Beauty Tips: ನೈಲ್ಕಟ್ಟರ್ನಲ್ಲಿ ಎರಡು ಸಣ್ಣ ಬ್ಲೇಡ್ಗಳು ಏಕೆ ಇರುತ್ತೆ? ನಿಮಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ವಿಚಾರ ಇಲ್ಲಿದೆ

ಸಾಮಾನ್ಯವಾಗಿ ನಾವು ಈ ಉಗುರುಗಳನ್ನು ಕತ್ತರಿಸಲು ನೇಲ್ ಕಟ್ಟರ್ ಬಳಸುತ್ತೇವೆ. ಆದರೆ, ಈ ನೇಲ್ ಕಟ್ಟರ್ ನಲ್ಲಿ ಎರಡು ಬ್ಲೇಡ್ ತರಹದ ಬಿಡಿಭಾಗಗಳಿರುತ್ತದೆ. ಈ ಬಗ್ಗೆ ಅನೇಕ ಮಂದಿ ಗಮನಿಸಿದ್ದರೂ ಈ ಬ್ಲೇಡ್ಗಳು ಏಕೆ ಇರುತ್ತದೆ ಎಂದು ತಿಳಿದಿರುವುದಿಲ್ಲ. ಅಷ್ಟಕ್ಕೂ ನೇಲ್ ಕಟ್ಟರ್ನಲ್ಲಿ ಈ ಬ್ಲೇಡ್ ಏಕೆ ನೀಡಿರುತ್ತಾರೆ ಎಂದು ತಿಳಿದರೆ ನೀವು ಖಂಡಿತ ಶಾಕ್ ಆಗ್ತೀರಿ. ಈ ಕುರಿತಂತೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ಪ್ರತಿದಿನ ಹಲ್ಲುಜ್ಜುವುದು, ಸ್ನಾನ ಮಾಡುವುದು ಮತ್ತು ಉಗುರುಗಳನ್ನು ಕತ್ತರಿಸುವುದು ಪ್ರಮುಖ ಕೆಲಸಗಳಾಗಿವೆ. ಅದರಲ್ಲಿಯೂ ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಉಗುರುಗಳಿಂದ ರೋಗಾಣುಗಳು ನೇರವಾಗಿ ನಮ್ಮ ಬಾಯಿಯ ಮೂಲಕ ಹೊಟ್ಟೆಯನ್ನು ತಲುಪುತ್ತವೆ. ಇದರಿಂದ ನಾನಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಇದು ಅನೇಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ.

ಸಾಮಾನ್ಯವಾಗಿ ನಾವು ಈ ಉಗುರುಗಳನ್ನು ಕತ್ತರಿಸಲು ನೇಲ್ ಕಟ್ಟರ್ ಬಳಸುತ್ತೇವೆ. ಆದರೆ, ಈ ನೇಲ್ ಕಟ್ಟರ್ ನಲ್ಲಿ ಎರಡು ಬ್ಲೇಡ್ ತರಹದ ಬಿಡಿಭಾಗಗಳಿರುತ್ತದೆ. ಈ ಬಗ್ಗೆ ಅನೇಕ ಮಂದಿ ಗಮನಿಸಿದ್ದರೂ ಈ ಬ್ಲೇಡ್ಗಳು ಏಕೆ ಇರುತ್ತದೆ ಎಂದು ತಿಳಿದಿರುವುದಿಲ್ಲ. ಅಷ್ಟಕ್ಕೂ ನೇಲ್ ಕಟ್ಟರ್ನಲ್ಲಿ ಈ ಬ್ಲೇಡ್ ಏಕೆ ನೀಡಿರುತ್ತಾರೆ ಎಂದು ತಿಳಿದರೆ ನೀವು ಖಂಡಿತ ಶಾಕ್ ಆಗ್ತೀರಿ. ಈ ಕುರಿತಂತೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

