World Cup Final: ಫೈನಲ್​ ವೀಕ್ಷಿಸಲು ಸ್ಟೇಡಿಯಂಗೆ ಮೋದಿ, ಧೋನಿ? ಸ್ಪೆಷಲ್ ಏರ್​ಶೋ ಆಯೋಜನೆ!

 ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ 2023 ರ ಫೈನಲ್ ಪಂದ್ಯವು ನವೆಂಬರ್ 19 ರಂದು ಅಹಮದಾಬಾದ್‌ನಲ್ಲಿ ನಡೆಯಲಿದೆ.



ಅಹಮದಾಬಾದ್(ನ.17): 2023ರ ವಿಶ್ವಕಪ್‌ನ ಫೈನಲ್‌ಗೆ ಎರಡು ತಂಡಗಳನ್ನು ನಿರ್ಧರಿಸಲಾಗಿದೆ. ನವೆಂಬರ್ 19 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪಂದ್ಯ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ಫೈನಲ್‌ನಲ್ಲಿ ಭಾಗವಹಿಸಬಹುದು. ಇದಲ್ಲದೆ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ಕಪಿಲ್ ದೇವ್ ಕೂಡ ಫೈನಲ್ ಪಂದ್ಯದಂದು ಅಹಮದಾಬಾದ್‌ಗೆ ತಲುಪಬಹುದು ಎನ್ನಲಾಗಿದೆ.

ಇದಲ್ಲದೆ ಐಸಿಸಿ ಟೂರ್ನಿಯ 13ನೇ ಸೀಸನ್‌ನ ಫೈನಲ್‌ನಲ್ಲಿ ವಿಶೇಷ ಏರ್ ಶೋ ಕೂಡ ಏರ್ಪಡಿಸಲಾಗಿದೆ. ಟೂರ್ನಿಯ ಬಗ್ಗೆ ಮಾತನಾಡುವುದಾದರೆ ಭಾರತ ತಂಡ ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ ಮತ್ತು ಸತತ 10 ಪಂದ್ಯಗಳನ್ನು ಗೆದ್ದಿದೆ. ಮತ್ತೊಂದೆಡೆ ಆಸ್ಟ್ರೇಲಿಯಾ ಕೂಡಾ ಕಳೆದ 8 ಪಂದ್ಯಗಳನ್ನು ಗೆದ್ದು ಫೈನಲ್​ಗೆ ಲಗ್ಗೆ ಇಟ್ಟಿದೆ.

ಗಾಯಕರಾದ ದುವಾ ಲಿಪಾ, ಪ್ರೀತಮ್ ಚಕ್ರವರ್ತಿ ಮತ್ತು ಆದಿತ್ಯ ಗಾಧ್ವಿ ಅವರು ಫೈನಲ್‌ನಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಇದಕ್ಕೂ ಮುನ್ನ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಅಭಿಮಾನಿಗಳ ಮನರಂಜನೆಗಾಗಿ ಕ್ರೀಡಾಂಗಣದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಇದಲ್ಲದೆ ಭಾರತೀಯ ಆಟಗಾರರು, ಭಾರತದ ಮಾಜಿ ದಿಗ್ಗಜ ಸಚಿನ್ ತೆಂಡೂಲ್ಕರ್, ಹಾರ್ದಿಕ್ ಪಾಂಡ್ಯ ಅವರ ಕುಟುಂಬದ ಸದಸ್ಯರು ಸಹ ಅಹಮದಾಬಾದ್ ತಲುಪಬಹುದು. ಅಂತಿಮ ಪಂದ್ಯಕ್ಕಾಗಿ ಬಿಸಿಸಿಐ ಅಧಿಕಾರಿಗಳು, ಐಸಿಸಿಯ ಹಿರಿಯ ಅಧಿಕಾರಿಗಳು ಮತ್ತು ವಿವಿಧ ರಾಜ್ಯಗಳ ಅಸೋಸಿಯೇಷನ್‌ನ ಸದಸ್ಯರು ಕೂಡ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉಪಸ್ಥಿತರಿರುತ್ತಾರೆ.


Previous Post Next Post