ರೆಡ್ಮಿ 12 ಫೋನ್‌ ಇದೀಗ 9 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯ! 128GB ಸ್ಟೋರೇಜ್‌, FHD+ ಡಿಸ್ಪ್ಲೇ

ರೆಡ್ಮಿ ಫೋನ್‌ಗಳು (Redmi smartphone) ಮಾರುಕಟ್ಟೆಯಲ್ಲಿ ಬಹಳ ಪ್ರಾಬಲ್ಯ ಸಾಧಿಸಿವೆ. ಈ ನಡುವೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ (Flipkart Big Billion Days Sale) ನಲ್ಲಿ ಈ ಫೋನ್‌ಗಳಿಗೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದ್ದು, ಈ ಮೂಲಕ ಖರೀದಿದಾರರು ಸಾಕಷ್ಟು ಹಣ ಉಳಿತಾಯ ಮಾಡಬಹುದಾಗಿದೆ.



ಹೌದು, ರೆಡ್ಮಿ ಫೋನ್‌ಗಳಿಗೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್‌ ನಲ್ಲಿ ದೊಡ್ಡ ಮಟ್ಟದ ಆಫರ್‌ ನೀಡಲಾಗಿದ್ದು, ಅದರಲ್ಲೂ ಪ್ರಮುಖವಾಗಿ ಬಹಳ ಜನಪ್ರಿಯತೆ ಪಡೆದುಕೊಂಡಿರುವ ರೆಡ್ಮಿ 12 ಫೋನ್‌ಗೆ (Redmi 12 phone) ದೊಡ್ಡ ಆಫರ್‌ ನೀಡಲಾಗಿದೆ. ಈ ಫೋನ್‌ ಅನ್ನು ಈ ಸೇಲ್‌ನಲ್ಲಿ 9,000 ಕ್ಕಿಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದು. ಗ್ಲಾಸ್ ಬ್ಯಾಕ್ ಪ್ಯಾನೆಲ್‌ನೊಂದಿಗೆ ಇದು ಪ್ರೀಮಿಯಂ ನೋಟ ಹೊಂದಿದೆ. ಹಾಗಿದ್ರೆ, ಈ ಫೋನ್‌ಗೆ ಇರುವ ಆಫರ್ ಬೆಲೆ ಎಷ್ಟು, ಫೀಚರ್ಸ್‌ ಏನು ಎಂಬ ಬಗ್ಗೆ ತಿಳಿಯೋಣ ಬನ್ನಿ.

Redmi12

ನೀವು ಈ ವೇಳೆ 10,000 ಕ್ಕಿಂತ ಕಡಿಮೆ ಬೆಲೆಯ ಫೋನ್‌ಗಾಗಿ ಹುಡುಕುತ್ತಿದ್ದರೆ, ಈ ಸಮಯ ಸೂಕ್ತವಾಗಿದೆ. ಈ ವರ್ಷದ ಆಗಸ್ಟ್‌ನಲ್ಲಿ ಬಿಡುಗಡೆಯಾದ ರೆಡ್ಮಿ 12 ಈ ವಿಶೇಷ ಸೇಲ್‌ನಲ್ಲಿ ಶೇಕಡಾ 40 ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಜೊತೆಗೆ ಫೋನ್‌ನ 5G ರೂಪಾಂತರವು 20 % ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಹಾಗಿದ್ರೆ, ತಡಯಾಕೆ ಬನ್ನಿ ನಿಖರವಾದ ಬೆಲೆ ವಿವರ ತಿಳೀಯೋಣ.


ರೆಡ್ಮಿ 12 4G, ರೆಡ್ಮಿ 12 5G ಗೆ ಡಿಸ್ಕೌಂಟ್‌: ರೆಡ್ಮಿ 12 4G ಎರಡು ರೂಪಾಂತರಗಳನ್ನು ಹೊಂದಿದೆ. ಒಂದು 4GB RAM ಮತ್ತು 128 GB ಸಂಗ್ರಹ, ಇನ್ನೊಂದು 6GB RAM ಮತ್ತು 128 GB ಸಂಗ್ರಹ. ಇವು ಕ್ರಮವಾಗಿ 8,999 ರೂ.ಗಳು ಹಾಗೂ 10,499 ರೂ.ಗಳ ಬೆಲೆ ಪಡೆದುಕೊಂಡಿವೆ. ಇದರೊಂದಿಗೆ ನೀವು ಬ್ಯಾಂಕ್‌ ಕಾರ್ಡ್‌ಗಳ ಮೂಲಕ ಇನ್ನೂ ಹೆಚ್ಚಿನ ಆಫರ್‌ ಪಡೆದುಕೊಳ್ಳಬಹುದಾಗಿದೆ.


ಭಾರತಕ್ಕೆ ಇತ್ತೀಚೆಗಷ್ಟೇ ಎಂಟ್ರಿ ನೀಡಿದ ಮಾಡಿದ ರೆಡ್ಮಿ 12 5G ಗೆ ಸ್ಮಾರ್ಟ್‌ಫೋನ್ ಮೂರು ಸ್ಟೋರೇಜ್ ರೂಪಾಂತರಗಳನ್ನು ಕಾಣಿಸಿಕೊಂಡಿದೆ. ಅಂದರೆ 4GB + 128GB, 6GB + 128GB, ಮತ್ತು 8GB + 256GB. ಈ ಫೋನ್ ಕೂಡ ರಿಯಾಯಿತಿಯಲ್ಲಿ ಲಭ್ಯವಿದೆ. ಅಂದರೆ 4 GB RAM ಮತ್ತು 128 GB ಸ್ಟೋರೇಜ್ ಸ್ಟೋರೇಜ್‌ ವೇರಿಯಂಟ್‌ಗೆ 14,390 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಎರಡೂ ಫೋನ್‌ಗಳು ಸಹ ನೀಲಿ, ಮೂನ್‌ಶೈನ್ ಸಿಲ್ವರ್ ಮತ್ತು ಜೇಡ್ ಬ್ಲಾಕ್ ಎಂಬ ಮೂರು ಬಣ್ಣದಲ್ಲಿ ಲಭ್ಯ.

