`ಗ್ಯಾರಂಟಿ’ ಗುಡ್‍ನ್ಯೂಸ್: ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಜಮೆಗೆ ಡೆಡ್‍ಲೈನ್

`ಗ್ಯಾರಂಟಿ’ ಗುಡ್‍ನ್ಯೂಸ್: ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಜಮೆಗೆ ಡೆಡ್‍ಲೈನ್

 `ಗ್ಯಾರಂಟಿ’ ಗುಡ್‍ನ್ಯೂಸ್: ಅನ್ನಭಾಗ್ಯ, ಗೃಹಲಕ್ಷ್ಮಿ ಹಣ ಜಮೆಗೆ ಡೆಡ್‍ಲೈನ್



ಬೆಂಗಳೂರು: ಲೋಕಸಭೆ ಚುನಾವಣೆ (Loksabha Election) ಬೆನ್ನಲ್ಲೆ ಗ್ಯಾರಂಟಿ ಸಮರ್ಪಕ ಜಾರಿಗೆ ಸರ್ಕಾರ ಕಸರತ್ತು ನಡೆಸುತ್ತಿದೆ. ರಾಜ್ಯದ ಜನತೆಗೆ `ಗ್ಯಾರಂಟಿ’ ಗುಡ್‍ನ್ಯೂಸ್ ಒಂದು ಸಿಕ್ಕಿದೆ.

ರಾಜ್ಯದಲ್ಲಿ ಅನ್ನಭಾಗ್ಯ (Anna Bhagya) ಹಾಗೂ ಗೃಹಲಕ್ಷ್ಮಿ (Gruhalakshmi) ಹಣ ವಿಳಂಬವಾಗುತ್ತಿದ್ದ ಬೆನ್ನಲ್ಲೇ ಫಲಾನುಭವಿಗಳಿಗೆ ಹಣ ತಲುಪಿಸೋಕೆ ನಿಗದಿತ ಡೆಡ್‍ಲೈನ್ ಅನ್ನು ಆರ್ಥಿಕ ಇಲಾಖೆ ನೀಡಿದೆ.

ಆರ್ಥಿಕ ಇಲಾಖೆಯ ಡಿಡಿಓಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಈ ಮೂಲಕ ಹಣ ತಲುಪಲು ಪ್ರತಿ ತಿಂಗಳಲ್ಲೂ ದಿನಾಂಕ ಫಿಕ್ಸ್ ಮಾಡಲಾಗುತ್ತಿದೆ. ಗೃಹಲಕ್ಷ್ಮಿ, ಅನ್ನಭಾಗ್ಯದ ಹಣ ಖಾತೆಗೆ ಜಮೆ ಆಗಲು ಇನ್ಮುಂದೆ ಡೆಡ್ ಲೈನ್ ಇರಲಿದೆ.

ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳ 20ಕ್ಕೆ ಹಾಕಲು ಆರ್ಥಿಕ ಇಲಾಖೆ ಸುತ್ತೋಲೆ ನೀಡಿದೆ. ಅನ್ನಭಾಗ್ಯದ ದುಡ್ಡನ್ನು 10-15 ದಿನಾಂಕದೊಳಗೆ ಪ್ರಕ್ರಿಯೆಗೆ ಸೂಚನೆ ನೀಡಲಾಗಿದೆ. ಹಾಗೆಯೇ ಗೃಹಲಕ್ಷ್ಮಿ ಹಣ ತಿಂಗಳ 15- 20 ರೊಳಗೆ ಜಮೆಗೆ ಸೂಚನೆ ನೀಡಲಾಗಿದೆ.

