ಇನ್ಮುಂದೆ ರೇಷನ್‌ ಕಾರ್ಡ್‌ ಹೆಸರು ಸೇರ್ಪಡೆ/ತಿದ್ದುಪಡಿಗೆ ಪ್ರತಿ ತಿಂಗಳು ಅವಕಾಶ

 ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ಸಚಿವ ಕೆ.ಹೆಚ್‌. ಮುನಿಯಪ್ಪ ಭರ್ಜರಿ ಸಿಹಿಸುದ್ದಿ ನೀಡಿದ್ದು, ಇನ್ಮುಂದೆ ರೇಷನ್‌ ಕಾರ್ಡ್‌ ಹೆಸರು ಸೇರ್ಪಡೆ/ತಿದ್ದುಪಡಿಗೆ ಪ್ರತಿ ತಿಂಗಳು ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.



ಈ ಕುರಿತು ಮಾಹಿತಿ ನೀಡಿರುವ ಸಚಿವ ಮುನಿಯಪ್ಪ ಅವರು, ಮೈಸೂರು, ಮಂಗಳೂರು ಸೇರಿ ರಾಜ್ಯದಲ್ಲಿ ಪ್ರತಿ ತಿಂಗಳು 10ನೇ ತಾರೀಖಿವರೆಗೂ ತಿದು ಪಡಿಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ.

ಕಳೆದ 6 ತಿಂಗಳಲ್ಲಿ 16,79604 ಅರ್ಜಿಗಳನ್ನು ತಿದ್ದು ಪಡಿ ಮಾಡಲಾಗಿದ್ದು, ಸರ್ವೇಯಲ್ಲಿನ ತಾಂತ್ರಿಕ ತೊಂದರೆ ಯಿಂದಾಗಿ ಹೆಚ್ಚಿನ ಅರ್ಜಿ ಸ್ವೀಕರಿಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಇನ್ನು ಅದ್ಯತೆ ಮೇರೆಗೆ ಪಡಿತರ ಚೀಟಿ ನೀಡಲಾಗುವುದು. ಜತೆಗೆ ಕರಾವಳಿ ಭಾಗದಲ್ಲಿ ಕುಚಲಕ್ಕಿ ನೀಡಲು ಒತ್ತಾಯ ಬಂದಿದ್ದು, ಅದನ್ನು ಪರಿಶೀಲಿಸಿ ಕುಚಲಕ್ಕಿ ನೀಡುವ ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.


Previous Post Next Post