Jio Offer: ಜಿಯೋ ಗ್ರಾಹಕರಿಗೆ ಗುಡ್​ ನ್ಯೂಸ್​! ಈ ರೀಚಾರ್ಜ್​ನಲ್ಲಿ 14 ಒಟಿಟಿ ಚಂದಾದಾರಿಕೆ ಉಚಿತ

 ರಿಲಯನ್ಸ್ ಜಿಯೋದಿಂದ (Reliance Jio) ಈಗ ಜಿಯೋಟಿವಿ ಪ್ರೀಮಿಯಂ ಪ್ಲಾನ್ ಗಳನ್ನು ಪರಿಚಯಿಸುತ್ತಿದೆ. ಈ ಪ್ಲಾನ್​ ಅದ್ಫುತ ಆಫರ್​​ಗಳು ಲಭ್ಯವಿದೆ.



ℹ️ಬೆಂಗಳೂರು: ರಿಲಯನ್ಸ್ ಜಿಯೋದಿಂದ (Reliance Jio) ಈಗ ಜಿಯೋಟಿವಿ ಪ್ರೀಮಿಯಂ ಪ್ಲಾನ್ ಗಳನ್ನು (Jio Tv Premium Plan) ಪರಿಚಯಿಸಲಾಗುತ್ತಿದೆ. ಜಿಯೋ ಪ್ರೀಪೇಯ್ಡ್ ಬಳಕೆದಾರರು ಈಗ ಜಿಯೋಟಿವಿ ಪ್ರೀಮಿಯಂ ಪ್ಲಾನ್ ಗಳ ಜತೆಗೆ ನಿರಂತರವಾದ ಹಾಗೂ ಕೊನೆಯಿಲ್ಲದ ಮನರಂಜನೆಯನ್ನು ಆನಂದಿಸಬಹುದು. ಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಈ ಪ್ಲಾನ್ ನೊಂದಿಗೆ ಬರುತ್ತದೆ. ಇದರ ಮೂಲಕ ಅನಿಯಮಿತ ಡೇಟಾ (Unlimited Data), ವಾಯ್ಸ್​ ಕರೆ, ಎಸ್​ಎಮ್​ಎಸ್ ಹಾಗೂ ಹದಿನಾಲ್ಕು ಪ್ರಮುಖ ಒಟಿಟಿಗಳಿಗೆ ಚಂದಾದಾರಿಕೆ ಪಡೆಯಬಹುದು. ಒಂದು ಸಾವಿರ ರೂಪಾಯಿ ಮೌಲ್ಯದ ಒಟಿಟಿ ಚಂದಾದಾರಿಕೆ (OTT Subscription) ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆ ದೊರೆಯುತ್ತದೆ.

ℹ️ಪ್ಲಾನ್ ಗಳು ತಿಂಗಳಿಗೆ 398 ರೂಪಾಯಿಯೊಂದಿಗೆ ಆರಂಭವಾಗುತ್ತದೆ. ಅಂದ ಹಾಗೆ ಈ ಹದಿನಾಲ್ಕು ಒಟಿಟಿಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕ ಕಂಟೆಂಟ್ ಲಭ್ಯವಾಗುತ್ತದೆ. ಡಿಜಿಟಲ್ ಟಿವಿ, ಕ್ರೀಡಾ, ಒರಿಜಿನಲ್ಸ್, ಟೀವಿ ಶೋಗಳು ಮುಂತಾದವು ದೊರೆಯುತ್ತವೆ. ಪ್ರೀಪೇಯ್ಡ್ ಸೆಗ್ಮಂಟ್ ನಲ್ಲಿ ವಾರ್ಷಿಕ ಪ್ಲಾನ್ ಖರೀದಿ ಮಾಡುವಂಥ ಗ್ರಾಹಕರಿಗಾಗಿಯೇ ಒನ್ ಕ್ಲಿಕ್ ಕಾಲ್ ಸೆಂಟರ್ ಬೆಂಬಲ ಸಹ ದೊರೆಯುತ್ತದೆ.