ಗೃಹಲಕ್ಷ್ಮಿ ಯೋಜನೆ ಎಂದರೇನು?;

ಗೃಹಲಕ್ಷ್ಮಿ ಯೋಜನೆ ಕರ್ನಾಟಕ ಸರ್ಕಾರದ ಪ್ರಮುಖ ಮಹಿಳಾ ಸಬಲೀಕರಣ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಪಡಿತರ ಕಾರ್ಡ್ ಹೊಂದಿದ ಕುಟುಂಬದ ಯಜಮಾನಿಗೆ ಮಾಸಿಕ ರೂ. 2000 ಹಣ ವಿತರಣೆ ಮಾಡಲಾಗುತ್ತದೆ.

* ನಾನು ಈ ಯೋಜನೆಗೆ ಅರ್ಹಳೇ?

ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿದ ಮಹಿಳೆ ಯೋಜನೆಗೆ ಅರ್ಹಳು.

* ಮನೆಯ ಯಜಮಾನಿ ಯಾರು?

ರೇಷನ್ ಕಾರ್ಡ್‌ನಲ್ಲಿ ನಮೂದಿಸಿರುವ ಮನೆಯ ಯಜಮಾನಿಯನ್ನೇ 'ಗೃಹಲಕ್ಷ್ಮಿ' ಯೋಜನೆಯ ಫಲಾನುಭವಿ ಎಂದು ಪರಿಗಣಿಸಲಾಗುತ್ತದೆ.

* ಪಡಿತರ ಚೀಟಿಯಲ್ಲಿ ಅತ್ತೆ ಯಾಜಮಾನಿಯಾಗಿದ್ದು, ಸದಸ್ಯರ ಪಟ್ಟಿಯಲ್ಲಿ ಸೊಸೆಯ ಹೆಸರಿದ್ದು, ಸೊಸೆಯನ್ನೇ ಫಲಾನುಭವಿಯನ್ನಾಗಿಸುವ ಸೌಲಭ್ಯವಿದೆಯೇ?

ಇಲ್ಲ. ಪಡಿತರ ಚೀಟಿಯಲ್ಲಿಯ ಯಜಮಾನಿಯೇ ಈ ಯೋಜನೆಯ ಫಲಾನುಭವಿಯಾಗಿರುತ್ತಾರೆ.

* ಕುಟುಂಬದ ಯಜಮಾನಿಯು ಇತ್ತೀಚೆಗೆ ನಿಧನರಾದರೆ, ಈ ಸನ್ನಿವೇಶದಲ್ಲಿ ಏನು ಮಾಡಬಹುದು?

ಪಡಿತರ ಚೀಟಿಯಲ್ಲಿ ಅಗತ್ಯ ತಿದ್ದುಪಡಿಯಾದ ನಂತರ ನೋಂದಾಯಿಸಬಹುದು.

* ಕುಟುಂಬದ ಯಜಮಾನಿಯು ಮರಣ ಹೊಂದಿದಲ್ಲಿ ಮುಂದಿನ ಕ್ರಮವೇನು?

ಕುಟುಂಬದ ಯಜಮಾನಿಯು ಮರಣ ಹೊಂದಿದಲ್ಲಿ ಯೋಜನೆಯ ಸೌಲಭ್ಯ ಸ್ಥಗಿತಗೊಳಿಸಲಾಗುವುದು.

8888

* ಕುಟುಂಬದ ಮುಖ್ಯಸ್ಮರು ಮೃತ ಪಟ್ಟರು ಸಹ ಪಡಿತರ ಚೀಟಿಯಿಂದ ಅವರ ಹೆಸರನ್ನು ತೆಗೆಯದಿರುವ ಪಡಿತರ ಚೀಟಿಗಳನ್ನು ಪರಿಗಣಿಸಲಾಗುತ್ತದೆಯೇ?

ನಿಮ್ಮ ಸಮೀಪದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಕಛೇರಿಯನ್ನು ಸಂಪರ್ಕಿಸುವುದು.

* ಈ ಯೋಜನೆಗೆ ನೋಂದಾಯಿಸುವುದು ಹೇಗೇ?

