ಒಬ್ಬ ಸೂಪರ್ ಸ್ಟಾರ್ ಈ ಕಥೆಯನ್ನ ಒಪ್ಪಿಕೊಂಡಿದ್ದು, ಹಾಗೆ ಇಂತಹ ಕಥೆಯನ್ನ ದರ್ಶನ್ ರಂತಹ ಮಾಸ್ ನಟರನ್ನಿಟ್ಕೊಂಡು ಕಮರ್ಷಿಯಲ್ ಆಗಿ ಹೇಳಿದಂತಹ ತರುಣ್ ಧೈರ್ಯಕ್ಕೆ ಮೆಚ್ಚಲೇಬೇಕು. ಉಳ್ಳವರು ಹಾಗೂ ಉಳುವವರ ಸಂಘರ್ಷವನ್ನ ಈ ಕಥೆ ಹೇಳುತ್ತೆ.

ಬೀಮನಹಳ್ಳಿ ಎಂಬ ಗ್ರಾಮದ ಬ್ಯಾಕ್ ಡ್ರಾಪ್ನಲ್ಲಿ ಈ ಸಿನಿಮಾ ಮೂಡಿಬಂದಿದೆ. 1974ರಲ್ಲಿ ಉಳುವವನೆ ಭೂಮಿ ಒಡೆಯ ಎಂಬ ಕಾಯಿದೆಯನ್ನೇ ಪ್ರಮುಖ ಅಂಶವಾಗಿಟ್ಕೊಂಡು ಕಥೆಯನ್ನ ಸಿದ್ದಪಡಿಸಲಾಗಿದ್ದು ಜಡೇಶ್ ಅವರ ಕಥೆಗೆ ತರುಣ್ ಕೈ ಜೋಡಿಸಿದ್ದಾರೆ. ಚಿತ್ರಕಥೆಯನ್ನ ಬರೆದಿದ್ದಾರೆ. ಅದನ್ನ ಅಷ್ಟೇ ಅದ್ಭುತವಾಗಿ ತೆರೆಮೇಲೆ ಪ್ರೆಸೆಂಟ್ ಮಾಡಿದ್ದಾರೆ.

ಕಾರಣ2: ದರ್ಶನ್

ಯೆಸ್ ಈ ಸಿನಿಮಾವನ್ನ ನೋಡಲೇಬೇಕು ಎನ್ನಲು ಎರಡನೇ ಕಾರಣ. ಡಿಬಾಸ್ ದರ್ಶನ್. ಯೆಸ್ ಈ ಸಿನಿಮಾದಲ್ಲಿ ಹೊಸದಾದ ದರ್ಶನ್ ಕಾಣ ಸಿಗುತ್ತಾರೆ. ಇಡೀ ಸಿನಿಮಾದಲ್ಲಿ ಅವರ ಎನರ್ಜಿ ಅನ್ ಮ್ಯಾಚೇಬಲ್. ಹಾಗೆ ಕುಲುಮೆ ಕುಟ್ಟೋ ಒಬ್ಬ ಸಾಮಾನ್ಯನ ಪಾತ್ರದಲ್ಲಿ ಕಾಣಿಸಿಕೊಂಡಿರೋ ದರ್ಶನ್ ಈ ಚಿತ್ರಕ್ಕಾಗಿ ಮೈ ಹುರಿಗೊಳಿಸಿದ್ದಾರೆ.

