ತರಕಾರಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಈರುಳ್ಳಿ ಬೆಲೆ ಪ್ರತಿ ಕೆಜಿಗೆ ಪ್ರಸ್ತುತ ಸರಾಸರಿ 57.02 ರೂ.ಗಳಿಂದ ಜನವರಿ ವೇಳೆಗೆ ಪ್ರತಿ ಕೆಜಿಗೆ 40 ರೂ.ಗಿಂತ ಕೆಳಗಿಳಿಯುವ ನಿರೀಕ್ಷೆಯಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರೋಹಿತ್ ಕುಮಾರ್ ಸಿಂಗ್ ಸೋಮವಾರ ಹೇಳಿದ್ದಾರೆ.
@ಕಳೆದ ಒಂದು ತಿಂಗಳ ಹಿಂದೆ ಗಗನಕ್ಕೇರಿದ್ದ ಟೊಮೆಟೋ (Tomato Price)) ಬೆಲೆ ಈಗ ಭೂಮಿಯ ಮಟ್ಟಕ್ಕೆ ಇಳಿದಂತಾಗಿದೆ. ಆದರೆ, ಪ್ರಸ್ತುತ ಈರುಳ್ಳಿ (Onion Price) ಕೂಡ ಹಿಂದಿದ್ದ ಟೊಮೆಟೋ ದರದ ಹಾದಿಯಲ್ಲಿ ಸಾಗುವ ಮೂಲಕ ಗ್ರಾಹಕರಿಗೆ ಕಣ್ಣೀರು ತರಿಸಿದೆ.
@ತರಕಾರಿ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಈರುಳ್ಳಿ ಬೆಲೆ ಪ್ರತಿ ಕೆಜಿಗೆ ಪ್ರಸ್ತುತ ಸರಾಸರಿ 57.02 ರೂ.ಗಳಿಂದ ಜನವರಿ ವೇಳೆಗೆ ಪ್ರತಿ ಕೆಜಿಗೆ 40 ರೂ.ಗಿಂತ ಕೆಳಗಿಳಿಯುವ ನಿರೀಕ್ಷೆಯಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ರೋಹಿತ್ ಕುಮಾರ್ ಸಿಂಗ್ ಸೋಮವಾರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೆಜಿ ಈರುಳ್ಳಿಗೆ 50 ರಿಂದ 60 ರೂಪಾಯಿ:
@ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆಜಿ ಈರುಳ್ಳಿ ಬೆಲೆ 80 ರೂಪಾಯಿಗೆ ತಲುಪಿತ್ತು. ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ 50 ರಿಂದ 60 ರೂಪಾಯಿ ಅಸುಪಾಸಿನಲ್ಲಿದೆ. ಈರುಳ್ಳಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ 2024ರ ಮಾರ್ಚ್ ವರೆಗೆ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧಿಸಿದೆ.
@ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸುದ್ದಿಯಾಕರ್ತರೊಬ್ಬರು ಈರುಳ್ಳಿ ಬೆಲೆ ಕೆ.ಜಿ.ಗೆ 40 ರೂ.ಗಿಂತ ಕಡಿಮೆಯಾಗುವ ನಿರೀಕ್ಷೆ ಯಾವಾಗ ಎಂದು ಕೇಳಿದಾಗ, “ಶೀಘ್ರದಲ್ಲೇ…ಅದು ಜನವರಿಯಲ್ಲಿ ಕಡಿಮೆಯಾಗುತ್ತದೆ” ಎಂದು ಸಿಂಗ್ ಹೇಳಿದರು.
@ಸದ್ಯದಲ್ಲೇ ಈರುಳ್ಳಿ ಬೆಲೆ 100ರ ಗಡಿ ದಾಟಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಜನವರಿಯ ವೇಳೆಗೆ ದರಗಳು 40 ರೂಪಾಯಿಗಿಂತ ಕಡಿಮೆಯಾಗಲಿವೆ. ಇಂದು (ಡಿಸೆಂಬರ್ 11, ಸೋಮವಾರ) ದೇಶದಲ್ಲಿ ಸರಾಸರಿ ಈರುಳ್ಳಿ ಬೆಲೆ 57.02 ರೂಪಾಯಿ ಇದೆ.
##@ರಫ್ತು ನಿಷೇಧದ ನಿರ್ಧಾರದಿಂದ ಈರುಳ್ಳಿ ಬೆಳೆಗಾರರ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಭಾರತ ಮತ್ತು ಬಾಂಗ್ಲಾದೇಶದ ಮಾರುಕಟ್ಟೆಗಳ ನಡುವಿನ ಬೆಲೆ ವ್ಯತ್ಯಾಸದ ಲಾಭವನ್ನು ವ್ಯಾಪಾರಿಗಳ ಗುಂಪು ಪಡೆಯುತ್ತಿದೆ. ರಫ್ತು ನಿಷೇಧವು ಇಂಥ ಗುಂಪುಗಳ ಮೇಲೆ ಮಾತ್ರ ಪರಿಣಾಮ ಬೀರಬಹುದು ಎಂದು ಸಿಂಗ್ ವಿವರಿಸಿದ್ದಾರೆ.