ಈ ಯೋಜನೆಯನ್ನು ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್‌, ಬೆಂಗಳೂರು ಒನ್‌, ಗ್ರಾಮ ಒನ್, ಬಿಬಿಎಂಪಿ ವಾರ್ಡ್ ಕಛೇರಿ ಮತ್ತು ಸ್ಥಳೀಯ ನಗರಾಡಳಿತ ಸಂಸ್ಥೆಯ ಕಛೇರಿಗಳ ಮೂಲಕ ಉಚಿತವಾಗಿ ನೋಂದಾಯಿಸಬಹುದು.

ಸ್ಥಳೀಯ ಮಟ್ಟದಲ್ಲಿ, ಸರ್ಕಾರದಿಂದ ನೇಮಕವಾದ ಪ್ರಜಾ ಪ್ರತಿನಿಧಿಗಳು ಮನೆಮನಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳುತ್ತಾರೆ.

* ಈ ಯೋಜನೆಯ ಪ್ರಯೋಜನವನ್ನು ಸೇವಾ ಕೇಂದ್ರಗಳಿಗೆ ಹೋಗದೇ ಪಡೆಯಬಹುದೇ?

 ಹೌದು. ಸ್ಥಳೀಯ ಮಟ್ಟದಲ್ಲಿ ಸರ್ಕಾರದಿಂದ ನೇಮಕಗೊಂಡ ಪ್ರಜಾಪುತಿನಿಧಿಗಳು ಮನೆಮನೆಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಲಿದ್ದಾರೆ.

* ನಾನು ರಾಷ್ಟ್ರೀಕೃತ/ ಷೆಡ್ಯೂಲ್ಸ್ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದೇನೆ, ನಾನು ಗೃಹಲಕ್ಷ್ಮಿ ಯೋಜನೆಗೆ ಖಾತೆಯನ್ನು ಬಳಸಬಹುದೇ?

ಹೌದು, ಬಳಸಬಹುದು.

* ಮಗ/ ಮಗಳು ತೆರಿಗೆ ಪಾವತಿದಾರನಾಗಿದ್ದರೆ ಅಥವಾ ಐಟಿ ರಿಟರ್ನ್ಸ್ ಸಲ್ಲಿಸಿದರೆ, ತಾಯಿ ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗುತ್ತಾರೆಯೇ?

ಹೌದು ಅರ್ಹರಾಗುತ್ತಾರೆ.

* ತಪ್ಪು ಮಾಹಿತಿ ನೀಡಿ ಸೌಲಭ್ಯ ಪಡೆದಿರುವುದು ಕಂಡುಬಂದಲ್ಲಿ ಏನು ಮಾಡಲಾಗುವುದು?

ಈಗಾಗಲೇ ಪಾವತಿಸಲಾಗಿರುವ ಹಣವನ್ನು. ಫಲಾನುಭವಿಗಳಿಂದ ವಸೂಲಿ ಮಾಡಲಾಗುವುದು ಮತ್ತು ಅಂತಹವರ ವಿರುದ್ಧ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

* ಆಧಾರ್ ಮತ್ತು ಪಡಿತರ ಚೀಟಿಯಲ್ಲಿ ಹೆಸರು/ ವಿಳಾಸ ಹೊಂದಿಕೆಯಾಗದಿದ್ದರೆ ಅಂತಹವರನ್ನು. ನೋಂದಣಿ ಮಾಡಿಕೊಳ್ಳಲಾಗುತ್ತದೆಯೇ? ಪ್ರಕ್ರಿಯೆಗೊಳಿಸಲಾಗುತ್ತದೆಯೇ?

ಈಗಾಗಲೇ ಆಧಾರ್ ಮತ್ತು ಪಡಿತರ ಚೀಟಿ ಜೋಡಣೆಯಾಗಿರುವುದರಿಂದ ಈ ಪ್ರಶ್ನೆ ಉದ್ಭವಿಸುವುದಿಲ್ಲ.