ಇಡೀ ಸಿನಿಮಾದಲ್ಲಿ ಅವ್ರು ಬನಿಯನ್ ನಲ್ಲೇ ಇರ್ತಾರೆ. ಹೀಗಾಗಿ ಮೈಕಟ್ಟು ಸಹ ಪಾತ್ರಕ್ಕೆ ತಕ್ಕಂತಿದೆ. ಇನ್ನು ಅವರ ಡೈಲಾಗ್ ಡೆಲಿವರಿ, ಮ್ಯಾನರಿಸಂ, ಹಾಗೆ ವಾಕಿಂಗ್ ಸ್ಟೈಲ್ ಎಲ್ಲವೂ ಹೊಸದು ಎನಿಸುತ್ತೆ. ಹಾಗೆ ದರ್ಶನ್ ಪಾತ್ರಕ್ಕೆ ವೇರಿಯೇಷನ್ ಇದ್ದು, ವಯಸ್ಸಾದ ಪಾತ್ರದಲ್ಲೂ ಸಹ ಅವ್ರನ್ನ ನೋಡಬಹುದು.

ಅದರಲ್ಲೂ ಸಹ ಅವರ ಬಾಡಿ ಲಾಂಗ್ವೇಜ್, ಡೈಲಾಗ್ ಡೆಲಿವರಿ ಅದ್ಭುತ. ಒಟ್ಟಾರೆ ಈಗಿನ ನಟರು ಸ್ಟಾರ್ ನಟರಾದ ಮೇಲೆ ಆಕ್ಟಿಂಗ್ ನೇ ಮರೆತು ಬಿಡ್ತಾರೆ. ಬಿಲ್ಡಪ್ ನಲ್ಲೇ ಇಡೀ ಸಿನಿಮಾನ ತೂಗಿಸಿಬಿಡ್ತಾರೆ ಎನ್ನುವಾಗ ದರ್ಶನ್ ಆ ಕೆಟಗಿರಿಗೆ ನಾನು ಸೇರಲ್ಲ ಎಂಬಂತೆ ಇಡೀ ಸಿನಿಮಾನ ತಮ್ಮ ಹೆಗಲ ಮೇಲೆ ಹೊತ್ತೊಯ್ದಿದ್ದಾರೆ.

ಕಾರಣ3: ಫೈಟ್ಸ್

ಇಡೀ ಸಿನಿಮಾದ್ದೇ ಒಂದು ತೂಕವಾದ್ರೆ ಈ ಚಿತ್ರದ ಆಕ್ಷನ್ ಸೀಕ್ವೆನ್ಸ್ ಗಳದ್ದೇ ಒಂದು ತೂಕ. ಈ ಸಿನಿಮಾದಲ್ಲಿ ಮೂರು ಫೈಟ್ಸ್ ಇದಾವೆ. ಮೂರು ಕೂಡ ವಿಭಿನ್ನವಾಗಿವೆ.

ಒಂದು ಫೈಟ್ ನಲ್ಲಿ ಒಂದು ಕೈ ಮಾತ್ರ ಬಳಸಿ ದರ್ಶನ್ ಆಕ್ಷನ್ ಸೀಕ್ವೆನ್ಸ್ ನಲ್ಲಿ ಪಾಲ್ಗೊಳ್ತಾರೆ. ಇನ್ನೊಂದು ಫೈಟ್ ನಲ್ಲಿ ದರ್ಶನ್ ಅವರು ಎರಡು ಕೈಗಳನ್ನ ಬಳಸದೇನೆ ಫೈಟ್ ಮಾಡುತ್ತಾರೆ. ಈ ಫೈಟ್ ಅಂತೂ ವಾವ್ ಅನಿಸಿಕೊಳ್ಳುತ್ತೆ. ಆ ಮಟ್ಟಿಗೆ ಸಖತ್ ಆಗಿ ಕಂಪೋಸ್ ಮಾಡಲಾಗಿದೆ. ಇನ್ನು ಮೂರನೇ ಫೈಟ್. ಕ್ಲೈಮ್ಯಾಕ್ಸ್ ಗೂ ಮುಂಚೆ ಬರೋ ಫೈಟ್ ಸಹ ವಿಭಿನ್ನವಾಗಿದೆ. ಫ್ಯಾನ್ಸ್ ಗಳಿಗೆ ಭೂರಿ ಭೋಜನ ಅಂದ್ರೂ ತಪ್ಪಾಗದು.

