3 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ರಾತ್ರೋ ರಾತ್ರಿ ರದ್ದು; ಆಹಾರ ಇಲಾಖೆಯ ಮಹತ್ವದ ಅಪ್ಡೇಟ್

3 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ರಾತ್ರೋ ರಾತ್ರಿ ರದ್ದು; ಆಹಾರ ಇಲಾಖೆಯ ಮಹತ್ವದ ಅಪ್ಡೇಟ್

ಲಕ್ಷಾಂತರ ಜನ ಬಿಪಿಎಲ್ ಕಾರ್ಡ್ (BPL Ration Card) ಹೊಂದಿದ್ದಾರೆಯೇ ಹೊರತು ಅಗತ್ಯ ಇರುವ ಪಡಿತರ ತೆಗೆದುಕೊಳ್ಳುತ್ತಿಲ್ಲ, ಇದರ ಅರ್ಥ ಅಂಥವರಿಗೆ ಸರ್ಕಾರದಿಂದ ಸಿಗುವ ಉಚಿತ ಪಡಿತರದ ಅಗತ್ಯ ಇಲ್ಲದೆ ಇರಬಹುದು.



ಸರ್ಕಾರ ಬಡವರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಅದಕ್ಕೆ ಆದ ನೀತಿ ನಿಯಮಗಳು ಕೂಡ ಇರುತ್ತವೆ. ಉದಾಹರಣೆಗೆ ರೇಷನ್ ಕಾರ್ಡ್ (Ration Card) ವಿತರಣೆ ಮಾಡಿದ ನಂತರ ಅದರಲ್ಲೂ ಬಿಪಿಎಲ್ ಕಾರ್ಡ್ (BPL card) ಹೊಂದಿದ್ರೆ ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಯಲ್ಲಿ ಸಿಗುವ ಪಡಿತರ ವಸ್ತುಗಳನ್ನ ತೆಗೆದುಕೊಳ್ಳಬೇಕು.

ಆದರೆ ಲಕ್ಷಾಂತರ ಜನ ಬಿಪಿಎಲ್ ಕಾರ್ಡ್ (BPL Ration Card) ಹೊಂದಿದ್ದಾರೆಯೇ ಹೊರತು ಅಗತ್ಯ ಇರುವ ಪಡಿತರ ತೆಗೆದುಕೊಳ್ಳುತ್ತಿಲ್ಲ, ಇದರ ಅರ್ಥ ಅಂಥವರಿಗೆ ಸರ್ಕಾರದಿಂದ ಸಿಗುವ ಉಚಿತ ಪಡಿತರದ ಅಗತ್ಯ ಇಲ್ಲದೆ ಇರಬಹುದು. ಇದರಿಂದಾಗಿ ನಿಜವಾಗಿ ಯಾರಿಗೆ ಹಸಿವು ಇದೆಯೋ ಅಂತವರಿಗೆ ಪಡಿತರ ಸಿಗುತ್ತಿಲ್ಲ.

ಇದೇ ಕಾರಣಕ್ಕೆ ಆಹಾರ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಯಾರು ಪಡಿತರ ಪ್ರಯೋಜನವನ್ನು ಪಡೆದುಕೊಳ್ಳುವುದಿಲ್ಲವೋ ಅಂತವರ ರೇಷನ್ ಕಾರ್ಡ್ ಏಕಾಏಕಿ ರದ್ದು ಪಡಿಸಲು (ration card cancellation) ಮುಂದಾಗಿದೆ.

ಹೌದು, ನಮ್ಮ ರಾಜ್ಯದಲ್ಲಿ ಒಟ್ಟು 1,16,95,029 ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರು ಇದ್ದಾರೆ. ಆಶ್ಚರ್ಯ ಅಂದ್ರೆ ಇದರಲ್ಲಿ ಸುಮಾರು 3.26 ಲಕ್ಷ ಜನ ಪಡಿತರವನ್ನು ಕಳೆದ ಆರು ತಿಂಗಳಿನಿಂದ ಪಡೆದುಕೊಳ್ಳುತ್ತಿಲ್ಲ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ (pradhanmantri Garib Kalyan Yojana) ಅಡಿಯಲ್ಲಿ ಪಡಿತರ ಚೀಟಿಯನ್ನು ಬಡತನ ರೇಖೆಗಿಂತ ಕೆಳಗಿನವರಿಗೆ ಅವರ ಹಸಿವನ್ನು ನೀಗಿಸುವ ಸಲುವಾಗಿ ವಿತರಣೆ ಮಾಡಲಾಗುತ್ತದೆ.

ಆದರೆ ದುರದೃಷ್ಟವಶಾತ್ ಅಗತ್ಯ ಇರುವವರಿಗಿಂತ ಅಗತ್ಯ ಇಲ್ಲದೆ ಇರುವವರು ಹಾಗೂ ಇತರ ಅನುಕೂಲ ಇರುವಂತಹವರು ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದೇ ಹೆಚ್ಚು. ಇದೇ ಕಾರಣಕ್ಕೆ ಅಂತವರು ತಮ್ಮ ಬಳಿ ಬಿಪಿಎಲ್ ಕಾರ್ಡ್ ಇಟ್ಟುಕೊಂಡಿದ್ದಾರೆ ಹೊರತು ಅದರಿಂದ ಸಿಗುವಂತಹ ಪಡಿತರ ಸೌಲಭ್ಯವನ್ನು ಪಡೆದುಕೊಳ್ಳುತ್ತಿಲ್ಲ.