* ನನ್ನ ಆಧಾರ್ ಸಂಖ್ಯೆಗೆ ಮೊಬೈಲ್ ಸಂಖ್ಯೆ ಜೋಡಣೆಯಾಗಿತ್ತು. ಆದರೆ ಪ್ರಸ್ತುತ ಸದರಿ ಮೂಬೈಲ್ ಸಂಖ್ಯೆ, ನಿಷ್ಕ್ರಿಯಗೊಂಡಿದ. ನಾನು ಹೇಗೆ ನೋಂದಾಯಿಸಬೇಕು?

ಆಧಾರ್ ಸಂಖ್ಯೆಗೆ ಜೋಡಣೆಯಾಗಿದ್ದ ಮೊಬೈಲ್ ಸಂಖ್ಯೆಯು ಪ್ರಸ್ತುತ ನಿಷ್ಕ್ರಿಯಗೊಂಡಿದ್ದಲ್ಲಿ ನೀವು ನೋಂದಣಿ ಕೇಂದ್ರಗಳಲ್ಲಿರುವ ಬಯೋಮೆಟ್ರಿಕ್ ಉಪಕರಣಕ್ಕೆ ನಿಮ್ಮ ಬೆರಳಚ್ಚು ನೀಡಿ, ಆಧಾರ್ ದೃಢೀಕರಣ ಮಾಡಬಹುದು.

* ಯೋಜನೆಯಡಿ ನೋಂದಾಯಿಸಿಕೊಳ್ಳಲು ಗಂಡನ ವಿವರಗಳು ಕಡ್ಡಾಯವಾಗಿದೆ. ಅಥವಾ ನ್ಯಾಯಾಲಯದಲ್ಲಿ ವಿಚ್ಛೇದನದ ಪ್ರಕರಣವು ಬಾಕಿ ಉಳಿದಿದ್ದರೆ ಅಥವ ನ್ಯಾಯಾಲಯದ ಪ್ರಕ್ರಿಯೆಯಲ್ಲಿದ್ದರೆ ಏನು ಮಾಡಬೇಕು?

ಕಾನೂನು ರೀತಿ ವಿಚ್ಛೇದನ ಆಗಿದ್ದಲ್ಲಿ ಗಂಡನ ವಿವರಗಳನ್ನು ಸಲ್ಲಿಸುವ ಅಗತ್ಯವಿಲ್ಲ.

* ನಾಗರಿಕರು ಆಸ್ತಿ ತೆರಿಗೆಯನ್ನು ಪಾವತಿಸುತ್ತಿದ್ದರೆ ಅವರು ನೋಂದಾಯಿಸಿಕೊಳ್ಳಲು ಅರ್ಹರಾಗುತ್ತಾರೆಯೇ?

ಹೌದು, ಅರ್ಹರಿರುತ್ತಾರೆ.

* ನಾಗರಿಕರು ಸರ್ಕಾರಿ ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಿದ್ದರೆ, ಈಗ ಅವರು ಮತ್ತು ಪಿಂಚಣಿ ಪಡೆಯುತ್ತಿರುವವರು ನಿವೃತ್ತರಾಗಿದ್ದರೆ ನೋಂದಾಯಿಸಿಕೊಳ್ಳಲು ಅರ್ಹರಾಗುತ್ತಾರೆಯೇ?

ಅವರು ಯಾವುದೇ ಆದಾಯ ತೆರಿಗೆಯನ್ನು ಪಾವತಿಸದಿದ್ದರೆ ಅರ್ಹರಾಗುತ್ತಾರೆ.

* ನನಗೆ ನಿಗದಿಪಡಿಸಲಾದ ದಿನಾಂಕ ಮತ್ತು ಸಮಯದಲ್ಲಿ ನೋಂದಾಯಿಸುವುದು ಅಗತ್ಯವೇ?

ಹೌದು, ಸುಗಮ ನೋಂದಣಿಯನ್ನು ಖಚಿತಪಡಿಸಿಕೊಳ್ಳಲು ವೇಳಾಪಟ್ಟಿಯನ್ನು ಮಾಡಲಾಗಿದೆ ದಯವಿಟ್ಟು ನಿಗದಿಪಡಿಸಿದ ವೇಳಾ ಪಟ್ಟಿಯನ್ನು ಅನುಸರಿಸಿ.