ರೆಡ್ಮಿ 12 4G, ರೆಡ್ಮಿ 12 5G ಟಾಪ್ ಫೀಚರ್ಸ್‌: ಈ ಫೋನ್‌ ಅನ್ನು ನೀವು ಈ ಆಫರ್‌ ಬೆಲೆಗೆ ಖರೀದಿ ಮಾಡಲು ಮುಂದಾಗಿದ್ದೀರಾ ಎಂದರೆ ಇದರ ಪ್ರಮುಖ ಫೀಚರ್ಸ್‌ ಕಡೆ ಕಣ್ಣಾಯಿಸಿ. ರೆಡ್ಮಿ 12 4G ಸ್ಮಾರ್ಟ್‌ಫೋನ್ ಗ್ಲಾಸ್ ಬ್ಯಾಕ್ ಪ್ಯಾನೆಲ್‌ನೊಂದಿಗೆ ಕಾಣಿಸಿಕೊಂಡಿದ್ದು, ಈ ಮೂಲಕ ಪ್ರೀಮಿಯಂ ನೋಟ ಹೊಂದಿದೆ. ಇದರೊಂದಿಗೆ ಕ್ಯಾಮೆರಾ ಲೆನ್ಸ್‌ಗಳನ್ನು ಸುತ್ತುವರೆದಿರುವ ಸಿಲ್ವರ್ ಮೆಟಾಲಿಕ್ ರಿಮ್‌ ಈ ಫೋನ್‌ ಅನ್ನು ಇನ್ನಷ್ಟು ಸುಂದರಗೊಳಿಸಿದೆ.


ಈ ಫೋನ್ 90Hz ರಿಫ್ರೆಶ್ ರೇಟ್‌ನೊಂದಿಗೆ 6.79 ಇಂಚಿನ FHD+ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಮೂರು ಬದಿಗಳಲ್ಲಿ ಸ್ಲಿಮ್ ಬೆಜೆಲ್‌ಗಳೊಂದಿಗೆ ಪಂಚ್-ಹೋಲ್ ನಾಚ್ ವಿನ್ಯಾಸವನ್ನು ಹೊಂದಿದೆ. ಜೊತೆಗೆ ಇದು 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾದೊಂದಿಗೆ ಪ್ಯಾಕ್‌ ಆಗಿದ್ದು, ಸೆಲ್ಫಿ ಕ್ಯಾಮೆರಾಕ್ಕಾಗಿ 8 ಮೆಗಾಪಿಕ್ಸೆಲ್ ಸೆನ್ಸರ್‌ ನೀಡಲಾಗಿದೆ.

ರೆಡ್ಮಿ 12 5G ಸ್ಮಾರ್ಟ್‌ಫೋನ್‌ ವಿಚಾರಕ್ಕೆ ಬಂದರೆ ಇದು 4G ಫೋನ್‌ನಂತೆಯೇ ಅದೇ ವಿನ್ಯಾಸದೊಂದಿಗೆ ಹೊಂದಿದೆ. ಅಂದ್ರೆ 90Hz ರಿಫ್ರೆಶ್ ದರದೊಂದಿಗೆ 6.79 ಇಂಚಿನ FHD+ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಮೂರು ಬದಿಗಳಲ್ಲಿ ಸ್ಲಿಮ್ ಬೆಜೆಲ್‌ಗಳೊಂದಿಗೆ ಪಂಚ್-ಹೋಲ್ ನಾಚ್ ವಿನ್ಯಾಸ ಇದರಲ್ಲಿದೆ. ಈ ಫೋನ್ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾ ಮತ್ತು ಎಲ್‌ಇಡಿ ಫ್ಲ್ಯಾಶ್‌ ಆಯ್ಕೆ ಇದ್ದು, 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾದ ಆಯ್ಕೆ ನೀಡಲಾಗಿದೆ.

Redmi12

ಇನ್ನುಳಿದಂತೆ ರೆಡ್ಮಿ 12 5G ಮಿಯು 14 ನಲ್ಲಿ ರನ್‌ ಆಗಲಿದ್ದು, ಫೋನ್ ಭಾರತದಲ್ಲಿ ಸ್ನಾಪ್ಡ್ರಾಗನ್ 4 ಜನ್‌ 2 ಪ್ರೊಸೆಸರ್‌(Snapdragon 4 Gen 2 processor) ಹೊಂದಿರುವ ಚೊಚ್ಚಲ ಫೋನ್ ಆಗಿದೆ. ಇದರೊಂದಿಗೆ ಬೆಣ್ಣೆಯಂತಹ ಮೃದುವಾದ ಕಾರ್ಯಕ್ಷಮತೆಯನ್ನು ನೀಡುವ ಸಾಮರ್ಥ್ಯ ಪಡೆದುಕೊಂಡಿದೆ. ಇದೆಲ್ಲದರ ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಈ ಫೋನ್‌ನಲ್ಲಿದ್ದು, ಟೈಪ್ ಸಿ ಯುಎಸ್‌ಬಿ ಪೋರ್ಟ್ ಮೂಲಕ 18W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.



Previous Post Next Post