ಸಾಮಾನ್ಯವಾಗಿ ಕುರಿ ಕಾಯುವವರಿಗೆ ಸರ್ಕಾರದಿಂದ ಹಲವು ಸೌಲಭ್ಯಗಳು ಬರುತ್ತವೆ. ಆದರೆ ಈ ವಿಚಾರ ಬಹುತೇಕ ಮಂದಿಗೆ ಗೊತ್ತೇ ಇರುವುದಿಲ್ಲ. ಆದರೆ ಇದೀಗ ಈ ಉಪಯುಕ್ತ ವಿಚಾರವನ್ನು ಒಬ್ಬ ಕುರಿಗಾಯಿಗೆ ನಟ ದರ್ಶನ್ ಬಿಡಿಸಿ ಹೇಳಿದಾಗಲೇ ಗೊತ್ತಾಗಿದೆ ಎನ್ನುವ ಸಂಗತಿಯೊಂದು ಇದೀಗ ಹೊರಬಿದ್ದಿದೆ. ಆ ಮಾಹಿತಿ ಏನು ಎನ್ನುವುದನ್ನು ಇಲ್ಲಿ ತಿಳಿಯಿರಿ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಕಾಟೇರ ಸಿನಿಮಾ ಡಿಸೆಂಬರ್ 29ರಂದು ಬಿಡುಗಡೆಗೆ ಸಜ್ಜಾಗಿದೆ. ಇನ್ನು ಈ ಸಿನಿಮಾ ಪ್ರಚಾರವಂತೂ ಅದ್ಧೂರಿಯಾಗಿ ನಡೆಯುತ್ತಿದ್ದು, ಈ ಸಿನಿಮಾ ವೀಕ್ಷಣೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕುಮಾರ್ ಗೋವಿಂದ್ ದರ್ಶನ್ ಸರಳತೆ ಒಂದು ಉದಾಹರಣೆ ನೀಡಿದ್ದಾರೆ.
ನಟ ದರ್ಶನ್ಗೆ ಜೋಡಿಯಾಗಿ ಸ್ಯಾಂಡಲ್ವುಡ್ ಕನಸಿನ ರಾಣಿ ಅಂತೆಲೇ ಹೆಸರಾಗಿರುವ ಮಾಲಾಶ್ರೀ ಅವರ ಪುತ್ರಿ ಆರಾಧನಾ ನಟಿಸಿದ್ದಾರೆ. ಡಿಸೆಂಬರ್ 29ರಂದು ಸಿನಿಮಾ ತೆರೆಗೆ ಅಪ್ಪಳಿಸಿದ್ದು, ಈಗಾಗಲೇ ಟ್ರೈಲರ್, ಹಾಡು ವೀಕ್ಷಿಸಿದ ಅಭಿಮಾನಿಗಳು ಸಿನಿಮಾ ನೋಡಲು ತುದಿಗಾಲಲ್ಲಿ ಕಾಯುತ್ತುದ್ದಾರೆ. ಇನ್ನು ಕಾಟೇರ ಸಿನಿಮಾ ಸಂದರ್ಶನವೊಂದರಲ್ಲಿ ಮಾತಾಡಿದ ನಟ ಕುಮಾರ್ ಗೋವಿಂದ್ ದರ್ಶನ್ ಸರಳತೆಯನ್ನು ಕೊಂಡಾಡಿದ್ದಾರೆ. ಹಾಗಾದರೆ ಅಅವರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ಕಾಟೇರ ಸಿನಿಮಾದಲ್ಲಿ ನಟ ಕುಮಾರ್ ಗೋವಿಂದ್ ಕೂಡ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಾಟೇರ ಸಿನಿಮಾ ಶೂಟಿಂಗ್ ವೇಳೆ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. ಕಾಟೇರ ಚಿತ್ರದ ಕೊನೆ ಭಾಗವನ್ನು "ಪಾಂಡವಪುರ"ದಲ್ಲಿ ಚಿತ್ರೀಕರಣ ಮಾಡಲಾಗಿದೆ. ಇನ್ನು ಶೂಟಿಂಗ್ ವೇಳೆ ಕುರಿ ಕಾಯುವವರಿಗೆ ದರ್ಶನ್ ಸಹಾಯ ಮಾಡಿದ ಬಗ್ಗೆ ಕುಮಾರ್ ಗೋವಿಂದ್ ತಿಳಿಸಿದದ್ದಾರೆ.