ನೇಲ್ ಕಟ್ಟರ್ ಗಳನ್ನು ಉಗುರು ಕತ್ತರಿಸಲು ಮಾತ್ರ ಬಳಸಲಾಗುತ್ತದೆ. ಅದನ್ನು ಬಿಟ್ಟರೆ ನೇಲ್ ಕಟ್ಟರ್ನಿಂದ ಯಾವುದೇ ಉಪಯೋಗವಿಲ್ಲ ಅಂದು ಕೊಳ್ಳುತ್ತೇವೆ. ಆದರೆ ಕೆಲವು ನಿರ್ಣಾಯಕ ಸಂದರ್ಭಗಳಲ್ಲಿ ಶಾರ್ಪ್ ಆಗಿರುವ 2 ಬ್ಲೇಡ್ಗಳನ್ನು ಬಳಸಬಹುದಾಗಿದೆ.

ಉಗುರು ಕ್ಲಿಪ್ಪರ್ನ ಚೂಪಾದ ಬಾಗಿದ ಬ್ಲೇಡ್ ಉಗುರನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ನೀಡಲಾಗುತ್ತದೆ ಎಂದು ಹಲವರು ಭಾವಿಸಿದ್ದಾರೆ. ಆದರೆ ಸಣ್ಣ ವಸ್ತುಗಳನ್ನು ತೆಗೆಯಲು ಉಪಯೋಗಿಸಗುತ್ತದೆ. ಅಷ್ಟೇ ಅಲ್ಲದೇ, ಬಾಟಲಿಯ ಮುಚ್ಚಳವನ್ನು ತೆರೆಯಲು ಸಹ ಇದನ್ನು ಬಳಸಬಹುದು.

ವಾಸ್ತವವಾಗಿ, ನೇಲ್ ಕಟ್ಟರ್ ಗೆ ಎರಡು ಬ್ಲೇಡ್ಗಳನ್ನು ಇರುವುದರಿಂದ ಇದು ಸಾಕಷ್ಟು ಉಪಯೋಗಕ್ಕೆ ಬರುತ್ತದೆ. ಇದನ್ನು ನೀವು ಎಲ್ಲಿಗೆ ಬೇಕಾದರೂ ನಿಮ್ಮೊಂದಿಗೆ ತೆಗೆದುಕೊಂಡು ಹೋಗಬಹುದು. ಏಕೆಂದರೆ ಇದು ತುಂಬಾ ಚಿಕ್ಕದಾಗಿದ್ದು, ಅನೇಕ ಉದ್ದೇಶಗಳಿಗಾಗಿ ಬಳಸಬಹುದು. ಕತ್ತರಿಸಲು, ಕೊರೆಯಲು ಮತ್ತು ಬಾಟಲಿಗಳನ್ನು ತೆರೆಯುವುದಕ್ಕೆ ಬಳಸಬಹುದು.

ನೀವು ಪ್ರವಾಸದಲ್ಲಿರುವಾಗ ಅಥವಾ ಹೊರಗೆ ಹೋಗುತ್ತಿರಲಿ, ಈ ಚಿಕ್ಕ ಚಾಕು ನಿಂಬೆಹಣ್ಣು, ಕಿತ್ತಳೆ ಅಥವಾ ಇನ್ನಾವುದಾದರನ್ನು ಸುಲಭವಾಗಿ ಕತ್ತರಿಸಬಹುದು. ಅಲ್ಲದೇ, ಕೆಲವರು ಈ ಚಾಕುಗಳ ಚೂಪಾದ ತುದಿಗಳನ್ನು ಉಗುರಿನಲ್ಲಿರುವ ಕೊಳೆಯನ್ನು ಸ್ವಚ್ಛಗೊಳಿಸಲು ಬಳಸುತ್ತಾರೆ.

ಆದರೆ, ಹಾಗೆ ಮಾಡುವುದು ಒಳ್ಳೆಯದಲ್ಲ. ಏಕೆಂದರೆ ಒಂದು ಸಣ್ಣ ಅಜಾಗರೂಕತೆಯಿಂದ ಚೂಪಾದ ಅಂಚುಗಳು ನಿಮ್ಮ ಬೆರಳನ್ನು ಚುಚ್ಚಬಹುದು ಮತ್ತು ನಿಮಗೆ ಗಾಯಗೊಳಿಸಬಹುದು. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ.)

Previous Post Next Post