Arecanut Farming: ಅಡಿಕೆ ತೋಟಕ್ಕೆ ನಿಜವಾಗಿ ಎಷ್ಟು ನೀರು ಬೇಕು! ಇಲ್ಲಿದೆ ಮಾಹಿತಿ

ಅಡಿಕೆ‌ ಕೃಷಿ (Arecanut Farming) ಇಂದು ಪ್ರತಿಯೊಬ್ಬ‌ ರೈತರ ಅವಲಂಭಿತ ಕೃಷಿಯಾಗಿದೆ. ಅದರೆ ಈ ಕೃಷಿಯನ್ನು ಸರಿಯಾಗಿ‌ ನಿರ್ವಹಣೆ ಮಾಡಿದ್ರೆ ಮಾತ್ರವೇ ಹೆಚ್ಚಿನ ಇಳುವರಿ ಕಾಣಲು ಸಾಧ್ಯ. ಲಾಭ -ನಷ್ಟದ ಲೆಕ್ಕಾಚಾರದಲ್ಲಿಯೇ ಅಡಿಕೆ ಬೆಳೆ ಬಹಳಷ್ಟು ಸದ್ದು ಮಾಡುತ್ತದೆ. ಇತರ ‌ಬೆಳೆಗಿಂತ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಅಡಿಕೆಯೇ ಮೇಲು ಎಂದು ಹೇಳಬಹುದು. ಅದರೆ ಈ ಅಡಿಕೆ ತೋಟಕ್ಕೆ ಮುಖ್ಯವಾಗಿ ಬೇಕಾಗಿರುವುದು ನೀರು, ಸರಿಯಾದ ಪ್ರಮಾಣದಲ್ಲಿ ನೀರು ಪೂರೈಕೆ ಮಾಡಿದ್ರೆ ಹೆಚ್ಚಿನ‌ಲಾಭ ಕೂಡ ಗಳಿಕೆ ಮಾಡಬಹುದಾಗಿದೆ.



ಲಾಭ ಹೇಗೆ?

ಒಂದು ಎಕರೆ ಜಮೀನಿನಲ್ಲಿ ಸುಮಾರು 500 ರಿಂದ 600 ಗಿಡಗಳನ್ನು ನೆಟ್ಟು ಕೃಷಿ ಮಾಡಬಹುದು. ಒಂದು ಮರದಲ್ಲಿ ಆರು ಕೆಜಿ ವರೆಗೆ ಅಡಿಕೆ ಫಸಲು ಪಡೆಯಬಹುದು, ಅಡಿಕೆ (Arecanut) ಬೆಳೆ ಮಾಡುವಾಗ ರಾಸಾಯನಿಕಗಳಿಗಿಂತಲೂ ಸಾವಯವ ಗೊಬ್ಬರ ಹಾಕಿದ್ರೆ ಹೆಚ್ಚಿನ ಲಾಭ ಕಂಡು ಕೊಳ್ಳಬಹುದು.

ನೀರಿನ ಪೂರೈಕೆ:

ಅಡಿಕೆ ಕೃಷಿ (Arecanut Farming) ಗೆ ನೀರಿನ ಪೂರೈಕೆ ಮಾಡುವುದು ಸಹ ಬಹಳ ಮುಖ್ಯ, ಮಣ್ಣಿನಲ್ಲಿ ಸರಿಯಾದ ತೇವಾಂಶ ಇದ್ದರೆ ಮಾತ್ರ ಸರಿಯಾದ ಪ್ರಮಾಣದಲ್ಲಿ ಗಿಡಗಳಿಗೆ ಪೋಷಕಾಂಶ ಸಿಗಲು ಸಾಧ್ಯ.ಆದರೆ ಕೆಲವೊಂದು ತೋಟ ಯಾವರೀತಿ ಇರುತ್ತದೆ ಅದರ ಮೇಲೆ ನೀರು ಅವಲಂಭಿತ ವಾಗಿ ಇರುತ್ತದೆ. ಹೌದು ತೋಟಕ್ಕೆ ಲೆಕ್ಕಕ್ಕಿಂತ ಹೆಚ್ಚು ಪ್ರಮಾಣದಲ್ಲಿ ನೀರು ಬೀಡುವಂತಿಲ್ಲ. ತೋಟದಲ್ಲಿ ನೀರು ನಿಲ್ಲದಂತೆ ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು.

ನೀರು ಎಷ್ಟು ಕೊಡಬೇಕು?

ನೀರು ಕೊಡುವ ವಿಚಾರದಲ್ಲಿ ರೈತರು ಬಹಳಷ್ಟು ನಷ್ಟ ಅನುಭವಿಸುತ್ತಿದ್ದಾರೆ ಕೆಲ ರೈತರು ತೋಟಕ್ಕೆ ‌ ನೀರಾವರಿ ತಂತ್ರಜ್ಞಾನದಿಂದ ವಿಪರೀತ ನೀರು ಕೊಡುತ್ತಿದ್ದಾರೆ. ಇದರಿಂದ ಮಣ್ಣಿನಲ್ಲಿ ನೀರಿನ‌ಪ್ರಮಾಣ ಹೆಚ್ಚಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚು ಇರುತ್ತದೆ. ತ್ಯಾಜ್ಯಗಳು ಉಳಿಯದೇ ಪೋಷಕಾಂಶಗಳು ದೊರಕುತ್ತಿಲ್ಲ. ಕೆಲವೊಮ್ಮೆ ತೊಟಗಳಿಗೆ ವಾರಕೊಮ್ಮೆ ನೀರು ಬಿಟ್ಟರು ಸಾಕು..ಅದ್ರೆ ಆ ತೋಟದ ಗುಣಮಟ್ಟ ಹೇಗಿದೆ ಅದರ ಮೇಲೆ ಅವಲಂಭಿತ ವಾಗಿರುತ್ತದೆ. ಹಾಗಾಗಿ ರೈತರು ನೀರಿನ ನಿರ್ವಹಣೆಯನ್ನು ತಿಳಿದು ಕೃಷಿ ಮಾಡುವುದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಲು‌ ಸಾಧ್ಯ ವಾಗುತ್ತದೆ.


Previous Post Next Post