ಹಲೋ ಸ್ನೇಹಿತರೇ, ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೆ ಅನುಕೂಲವಾಗುವಂತೆ ಮತ್ತೊಂದು ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಅಂದರೆ ಇದ್ದ ಯೋಜನೆಗೆ ಹೊಸ ರೂಪವನ್ನು ಕೊಟ್ಟಿದೆ. ಉಚಿತ ಹೊಲಿಗೆ ಯಂತ್ರದಲ್ಲಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರವನ್ನು ನೀಡಲು ಸಜ್ಜಾಗಿದೆ. ಅದನ್ನು ಪಡೆಯಲು ಏನು ಮಾಡಬೇಕು ಯಾವ ಪೋರ್ಟಲ್ ಬಳಸಬೇಕು ಅರ್ಜಿಸಲ್ಲಿಸುವುದು ಹೇಗೆ ಎಂದು ತಿಳಿಯಿರಿ.
ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ವಿತರಣೆ ಯೋಜನೆ ಸರ್ಕಾರ ಜಾರಿಗೆ ತಂದಿದ್ದು, ಫಲಾನುಭವಿ ಮಹಿಳೆಯರುಗಳು ಕೂಡಲೇ ಅರ್ಜಿ ಸಲ್ಲಿಸುವುದರ ಮೂಲಕ ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಬಹುದು.
ಸರ್ಕಾರ ಈಗಾಗಲೇ ಗ್ರಾಮೀಣ ಭಾಗದಲ್ಲಿ ವಾಸ ಮಾಡುವ ಮಹಿಳೆಯರು ಕುಶಲಕರ್ಮಿ ಹಾಗೂ ಗುಡಿ ಕೈಗಾರಿಕೆ ಮಾಡುವ ಸಲುವಾಗಿ ಅವರ ಸ್ವಾವಲಂಬಿ ಜೀವನವನ್ನು ಉತ್ತೇಜಿಸುವ ಸಲುವಾಗಿ ಉದ್ಯೋಗಿನಿ ಯೋಜನೆಯಂತಹ ಪ್ರಮುಖ ಯೋಜನೆಗಳನ್ನು ಜಾರಿಗೆ ತರಲಾಗಿದೆ.
ಈಗಲು ಸಹ ಮಹಿಳೆಯರಿಗೆ ವೃತ್ತಿಪರ ತರಬೇತಿ ನೀಡುವುದು ಮಾತ್ರವಲ್ಲದೆ, ಉಚಿತ ವಿದ್ಯುತ್ ಜಾಲಿತ ಹೊಲಿಗೆ ಯಂತ್ರಗಳನ್ನು ನೀಡಲು ಸರ್ಕಾರ ಮುಂದಾಗಿದೆ. ಗಾರೆ ಕೆಲಸ ಮಾಡುತ್ತಿರುವವರು ಕ್ಷೌರಿಕ ವೃತ್ತಿ ಮಾಡುತ್ತಿರುವವರು ಇಂತಹ ಕುಟುಂಬದ ಮಹಿಳೆಯರು ಈ ಯೋಜನೆ ಪ್ರಯೋಜನ ಅಥವಾ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.
ಉಚಿತ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಪಡೆಯಲು ಬೇಕಾಗಿರುವ ದಾಖಲೆಗಳು!
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ರೇಷನ್ ಕಾರ್ಡ್
ಆಧಾರ್ ಕಾರ್ಡ್
ವೃತ್ತಿಪರ ದೃಢೀಕರಣ ಪತ್ರ
ಹೊಲಿಗೆ ತರಬೇತಿ ಪ್ರಮಾಣ ಪತ್ರ
ವಿಳಾಸದ ಪುರಾವೆ
ಈ ಮೇಲಿನ ಎಲ್ಲಾ ದಾಖಲೆಗಳನ್ನು ನೀಡುವ ಮುಖಾಂತರ ನೀವು ಉಚಿತ ವಿದ್ಯುತ್ ಚಾಲಕ ಹೊಲಿಗೆ ಯಂತ್ರವನ್ನು ಪಡೆಯಬಹುದು. ಇದಕ್ಕೆ 22 ರಿಂದ 45 ವರ್ಷ ವಯಸ್ಸಿನವರು ಎಲ್ಲಾ ಮಹಿಳೆಯರು ಅರ್ಜಿ ಸಲ್ಲಿಸಬಹುದು.
ಉಚಿತ ವಿದ್ಯುತ್ ಚಾಲತ ಹೊಲಿಗೆ ಯಂತ್ರವನ್ನು ಪಡೆದುಕೊಳ್ಳಲು ಸರ್ಕಾರ ಅಧಿಕೃತ ವೆಬ್ಸೈಟ್ಗೆ ಬಿಟ್ಟಿದೆ ಅದನ್ನು ಭೇಟಿ ನೀಡಿ ಅಥವಾ ಇನ್ನು ಹೆಚ್ಚಿನ ಮಾಹಿತಿಗಾಗಿ ಕೈಗಾರಿಕಾ ವಿಸ್ತರಣಾಧಿಕಾರಿ ಹಾಗೂ ಉಪ ನಿರ್ದೇಶಕರ ಕಚೇರಿ ಹಾಗೂ ಗ್ರಾಮೀಣ ಕೈಗಾರಿಕೆಗಳ ಖಾದಿ ಹಾಗೂ ಗ್ರಾಮೋದ್ಯೋಗ ಕಚೇರಿಗಳನ್ನು ಸಂಪರ್ಕಿಸಿ.
ಈಗಾಗಲೇ ಹಲವು ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಪೂರ್ಣಗೊಂಡಿದೆ. ಚಿಕ್ಕಬಳ್ಳಾಪುರ ಜಿಲ್ಲೆ, ಹಾಸನ ಜಿಲ್ಲೆ ಹಾಗೂ ಮೊದಲಾದ ಕಡೆ ಡಿಸೆಂಬರ್ 25ನೇ ತಾರೀಖಿನ ವರೆಗು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ, ಹಾಗಾಗಿ ಅರ್ಹ ಫಲಾನುಭವಿ ಮಹಿಳೆಯರು ಕೂಡಲೇ ಅರ್ಜಿ ಸಲ್ಲಿಸಿ ಉಚಿತವಾಗಿ ವಿದ್ಯುತ್ ಚಾಲಿತ ಹೊಲಿಗೆ ಯಂತ್ರ ಪಡೆದುಕೊಳ್ಳಬಹುದಾಗಿದೆ.
ಕಲಬುರ್ಗಿ ಫಲಾನುಭವಿ ಮಹಿಳೆಯರು ಈ ವೆಬ್ ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಿ. https://zpkalaburagi.karnataka.gov.in
Tags:
Govt. schemes