ಯಾವ್ಯಾವ ಆ್ಯಪ್​ಗಳು ದೊರೆಯುತ್ತವೆ?

ℹ️ರಾಷ್ಟ್ರೀಯ ಆ್ಯಪ್​ಗಳು: ಜಿಯೋ ಸಿನಿಮಾ ಪ್ರೀಮಿಯಂ, ಡಿಸ್ನಿ+ ಹಾಟ್ ಸ್ಟಾರ್, ಝೀ5, ಸೋನಿಲೈವ್

ℹ️ಅಂತಾರಾಷ್ಟ್ರೀಯ ಆ್ಯಪ್​ಗಳು: ಪ್ರೈಮ್ ವಿಡಿಯೋ (ಮೊಬೈಲ್), ಲಯನ್ಸ್ ಗೇಟ್ ಪ್ಲೇ, ಡಿಸ್ಕವರಿ+, ಡಾಕ್ಯುಬೇ

ℹ️ಪ್ರಾದೇಶಿಕ ಆ್ಯಪ್​ಗಳು: ಸನ್ ನೆಕ್ಸ್ಟ್, ಹೊಯ್ ಚೊಯ್, ಪ್ಲಾನೆಟ್ ಮರಾಠಿ, ಚೌಪಾಲ್, ಎಪಿಕ್ ಆನ್, ಕಂಚಾ ಲಂಕಾ

ಇದೊಂದು ಪ್ಲಾನ್ ಖರೀದಿಸಿದವರಿಗೆ ವಿವಿಧ ಒಟಿಟಿಗಳಿಗೆ ಸಬ್ ಸ್ಕ್ರೈಬ್ ಆಗಬೇಕು ಎಂಬ ಅಗತ್ಯ ಇರುವುದಿಲ್ಲ. ಹಲವು ಲಾಗಿನ್ ಐಡಿ ಬೇಕು, ಪ್ರತಿ ಆ್ಯಪ್​ಗೂ ಪ್ರತ್ಯೇಕವಾಗಿ ಪಾಸ್ ವರ್ಡ್ ಬೇಕು ಅಂತಿಲ್ಲ. ಒಂದೇ ಕಡೆಗೆ ಎಲ್ಲ ವಿವಿಧ ಕಂಟೆಂಟ್ ಗಳು ದೊರೆಯುತ್ತದೆ. ಇನ್ನು ಗ್ರಾಹಕರು ತಮಗೆ ಬೇಕಾದ ಕಂಟೆಂಟ್ ಹುಡುಕುವುದು ಸಹ ಸುಲಭವಾಗಿದ್ದು, ಶಿಫಾರಸಿಗಾಗಿಯೇ ಉತ್ತಮವಾದ ಹುಡುಕಾಟದ ಎಂಜಿನ್ ವ್ಯವಸ್ಥೆ ಇದೆ. ಅದೇ ರೀತಿ ಗ್ರಾಹಕರು ತಮ್ಮ ಆದ್ಯತೆಯಂತೆ ಮಾಸಿಕ, ತ್ರೈಮಾಸಿಕ ಹಾಗೂ ವಾರ್ಷಿಕ ಪ್ಲಾನ್ ಗಳ ವ್ಯಾಲಿಡಿಟಿಯನ್ನು ಆರಿಸಿಕೊಳ್ಳಬಹುದು. ಒಂದೇ ಕ್ಲಿಕ್ ನಲ್ಲಿ ಕಸ್ಟಮರ್ ಕೇರ್ ಕಾಲ್ ಬ್ಯಾಕ್ ಸೇವೆ ಲಭ್ಯ ಇದ್ದು, ವಾರ್ಷಿಕ ಪ್ಲಾನ್ ರೀಚಾರ್ಜ್ ಗೆ ಇಎಂಐ ಸೌಲಭ್ಯ ಸಹ ದೊರೆಯಲಿದೆ.

ಪ್ರೀಮಿಯಂ ಒಟಿಟಿ ಕಂಟೆಂಟ್ ಬಳಸುವುದು ಹೇಗೆ?

