Second Lunar Eclipse 2023: 2023ನೇ ವರ್ಷದ ಕೊನೆಯ ಚಂದ್ರಗ್ರಹಣದ ದಿನಾಂಕ, ಸಮಯ, ಸೂತಕ ಅವಧಿ ತಿಳಿಯಿರಿ

Second Lunar Eclipse 2023: 2023ನೇ ವರ್ಷದ ಕೊನೆಯ ಚಂದ್ರಗ್ರಹಣದ ದಿನಾಂಕ, ಸಮಯ, ಸೂತಕ ಅವಧಿ ತಿಳಿಯಿರಿ

 2023ನೇ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಅಕ್ಟೋಬರ್ 28-29 ರ ಮಧ್ಯರಾತ್ರಿ ನಡೆಯಲಿದೆ. ಈ ಹಿಂದೆ ಅಕ್ಟೋಬರ್ 14 ರಂದು ವರ್ಷದ ಎರಡನೇ ಸೂರ್ಯಗ್ರಹಣ ಸಂಭವಿಸಿತ್ತು. ಇದಾಗಿ 14 ದಿನಗಳ ನಂತರ ವರ್ಷದ ಎರಡನೇ ಚಂದ್ರಗ್ರಹಣ ಸಂಭವಿಸುತ್ತಿದೆ. ಈ ಅಪರೂಪದ ಘಟನೆಗೆ ಭಾರತ ಸಾಕ್ಷಿಯಾಗಲಿದೆ.



ಚಂದ್ರಗ್ರಹಣ ಸಮಯ

ಭಾಗಶಃ ಚಂದ್ರಗ್ರಹಣ ಅಕ್ಟೋಬರ್‌ 28ರ ಮಧ್ಯರಾತ್ರಿಯ ಸುಮಾರಿಗೆ ಭಾರತದ ಎಲ್ಲಾ ಸ್ಥಳಗಳಲ್ಲಿ ಗೋಚರಿಸುತ್ತದೆ. ಅಕ್ಟೋಬರ್‌ 28ರ ರಾತ್ರಿ 11.31ಕ್ಕೆ ಚಂದ್ರಗ್ರಹಣ ಆರಂಭವಾಗಿ ಅಕ್ಟೋಬರ್‌ 29ರ ಮಧ್ಯರಾತ್ರಿ 3.36 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಭಾರತದಲ್ಲಿ ಚಂದ್ರಗ್ರಹಣವನ್ನು ವೀಕ್ಷಿಸಿಬಹುದಾಗಿದೆ.

ಚಂದ್ರಗ್ರಹಣದ ಸೂತಕ ಸಮಯ

ಅಕ್ಟೋಬರ್ 28 ರಂದು ಮಧ್ಯಾಹ್ನ 2:52ಕ್ಕೆ ಸೂತಕ ಸಮಯ ಆರಂಭವಾಗುತ್ತದೆ. ಅಕ್ಟೋಬರ್ 29ರಂದು ಬೆಳಿಗ್ಗೆ 2:22ರವರೆ ಸೂತಕ ಸಮಯ ಕೊನೆಗೊಳ್ಳುತ್ತದೆ.

ಚಂದ್ರಗ್ರಹಣ ಹುಣ್ಣಿಮೆಯ ದಿನ ಸಂಭವಿಸುತ್ತದೆ. ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ನಿಖರವಾಗಿ ಸ್ಥಾನ ಪಡೆದಾಗ ಭೂಮಿಯ ನೆರಳು ಚಂದ್ರನ ಮೇಲ್ಮೈ ಮೇಲೆ ಬೀಳುತ್ತದೆ. ಆಗ ಚಂದ್ರ ಕೆಲ ಸಮಯ ಮರೆಯಾಗಿರುತ್ತದೆ. ಚಂದ್ರನ ಮೇಲ್ಮೈ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಅಂದರೆ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಗೋಲ್ಡನ್ ರಿಂಗ್ ನಂತೆ ಚಂದ್ರ ಕಾಣಿಸುತ್ತದೆ.

ಭಾಗಶಃ ಚಂದ್ರಗ್ರಹಣ

ಈ ಬಾರಿ ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ. ವಿಜ್ಞಾನ ಸಚಿವಾಲಯದ ಅಧಿಕೃತ ಬಿಡುಗಡೆಯ ಪ್ರಕಾರ, ಅಕ್ಟೋಬರ್ 28-29ರ ಮಧ್ಯರಾತ್ರಿ (6-7 ಕಾರ್ತಿಕ, 1945 ಶಕ ಯುಗ) ಭಾಗಶಃ ಚಂದ್ರಗ್ರಹಣ ಸಂಭವಿಸುತ್ತದೆ.