* ಸೂಚಿಸಿದ ದಿನಾಂಕ ಮತ್ತು ಸಮಯದಂದು ನಿಗದಿಪಡಿಸಿದ ಕೇಂದ್ರಕ್ಕೆ ಭೇಟಿ ನೀಡಲು ನನಗೆ ಸಾಧ್ಯವಾಗಲಿಲ್ಲ. ನಾನು ಹೇಗೆ ನೋಂದಾಯಿಸಿಕೊಳ್ಳಬಹುದು?

ನಿಮಗೆ ನಿಗದಿಪಡಿಸಿದ ದಿನಾಂಕ ಮತ್ತು ಸಮಯದಲ್ಲಿ ನೋಂದಾಯಿಸಲು ಸಾಧ್ಯವಾಗದಿದ್ದಲ್ಲಿ ನೀವು ಯಾವುದೇ ಕೆಲಸದ ದಿನದಂದು ಸಂಜೆ 5 ಗಂಟೆಯ ನಂತರ ನಿಮಗೆ ನಿಗದಿಪಡಿಸಿದ ಕೇಂದ್ರಕ್ಕೆ ಭೇಟಿ ನೀಡಬೇಕು ಮತ್ತು ನೋಂದಾಯಿಸಿಕೊಳ್ಳಬೇಕು.

* ನಾನು ಬೇರೆ ಗ್ರಾಮ/ ಪಟ್ಟಣ/ ತಾಲೂಕು ಅಥವಾ ಜಿಲ್ಲೆಗೆ ಸ್ಥಳಾಂತರಗೊಂಡಿದ್ದೇನೆ. ಆದರೆ ನಾನು ಪಡಿತರ ಚೀಟಿಯಲ್ಲಿ ವಿಳಾಸವನ್ನು ನವೀಕರಿಸಿಲ್ಲ. ನನ್ನ ನೋಂದಣಿಯನ್ನು ಎಲ್ಲಿ ನಿಗದಿಪಡಿಸಲಾಗುವುದು?

ನಿಮ್ಮ ನೋಂದಣಿ ವೇಳಾಪಟ್ಟಿಯು ನಿಮ್ಮ ಪಡಿತರ ಚೀಟಿಯ ವಿಳಾಸಕ್ಕೆ ಸಮೀಪವಿರುವ ಕೇಂದ್ರದಲ್ಲಿರುತ್ತದೆ. (ಹತ್ತಿರದ ಗ್ರಾಮ ಪಂಚಾಯತ್ ಕಛೇರಿ/ ಗ್ರಾಮ ಒನ್/ ಕರ್ನಾಟಕ ಒನ್/ ಬೆಂಗಳೂರು ಒನ್/ ನಗರ ಸ್ಥಳೀಯ ಸಂಸ್ಥೆಯ ಆಡಳಿತ ಕಛೇರಿ)

ನನ್ನ ಪ್ರಸ್ತುತ ವಸತಿ ಸ್ಥಳದಲ್ಲಿ ನೋಂದಾಯ ಹೌದು, ವೇಳಾಪಟ್ಟಿಯ ಮೂಲಕ ದಾಖಲಾತಿಗಳು ಪೂರ್ಣಗೊಂಡ ನಂತರವೇ ಈ ಅವಕಾಶವನ್ನು ನೀಡಲಾಗುತ್ತದೆ. (ಈ ಸೌಲಭ್ಯವು ಆಗಸ್ಟ್ 2023 ರ 2ನೇ ವಾರದಲ್ಲಿ ಲಭ್ಯವಾಗಲಿದೆ)