ಕಾರಣ4: ಸಂಭಾಷಣೆ

ಇಡೀ ಸಿನಿಮಾದ ಮತ್ತೊಂದು ಆಸ್ತಿ ಅಂದ್ರೆ ಮಾಸ್ತಿ ಅಂದ್ರೂ ತಪ್ಪಾಗದು. ಸಿನಿಮಾ ಪೂರ ಸಾಕಷ್ಟು ತೂಕದ ಡೈಲಾಗ್ ಗಳಿವೆ. ಕಾಯಿಸಿ ಕಮ್ಮರನಾದ, ಮೇಯಿಸಿ ಕುರುಬನಾದ, ಉತ್ತಿ ಒಕ್ಕಲಿಗನಾದ, ಓದಿ ಬ್ರಾಹ್ಮಣನಾದ, ವೃತ್ತಿ ಗುರುತಿಸಲು ಮನುಷ್ಯ ಹತ್ತಿಸಿದ ಜ್ಯೋತಿ ಕಣೋ ಜಾತಿ. ಅದರಲ್ಲಿ ಕೆಲವರು ಬೆಂಕಿ ಹತ್ತಿಸ್ತಾರೆ ಅನ್ನೋ ಡೈಲಾಗ್.

ನಾವೆಲ್ಲರೂ ಒಂದೇ ಎಂಬುದನ್ನ ಸಾರುತ್ತೆ. ಹಾಗೆ ಇಡೀ ಸಿನಿಮಾಗೆ ಕಳಶಪ್ರಾಯವಾಗಿ ನಿಲ್ಲುತ್ತೆ. ಇಂತಹ ಹತ್ತು ಹಲವು ಡೈಲಾಗ್ ಗಳು ಸಿನಿಮಾ ಪೂರ ಇದಾವೆ. ಆ ಮಟ್ಟಿಗೆ ಒಂದೇ ಸಿನಿಮಾದಲ್ಲಿ ಮೂರು ಸಿನಿಮಾಗಳಿಗೆ ಆಗುವಷ್ಟು ಡೈಲಾಗ್ಸ್ ಬರೆದಿದ್ದಾರೆ ಮಾಸ್ತಿ. ಈ ಸಿನಿಮಾ ರೈತರ ಕುರಿತ ಸಿನಿಮಾ ಅಷ್ಟೇ ಅಲ್ಲ. ರೈಟರ್ ಸಿನಿಮಾ ಸಹ ಹೌದು. ಇಲ್ಲಿ ಬರವಣಿಗೆಯ ಮೆರವಣಿಗೆ ಇದೆ.

ಕಾರಣ5: ತರುಣ್ ನಿರ್ದೇಶನ

ಯೆಸ್ 1974ರ ಕಾಲಘಟ್ಟದಲ್ಲಿ ನಡೆಯೋ ಒಂದು ಕಥೆ.. ಆ ಕಥೆಯನ್ನ ಅದ್ಭುತವಾಗಿ ತೆರೆಯ ಮೇಲೆ ಕಟ್ಟಿಕೊಡುವಲ್ಲಿ ತರುಣ್ ಸುಧೀರ್ ಯಶಸ್ಸು ಕಂಡಿದ್ದಾರೆ. ದರ್ಶನ್ ಅವ್ರನ್ನ ಹೇಗೆ ನೋಡಬೇಕು ಅಂತ ಅಭಿಮಾನಿಗಳು ಆಸೆ ಪಡ್ತಾರೋ ಅದರಂತೆ ತೆರೆಯ ಮೇಲೆ ತೋರಿಸಿದ್ದಾರೆ. ಈ ಸಿನಿಮಾ 3 ಗಂಟೆ ಅವಧಿ ಇದೆ. ಆದ್ರೆ ಎಲ್ಲೂ ಡಲ್ ಮೂಮೆಂಟ್ಸ್ ಇಲ್ಲ.

Previous Post Next Post