ಭಾಗಶಃ ಚಂದ್ರಗ್ರಹಣ ಭಾರತದಲ್ಲಿ ಗೋಚರಿಸುತ್ತದೆಯೇ?

ಪಿಐಬಿ ಬಿಡುಗಡೆಯ ಪ್ರಕಾರ ಪಶ್ಚಿಮ ಪೆಸಿಫಿಕ್ ಮಹಾಸಾಗರ, ಆಸ್ಟ್ರೇಲಿಯಾ, ಏಷ್ಯಾ, ಯುರೋಪ್, ಆಫ್ರಿಕಾ, ಪೂರ್ವ ದಕ್ಷಿಣ ಅಮೆರಿಕಾ, ಈಶಾನ್ಯ ಉತ್ತರ ಅಮೆರಿಕ, ಅಟ್ಲಾಂಟಿಕ್ ಮಹಾಸಾಗರ, ಹಿಂದೂ ಮಹಾಸಾಗರ ಮತ್ತು ದಕ್ಷಿಣ ಪೆಸಿಫಿಕ್ ಸಾಗರದಲ್ಲಿ ಗ್ರಹಣ ಗೋಚರಿಸುತ್ತದೆ.

ಭಾರತದಲ್ಲಿ ಮುಂದಿನ ಚಂದ್ರಗ್ರಹಣದ ದಿನಾಂಕ ಯಾವಾಗ?

PIB ಹೇಳಿಕೆಯ ಪ್ರಕಾರ, ಮುಂದಿನ ಚಂದ್ರ ಗ್ರಹಣ 7 ಸೆಪ್ಟೆಂಬರ್ 2025 ರಂದು ಭಾರತದಿಂದ ಗೋಚರಿಸುವ ಸಂಪೂರ್ಣ ಚಂದ್ರಗ್ರಹಣವಾಗಿರುತ್ತದೆ. ಈ ಹಿಂದೆ ಮೇ 5 ರಂದು ಪೆನಂಬ್ರಾಲ್‌ ಚಂದ್ರಗ್ರಹಣ ಸಂಭವಿಸಿತ್ತು. ಕಳೆದ ವರ್ಷ ಭಾರತವು 2022 ರ ನವೆಂಬರ್ 8 ರಂದು ಚಂದ್ರಗ್ರಹಣವನ್ನು ವೀಕ್ಷಿಸಿತು.

ಚಂದ್ರ ಗ್ರಹನ್ 2023: ಹಿಂದೂ ಧರ್ಮದಲ್ಲಿ ನಂಬಿಕೆಗಳು

ಜ್ಯೋತಿಷ್ಯದಲ್ಲಿ ರಾಹು ಮತ್ತು ಕೇತುಗಳನ್ನು ದುಷ್ಟ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಸೂರ್ಯ ಮತ್ತು ಚಂದ್ರವನ್ನು ರಾಹುವಿನ ದೊಡ್ಡ ಶತ್ರುಗಳು ಎಂದು ನಂಬಲಾಗಿದೆ. ಆದ್ದರಿಂದ ಹಿಂದೂ ಧರ್ಮದಲ್ಲಿ ಸೂರ್ಯ ಹಾಗೂ ಚಂದ್ರ ಗ್ರಹಣವನ್ನು ಅಶುಭ ಘಟನೆ ಎಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಮತ್ತು ಸೂತಕ ಅವಧಿಯಲ್ಲಿ ಹಲವಾರು ಮುನ್ನೆಚ್ಚರಿಕೆಗಳನ್ನು ವಹಿಸಲಾಗುತ್ತದೆ.

ಸೂತಕ ಕಾಲದಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ. ಈ ಅವಧಿಯಲ್ಲಿ ಪೂಜಾ ಚಟುವಟಿಕೆಗಳನ್ನು ನಿಷೇಧಿಸಲಾಗುತ್ತದೆ. ದೇವಾಲಯಗಳ ಬಾಗಿಲು ಮುಚ್ಚಲಾಗುತ್ತದೆ. ಧಾರ್ಮಿಕ ಆಚರಣೆಗಳೂ ಇರುವುದಿಲ್ಲ. ದೇವರ ವಿಗ್ರಹಗಳನ್ನು ಮುಟ್ಟುವುದಿಲ್ಲ.

Post a Comment

Previous Post Next Post

Top Post Ad

CLOSE ADS
CLOSE ADS
×