ಪಡಿತರ ಚೀಟಿಯಲ್ಲಿ ನನ್ನ ಪ್ರಸ್ತುತ ವಿಳಾಸವನ್ನು ನವೀಕರಿಸಲು ನನಗೆ ಅವಕಾಶವಿದೆಯೇ?. ದಯವಿಟ್ಟು ನಿಮ್ಮ ಸಮೀಪದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಛೇರಿಗೆ ಭೇಟಿ ನೀಡಿ,

ನಾನು ಈಗ ಪಡಿತರ ಚೀಟಿಯಲ್ಲಿ ನನ್ನ ಪ್ರಸ್ತುತ ವಿಳಾಸವನ್ನು ನವೀಕರಿಸಿದರೆ, ನನ್ನ ನೋಂದಣಿ ಕೇಂದ್ರವು ಸ್ವಯಂಚಾಲಿತವಾಗಿ ಹೊಸ ವಿಳಾಸಕ್ಕೆ ಬದಲಾಗುತ್ತದೆಯೆ?

ಇಲ್ಲ, ಆಗಸ್ಟ್ 2 ನೇ ವಾರದ ನಂತರ ನಿಮಗೆ ಹತ್ತಿರವಿರುವ ಯಾವುದೇ ಕೇಂದ್ರದಲ್ಲಿ ದಾಖಲಾಗಲು ನಿಮಗೆ ಆಯ್ಕೆಯನ್ನು ನೀಡಲಾಗುತ್ತದೆ.

* ನನ್ನ ಪಡಿತರ ಚೀಟಿಗಾಗಿ ನಾನು ವೇಳಾಪಟ್ಟಿಯನ್ನು ಹುಡುಕಿದಾಗ ನನ್ನ ಪಡಿತರ ಚೀಟಿಯನ್ನು ತಡೆಹಿಡಿಯಲಾಗಿದೆ/ ರದ್ದುಗೊಂಡಿದೆ ಎಂದು ತೋರಿಸುತ್ತದೆ. ಗೃಹಲಕ್ಷ್ಮಿ ಯೋಜನೆಗೆ ದಾಖಲಾಗಲು ನಾನು ಅರ್ಹಳೇ?

ಇಲ್ಲ, ಸಕ್ರಿಯ ಪಡಿತರ ಚೀಟಿಗಳ ಯಜಮಾನಿ ಮಾತ್ರ ನೋಂದಣಿಗೆ ಅರ್ಹರು.

* ನಾನು ಯಾವುದೇ ನೋಂದಣಿ ವೇಳಾಪಟ್ಟಿಯನ್ನು ಸ್ವೀಕರಿಸಿಲ್ಲ. ಆದರೆ 1 ಆಗಸ್ಟ್ 2023 ರ ನಂತರ ಪರಿಶೀಲಿಸಲು ನನಗೆ ತಿಳಿಸಲಾಗಿದೆ, ಅದು ಏಕೆ?

ನೋಂದಣಿಗಾಗಿ ಪಡಿತರ ಚೀಟಿಗಳನ್ನು Random ಆಗಿ (ಯಾದೃಚ್ಛಿಕವಾಗಿ ಅವರಿಗೆ ಹತ್ತಿರವಿರುವ ಕೇಂದ್ರಕ್ಕೆ ನಿಗದಿಪಡಿಸಲಾಗಿದೆ. ಇದನ್ನು ವಿವಿಧ ಹಂತಗಳಲ್ಲಿ ಮಾಡಲಾಗುತ್ತಿದೆ. ಆದ್ದರಿಂದ, ಮುಂದಿನ ಸುತ್ತಿನ ಹಂಚಿಕೆಯಲ್ಲಿ ನಿಯೋಜಿಸಬೇಕಾದ ಪಡಿತರ ಚೀಟಿಗಳನ್ನು 1 ಆಗಸ್ಟ್ 2023ರ ನಂತರ ಪರಿಶೀಲಿಸಲು ತಿಳಿಸಲಾಗಿದೆ.


Post a Comment

Previous Post Next Post

Top Post Ad

CLOSE ADS
CLOSE ADS
×