ಆಹಾರ ಇಲಾಖೆ ಈಗಾಗಲೇ 3 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ ದಾರರು ಪಡಿತರ ವಸ್ತುಗಳನ್ನು ನ್ಯಾಯಬೆಲೆ ಅಂಗಡಿಯಿಂದ ಕಳೆದ ಆರು ತಿಂಗಳಿನಿಂದ ಖರೀದಿ ಮಾಡದೆ ಇರುವುದನ್ನ ಗಮನಿಸಿದೆ.

ಈ ಹಿನ್ನೆಲೆಯಲ್ಲಿ ಅಂಥವರ ಪಡಿತರ ಚೀಟಿಯನ್ನು ನೇರವಾಗಿ ರದ್ದು ಪಡಿಸಲಾಗುತ್ತಿದೆ, ಇದಕ್ಕೆ ಯಾವುದೇ ಪೂರ್ವಭಾವಿ ನೋಟಿಸ್ ಕೂಡ ಜಾರಿಗೊಳಿಸುವುದಿಲ್ಲ. ಇನ್ನು ಕಳೆದ ಆರು ತಿಂಗಳಿನಿಂದ ಯಾರು ಪಡಿತರ ವಸ್ತುಗಳನ್ನ ತೆಗೆದುಕೊಂಡಿಲ್ಲವೋ ಅಂತವರ ಬಿಪಿಎಲ್ ಕಾರ್ಡ್ ರದ್ದಾಗುತ್ತದೆ ಜೊತೆಗೆ ಈಗ ಸರ್ಕಾರದಿಂದ ಸಿಗುತ್ತಿರುವ ಯೋಜನೆಯ ಪ್ರತಿಫಲವೂ ಕೂಡ ಸಿಗದೇ ಇರಬಹುದು.

ಅನ್ನಭಾಗ್ಯ ಯೋಜನೆಯ ‘ಭಾಗ್ಯ’ ಇಂಥವರಿಗೆ ಇಲ್ಲ!

ದೇಶದ ಯಾವುದೇ ಭಾಗದಲ್ಲಿ ವಾಸಿಸುತ್ತಿದ್ದರು ನಿಮ್ಮ ವಿಳಾಸ ಒಂದು ಕಡೆಯಲ್ಲಿದ್ದರೆ ನೀವು ಅದೇ ವಿಳಾಸಕ್ಕೆ ಹೋಗಿ ಪಡಿತರ ಪಡೆದುಕೊಳ್ಳಬೇಕು ಎನ್ನುವ ನಿಯಮ ಇಲ್ಲ. ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಇದ್ದರೆ ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆದುಕೊಳ್ಳಬಹುದು

ವಲಸಿಗರಿಗಾಗಿ ಈ ನಿಯಮವನ್ನು ಸರ್ಕಾರ ಜಾರಿಗೊಳಿಸಿತು. ಕನಿಷ್ಠ ಮೂರು ತಿಂಗಳಿಗೆ ಒಮ್ಮೆಯಾದರೂ ಪಡಿತರವನ್ನ ಪಡೆದುಕೊಳ್ಳಲೇಬೇಕು, ಆದರೆ ಆರು ತಿಂಗಳಿನಿಂದಲೂ ಪಡಿತರ ವಸ್ತುವನ್ನು ಪಡೆದುಕೊಳ್ಳದೆ ನ್ಯಾಯಬೆಲೆ ಅಂಗಡಿಯ ಕಡೆಗೆ ಮುಖವನ್ನು ಮಾಡದೆ ಇರುವಂತವರಿಗೆ ಈಗ ಸರ್ಕಾರ ಶಾಕ್ ಕೊಟ್ಟಿದೆ.

3,00,000ಕ್ಕೂ ಅಧಿಕ ರೇಷನ್ ಕಾರ್ಡ್ ರದ್ದಾಗಲಿದೆ, ಇನ್ನು ಯಾರ ರೇಷನ್ ಕಾರ್ಡ್ ರದ್ದಾಗಿದೆಯೋ ಅಂತವರು ಮತ್ತೆ ಅರ್ಜಿಯನ್ನು ಕೂಡ ಸಲ್ಲಿಸುವ ಹಾಗಿಲ್ಲ. ಒಂದು ವೇಳೆ ಅನಾರೋಗ್ಯದ ಸಮಸ್ಯೆ (health issue) ಯಿಂದಾಗಿ ತುರ್ತು ಚಿಕಿತ್ಸೆ (emergency treatment) ಕೊಡುವ ಅಗತ್ಯವಿದ್ದು ರೇಷನ್ ಕಾರ್ಡ್ ಮೂಲಕ ಚಿಕಿತ್ಸೆಯಲ್ಲಿ ರಿಯಾಯಿತಿ ಪಡೆದುಕೊಳ್ಳುವ ಹಾಗಿದ್ದರೆ ಅಂತವರು ಮಾತ್ರ ತಕ್ಷಣವೇ ಆಹಾರ ಇಲಾಖೆಯಿಂದ ಬಿಪಿಎಲ್ ಪಡಿತರ ಚೀಟಿಯನ್ನು ಪುನಃ ಪಡೆದುಕೊಳ್ಳಬಹುದು.

ಆದರೆ ಇದಕ್ಕೆ ಸರಿಯಾದ ದಾಖಲೆಗಳನ್ನು ಒದಗಿಸುವುದು ಬಹಳ ಮುಖ್ಯ. ಇದೊಂದು ಕಾರಣವನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ರದ್ದಾದ ಪಡಿತರ ಚೀಟಿಯನ್ನು ಮತ್ತೆ ಹಿಂತಿರುಗಿಸಿ ಕೊಡಲಾಗುವುದಿಲ್ಲ.



Post a Comment

Previous Post Next Post

Top Post Ad

CLOSE ADS
CLOSE ADS
×