@ಗ್ರಾಹಕರ ಬೆಲೆ ಹಣದುಬ್ಬರ (ಸಿಪಿಐ) ಬುಟ್ಟಿಯಲ್ಲಿ ಈರುಳ್ಳಿ ಹಣದುಬ್ಬರವು ಜುಲೈನಿಂದ ಎರಡಂಕಿಯಲ್ಲಿದೆ, ಅಕ್ಟೋಬರ್‌ನಲ್ಲಿ ಸುಮಾರು ನಾಲ್ಕು ವರ್ಷಗಳ ಗರಿಷ್ಠ ಮಟ್ಟವಾದ 42.1% ಕ್ಕೆ ಏರಿದೆ ಎಂದು ಸಿಂಗ್ ತಿಳಿಸಿದರು.
@ಈ ಆರ್ಥಿಕ ವರ್ಷದ ಏಪ್ರಿಲ್ 1 ಮತ್ತು ಆಗಸ್ಟ್ 4 ರ ನಡುವೆ ದೇಶವು 9.75 ಲಕ್ಷ ಟನ್ ಈರುಳ್ಳಿಯನ್ನು ರಫ್ತು ಮಾಡಿದೆ. ಮೌಲ್ಯದ ಪ್ರಕಾರ ಅಗ್ರ ಮೂರು ಆಮದು ಮಾಡಿಕೊಳ್ಳುವ ದೇಶಗಳು ಬಾಂಗ್ಲಾದೇಶ, ಮಲೇಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್.
@ನಡೆಯುತ್ತಿರುವ ಖಾರಿಫ್ ಋತುವಿನಲ್ಲಿ ಈರುಳ್ಳಿ ವ್ಯಾಪ್ತಿಗೆ ಹಿನ್ನಡೆಯ ವರದಿಗಳ ನಡುವೆ ಈರುಳ್ಳಿ ಬೆಲೆಗಳು ಏರಿಕೆಯಾಗಲು ಪ್ರಾರಂಭಿಸಿವೆ.
@ರಫ್ತು ನಿಷೇಧಿಸುವ ಮೊದಲು, ಗ್ರಾಹಕರಿಗೆ ಪರಿಹಾರ ನೀಡುವ ಸಲುವಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 25 ರೂ.ಗೆ ಸಬ್ಸಿಡಿ ದರದಲ್ಲಿ ಬಫರ್ ಈರುಳ್ಳಿ ದಾಸ್ತಾನು ಮಾರಾಟವನ್ನು ಹೆಚ್ಚಿಸಲು ಕೇಂದ್ರವು ಅಕ್ಟೋಬರ್‌ನಲ್ಲಿ ನಿರ್ಧರಿಸಿತ್ತು.
ಈರುಳ್ಳಿ ರಫ್ತು ನಿಷೇಧ ವಿರೋಧಿಸಿ ರೈತರ ಪ್ರತಿಭಟನೆ:
@ದೇಶದಲ್ಲಿ ಹೆಚ್ಚಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ವರ್ಷ ಅಕ್ಟೋಬರ್ 28 ರಿಂದ ಡಿಸೆಂಬರ್ 31ರ ವರೆಗೆ ಈರುಳ್ಳಿ ರಫ್ತಿನ ಮೇಲೆ ಪ್ರತಿ ಟನ್‌ಗೆ 800 ಡಾಲರ್‌ನಷ್ಟು ಸುಂಕವನ್ನು ವಿಧಿಸಲಾಗಿದೆ. ಈ ಅವಧಿಯಲ್ಲಿ ರಫ್ತುಗಳ ಮೇಲೆ ಶೇಕಡಾ 40 ರಷ್ಟು ಸುಂಕವನ್ನು ವಿಧಿಸಲಾಗಿದೆ.
@ಅಕ್ಟೋಬರ್‌ನಲ್ಲಿ ತರಕಾರಿ ಸಗಟು ಬೆಲೆಯ ಹಣದುಬ್ಬರ ದರವು 21.04% ಕ್ಕೆ ಇಳಿದಿದ್ದರೂ, ಈರುಳ್ಳಿ ಬೆಲೆಗಳ ವಾರ್ಷಿಕ ಬೆಳವಣಿಗೆಯ ದರವು 62.60% ರಷ್ಟಿದೆ.
@ಸದ್ಯ ಈರುಳ್ಳಿ ರಫ್ತು ನಿಷೇಧವಾಗಿರುವುದರಿಂದ ಈರುಳ್ಳಿ ಬೆಲೆ ಕುಸಿತ ರೈತರ ಆತಂಕಕ್ಕೆ ಕಾರಣವಾಗಿದ್ದು, ಕೆಲವೆಡೆ ರೈತರು ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನೂ ನಡೆಸಿದ್ದಾರೆ. ಮಾರಾಟವಾಗದ ಸರಕನ್ನು ಕೇಂದ್ರವೇ ಖರೀದಿಸಲಿದೆ ಎಂಬ ಭರವಸೆಯನ್ನು ಸರ್ಕಾರ ನೀಡಿದೆ.

