ಹಣದ ಬದಲು ಅಕ್ಕಿ ವಿತರಣೆಗೆ ಕ್ರಮ: ಸಚಿವ ಕೆ.ಎಚ್‌.ಮುನಿಯಪ್ಪ

'ಪ್ರಸ್ತುತ ಪಡಿತರ ಚೀಟಿದಾರರಿಗೆ ಶೀಘ್ರದಲ್ಲಿ ಹಣದ ಬದಲು ಅಕ್ಕಿಯನ್ನು ನೀಡಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ರಾಜ್ಯದಲ್ಲಿ 1.16 ಕೋಟಿ ಪಡಿತರ ಚೀಟಿಗಳಿದ್ದು 4 ಕೋಟಿ ಲಾನುಭವಿಗಳಿದ್ದಾರೆ. ಈ ತಿಂಗಳು 644 ಕೋಟಿ ರೂ. ಹಣವನ್ನು ಅಕ್ಕಿ ಬದಲು ಪಡಿತರದಾರರ ಖಾತೆಗೆ ಜಮಾ ಮಾಡಲಾಗಿದೆ. ಕೆಲವರ ಬ್ಯಾಂಕ್ ಖಾತೆ ಇಲ್ಲದ ಕಾರಣ ಹಣ ಜಮಾ ಮಾಡಲು ಸಮಸ್ಯೆಯಾಗಿದ್ದು, 680 ಕೋಟಿ ರೂ.ವರೆಗೆ ನೀಡಬೇಕಾಗುತ್ತದೆ' ಎಂದರು.



ರಾಯಚೂರು : ' ಪಡಿತರದಾರರಿಗೆ ಹಣದ ಬದಲು ಅಕ್ಕಿ ನೀಡಲು ಪ್ರಯತ್ನ ನಡೆಸಲಾಗುತ್ತಿದ್ದು, ಶೀಘ್ರವೇ ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಸದ್ಯ ಐದು ಕೆಜಿ ಅಕ್ಕಿ ವಿತರಿಸಲಾಗುತ್ತಿದ್ದು, ಐದು ಕೆಜಿ ಅಕ್ಕಿಯ ಹಣವನ್ನು ಪಡಿತರದಾರರ ಖಾತೆಗೆ ಜಮಾ ಮಾಡಲಾಗುತ್ತಿದೆ. ತೆಲಂಗಾಣ, ಆಂಧ್ರ ಮತ್ತು ಛತ್ತೀಸಗಡ್‌ದಲ್ಲಿ ಅಕ್ಕಿ ಖರೀದಿಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.

‘ರಾಜ್ಯದಲ್ಲಿ 1.16 ಕೋಟಿ ಪಡಿತರ ಚೀಟಿಗಳಿದ್ದು 4 ಕೋಟಿ ಫಲಾನುಭವಿಗಳಿದ್ದಾರೆ. ಈ ತಿಂಗಳು 644 ಕೋಟಿ ರೂ. ಹಣವನ್ನು ಪಡಿತರದಾರರ ಖಾತೆಗೆ ಜಮಾ ಮಾಡಲಾಗಿದೆ. ಕೆಲವರ ಬ್ಯಾಂಕ್‌ ಖಾತೆ ಇಲ್ಲದ ಕಾರಣ ಹಣ ಜಮೆ ಮಾಡಲು ಸಮಸ್ಯೆಯಾಗಿದ್ದು, 680 ಕೋಟಿ ರೂ.ವರೆಗೆ ನೀಡಬೇಕಾಗುತ್ತದೆ. ಚುನಾವಣೆ ಪ್ರಯುಕ್ತ ಹೊಸದಾಗಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಕಾರ್ಡ್‌ ನೀಡುವುದನ್ನು ನಿಲ್ಲಿಸಲಾಗಿತ್ತು. ರಾಜ್ಯದಲ್ಲಿ2.95 ಅರ್ಜಿಗಳು ಬಾಕಿಯಿದ್ದು, ಜಿಲ್ಲೆಯಲ್ಲಿ 12 ಸಾವಿರ ಅರ್ಜಿಗಳು ಬಂದಿವೆ. 15 ದಿನದೊಳಗೆ ಪರಿಶೀಲಿಸಿ ಕಾರ್ಡ್‌ ವಿತರಣೆ ಮಾಡುವಂತೆ ಅಕಾರಿಗಳಿಗೆ ಸೂಚನೆ ನೀಡಲಾಗಿದೆ' ಎಂದು ತಿಳಿಸಿದರು.

20 ಕ್ಷೇತ್ರಗಳಲ್ಲಿ ಗೆಲುವು:

ಎಐಸಿಸಿ ಜಾತಿ ಗಣತಿ ಅವಶ್ಯಕತೆಯಿದೆ ಎಂದು ತಿಳಿಸಿದೆ. ಯಾವುದೇ ಜಾತಿಗೂ ಅನ್ಯಾಯವಾಗಬಾರದು. ಸಾಮಾಜಿಕ ನ್ಯಾಯ ದೊರೆಯಬೇಕು ಎನ್ನುವ ನಿಟ್ಟಿನಲ್ಲಿ ಜಾತಿ ಗಣತಿ ನಡೆಸಲಾಗುತ್ತಿದೆ. ಇದರಿಂದ ಯಾವುದೇ ಸಮಾಜಕ್ಕೆ ಅನ್ಯಾಯವಾಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹೊಂದಲಾಗಿದೆ. ಹೈಕಮಾಂಡ್‌ ಆದೇಶದಂತೆ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬಂದಿದ್ದೇನೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಯೋಚನೆ ಮಾಡಿಲ್ಲ. ಹೈಕಮಾಂಡ್‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ,’’ ಎಂದರು. ಸಚಿವ ಎನ್‌.ಎಸ್‌.ಬೋಸರಾಜು, ಶಾಸಕ ಹಂಪಯ್ಯ ನಾಯಕ ಇದ್ದರು.


Previous Post Next Post