ಶೂಟಿಂಗ್ ವೇಳೆ ಒಬ್ಬರು 250 ಕುರಿಗಳನ್ನು ಮೇಯಿಸಿಕೊಂಡು ಬಂದರು. ಇದನ್ನು ನೋಡಿದ ನಾನು ದರ್ಶನ್ ನೀವು ಇದೇ ರೀತಿಯ ಕುರಿಗಳನ್ನು ಸಾಕಿದ್ದೀರಾ ಎಂದು ಕೇಳಿದ್ದರಂತೆ. ಇಲ್ಲ ಅಣ್ಣ ನಂದು ಬೇರೆ ತಳಿಯ ಕುರಿಗಳು ಎಂದಿದ್ದಾರೆ. ತಕ್ಷಣ ಕುರಿ ಕಾಯುವವನನ್ನು ದರ್ಶನ್ ಕರೆದಿದ್ದಾರೆ.
ನಂತರ ಇಷ್ಟೊಂದು ಕುರಿಗಳನ್ನು ಇಟ್ಟುಕೊಂಡಿದ್ದೀರಾ ಏನೆಲ್ಲಾ ಸರ್ಕಾರದಿಂದ ಬರುವ ಸೌಲಭ್ಯವನ್ನು ಪಡೆದಿದ್ದೀರಾ ಎಂದು ಕೇಳಿದರು. ಆಗ ನಟ ದರ್ಶನ್ ಅವರ ಪ್ರಶ್ನೆಗೆ ಉತ್ತರಿಸಿದ ಕುರಿಕಾಯುವ ಹುಡುಗ ಅಣ್ಣ ನನಗೆ ಏನೂ ಗೊತ್ತಿಲ್ಲ ಎಂದರು. ಆಗ ದರ್ಶನ್ ಏನ್ ಅಣ್ಣ ನೀವು ಇಷ್ಟು ಕುರಿ ಇರುವುದಕ್ಕೆ ಸರ್ಕಾರದಿಂದ ನಿಮಗೆ ಕಮ್ಮಿ ಅಂದರೂ 50 ಲಕ್ಷ ರೂಪಾಯಿ ಹಣ ಬರಬೇಕು ಅಂತಾ ಹೇಳಿದ್ದಾರಂತೆ ಎಂದು ಸಂದರ್ಶನದಲ್ಲಿ ಕುಮಾರ್ ಗೋವಿಂದ್ ಹೇಳಿದ್ದಾರೆ.
ಇನ್ನು ದರ್ಶನ್ ತನ್ನ ಸ್ನೇಹಿತರನ್ನು ಕರೆದು ಕುರಿ ಕಾಯುವ ಹುಡುಗ ಮೊಬೈಲ್‌ಗೆ ವಾಟ್ಸಪ್ ಓಪನ್ ಮಾಡಿ, ಬ್ಯಾಂಕ್ ಖಾತೆ ಓಪನ್ ಮಾಡಲು ತಕ್ಷಣ ಸಹಾಯ ಮಾಡಿದರು. ನಿಮ್ಮ ಊರಿನಲ್ಲಿ ಪಶುಸಂಗೋಪಾನ ವೈದ್ಯರು ಇರುತ್ತಾರೆ, ಅವರಿಗೆ ಸರ್ಟಿಫಿಕೇಟ್ ಮಾಡಲು ಹೇಳಿ ಕಳುಹಿಸಿದರು.
ಇನ್ನು ಈ ವೇಳೆ ದರ್ಶನ್ ಬಳಿ ಎಷ್ಟು ಮಾಹಿತಿ ಇದೆ ಎಂದು ಶೂಟಿಂಗ್ ಸ್ಥಳದಲ್ಲಿದ್ದವರು ಶಾಕ್ ಆದರು. ಇನ್ನು ಕುರಿ ಮೇಯಿಸುವವನ್ನು ಕರೆದು 50 ಲಕ್ಷ ರೂಪಾಯಿ ಸಿಗುತ್ತದೆ ಅಂತಾ ಹೇಳಿದ್ದು ಅವರು ನಿಜಕ್ಕೂ ಗ್ರೇಟ್ ಎಂದು ಕುರಿಗಾಯಿ ಕುಮಾರ್ ಗೋವಿಂದ್ ಹೇಳಿದ್ದರಂತೆ.