ℹ️ಮೊದಲಿಗೆ ಜಿಯೋಟಿವಿ ಪ್ರೀಮಿಯಂನ ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಪ್ಲಾನ್ ನೊಂದಿಗೆ ರೀಚಾರ್ಜ್ ಮಾಡಬೇಕು.

ℹ️ಅದೇ ಜಿಯೋ ಮೊಬೈಲ್ ಫೋನ್ ಸಂಖ್ಯೆಯೊಂದಿಗೆ ಜಿಯೋ ಟಿವಿ ಆ್ಯಪ್​ಗೆ ಸೈನ್ ಇನ್ ಆಗಬೇಕು.

ℹ️ಜಿಯೋಟಿವಿ ಪ್ರೀಮಿಯಂ ಟ್ಯಾಬ್ ಮೂಲಕವಾಗಿ ಪ್ರೀಮಿಯಂ ಒಟಿಟಿ ಆ್ಯಪ್​ ಕಂಟೆಂಟ್ ಅನ್ನು ಆನಂದಿಸಬಹುದು.

ℹ️ಪ್ರತ್ಯೇಕವಾದ ಲಾಗಿನ್ ಅಥವಾ ಪಾಸ್ ವರ್ಡ್ ಅಗತ್ಯ ಇಲ್ಲ.

ಈ ಕೆಳಗಿನ ಅಂಶಗಳನ್ನು ಗಮನಿಸಿ

ℹ️ಬಳಕೆದಾರರ ಮೈಜಿಯೋ ಕೂಪನ್ ವಿಭಾಗದಲ್ಲಿ ದೊರೆಯುವ ಕೂಪನ್ ಮೂಲಕವಾಗಿ ಜಿಯೋಸಿನಿಮಾ ಪ್ರೀಮಿಯಂ ಸಬ್ ಸ್ಕ್ರಿಪ್ಷನ್ ದೊರೆಯುತ್ತದೆ. ಪ್ರೀಮಿಯಂ ಕಂಟೆಂಟ್ ಬೇಕು ಅಂತಾದಲ್ಲಿ ಜಿಯೋಸಿನಿಮಾ ಆಪ್ ನಲ್ಲಿ ಕೂಪನ್ ರಿಡೀಮ್ ಮಾಡಬೇಕು.

ℹ️ತಮ್ಮ ಬಳಿ ಇರುವಂಥ ಆಯಾ ಆ್ಯಪ್​ ಮೂಲಕವಾಗಿ ಪ್ರೈಮ್ ವಿಡಿಯೋ (ಮೊಬೈಲ್) ಮತ್ತು ಡಿಸ್ನಿ+ ಹಾಟ್ ಸ್ಟಾರ್ ಕಂಟೆಂಟ್ ಗಳನ್ನು ನೋಡಬಹುದು.

ℹ️ಮೈಜಿಯೋ ಮೂಲಕ ಬಳಕೆದಾರರು ಅಮೆಜಾನ್ ಪ್ರೈಮ್ ಸಬ್ ಸ್ಕ್ರಿಪ್ಷನ್ ಸಕ್ರಿಯಗೊಳಿಸಬೇಕಾಗುತ್ತದೆ. ಆಪ್ ಗೆ ಲಾಗಿನ್ ಆಗುವಾಗ ಡಿಸ್ನಿ+ ಹಾಟ್ ಸ್ಟಾರ್ ಆಕ್ಟಿವೇಟ್ ಆಗುತ್ತದೆ.

ℹ️ಈಗಾಗಲೇ ಇರುವಂಥ ಬಳಕೆದಾರರು ಹಾಗೂ ಹೊಸ ಬಳಕೆದಾರರಿಗೆ ಈ ಪ್ಲಾನ್ ದೊರೆಯಲಿದೆ. ಡಿಸೆಂಬರ್ 15ರಿಂದ ಈ ಪ್ಲಾನ್ ದೊರೆಯಲಿದೆ.


Previous Post Next Post